Homeಮುಖಪುಟಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಅಲ್ಲ -ಫುಲ್ಗೇಂದ ಸಿನ್ಹಾ

- Advertisement -
- Advertisement -

ಪುಟಕ್ಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್

ಭಾರತದಲ್ಲಿ ಭಗವದ್ಗೀತೆ ಮತ್ತು ಯೋಗವನ್ನು ಪರ ವಿರೋಧಗಳ ನೆಲೆಗಟ್ಟುಗಳಿಂದಲ್ಲದೇ ಮರು ಸಂಶೋಧನೆ ಮಾಡಿದ ವಿದ್ವಾಂಸ ಫುಲ್ಗೇಂದ ಸಿನ್ಹಾ. ಅವರು ಅಮೆರಿಕೆಯಲ್ಲಿ ಸ್ವಯಂ ಯೋಗಾಚಾರ್ಯ ರಾಗಿದ್ದ ಕಾರಣದಿಂದ ಯೋಗದ ಮೂಲವನ್ನು ಹುಡುಕಲು ಹೊರಟ ಅವರು ಅದರ ಜೊತೆಜೊತೆಗೇ ಗೀತೆಯ ಮೂಲವನ್ನೂ ಗುರುತಿಸುವ ಯತ್ನ ಮಾಡಿದರು.

ಇದರಿಂದ ಗೀತಾ- ಯಾಸ್ ಇಟ್ ವಾಸ್ ಎಂಬ ಮಹತ್ವಪೂರ್ಣ ಕೃತಿಯ ರಚನೆಯಾಯ್ತು. ಗೀತಾ – ಯಾಸ್ ಇಟ್ ಈಸ್ ಎಂಬ ಇಸ್ಕಾನ್ ಸಂಸ್ಥಾಪಕರ ಕೃತಿಯೊಂದಿದೆ. ಈ ಕೃತಿಗಳ ನಡುವಿನ ವ್ಯತ್ಯಾಸವೆಂದರೆ, ಇಸ್ಕಾನ್ ಕೃತಿ ಮಂಪರನ್ನು ತರಿಸುತ್ತದೆ. ಸಿನ್ಹಾರವರ ಸಂಶೋಧನಾ ಕೃತಿ ಮಂಪರನ್ನು ಹರಿಸುತ್ತದೆ.

ಸಿನ್ಹಾರವರ ಈ ಕೃತಿ ಮಹತ್ವದ್ದು ಎನಿಸುವುದಕ್ಕೆ ಕಾರಣಗಳಿವೆ. ಯಾವುದೇ ನೆಲದ ಸಾಂಸ್ಕೃತಿಕ ರೂಢಿಗಳು ಮತ್ತು ಧಾರ್ಮಿಕ ನಂಬುಗೆಗಳು ಸಮಾಜದ ಪ್ರಗತಿಗೆ ಅಥವಾ ಅವನತಿಗೆ ಹೇಗೆ ಕಾರಣವಾಗುತ್ತದೆ ಎಂದು ವಿವರಿಸುತ್ತದೆ. ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಹೇಗೆ ಅಲ್ಲ ಎಂದು ಪ್ರತಿಪಾದಿಸುತ್ತದೆ ಮತ್ತು ಅತಿ ಮುಖ್ಯವಾಗಿ ಮೂಲದಲ್ಲಿ ಇದ್ದಂತಹ ಭಗವದ್ಗೀತೆ ಏನು? ಯಾವ್ಯಾವ ಪ್ರಭಾವಗಳಿಂದ ಮತ್ತು ಯಾವ್ಯಾವ ನುಸುಳುವಿಕೆಗಳಿಂದ ಈಗ ನಾವು ಕಾಣುತ್ತಿರುವ ಭಗವದ್ಗೀತೆಯಾಗಿದೆ ಎಂದು ಆಧಾರಸಹಿತ ವಿವರಿಸುತ್ತಾರೆ.

