Homeಕರ್ನಾಟಕಗೋಹತ್ಯೆ ನಿಷೇಧ ಕಾಯ್ದೆ: 4 ತಿಂಗಳಲ್ಲಿ 58 ಪ್ರಕರಣಗಳು ದಾಖಲು

ಗೋಹತ್ಯೆ ನಿಷೇಧ ಕಾಯ್ದೆ: 4 ತಿಂಗಳಲ್ಲಿ 58 ಪ್ರಕರಣಗಳು ದಾಖಲು

- Advertisement -
- Advertisement -

ಕೊರೊನಾ ನಡುವೆಯೆ ರಾಜ್ಯ ಸರ್ಕಾರವು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ (ಗೋಹತ್ಯೆ ನಿಷೇಧ ಕಾಯ್ದೆ) ಮತ್ತು ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯಡಿ 2021 ರ ಫೆಬ್ರವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ 29 ಎಫ್‌ಐಆರ್‌‌‌ ಸೇರಿದಂತೆ ಒಟ್ಟು 58 ಪ್ರಕರಣಗಳನ್ನು ರಾಜ್ಯ ಪೊಲೀಸರು ದಾಖಲಿಸಿದ್ದಾರೆ. ದಕ್ಷಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು, ಮೈಸೂರು ಎರಡನೆ ಸ್ಥಾನದಲ್ಲಿದೆ.

ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ವಿವಾದಿತ ಗೋಹತ್ಯೆ ಕಾನೂನನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ರೈತ ಸಂಘವು ಕರ್ನಾಟಕ ಹೈಕೋರ್ಟ್‌ ಕದ ತಟ್ಟಿತ್ತು. ರೈತ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂಬಂಧಿಸಿದ ರಾಜ್ಯ ಸರ್ಕಾರ ನೀಡಿರುವ ಅಫಿಡವಿಟ್‌ನಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಅದರ ಪ್ರಕಾರ 29 ಎಫ್‌ಐಆರ್‌ಗಳಲ್ಲಿ ಸುಮಾರು 50 ರಷ್ಟು ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚಂಡಿಗಢ: ಬ್ಯಾರಿಕೇಡ್ ಮುರಿದು ರಾಜಭವನಕ್ಕೆ ಮುತ್ತಿಗೆ ಹಾಕಲೊರಟ ಪಂಜಾಬ್ -ಹರಿಯಾಣ ರೈತರು

ರಾಜ್ಯದ 30 ಜಿಲ್ಲೆಗಳಲ್ಲೂ ಗೋಮಾಂಸ ಮಾರಾಟ ಮತ್ತು ದನಗಳ ಅಕ್ರಮ ಸಾಗಣೆಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ 14 ಜಿಲ್ಲೆಗಳಲ್ಲಿ ಎಫ್‌ಐಆರ್ ನೋಂದಾಯಿಸಲಾಗಿದ್ದು, ದಕ್ಷಿಣ ಕನ್ನಡದಲ್ಲಿ 8 ಎಫ್‌ಐಆರ್‌ ಮತ್ತು ಮೈಸೂರಿನಲ್ಲಿ 7 ಎಫ್‌ಐಆರ್‌ ದಾಖಲಾಗಿದೆ.

ಜೂನ್‌ 4 ರವರೆಗೆ ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, ಮೈಸೂರು ಜಿಲ್ಲೆಯಲ್ಲಿ 7, ಚಿಕ್ಕಮಗಳೂರಿನಲ್ಲಿ 3, ತುಮಕೂರು ಮಂಡ್ಯ ಜಿಲ್ಲೆಗಳಲ್ಲಿ ತಲಾ 2 ಹಾಗೂ ರಾಮನಗರ, ಹಾಸನ, ಕೊಡಗು, ಉತ್ತರ ಕನ್ನಡ, ಕಲಬುರಗಿ, ವಿಜಯಪುರ ಮತ್ತು ಬಳ್ಳಾರಿಯಲ್ಲಿ ತಲಾ ಒಂದೊಂದು ಎಫ್‌ಐಆರ್‌ಗಳು ದಾಖಲಾಗಿದೆ.

ಇದನ್ನೂ ಓದಿ: ಹಂತಹಂತವಾಗಿ ತೊರೆಯಬೇಕಾದ ಜಾಡ್ಯ ಬ್ರಾಹ್ಮಣ್ಯದ ಗರ್ಭದೊಳಗೆ ಒಂದಿಷ್ಟು ಹೊತ್ತು

ಇದನ್ನೂ ಓದಿ: ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ ನಟ ಚೇತನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...