ಇಂದು ಅಂತರಾಷ್ಟ್ರೀಯ ಯೋಗದಿನ. ಭಾರತದ ಮೂಲೆ ಮೂಲೆಯಲ್ಲದೇ ಜಗತ್ತಿನ ವಿವಿಧ ದೇಶಗಳಲ್ಲೂ ಯೋಗದಿನವನ್ನು ಆಚರಿಸಲಾಗುತ್ತಿದೆ. ಜಾತಿ, ಮತ, ಭಾಷೆ, ಧರ್ಮಗಳ ಎಲ್ಲೆಗಳನ್ನು ಮೀರಿ ಯೋಗ ಜಗತ್ತನ್ನು ಬೆಸೆಯುತ್ತಿದ್ದು ದೈಹಿಕ ಮತ್ತು ಮಾನಸಿಕ ಆರೊಗ್ಯದ ಜಾಗೃತಿಗೆ ಯೋಗದ ಮೂಲಕ ಕರೆಕೊಡಲಾಗುತ್ತಿದೆ. ಅಮೆರಿಕಾದ ನ್ಯೂಯಾರ್ಕ್ ನಗರದ ಪ್ರಸಿದ್ಧ ಟೈಮ್ ಸ್ಕ್ವೈರ್‌ನಲ್ಲಿ ಸುಮಾರು 3,000 ಜನರು ಯೋಗವನ್ನು ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗದಿನದ ಆಚರಿಸಿದ್ದಾರೆ.
ಅಮೇರಿಕಾದಲ್ಲಿರುವ ಭಾರತದ ರಾಯಭಾರಿ ಕಚೇರಿಯು ನ್ಯೂಯಾರ್ಕ್ ಟೈಮ್ ಸ್ಕ್ವೈರ್ ಅಲೈನ್ಸ್ ಜೊತೆ ಸೆರಿ ಈ ಸಾಮೂಹಿಕ ಯೋಗದಿನದ ಆಚರಣೆಯನ್ನು ಆಯೋಜಿಸಿದೆ.
“ಯೋಗ ಭಾರತದಲ್ಲಿ ಹುಟ್ಟಿ ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪಸರಿಸಿದೆ. ಸಾವಿರಾರು ಜನರು ಯೋಗದ ಕಲಿಕೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಇರುವಲ್ಲಿಯೇ ಯೊಗವನ್ನು ಅಭ್ಯಾಸ ಮಾಡುವ ಅಗತ್ಯವಿದೆ. ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ವಿಧಾನವಾದ ಯೋಗವನ್ನು ಜಗತ್ತಿನ ಎಲ್ಲರು ರೂಢಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅಮೆರಿಕಾದ ನ್ಯೂಯಾರ್ಕ್‌ನ ಟೈಮ್ ಸ್ಕ್ವೈರ್‌ನಲ್ಲಿ ಯೋಗದಿನವನ್ನು ಆಯೊಜಿಸಲು ಹರ್ಷವಾಗುತ್ತಿದೆ. ಯೋಗ ಒಂದು ಜೀವನಶೈಲಿಯಾಗಿ ನಮ್ಮದಾಗಬೇಕು. ಇಂದು ಬಹುಮುಖ್ಯವಾಗಿ ಯೋಗದ ಮೂಲ ಸ್ವರೂಪವನ್ನು ಉಳಿಸಿಕೊಂಡು ಅತ್ಯಂತ ಸಹಜವಾಗಿ ಯೋಗವನ್ನು ಅಭ್ಯಾಸ ಮಾಡುವ ಅಗತ್ಯವಿದೆ. ಸಮಾಜದ ಸ್ವಾಸ್ಥ್ಯ ಮತ್ತು ಹಸಿರು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಯೊಗವನ್ನು ಉಳಿಸಬೇಕು ಮತ್ತು ಬೆಳೆಸಬೇಕು” ಎಂದು ಭಾರತದ ಮುಖ್ಯ ರಾಯಭಾರಿ ರಂಧೀರ್ ಜೈಸ್ವಾಲ್ ತಿಳಿಸಿದ್ದಾರೆ.
“ಯೋಗ ಪ್ರಾಣಾಯಾಮ ಮತ್ತು ಆಯುರ್ವೇದದ ಮಹತ್ವವನ್ನು ನ್ಯೂಯಾರ್ಕ್‌ನ ಟೈಮ್ ಸ್ಕ್ವೈರ್‌ನಲ್ಲಿ ಸಾರಲು ಅತ್ಯಂತ ಸಂತೋಷವಾಗುತ್ತದೆ. ನಗರದ ಗದ್ದಲಗಳು ಎಂದಿಗೂ ನಿಲ್ಲುವುದಿಲ್ಲ. ನಡುವೆ ನಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿಯಾಗಿದೆ” ಎಂದು ಟೈಮ್ ಸ್ಕ್ವೈರ್‌ನ ಯೋಗ ದಿನದ ಅಚರಣೆಯಲ್ಲಿ ಭಾಗವಹಿಸಿದ್ದ ರುಚಿಕಾ ಲಾಲ್ ಅಭಿಪ್ರಾಯಪಟ್ಟಿದ್ದಾರೆ.
Yoga in the heart of #NewYork! @TimesSquareNYC #IDY2021 #YogaForWellness #YogaDay #YogaForAll #YogaDay2021 #AzadiKaAmritMahotsav #SolsticeTSq@moayush @IndianDiplomacy @MEAIndia @iccr_hq @PIB_India @DDNational @DDNewslive @DDNewsHindi @DDIndialive @ANI @ani_digital @PTI_News pic.twitter.com/rNiuZRikkD
— India in New York (@IndiainNewYork) June 20, 2021
ವಿಶ್ವ ಸಂಸ್ಥೆಯು ಯೋಗಾ ಫಾರ್ ವೆಲ್‌ನೆಸ್ ಎಂಬ ಧ್ಯೇಯವಾಕ್ಯವನ್ನು ಈ ವರ್ಷದ ಯೋಗದಿನದ ಆಚರಣೆಯ ಸಂದರ್ಭದಲ್ಲಿ ನೀಡಿದ್ದು ಟೈಮ್ ಸ್ಕ್ವ್ಯಾರ್‌ನ ಕಾರ್ಯಕ್ರಮದಲ್ಲಿ ಭಾರತದ ಯೋಗ, ಪ್ರಣಾಯಾಮ, ಆಯುರ್ವೇದ ಮತ್ತು ಭಾರತದ ಬುಡಕಟ್ಟುಗಳಲ್ಲಿರುವ ಗಿಡಮೂಲಿಕೆ ಔಷಧಗಳ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ಕೂಡ ನಡೆದಿದೆ.
ಇದನ್ನೂ ಓದಿ : ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ


