Homeಕರ್ನಾಟಕಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

ಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

- Advertisement -
- Advertisement -

ದಕ್ಷಿಣ ಕನ್ನಡ ಹೇಗೆ ಹಿಂದುತ್ವದ ಪ್ರಯೋಗ ಶಾಲೆಯೋ ಹಾಗೆಯೇ ಉತ್ತರಕನ್ನಡವೆಂದರೆ ಪ್ರಳಯಾಂತಕ ಸರ್ಕಾರಿ ಯೋಜನೆಗಳ ಪ್ರಯೋಗ ಪಶು! ಉತ್ತರಕನ್ನಡದ ಜೀವನದಿಗಳಾದ ಕಾಳಿ, ಶರಾವತಿ, ಬೇಡ್ತಿ, ಗಂಗಾವಳಿಮೇಲೆ ಆಗಾಗ ಪೊಕ್ಕು ಪರ್ಯಾವರ್ಣ ಪಂಡಿತರ ಕೆಟ್ಟ ಕಣ್ಣು ಬೀಳುತ್ತಲೇ ಇರುತ್ತದೆ. ಕೆಲವು ದಿನಗಳಿಂದ ಬೇಡ್ತಿ ವರಾದ ನದಿ ಜೋಡಣೆ ತಿರುವು ಯೋಜನೆ ಪ್ರಸ್ತಾಪದಿಂದ ಕಂಗಾಲಾಗಿರುವ ಜಿಲ್ಲೆಯ ಜನರೀಗ ಅಘನಾಶಿನಿ ನದಿ ನೀರನ್ನು ಬಳ್ಳಾರಿ ಕಡೆ ಹರಿಸುವ ಪ್ಲಾನ್ ವರದಿ ನೋಡಿ ಬೆಚ್ಚಿಬಿದ್ದಿದ್ದಾರೆ.

ಅಘನಾಶಿನಿ ನದಿ ಕೊಳ್ಳದಲ್ಲಿ ಜಲವಿದ್ಯುತ್ ಮತ್ತು ಏತ ನೀರಾವರಿ ಯೋಜನೆ ನಡೆಸುವ ಹುನ್ನಾರ ಕಳೆದ 50 ವರ್ಷದಿಂದ ನಾನಾ ನಮೂನೆಯಲ್ಲಿ ನಡೆಯುತ್ತಲೇ ಇದೆ. ಕಳೆದ ವರ್ಷ ಸಿಲಿಕಾನ್ ಸಿಟಿ (ಬೆಂಗಳೂರು) ದಾಹ ಇಂಗಿಸಲು ಅಘನಾಶಿನಿ ನದಿ ಅತ್ತ ತಿರುಗಿಸುವ ಯೋಜನೆಯೊಂದರ ಪ್ರಸ್ತಾಪವಾಗಿತ್ತು. ತಮ್ಮನ್ನು ಬೀದಿ ಪಾಲಾಗಿಸುವ ಈ ಎಡವಟ್ಟು ಯೋಜನೆಯಿಂದ ಸಿಟ್ಟಿಗೆದ್ದ ಅಘನಾಶಿನಿ ಕೊಳ್ಳದ ಮಂದಿ ಪ್ರತಿಭಟನೆಗೆ ಇಳಿದಿದ್ದರು. ಆ ಪ್ರಾಜೆಕ್ಟ್ ಸರ್ಕಾರಿ ಕಡತದಲ್ಲಿ ಅಡಗಿ ಕುಳಿತು ಸಮಯಸಾಧಿಸುತ್ತಲೇ ಇದೆ. ಇದೀಗ ಅದೇ ಅಘನಾಶಿನಿ ನದಿಯನ್ನು ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳತ್ತ ತಿರುಗಿಸುವ ಕೆಲಸ ರಹಸ್ಯವಾಗಿ ಶುರುವಾಗಿದೆ!

