ಜೂನ್ 21 ರಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನೇಶನ್ ಲಭ್ಯವಾಗಲಿದೆ. ಇದುವರೆಗಿದ್ದ ಎಲ್ಲಾ ನಿರ್ಬಂಧಗಳು ನಾಳೆಯಿಂದ ತೆರವಾಗಲಿದೆ. ಕೋವಿನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ರಿಜಿಸ್ಟ್ರೇಶನ್ ಮಾಡುವ ನಿಯಮವನ್ನು ಕೂಡ ಸಡಿಲಿಸಲಾಗಿದೆ.

ಸೋಮವಾರದಿಂದ 18 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕಾ ಕೇಂದ್ರದ ಸ್ಥಳದಲ್ಲಿಯೇ ರಿಜಿಸ್ಟ್ರೇಶನ್ ಮಾಡಿಸಿ ಲಸಿಕಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ಜೂನ್ 21 ರಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳು ಎರಡನೇ ಹಂತದ ಅನ್‌ಲೌಕ್‌ಗೆ ತೆರೆದುಕೊಳ್ಳಲಿದ್ದು, ಆರ್ಥಿಕ ಚಟುವಟಿಕೆಗಳು ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಎಲ್ಲಾ ಹಳ್ಳಿ- ನಗರಗಳಲ್ಲಿ ಲಸಿಕಾ ಅಭಿಯಾನವನ್ನು ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಲಸಿಕೆ ಶಿಬಿರಗಳ ಕುರಿತು ವ್ಯಾಪಕ ಪ್ರಚಾರವನ್ನು ನಡೆಸುವಂತೆ ರಾಜ್ಯ ಸರ್ಕಾರ ಸ್ಥಳೀಯ ಆಡಳಿತಗಳಿಗೆ ಸೂಚಿಸಿದೆ. ಹಾಗೇ ಸೂಕ್ತ ಪ್ರಮಾಣದಲ್ಲಿ ವ್ಯಾಕ್ಸಿನ್ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಲು ಸೂಚಿಸಿದೆ.

ಈಗ ರಾಜ್ಯ ಸರ್ಕಾರಗಳು ನೇರವಾಗಿ ವ್ಯಾಕ್ಸಿನ್ ಖರೀದಿಸಲು ಸಾದ್ಯವಿಲ್ಲ. ಕೇಂದ್ರ ಸರ್ಕಾರ ದೇಶದಲ್ಲಿ ಉತ್ಪಾದನೆಯಾಗುವ 75% ಲಸಿಕೆಯನ್ನು ಸ್ವತ: ಖರೀದಿಸಿ ರಾಜ್ಯಗಳಿಗೆ ಹಂಚಲಿದೆ. ವ್ಯಾಕ್ಸಿನೇಶನ್ ಆರಂಭವಾದ ಮೊದಲ ದಿನದಿಂದ ಅಂದರೆ 2021 ರ ಜನವರಿ 16 ರಿಂದ ಏಪ್ರಿಲ್ 30 ರ ವರೆಗೆ ಕೇಂದ್ರ ಸರ್ಕಾರ ದೇಶದ 100% ವ್ಯಾಕ್ಸಿನ್ ತಾನೇ ಖರೀದಿಸಿ ರಾಜ್ಯಗಳಿಗೆ ಹಂಚುತ್ತಿತ್ತು.

ಬೀದಿ ಬದಿ ವ್ಯಾಪಾರಿಗಳು, ತಳ್ಳೊ ಗಾಡಿಯಲ್ಲಿ ಮಾರಾಟ ಮಾರುವ ವ್ಯಾಪಾರಿಗಳು ಹೀಗೆ ವಿವಿಧ ವರ್ಗದ ಜನರಿಗೆ ಆದ್ಯತೆಯ ಮೇಲೆ ವ್ಯಾಕ್ಸಿನ್ ನೀಡಲು ಸರ್ಕಾರ ಮುಂದಾಗಿದ್ದು, ಉಚಿತ ಲಸಿಕೆ ವಿತರಣೆಯ ವೇಳೆ ಸೂಕ್ತ ಸಾಮಾಜಿಕ ಅಂತರ ಮತ್ತು ಎಲ್ಲ ರೀತಿಯ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಇದನ್ನೂ ಓದಿ : ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಮ್ ರೈಸಿ ಆಯ್ಕೆ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಅಭಿನಂದನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here