Homeಅಂಕಣಗಳುಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

ಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

- Advertisement -
- Advertisement -

ಮಾನ್ಯರೇ,

ತಾವು ನಮ್ಮ ವೋಟು ಪಡೆದು ಟಾಟಾ ಬೈ ಬೈ ಹೇಳಿ ನಮ್ಮ ಸುಂಕದ ಹಣದಿಂದ ಖರೀದಿ ಮಾಡಿದ ಪುಷ್ಪಕ ವಿಮಾನ ಹತ್ತಿ ಬೆಂಗಾವಲು ಊರಿಗೆ ಹೋದಮೇಲೆ ನಮ್ಮ ನಿಮ್ಮ ಭೇಟಿ ಇಲ್ಲ. ಒಂದು ಪತ್ರ ಇಲ್ಲ, ಈಮೇಲೂ ಇಲ್ಲ, ಎಸ್‌ಎಂಎಸ್‌ಗೆ ಉತ್ತರ ಇಲ್ಲ. ವಾಟ್ಸ್‌ಅಪ್ ಸಂದೇಶಕ್ಕೆ ಬ್ಲೂ ಟಿಕ್‌ನ ಪರತ್ ಪಾವತಿ ಸಹಿತ ಸಿಗಲಿಲ್ಲ. ವೋಟು ಕೇಳುವ ಮುನ್ನ ನೀವೇ ನಮ್ಮನ್ನು ಹುಡುಕಿಕೊಂಡು ಬಂದಿರಿ. ಆದರೆ ವೋಟು ಎಣಿಕೆ ನಂತರ ನೀವು ಅಂತರ್ದಾನವಾಗಿಬಿಟ್ಟಿರಿ. ನಮ್ಮ ಓಣಿಯಲ್ಲಿ ಪಿಕ್‌ಪಾಕೆಟ್ ಮಾಡಿ ಜೈಲಿಗೆ ಹೋಗಿದ್ದ, ನಿಮ್ಮ ಆಶೀರ್ವಾದದಿಂದ ಹೊರಗೆಬಂದಿದ್ದ ಕಳ್ಳ ಕಿಟ್ಯಾ ಈಗ ಕೆ. ಕೃಷ್ಣ ಕುಮಾರ್ ಆಗಿ ಬಿಟ್ಟಿದ್ದಾನೆ. ಅವನು ಈಗ ತಮ್ಮ ಪಿಎ ಆಗಿದ್ದೇನೆ ಎಂದೂ, ತಮ್ಮ ಸ್ವಯಂ ಘೋಷಿತ ಸಲಹೆಗಾರನಾಗಿಬಿಟ್ಟಿದ್ದಾನೆ ಎಂದೂ ಹೇಳಿಕೊಂಡಿದ್ದಾನೆ. ನನ್ನಂಥ ಬಡಪಾಯಿಗಳ ಪಾಲಿಗೆ ಅವನೇ ಮುಖ್ಯಮಂತ್ರಿಯಾಗಿ ಬಿಟ್ಟಿದ್ದಾನೆ.

ನಮಗೆ ಅವನ ಭೇಟಿಯೇ ದೇವ ದುರ್ಲಭವಾಗಿಬಿಟ್ಟಿದೆ. ಇನ್ನು ನಿಮ್ಮಂಥವರ ಮಾತು ಕೇವಲ ಆಕಾಶವಾಣಿಯಲ್ಲಿ ಕೇಳುತ್ತಿದೆ. ನೀವು ನಮ್ಮನ್ನು ಬಂದು ಭೇಟಿ ಆಗುವುದು ಇನ್ನು ಐದು ವರ್ಷದ ನಂತರ ಇದ್ದೇ ಇದೆ ಅಂತ ನಾವು ಸುಮ್ಮನೆ ಇದ್ದು ಬಿಡುತ್ತೇವೆ. ನೀವು ನಮ್ಮ ಊರನ್ನು ಉದ್ಧಾರ ಮಾಡ್ತೀರಿ ಅಂತ ಆಶ್ವಾಸನೆ ನೀಡಿದ್ದರೂ ಸಹಿತ ಮಾಡಿಲ್ಲ. ನಿಮ್ಮ ಊರಿನ ಮೇಲೆ ನಿಮಗೆ ಎಷ್ಟು ಪ್ರೀತಿ ಎಂದರೆ ನಿಮ್ಮ ಬಾಲ್ಯದಾಗ ನೀವು ಬಿಟ್ಟು ಹೋದಾಗ ಅದು ಹೆಂಗ ಇತ್ತೋ ಹಾಂಗೆ ಇರಬೇಕು ಅಂತ ನೀವು ಏನೂ ಬದಲಾವಣೆ ಮಾಡಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಇರಲಿ.

