Homeಮುಖಪುಟಜಮ್ಮು ವಿಮಾನ ನಿಲ್ಧಾಣದಲ್ಲಿ ಸಣ್ಣ ಪ್ರಮಾಣದ ಸ್ಪೋಟ : ಡ್ರೋನ್ ದಾಳಿಯ ಸಾಧ್ಯತೆಯ ತನಿಖೆ

ಜಮ್ಮು ವಿಮಾನ ನಿಲ್ಧಾಣದಲ್ಲಿ ಸಣ್ಣ ಪ್ರಮಾಣದ ಸ್ಪೋಟ : ಡ್ರೋನ್ ದಾಳಿಯ ಸಾಧ್ಯತೆಯ ತನಿಖೆ

- Advertisement -
- Advertisement -

ಜಮ್ಮ ವಿಮಾನ ನಿಲ್ಧಾಣದಲ್ಲಿ ಆತಂಕಕಾರಿ ಸ್ಫೋಟವೊಂದು ಸಂಭವಿಸಿದೆ. ಭಾನುವಾರ ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಕಾಣಿಸಿಕೊಂಡ ಸ್ಫೋಟ ಸಣ್ಣ ಪ್ರಮಾಣದ್ದಾಗಿದ್ದು ಯಾವುದೇ ಜೀವ ಹಾನಿಯಾಗಲಿ ಆಸ್ತಿ ಪಾಸ್ತಿ ಹಾನಿಯಾಗಲಿ ಸಂಭವಿಸಿಲ್ಲ. ಆದರೆ ವಿಮಾನ ನಿಲ್ಧಾಣದ ಛಾವಣಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಜಮ್ಮು ವಿಮಾನ ನಿಲ್ಧಾಣದ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಬಾಂಬ್ ನಿಷ್ಕ್ರೀಯ ದಳ  ಮತ್ತು ಬಾಂಬ್ ಡಾಟಾ ಸೆಂಟರ್‌ನ ತಜ್ಞರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಸ್ಫೋಟದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಮಾನ ನಿಲ್ಧಾಣದ ಛಾವಣಿಯ ಜೊತೆಗೆ ತೆರೆದ ಸ್ಥಳವೊಂದರಲ್ಲಿ ಕೂಡ ಸ್ಫೋಟ ಸಂಭವಿಸಿದೆ.

ಜಮ್ಮು ವಿಮಾನ ನಿಲ್ಧಾಣವು ಭಾರತೀಯ ವಾಯು ಸೇನೆಯ ನಿಯಂತ್ರಣದಲ್ಲಿ ಇದ್ದು ಯುದ್ಧ ವಿಮಾನಗಳ ಜೊತೆಗೆ ನಾಗರಿಕ ವಿಮಾನ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ.

ನಿನ್ನೆ ರಾತ್ರಿಯ ಸ್ಫೋಟದ ನಂತರ ಜಮ್ಮು ವಿಮಾನ ನಿಲ್ಧಾಣದ ಅಧಿಕಾರಿಗಳು ಡ್ರೋನ್‌ ಮೂಲಕ ಬಾಂಬ್ ದಾಳಿಯ ಸಾಧ್ಯತೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ವಿಮಾನ ನಿಲ್ಧಾಣದ ಸುತ್ತ ತೀವ್ರ ಕಟ್ಟೆಚ್ಚರವಹಿಸಲಾಗಿದ್ದು ಬಿಗಿ ಭದ್ರತೆಯನ್ನು ಮಾಡಲಾಗಿದೆ.


ಇದನ್ನೂ ಓದಿ : ನರೇಂದ್ರ ಮೋದಿ ವರ್ಸಸ್ ಪ್ರಶಾಂತ್ ಕಿಶೋರ್; ಶರದ್ ಪವಾರ್ ಸಭೆಯೊಂದು ಆರಂಭಬಿಂದು ಮಾತ್ರವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...