Homeಕರೋನಾ ತಲ್ಲಣಮಕ್ಕಳಿಗೂ ಬರಲಿದೆ ವ್ಯಾಕ್ಸಿನ್: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಒಕ್ಕೂಟ ಸರ್ಕಾರ

ಮಕ್ಕಳಿಗೂ ಬರಲಿದೆ ವ್ಯಾಕ್ಸಿನ್: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಒಕ್ಕೂಟ ಸರ್ಕಾರ

- Advertisement -
- Advertisement -

18 ವರ್ಷ ಮೇಲ್ಪಟ್ಟ ನಾಗರಿಕರಿಗೆಲ್ಲರಿಗೂ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ದೇಶದಲ್ಲಿ ನಡೆಯುತ್ತಿದೆ. ಇದುವರೆಗೆ ದೇಶದಲ್ಲಿ 20 ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ವಯಸ್ಕರಿಗೆಲ್ಲರಿಗೂ ಈ ವರ್ಷಾಂತ್ಯದ ಒಳಗೆ ವ್ಯಾಕ್ಸಿನ್ ನೀಡುವ ಗುರಿಯನ್ನು ಸರ್ಕಾರಗಳು ಇಟ್ಟುಕೊಂಡಿವೆ. ಕೊರೋನಾ ಮೂರನೇ ಅಲೆಯು ಶೀಘ್ರದಲ್ಲಿಯೇ ದೇಶದಲ್ಲಿ ಕಾಣಿಸಿಕೊಳ್ಳಲಿದ್ದು ಮಕ್ಕಳಿಗೆ ಹೆಚ್ಚಿನ ಅಪಾಯವಿದೆ ಎಂದು ತಜ್ಞರು ಸತತವಾಗಿ ಎಚ್ಚರಿಕೆಯನ್ನು ನೀಡುತ್ತ ಬಂದಿದ್ದಾರೆ. ಜೊತೆಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆ ಕಾಲೇಜುಗಳನ್ನು ತೆರೆಯುವ ಕುರಿತು ಚರ್ಚೆಗಳು ಆರಂಭವಾಗಿದೆ. ಇದೆಲ್ಲದರ ನಡುವೆ ಕೊರೋನಾ 3 ನೇ ಅಲೆಯ ಅಪಾಯದಿಂದ ಮಕ್ಕಳಿಗೆ ರಕ್ಷಣೆ ಹೇಗೆ ಎಂಬ ಚಿಂತೆ ಪೋಷಕರಲ್ಲಿ ಕಾಡುತ್ತಿದೆ.

ರಾಜ್ಯ ಸರ್ಕಾರಗಳು ಮಕ್ಕಳಿಗೆ ಕೊರೋನಾ ಸೋಂಕಿನ ಚಿಕಿತ್ಸೆ ನೀಡಲು ವಿಶೇಷ ಆಸ್ಪತ್ರೆಗಳನ್ನು ಸಿದ್ಧಪಡಿಸುತ್ತಿವೆ. ಚಿಕಿತ್ಸೆ, ಆಸ್ಪತ್ರೆ, ಬೆಡ್‌ಗಳ ನಡುವೆ ಮಕ್ಕಳ ವ್ಯಾಕ್ಸಿನ್ ಯಾವಾಗ ಬರುತ್ತದೆ? ಅಥವಾ ಮಕ್ಕಳಿಗೆ ವ್ಯಾಕ್ಸಿನ್‌ಗಳನ್ನು ನೀಡಲಾಗುವುದಿಲ್ಲವೇ ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿದೆ. ಪೋಷಕರ ಆತಂಕಕ್ಕೆ ಉತ್ತರ ಸಿಕ್ಕಿದ್ದು ಕೆಲವೇ ದಿನಗಳಲ್ಲಿ ಮಕ್ಕಳ ವ್ಯಾಕ್ಸಿನ್ ದೇಶದಲ್ಲಿ ಲಭ್ಯವಾಗಲಿದೆ ಎಂದು ಒಕ್ಕೂಟ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಭಾರತ ಬಯೋಟೆಕ್ ಕಂಪನಿ ಸಿದ್ಧಪಡಿಸಿರುವ ಝೈಡೂಸ್ ಕ್ಯಾಂಡಿಲಾ ವ್ಯಾಕ್ಸಿನ್‌ನ 3 ನೇ ಹಂತದ ಕ್ಲಿನಿಕಲ್ ಟ್ರಯಲ್‌ ಕೊನೆಗೊಂಡಿದ್ದು ಸದ್ಯದಲ್ಲಿಯೇ 12-18 ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನ್ ಲಭ್ಯವಾಗಲಿದೆ. ಕೆಲವು ಕಾನೂನಿನ ಪ್ರಕ್ರಿಯೆಗಳು ಅಂತ್ಯವಾದ ನಂತದ ದೇಶದಲ್ಲಿ ಮಕ್ಕಳಿಗೂ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಒಕ್ಕೂಟ ಸರ್ಕಾರ ಹೇಳಿದೆ.