ಕಾಲೇಶ್ವರಮ್ ಮಾದರಿ ಪ್ಲಾನ್

ತೆಲಂಗಾಣದ ಕಾಲೇಶ್ವರಮ್‌ನಲ್ಲಿ 1.25 ಲಕ್ಷ ಕೋಟಿ ಖರ್ಚು ಮಾಡಿ ಪರಿಸರ ಅರಣ್ಯಕ್ಕೆ ದೊಡ್ಡ ಅನಾಹುತವಾಗುವಂಥ ಏತ ನೀರಾವರಿ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ. ಈ ಯೋಜನೆ ಮಾದರಿಯಲ್ಲಿ ಅಘನಾಶಿನಿ ನದಿ ಕಣಿವೆಯಲ್ಲಿ ನೀರಾವರಿ ಯೋಜನೆ ಆರಂಭಿಸಿದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಜಗಳೂರು, ಕೂಡ್ಲಿಗಿ, ಹರಪನಹಳ್ಳಿ, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಚಿತ್ರದುರ್ಗ ಜಿಲ್ಲೆಯ ದುರ್ಗ ಮತ್ತು ಹೆಡೆಕೋಟೆ ಪ್ರದೇಶದ 6 ಲಕ್ಷ ಎಕರೆ ಭೂಮಿ ಹಸಿರಾಗಿಸಬಹುದೆಂಬ ವರದಿಯೊಂದನ್ನು ನಿವೃತ್ತ ಉಪಮುಖ್ಯ ಇಂಜಿನಿಯರ್ ಪ್ರಕಾಶ್ ಕುದರಿ ಸಿದ್ಧಪಡಿಸಿದ್ದಾರೆ. ಈ ವರದಿ ಪ್ರಕಾರ ಯಾವುದೇ ಗ್ರಾಮ ಮುಳುಗಡೆಯಾಗದು, ಅರಣ್ಯ ನಾಶವಾಗದು, ಪರಿಸರಕ್ಕೆ ಧಕ್ಕೆಯಿಲ್ಲ.

ಅಘನಾಶಿನಿ ನದಿ 117 ಕಿ.ಮೀ ಪಯಣದಲ್ಲಿ ಬಕುರಹೊಳೆ, ದೋಣಿಹಳ್ಳ, ಚಂಡಿಕಾ ಹೊಳೆ, ಮಾಸ್ತಿಮನೆ ಹಳ್ಳ, ಬೆಣ್ಣೆ ಹೊಳೆಯೇ ಮುಂತಾದ ಹೊಳೆ ಹಳ್ಳ ಸೇರಿಸಿಕೊಂಡು 120 ಟಿಎಂಸಿ ನೀರನ್ನು ಅರಬ್ಬೀ ಸಮುದ್ರಕ್ಕೆ ಸೇರಿಸುತ್ತದೆ ಎಂದು ಕುದರಿ ಸಾಹೇಬರು ಹೇಳಿರುತ್ತಾರೆ. ಅವರ ಪ್ರಕಾರ ಈ ವ್ಯರ್ಥವಾಗುವ 120 ಟಿಎಂಸಿ ನೀರಿನಲ್ಲಿ, ಪ್ರತಿ ಸೆಕೆಂಡಿಗೆ 5 ಸಾವಿರ ಲೀಟರ್ ನೀರೆತ್ತುವ ಸಾಮರ್ಥ್ಯದ 24 ಬೃಹತ್ ಪಂಪ್‌ಗಳಿಂದ ಬಯಲುಸೀಮೆಯ ಮೂರು ಜಿಲ್ಲೆಗಳಿಗೆ ಕಾಲುವೆಗಳ ಮೂಲಕ 60 ಟಿಎಂಸಿ ನೀರನ್ನು ಹರಿಸಬಹುದು. ಇದರಿಂದ ವರ್ಷಕ್ಕೆ 40 ಸಾವಿರ ಕೋಟಿರೂಗಳ ಕೃಷಿ ಉತ್ಪನ್ನ ಪಡೆಯಬಹುದು ಎಂದಿದ್ದಾರೆ. 40 ಸಾವಿರ ಕೋಟಿ ಬಜೆಟ್‌ನ ಸದರಿ ಪ್ರಾಜೆಕ್ಟ್ ಕೇವಲ 9 ತಿಂಗಳಲ್ಲಿ ಮುಗಿಸಬಹುದೆನ್ನುತ್ತಾರೆ ಕುದರಿ.

ವರದಿಯಷ್ಟು ಸುಲಭವಲ್ಲ!

