ಶುಕ್ರವಾರ, ಒಕ್ಕೂಟ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ಮಾರ್ಟ್‍ಸಿಟಿ ಮಿಷನ್ ಯೋಜನೆ ಅಡಿ ಪ್ರಕಟಿಸಿದ ವರದಿಯಲ್ಲಿ ಉತ್ತರ ಪ್ರದೇಶವು ಅತ್ಯುತ್ತಮ ರಾಜ್ಯ ಸ್ಥಾನ ಪಡೆದಿದೆ. ನಗರಗಳ ಪೈಕಿ ಇಂದೋರ್ ಮತ್ತು ಸೂರತ್ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಂಡಿವೆ. ಇದರ ಹಿಂದೆಯೇ ಇವತ್ತು ನೆಟ್ಟಿಗರು ಈ ವರದಿ ಕುರಿತು ಟ್ರೋಲ್ ಮಾಡುತ್ತಿದ್ದಾರೆ.
ಸ್ಮಾರ್ಟ್ ಸಿಟೀಸ್ ಮಿಷನ್, ಅಮೃತ್ ಯೋಜನೆ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳ ಆರನೇ ವಾರ್ಷಿಕೋತ್ಸವವನ್ನು ಗುರುತಿಸುವ ಒಂದು ವರ್ಚುವಲ್ ಕಾರ್ಯಕ್ರಮದಲ್ಲಿ, 2020ರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯಗಳ ಪೈಕಿ ಉತ್ತರ ಪ್ರದೇಶವು ನಂಬರ್ 1 ಎಂದೂ, ಮಧ್ಯಪ್ರದೇಶ ಎರಡನೇ ಮತ್ತು ತಮಿಳುನಾಡು ಮೂರನೇ ಸ್ಥಾನದಲ್ಲಿವೆ ಎಂದು ಪ್ರಕಟಣೆ ತಿಳಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.
‘ಪ್ರಸ್ತಾವಿತ ಯೋಜನೆಗಳ ಒಟ್ಟು ಮೌಲ್ಯದ ಪೈಕಿ ಶೇ. 22 ವೆಚ್ಚವಾಗಿದೆ. ಉದ್ದೇಶಿತ 100 ಸ್ಮಾರ್ಟ್ ನಗರಗಳ ಪೈಕಿ ಶೇ.52 ಈವರೆಗೆ ಪೂರ್ಣಗೊಂಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೋವಿಡ್ ಕಾರಣದಿಂದಾಗಿ ಎದುರಾದ ಸವಾಲುಗಳ ಹೊರತಾಗಿಯೂ, ಸ್ಮಾರ್ಟ್ ಸಿಟೀಸ್ ಮಿಷನ್‌ನಲ್ಲಿ ಸರಾಸರಿ ಮಾಸಿಕ ಖರ್ಚು ಕಳೆದ ವರ್ಷದಲ್ಲಿ ದ್ವಿಗುಣಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
ನೆಟ್ಟಿಗರ ಟ್ರೋಲ್
ಉತ್ತರಪ್ರದೇಶ ನಂಬರ್ 1 ಎಂಬ ವಿಷಯವೇ ನೆಟ್ಟಿಗರ ಟ್ರೋಲ್‍ಗೆ ಕಾರಣವಾಗಿದೆ. ‘ಹೋ ಯುಪಿ ಚುನಾವಣೆ ಸಲುವಾಗಿ ಈ ನಿರ್ಧಾರವೇ?’ ಎಂದು ಕೆಲವರು, ‘ಯುಪಿಯಲ್ಲಿ ನಗರ ಮೂಲಭೂತ ಸೌಕರ್ಯದ ಹೆಸರಲ್ಲಿ ಸಿಕ್ಕಾಪಟ್ಟೆ ಏನೋ ನಡೆದಿದೆ’ ಎಂದು ಕೆಲವರು ಅಪಹಾಸ್ಯ ಮಾಡಿದ್ದಾರೆ.
Modi Govt has declared Uttar Pradesh as the 'BEST SMART STATE' in India!
Adityanath's UP definitely has Smart solutions like dumping thousands of bodies into Ganga.
Modi is yet to build One Smart City in 7 years
But every year he gives 100 awards for Best Smart City & State ?
— Srivatsa (@srivatsayb) June 26, 2021
ಮೋದಿಯವರು ಇನ್ನು ಒಂದೂ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿಲ್ಲ. ಆದರೆ ಪ್ರತಿವರ್ಷ ನೂರು ನಗರಗಳಿಗೆ ಪ್ರಶಸ್ತಿ ನೀಡುತ್ತಾರೆ. ಇನ್ನು ಯುಪಿ ಸಿಎಂ ಯೋಗಿ ಹೆಣಗಳನ್ನು ಗಂಗೆಯಲ್ಲಿ ಮುಳುಗಿಸುವ ‘ಸ್ಮಾರ್ಟ್’ ಐಡಿಯಾ ಕಂಡುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಶ್ರೀವತ್ಸ ಲೇವಡಿ ಮಾಡಿದ್ದಾರೆ.
Yes. I forgot to tell. UP ranked best under Smart Cities Mission??.What is the Smart City in UP? Varnasy? No info. Indore & Surat share 2nd place announced by Housing & Urban affairs Ministry.
— new_school (@PVasanthibai) June 26, 2021
ಇದನ್ನೂ ಓದಿ: ತುಮಕೂರು ಸ್ಮಾರ್ಟ್ ಸಿಟಿ: ಅಗೆದದ್ದು ಆಯ್ತು, ಈಗ ತೇಪೆ ಕೆಲಸ. ಅದು ನೆಪಮಾತ್ರಕ್ಕೆ…