ಜೂನ್ ಆರಂಭದಲ್ಲಿ ತಲೆ ದೋರಿದ ವ್ಯಾಕ್ಸಿನ್ ಕೊರತೆ, ಕೇಂದ್ರ ಸರ್ಕಾರದ ವ್ಯಾಕ್ಸಿನೇಶನ್ ನೀತಿ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಕ್ಕಳಿಗೆ ಯಾವಾಗ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು. ಸುಪ್ರೀಂ ಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ ಕೊರೋನಾ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳಿಗೆ ಅಪಾಯವಿರುವುದನ್ನು ಮನಗಂಡು 18 ವರ್ಷದೊಳಗಿನ ವಯೋವರ್ಗಕ್ಕೆ ವ್ಯಾಕ್ಸಿನ್ ನೀಡುವ ಸಿದ್ಧತೆಗಳು ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡೆವಿಟ್ ಸಲ್ಲಿಸಿದೆ.

ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲವೆಂದು ಹೇಳಿರುವ ಕೇಂದ್ರ ಸರ್ಕಾರ ಮೇ 12 ರಂದು ಡ್ರಗ್‌ ಕಂಟ್ರೋಲರ್ ಜನರಲ್ ಅವರು ಭಾರತ್ ಬಯೋಟೆಕ್ ಸಂಸ್ಥೆಯ ಝೈಡೂಸ್ ಕ್ಯಾಂಡಿಲಾ ವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್‌ಗೆ ಅನುಮತಿ ನೀಡಿದ್ದರು. 12-18 ವರ್ಷದ ಮಕ್ಕಳು ಸ್ವಯಂ ಪ್ರೇರಿತರಾಗಿ ವ್ಯಾಕ್ಸಿನ್ ಟ್ರಯಲ್‌ಗೆ ಒಳಗಾಗಿದ್ದು ಉತ್ತಮ ಫಲಿತಾಂಶ ಬಂದಿದೆ. ಈಗ 3 ನೇ ಹಂತದ ಟ್ರಯಲ್‌ಗಳು ಪೂರ್ಣಗೊಂಡಿದೆ ಎಂದು ಒಕ್ಕೂಟ ಸರ್ಕಾರ ತನ್ನ ಅಫಿಡೆವಿಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ದೇಶದ ವ್ಯಾಕ್ಸಿನ್ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದು ಮೇ ತಿಂಗಳಿಗಿಂತ ಜೂನ್ ಅವಧಿಯಲ್ಲಿ ವ್ಯಾಕ್ಸಿನ್ ಉತ್ಪಾದನೆ ದುಪ್ಪಟ್ಟಾಗಿದೆ. ಜುಲೈ ಆಗಸ್ಟ್‌ ಹೊತ್ತಿಗೆ ಈಗಿರುವ ವ್ಯಾಕ್ಸಿನ್‌ ಉತ್ಪಾದನೆಯ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಲಿದೆ ಎಂದು ಒಕ್ಕೂಟ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿದೆ.


ಇದನ್ನೂ ಓದಿ : ಜಮ್ಮು ವಿಮಾನ ನಿಲ್ಧಾಣದಲ್ಲಿ ಸಣ್ಣ ಪ್ರಮಾಣದ ಸ್ಪೋಟ : ಡ್ರೋನ್ ದಾಳಿಯ ಸಾಧ್ಯತೆಯ ತನಿಖೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...