ಕಲ್ಪನಾಲೋಕದಲ್ಲಿ ಬಯಲುಸೀಮೆಯನ್ನು ಹಸಿರು ಮಾಡುವಷ್ಟು ಸರಳ ಸುಲಭವಲ್ಲ ಅಘನಾಶಿನಿ ನೀರನ್ನು ಹಿಮ್ಮುಖವಾಗಿ ಹರಿಸುವುದು ಎನ್ನುತ್ತಾರೆ ಪರಿಸರ ತಜ್ಞರು. ಶಿರಸಿ ತಾಲ್ಲೂಕಿನ ಶಂಕರ ಹೊಂಡದಲ್ಲಿ ಹುಟ್ಟುವ ಅಘನಾಶಿನಿ ನದಿ ಪಕ್ಕದ ಸಿದ್ಧಾಪುರ ತಾಲ್ಲೂಕಿನಲ್ಲಿ ಹರಿದು ಸರ್ವಋತುರಮಣೀಯ ಉಂಚುಳ್ಳಿ ಜಲಪಾತ ಸೃಷ್ಟಿಸಿ ಸಹ್ಯಾದ್ರಿ ನಿತ್ಯಹರಿದ್ವರ್ಣ ಕಾಡು ಮೇಡು ಬೇಧಿಸಿ ಕುಮಟಾ ತಾಲ್ಲೂಕಿನ ಅಘನಾಶಿನಿ ತದಡಿ ಗ್ರಾಮಗಳ ಬಳಿ ಅರಬ್ಬೀ ಸಮುದ್ರ ಸೇರುತ್ತದೆ. ದೇಶದಲ್ಲೇ ಸ್ವಚ್ಛವಾದ ಮಾಲಿನ್ಯ ರಹಿತ ನದಿ ಎಂಬ ಹೆಗ್ಗಳಿಕೆಯ ಈ ಪುಟ್ಟ ಅಘನಾಶಿನಿಯ ಒಟ್ಟ್ಟು ಜಲಾನಯನ ಪ್ರದೇಶ 1350 ಚ.ಕಿ.ಮೀ.

ಅಘನಾಶಿನಿಯ 120 ಟಿಎಂಸಿ ಅಡಿಯಷ್ಟು ನೀರು ಸಮುದ್ರ ಸೇರುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಕುದುರಿಯವರ ವರದಿಯ ದೊಡ್ಡ ಲೋಪವೇ ಇದು. ಹೀಗಾಗಿ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆಗೆ 60 ಟಿಎಂಸಿ ಅಡಿ ನೀರು ಒಯ್ಯುಲು ಸಾಧ್ಯವೇ ಇಲ್ಲ. ಕೇಂದ್ರಿಯ ಜಲ ಮಂಡಳಿ ಕುಮಟಾ ತಾಲ್ಲೂಕಿನ ಸಂತೆಗುಳಿಯಲ್ಲಿ ಅಘನಾಶಿನಿಯ ಹರಿವಿನ ಪ್ರಮಾಣ ನಿಖರವಾಗಿ ಲೆಕ್ಕ ಹಾಕಿದೆ. ಕಳೆದ 10 ವರ್ಷದ ನೀರಿನ ಹರಿವಿನ ದಾಖಲೆಯಂತೆ ನದಿಯ ಒಟ್ಟು ನೀರಿನ ಇಳುವರಿ ಬರೀ 85 ಟಿಎಂಸಿ ಮಾತ್ರ! ಈ ಅಂದಾಜಿನಂತೆ ತದಡಿಯಲ್ಲಿ ಅಘನಾಶಿ ನೀರು ಸಮುದ್ರಕ್ಕೆ ಸೇರುವ 100 ಟಿಎಂಸಿಗಿಂತ ಹೆಚ್ಚಿರಬಾರದು. ಈ ಲೆಕ್ಕಾಚಾರದಂತೆ ಇಂಜಿನಿಯರ್ ಕುದರಿ ಬಳಕೆಯಾಗದೇ ಇರುವ (Surplus Water) ಎಂದು ಹೇಳುವುದೇ ಅಸಮಂಜಸ ಎಂಬುದು ಭೂಜಲ ಶಾಸ್ತ್ರಜ್ಞರ ತರ್ಕ.