ಚಿಂತನೆ ಮತ್ತು ಭಾವನೆಗಳ ಪ್ರಭಾವವು ದೇಶದ ಪ್ರಗತಿಗೆ ಹೇಗೆ ಕೆಲಸ ಮಾಡುತ್ತದೆ ಎಂದು ಯೋಚಿಸುತ್ತಾರೆ ಸಿನ್ಹಾ. ಕೆಲವು ದೇಶಗಳಿಗೆ ಸಂಪನ್ಮೂಲಗಳ ಕೊರತೆ ಇದ್ದು, ಎಲ್ಲವೂ ವ್ಯತಿರಿಕ್ತವಾಗಿರುವಂತಹ ವಾತಾವರಣವೇ ಇದ್ದರೂ ಔದ್ಯೋಗಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುತ್ತಾರೆ. ಆದರೆ, ಭಾರತದಂತಹ ದೇಶವು ಎಲ್ಲವೂ ಇದ್ದು ಹಾಗೆ ಸಾಧಿಸಲಾಗದಿರುವುದಕ್ಕೆ ಕಾರಣ ಏನು ಎಂದು ನೋಡುತ್ತಾ, ಸಿನ್ಹಾ ಗೀತೆಯ ಕಡೆ ನೋಡುತ್ತಾರೆ. ಕೆಲಸ ಮಾಡು ಆದರೆ ಪ್ರತಿಫಲವನ್ನು ಅಪೇಕ್ಷಿಸಬೇಡ. ಬಯಕೆ ದುಃಖಕ್ಕೆ ಕಾರಣ, ಬಯಕೆಯನ್ನು ಹೊಂದಬೇಡ. ವಿಧಿ ಲಿಖಿತದಂತೆ ಎಲ್ಲವೂ ನಡೆಯುತ್ತದೆ. ಪ್ರಾಪಂಚಿಕ ವ್ಯವಹಾರ ನಶ್ವರ, ಆಧ್ಯಾತ್ಮಿಕತೆಯೇ ಉನ್ನತ ಮತ್ತು ಅಮರ. ನೀನು ಏನೇ ಮಾಡಿದರೂ ದೇವರು ಅನುಗ್ರಹಿಸದಿದ್ದರೆ ಎಲ್ಲವೂ ವ್ಯರ್ಥ. ದುಃಖ, ಸಂತೋಷ, ಯಶಸ್ಸು ಮತ್ತು ವೈಫಲ್ಯ ಎಲ್ಲವೂ ದೇವರ ಇಚ್ಛೆ. ಬೇರೂರಿರುವ ಇಂತಹ ವಿಚಾರಗಳು ಯಾವ ರೀತಿಯಲ್ಲಿ ಮನುಷ್ಯನ ಸಂಕಲ್ಪ ಮತ್ತು ಸಾಧನೆಗೆ ನ್ಯಾಯ ಸಂದಾಯ ಮಾಡುತ್ತದೆ ಎಂಬುದು ಸಿನ್ಹಾರ ಚಿಂತನೆ. ರಾಷ್ಟ್ರೀಯತೆಯು ಧಾರ್ಮಿಕತೆಯ ಮೇಲೆ ಅವಲಂಬಿತವಾದರೆ ಎಂತಹ ಪ್ರಮಾದಗಳನ್ನು ಮತ್ತು ವೈಫಲ್ಯಗಳನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.

ಕಪಿಲ ಪತಂಜಲ ಗೌತಮ ಜಿನರೆಲ್ಲರ ತಾತ್ವಿಕತೆಗಳು ಭಾರತದ ಸಿದ್ಧಾಂತಕ್ಕೆ ಕಾಣ್ಕೆಗಳನ್ನು ನೀಡಿದವು ಎನ್ನುತ್ತಲೇ ವ್ಯಾಸನ ಭಗವದ್ಗೀತೆಯಲ್ಲಿ ಅವೆಲ್ಲವೂ ಹೇಗೆ ನುಸುಳಿದವು ಎಂಬುದು ಒಂದು ಸಸ್ಪೆನ್ಸ್ ಥ್ರಿಲ್ಲರ್.
ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯಲ್ಲಿ ಹದಿನೈದು ಅಧ್ಯಾಯಗಳೇ ಕಲಬೆರಕೆಯವು ಎಂದರೆ ಮರ್ಮಾಘಾತವಾಗದೇ!

ಮೂಲ ಗೀತ ಮೊದಲನೆಯ ಅಧ್ಯಾಯದ 28ನೇ ಶ್ಲೋಕದಿಂದ ಆರಂಭವಾಗುತ್ತದೆ. ನಂತರ ಮೊದಲ 3 ಅಧ್ಯಾಯಗಳಷ್ಟೇ ಅಸಲಿ ಎನ್ನುತ್ತಾ ಕ್ರಿಶ 800 ರಲ್ಲಿ ಬ್ರಾಹ್ಮಣವಾದವನ್ನು ಮತ್ತು ಅದ್ವೈತ ಸಿದ್ಧಾಂತವನ್ನು ಹೇಗೆ ತರಲಾಯ್ತು ಎಂದು ಕೂಲಂಕುಷವಾಗಿ ವಿವರಿಸುತ್ತಾರೆ.

ಕೊನೆಗೆ ತಿಳಿಯುವುದೇನೆಂದರೆ, ಮೂಲ ಭಗವದ್ಗೀತೆ ಅನೇಕ ಪ್ರಭಾವಗಳನ್ನು, ಬದಲಾವಣೆಗಳನ್ನು ಮತ್ತು ಕಲಬೆರಕೆಗಳನ್ನು ಹೊಂದಿದೆ. ಯೋಗ, ಗೀತೆ ಹಿಂದೂ ಧರ್ಮದ ಅಥವಾ ವೈದಿಕ ಧರ್ಮದ ಕೊಡುಗೆ ಏನಲ್ಲ. ಯೋಗ ದೇಹಕ್ಕೆ ಮತ್ತು ಗೀತೆ ಮನಸ್ಸಿಗೆ ಆರೋಗ್ಯ ಕೊಡುವ ದೃಷ್ಟಿಯನ್ನು ಹೊಂದಿರುವುದರಿಂದ ಪೂರ್ವಾಗ್ರಹಪೀಡಿತರಾಗಿ ತಿರಸ್ಕರಿಸಬಾರದು ಎಂಬುದು. ಒಬ್ಬ ಸತ್ಯಾನ್ವೇಷಿಯು ಪೂರ್ವಾಗ್ರಹಗಳಲ್ಲಿ ಬಂಧಿತನಾದರೆ ಸಂಶೋಧನೆಯಾಗಲಿ, ಅಧ್ಯಯನವಾಗಲಿ ಹೇಗೆ ಸಾಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುಜನರಿಗೆ ತಿಳಿದ ವಿಚಾರ. ಇದರಲ್ಲಿ ವಿಶೇಷವಾಗಿ ಏನೂ ಇಲ್ಲ. ಶತಮಾನಗಳಿಂದ ಈ ವಾದ ಇದ್ದದ್ದೇ…‌‌.!!

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...