ಇದು ಎಲ್ಲಾ ಹೆಂಗ ಐತಿ ಅಂದರ, ಜಗಜಿತ್ ಸಿಂಗ್ ಅವರ ಗಜಲ್‌ನ ಸಾಲಿನ ಹಂಗ ಐತಿ.

“ಈ ವರ್ಷ ಬಹಳ ಮಳೆ ಆಗ್ತದ, ಬೆಳೆ ಬರ್ತದ, ಎಲ್ಲಾ ಛಲೋ ಆಗ್ತೆತಿ,

ಹಿಂಗ ಆಗ್ತದೋ, ಇಲ್ಲೋ, ಗೊತ್ತಿಲ್ಲ,

ಆದರ ಹಿಂಗ ಆಗ್ತದ ಅನ್ನುವ ಕನಸು ಮಾತ್ರ ಭಾರಿ ಛಲೋ ಐತಿ”.

ಇದೆಲ್ಲಾ ಐತಿ. ಇರಲಿ, ಆದರೂ ಉಭಯ ಕುಶಲೋಪರಿ ಸಾಂಪ್ರತ. ಇನ್ನು ನಮ್ಮ ಊರಿನವರ ಕಡೆಯಿಂದ ನಿಮಗೆ ಒಂದು ಮೂಕ ಅರ್ಜಿ.

ಮೆಹರ್‌ಬಾನ್ ಸಾಹೇಬರೇ,

ರಾಜ್ಯ ಸರಕಾರ ನೇಮಿಸಿದ ವಿಜಯ ಭಾಸ್ಕರ ಸಮಿತಿ ಆಡಳಿತ ಸುಧಾರಣೆ ಬಗ್ಗೆ ಕೆಲವು ಶಿಫಾರಸುಗಳನ್ನು ಮಾಡಿದೆ. ಮೊದಲ ಹಂತದಲ್ಲಿ ಕಂದಾಯ, ಆಹಾರ ಹಾಗೂ ರಸ್ತೆ ಸಾರಿಗೆ ಇಲಾಖೆಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಇವುಗಳಲ್ಲಿ ಕೆಲವು ಜನಪರ ಸಲಹೆಗಳಾಗಿದ್ದು ಅವುಗಳನ್ನು ನಾವು ಸ್ವಾಗತ ಮಾಡುತ್ತೇವೆ. ಇನ್ನು ಕೆಲವು ವಿಷಯಗಳನ್ನು ನಾವು ಸಕಾರಣವಾಗಿ ವಿರೋಧಿಸುತ್ತೇವೆ.

ಅವುಗಳು ಇಂತಿವೆ:

ಸರಕಾರದ 800ಕ್ಕೂ ಹೆಚ್ಚು ಸೇವೆಗಳನ್ನು ಸೇವಾಸಿಂಧು ಎನ್ನುವ ಒಂದೇ ಜಾಲತಾಣ ಹಾಗೂ ತಂತ್ರಾಂಶದ ಮೂಲಕ ನೀಡುವುದು ಸ್ವಾಗತಾರ್ಹ. ಈ ಸೇವೆಗಳನ್ನು ಜನರಿಗೆ ದೊರಕಿಸಲು ನಗರಗಳಲ್ಲಿ ಕರ್ನಾಟಕ-ಒನ್ ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರ ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳನ್ನು ಏಕ ಗವಾಕ್ಷಿಗಳಾಗಿ ಬಳಸುವ ಯೋಜನೆ ಸಹಿತ ಸ್ವಾಗತಾರ್ಹ. ಇದರಿಂದ ಜನ ಅನೇಕ ಕಚೇರಿಗಳಿಗೆ ಅನಗತ್ಯವಾಗಿ ಎಡತಾಕುವುದು ತಪ್ಪುತ್ತದೆ.