ಕುದರಿ ವರದಿಯಲ್ಲಿ ಹೇಳಿರುವ ಹೊಳೆ, ಹಳ್ಳಿಗಳೆಲ್ಲ ಸಿದ್ಧಾಪುರದ ಉಂಚಳ್ಳಿ ಜಲಪಾತದ ನಂತರ ಅಘನಾಶಿನಿ ಪಾತ್ರವನ್ನು ಸೇರಿಕೊಳ್ಳವಂಥವುಗಳು. ಆದರೆ ಅವರ ಪ್ರಾಜೆಕ್ಟ್ ರಿಪೋರ್ಟ್‌ನಲ್ಲಿ ಉಂಚಳ್ಳಿ ಜಲಪಾತಕ್ಕೂ ಮೊದಲೇ ಸಿದ್ಧಾಪುರ ತಾಲ್ಲೂಕಿನ ಹಾವಿನಬೀಳು ಗ್ರಾಮದ ಹತ್ತಿರ ಅಣೆಕಟ್ಟು ಕಟ್ಟಿ ನೀರೆತ್ತಲಾಗುತ್ತದೆ. ಮಾವಿನ ಮನೆ ಹೊಳೆಗೆ ಒಡ್ಡು ಹಾಕಿದಾಗ ಹಿಮ್ಮುಖವಾಗಿ ನೀರು ಕಳಿಸಲು ಕಮ್ಮಿಯೆಂದರೂ 20 ಅಡಿ ನೀರು ನಿಲ್ಲುವಂತೆ ಮಾಡಬೇಕಾಗುತ್ತದೆ. ಆಗ ನದಿಯಾಚೆಯ ಹಲವು ಹಳ್ಳಿಗಳು ಜಲಸಮಾಧಿ ಆಗುವುದು ಗ್ಯಾರಂಟಿ!

ಇದೊಂದು ಅಲ್ಲಸಲ್ಲದ ಯೋಜನೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಅಘನಾಶಿನಿ ನದಿ ಮೂರು ತಾಲೂಕುಗಳಲ್ಲಿ ಮಳೆಗಾಲದಲ್ಲಷ್ಟೇ ಮೈದುಂಬಿ ಹರಿದು, ಬೇಸಿಗೆಯಲ್ಲಿ ಬಸವಳಿಯುತ್ತದೆ. ಶಿರಸಿ, ಕುಮಟಾ ಮತ್ತು ಹೊನ್ನಾವರಕ್ಕೆಲ್ಲ ಕುಡಿಯುವ ನೀರಿನ ಸರಬರಾಜಾಗುವುದು ಅಘನಾಶಿನಿಂದಲೇ! ಬೇಸಿಗೆಯಲ್ಲಿ ನದಿ ಬತ್ತುವುದರಿಂದ ಶಿರಸಿಯಲ್ಲಿ ನೀರಿನ ಹಾಹಾಕಾರ ಏಳುತ್ತದೆ. ನದಿಗುಂಟದ ಕೆರೆ ಬಾವಿ ತೋಟ ಗದ್ದೆಗಳು ನೀರಿನ ಸೆಲೆಯಿಲ್ಲದೆ ಒಣಗುವುದು ಸಾಮಾನ್ಯ ಸಂಗತಿ. ನದಿ ಪಾತ್ರದಲ್ಲೇ ನೀರಿನ ಬರ ಬರುವಾಗ ಬಯಲುಸೀಮೆಯ ಫಲಾನುಭವಿ ಹಳ್ಳಿಗಳಿಗೆ ನೀರೊದಗಿಸುವುದಾದರೂ ಹೇಗೆ? ಇದರ ಪರಿಕಲ್ಪನೆ ಸಹ್ಯಾದ್ರಿ ಪರಿಸರದ ಪರಿಜ್ಞಾನ ಕುದರಿಯವರಿಗೆ ಇದ್ದಂತಿಲ್ಲ ಎಂಬ ಕೂಗೆದ್ದಿದೆ.

ಕುದರಿಯವರಿಗೆ ’ಸ್ಫೂರ್ತಿ’ಯಾಗಿರುವುದು ತೆಲಂಗಾಣದ ಕಾಲೇಶ್ವರಮ್ ಏತ ನೀರಾವರಿ ಯೋಜನೆ. ಈ ಯೋಜನೆ ಅನೇಕ ಅನಾಹುತ ಮಾಡದ್ದಿದೆ. ಅದು ಆಪೋಷನ ಪಡೆದಿರುವ ಕಾಡಿನ ವಿವರ, ಕೆನಾಲ್ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಭೂ ಅಗೆತ ಮಾಡಿರುವುದರಿಂದ ಆಗಿರುವ ಅನಾಹುತಗಳ ’ಕತೆ’ ಈಗಾಗಲೇ ಸಾಕಷ್ಟು ವರದಿಯಾಗಿದೆ. ಅಘನಾಶಿನಿಯ ಹಾವಿನ ಬೀಳು ಏತ ನೀರಾವರಿ ಯೋಜನೆಗೂ ಸಾವಿರಾರು ಕಿ.ಮೀಟರ್‌ಗಟ್ಟಲೆ ಉದ್ದದ ಕಾಲುವೆಗಳು ಬೇಕು. ಆಗೆಲ್ಲ ಅರಣ್ಯ ಕಡಿತ, ಭೂ ಅಗೆತ ಆಗುವುದರಿಂದ ಅಪಾರ ಹಾನಿ ಆಗುವುದು ನಿಸ್ಸಂಶಯ. ಇದೆಲ್ಲ ಗಮನಿಸಿದಾಗ ಇಂಜಿನಿಯರ್ ಕುದರಿ ಕೊಟ್ಟಿರುವ ವರದಿ ಸುಂದರವಾಗಿ ಕಂಡರೂ ಗಂಡಾಂತರಕಾರಿ ಎನ್ನಲಾಗುತ್ತಿದೆ.

ಜೀವ ಜೀವನದ ನದಿ

ಅಘನಾಶಿನಿ ಹುಟ್ಟಿನಿಂದ ಮುಖಜ ಪ್ರದೇಶದವರೆಗೂ ಅಡೆತಡೆಯಿಲ್ಲದೆ ಮುಕ್ತವಾಗಿ ಸ್ವತಂತ್ರವಾಗಿ ಹರಿಯುವ ದೇಶದ ಕೆಲವೇ ಕೆಲವು ನದಿಗಳಲ್ಲಿ ಒಂದು. ಕಲ್ಮಷ ಸೇರಿಸಿಕೊಳ್ಳದೆ ನಿಶ್ಚಲವಾಗಿ ಹರಿಯುವ ಜೀವ ನದಿ ಎಂಬ ಹೆಗ್ಗಳಿಕೆಯೂ ಅಘನಾಶಿನಿಯದು. ಅಘನಾಶಿನಿ ತಪ್ಪಲಿನಲ್ಲಿ ಪರಿಸರ ಸ್ನೇಹಿ ಬದುಕು ಕಟ್ಟಿಕೊಂಡ ಹತ್ತಾರು ಸಾವಿರ ಮುಗ್ಧ ಕೃಷಿಕ ಹಾಗೂ ವನವಾಸಿ ಬುಡಕಟ್ಟು ಕುಟುಂಬಗಳಿವೆ. ವೈವಿಧ್ಯ ವನ್ಯಜೀವಿ ಸಂಕುಲ, ವಿಶಿಷ್ಟ ಕೃಷಿತಳಿ, ಗಿಡಮೂಲಿಕೆ ಅಘನಾಶಿನಿ ಕೊಳ್ಳದಲ್ಲಿದೆ. ನದಿಯು ಎರಡೂ ದಂಡೆ ಗುಂಟ ಜೀವನ ಸಾಗಿಸುತ್ತಿರುವ ನೂರಾರು ಹಳ್ಳಿಗಳ ಲಕ್ಷಾಂತರ ಮಂದಿಗೆ ಅವರ ಕೆರೆ, ಬಾವಿ, ತೋಟ, ಕಾಡು ಮೇಡಿಗೆ ಅಪಾರ ಪಶು, ಪಕ್ಷಿ, ಪ್ರಾಣಿ, ಕೀಟ ಜೀವ ಜಂತುಗಳ ಜೀವ ಜಾಲಕ್ಕೆ ಅಘನಾಶಿನಿ ಜೀವ ಜೀವನದ ನದಿ

ನಿರಾತಂಕವಾಗಿ ಹರಿಯುವ ಅಘನಾಶಿನಿ ಅಪಾರ ಪೋಷಕಾಂಶವಿರುವ ಸಾವಯವ ಪದಾರ್ಥ, ಹೂಳು, ಮಣ್ಣು ಸಾಗಿಸುತ್ತ ಮುಖಜ ಭೂಮಿಯ ಅಸಂಖ್ಯ ಜಲಚರ ವಂಶಾಭಿವೃದ್ಧಿಗೆ ನೆರವಾಗುತ್ತಿದೆ; ಮೀನು, ಬೆಳಚು, ಚಿಪ್ಪಿಕಲ್ಲು, ಮರಳು, ಉಪ್ಪು ಉದ್ಯಮ ಉಳಿಸಿ ಬೆಳೆಸಿ ಸಹಸ್ರಾರು ಕುಟುಂಬ ಜೀವನೋಪಾಯದ ಮೂಲವಾಗಿದೆ. ಕೋಟ್ಯಂತರ ರೂಪಾಯಿ ಆದಾಯಕ್ಕೆ ಮೂಲವಾಗಿರುವ ಅಘನಾಶಿನಿ ನೀರು ಯಾವುದೇ ಬಳಕೆಯಿಲ್ಲದೆ ಸಮುದ್ರಕ್ಕೆ ಸೇರಿ ಪೋಲಾಗುತ್ತಿದೆ ಎಂಬ ’ಪಂಡಿತರ’ ಪ್ರವರವೇ ಹಾಸ್ಯಸ್ಪದ.