PC : mandya.nic.in

ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸಹಿತ ಬಹಳ ಅನುಕೂಲಕರವಾದದು. ಆದರೆ ಇದಕ್ಕಾಗಿ ಜನರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಒಳ್ಳೆಯದಲ್ಲ. ಇದರಿಂದ ಬಡವರ ಹೊಟ್ಟೆಯ ಮೇಲೆ ಹೊಡೆದಂತೆ ಆಗುತ್ತದೆ. ಇದರ ಇನ್ನೊಂದು ಅಪಾಯಕಾರಿ ಸಾಧ್ಯತೆ ಏನು ಎಂದರೆ, ಈ ರೀತಿಯ ನಿಯಮ ಜಾರಿಗೆ ಬಂದರೆ, ಹಳ್ಳಿಗಳಲ್ಲಿ ಮನೆಗೆ ಆಹಾರ ಧಾನ್ಯ ತಂದು ಕೊಡುವ ಏಜೆಂಟ್‌ಗಳು ಹುಟ್ಟಿಕೊಳ್ಳಬಹುದು. ಆಹಾರ ಧಾನ್ಯಗಳನ್ನು ಮನೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಆರಂಭವಾದರೆ ಸರಕಾರಕ್ಕೆ ವಿವಿಧ ಮಟ್ಟದ ಮಧ್ಯವರ್ತಿಗಳ ಲಾಭ ಹಾಗೂ ಅವರ ಕಮಿಷನ್ ಹಣದ ಹಣ ಉಳಿತಾಯವಾಗುತ್ತದೆ. ಇದೆ ಹಣವನ್ನು ಮನೆ ಬಾಗಿಲಿಗೆ ತಲುಪಿಸುವ ಖರ್ಚಿಗೆ ಬಳಸಬಹುದು.

ಜನಸಂಖ್ಯೆ, ರಹವಾಸ, ಬೆಲೆ ಹಾಗೂ ರೈತಾಪಿ ಕುಟುಂಬದ ಪ್ರಮಾಣಪತ್ರಗಳು ಅನವಶ್ಯಕ ಎಂದು ಹೇಳಿ ಅವುಗಳನ್ನು ರದ್ದುಮಾಡಬೇಕು ಎನ್ನುವ ಶಿಫಾರಸು ಮಾಡಲಾಗಿದೆ. ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಇದನ್ನು ಕೇವಲ ಆಡಳಿತಾತ್ಮಕ ಅನುಕೂಲಕತೆ ದೃಷ್ಟಿಯಿಂದ ನೋಡದೆ, ನಾಳೆ ಜನರಿಗೆ ಈ ಪ್ರಮಾಣ ಪತ್ರಗಳನ್ನು ನ್ಯಾಯಾಲಯಗಳ ಮುಂದೆ ಹಾಜರು ಪಡಿಸಲಿಕ್ಕೆ ಬರಬೇಕಾಗುವುದೋ ಬೇಡವೋ ಅನ್ನುವುದನ್ನು ನೋಡಿ ನಿರ್ಧಾರ ಮಾಡಬೇಕು. ಹಾಗೆ ರದ್ದುಮಾಡುವುದೇ ಆದಲ್ಲಿ, ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡ ಬಳಿಕವಷ್ಟೇ ರದ್ದುಮಾಡಬೇಕು.

ರಸ್ತೆ ಸಾರಿಗೆ ಅಧಿಕಾರಿಗಳು ಜಫ್ತಿ ಮಾಡಿದ ವಾಹನಗಳನ್ನು ಮಾರಾಟ ಮಾಡಲು ನ್ಯಾಯಾಲಯದ ಅನುಮತಿಗೆ ಕಾಯುವುದು ಬೇಡ ಎನ್ನುವ ಶಿಫಾರಸು ಇದರಲ್ಲಿ ಇದೆ.

ಇದನ್ನು ಜಾರಿಮಾಡುವ ಮುನ್ನ, ರಸ್ತೆ ಸಾರಿಗೆ ಇಲಾಖೆಯ ವಿವಿಧ ವಿಷಯಗಳಿಗೆ ಅನ್ವಯವಾಗುವಂತೆ, ವಿದ್ಯುತ್ ಪ್ರಾಧಿಕಾರ, ವಿಮೆ ಪ್ರಾಧಿಕಾರ, ಆಹಾರ ಪದಾರ್ಥ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ
ಮಾದರಿಯಲ್ಲಿ ಸಾರಿಗೆ ಪ್ರಾಧಿಕಾರ ಸ್ಥಾಪಿಸಬೇಕು.