ಅಘನಾಶಿನಿಯ ನೀರು ವ್ಯರ್ಥವಾಗುವುದಿರಲಿ ಎಷ್ಟೋ ನದಿ ಪಾತ್ರದ ಜನ, ಜಾನುವಾರು, ಸಸ್ಯ, ಜಲಚರಗಳಿಗೆ ಕೆಲವೊಮ್ಮೆ ನೀರಿನ ಅಭಾವ ಆಗುತ್ತಿದೆ. ಪ್ರಸ್ತಾವಿತ ಏತ ನೀರಾವರಿ ಅಥವಾ ಇನ್ಯಾವುದೇ ಜಲ ವಿದ್ಯುತ್, ಕುಡಿಯುವ ನೀರಿನ ಯೋಜನೆ ಕೈಗೊಂಡರೆ ನದಿಯ ನೀರಿನ ಹರಿಯುವಿಕೆ ಪ್ರಮಾಣ ನಿಯಂತ್ರಣಗೊಂಡು ಸಮುದ್ರದ ಉಪ್ಪು ನೀರು ನದಿ ಪಾತ್ರವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ.

ನದಿಗಳ ನೀರು ನಿಸರ್ಗ ವ್ಯವಸ್ಥೆಯಲ್ಲಿ ಸೀಮಿತ ಪ್ರದೇಶದ ಹಕ್ಕಲ್ಲವೆಂಬ ವಾದ ಸರಿ. ಆದರೆ ಕಾರ್ಯಸಾಧುವಲ್ಲದ ಮತ್ತು ಸ್ಥಳೀಯರಿಗೇ ಅವಶ್ಯವಿರುವಾಗ ನೀರಿನ ಆಮದು ಯೋಜನೆ ಹಾಕಿಕೊಳ್ಳುವುದು ಸರಿಯಾದ ನಡೆಯಲ್ಲ. ಇದರಿಂದ ಎರಡೂ ಕಡೆಯವರಿಗೆ ಸಂಕಷ್ಟ ಎದುರಾಗಿ ಸರ್ಕಾರಿ ಹಣ, ರಾಜಕಾರಣಿ – ಸರ್ಕಾರಿ ಪರ್ಯವರ್ಣ ಪಂಡಿತರು – ಗುತ್ತಿಗೆದಾರರ ಒಕ್ಕೂಟದ ಪಾಲಾಗುತ್ತದೆಯಷ್ಟೇ! ಅಭಿವೃದ್ಧಿ ಭ್ರಮೆಯ ಇಂಥ ಲೂಟಿ ಯೋಜನೆಗಳಿಗೆ ಆಳುವವರು ಇನ್ನಾದರೂ ತಡೆಹಾಕಬೇಕು. ಇದರ ಫಲಾನುಭವಿಗಳು ಎಂದು ನಂಬಿಸಲಾಗುತ್ತಿರುವವರೂ ಕೂಡ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಡಬೇಕಿದೆ.

ಅಘನಾಶಿನಿ ಏತ ನೀರಾವರಿ ಯೋಜನೆ ಬಜೆಟ್ಟಿನ (ರೂ 40 ಸಾವಿರ ಕೋಟಿ- ಇದು ಆಮೇಲೆ ಹೆಚ್ಚುತ್ತಾ ಹೋಗುವುದು ಸರ್ಕಾರಿ ಯೋಜನೆಗಳ ವಾಡಿಕೆ) ಕಾಲು ಭಾಗ ವೆಚ್ಚ ಮಾಡಿದರೂ ಸಾಕು, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಕಡೆಯ ಜಲಾನಯನ ಅಭಿವೃದ್ಧಿ ಆಧಾರಿತ ನೀರಾವರಿ ಯೋಜನೆಗಳನ್ನು ಕೈಗೊಳ್ಳಬಹುದು. ಇವುಗಳತ್ತ ಗಮನ ಹರಿಸುವಂತಾಗಲಿ ಎನ್ನುತ್ತಾರೆ ಪರಿಸರ ಮತ್ತು ಭೂಜಲ ಶಾಸ್ತ್ರಜ್ಞರು.


ಇದನ್ನೂ ಓದಿ: ಮತ್ತೆ ಕಾಡುತ್ತಿದೆ ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ಗುಮ್ಮ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....