ಈ ಸಮಿತಿಯ ಅತಿ ಮುಖ್ಯ ಶಿಫಾರಸು ಎಂದರೆ ಪ್ರಾದೇಶಿಕ ಆಯುಕ್ತರ ಕಚೆರಿಗಳನ್ನು ರದ್ದು ಮಾಡುವುದು. ಇದನ್ನು ನಾವು ವಿರೋಧಿಸುತ್ತೇವೆ. ಇದು ಅತ್ಯಂತ ಅಪಾಯಕಾರಿ. ಇದು ಭಾರತದ ಸಂವಿಧಾನದ ಮೂಲ ತತ್ವವಾದ ವಿಕೇಂದ್ರೀಕರಣ ವಿರೋಧಿ ಬೆಳವಣಿಗೆ. ಇದು ರಾಜ್ಯದ ಜನರಿಗಾಗಲಿ, ಅಭಿವೃದ್ಧಿ-ಸುಶಾಸನಕ್ಕಾಗಲಿ ಅನುಕೂಲಕರವಾದದ್ದಲ್ಲ. ಕೆಲವು ಜನ ಹಿರಿಯ ಐಎಎಸ್ ಅಧಿಕಾರಿಗಳು ಬೆಂಗಳೂರು ಬಿಟ್ಟುಹೋಗಲು ಮನಸು ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದು ಮಾಡುವುದು ಸಾಧುವಲ್ಲ.

ರಾಜ್ಯದ 350 ಐಎಎಸ್ ಅಧಿಕಾರಿಗಳಲ್ಲಿ 60 ಜನ ಮಾತ್ರ ಬೆಂಗಾವಲು ಊರು ಬಿಟ್ಟು ಹೊರಗೆ ಇದ್ದಾರೆ. ಅವರಲ್ಲಿ ಮೂರು ಜನ ಪ್ರಾದೇಶಿಕ ಆಯುಕ್ತರು ಮಾತ್ರ ವಿಭಾಗ ಮಟ್ಟದಲ್ಲಿ ಇದ್ದಾರೆ. ಆ ಮೂರು ಹುದ್ದೆಗಳ ಸಲುವಾಗಿ ನೀವು ಆರು ಕೋಟಿ ಕನ್ನಡಿಗರ ಎದುರು ಕಣ್ಕಟ್ಟು ಆಡಬಾರದು ಎಂದು ನಮ್ಮ ಅಂಬೋಣ.

ನಿಜವಾಗಿ ಬೇಕಾಗಿರುವುದು ಏನು ಎಂದರೆ,

ಅ) ರಾಜ್ಯದಲ್ಲಿ ಈಗ ಇರುವ ನಾಲ್ಕು ಕಂದಾಯ ವಿಭಾಗಗಳನ್ನು ಎಂಟು ವಿಭಾಗಗಳನ್ನಾಗಿ ಮಾಡಬೇಕು. ಪ್ರತಿ ವಿಭಾಗಕ್ಕೆ ಈಗ 7-8 ಜಿಲ್ಲೆಗಳು ಬರುತ್ತವೆ. ಪ್ರತಿ ವಿಭಾಗಕ್ಕೆ 3-4 ಜಿಲ್ಲೆಗಳು ಬರುವಂತೆ ಮಾಡಿ ಮರುಹಂಚಿಕೆ ಮಾಡಬೇಕು.

ಆ) ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಹಿಂದಿನಂತೆ ವಿಭಾಗೀಯ ಅಧಿಕಾರಿಗಳ ಕಚೇರಿಗಳಾಗಿ ಉನ್ನತೀಕರಣ ಮಾಡಬೇಕು. ಅವರಿಗೆ ಜಿಲ್ಲಾಧಿಕಾರಿಗಳ ಮೇಲೆ ಮೇಲು ಉಸ್ತುವಾರಿ ಹಾಗೂ ಜಿಲ್ಲೆ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಹಾಗೂ ಜವಾಬುದಾರಿ ನೀಡಬೇಕು.

ಇ) ಪ್ರಾದೇಶಿಕ ಆಯುಕ್ತರಿಗೆ ಅಭಿವೃದ್ಧಿಯ ಜವಾಬುದಾರಿಯನ್ನು ಸಹಿತ ಕೊಡಬೇಕು. ಅವರಿಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ನಗರಪಾಲಿಕೆ-ನಗರಸಭೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಮೇಲೆ ವಿಚಕ್ಷಣೆ ಹಾಗೂ ಮೇಲು ಉಸ್ತುವಾರಿ ನಡೆಸುವ ಅಧಿಕಾರ ನೀಡಬೇಕು.

ಈ) ವಿಭಾಗಾಧಿಕಾರಿ ಮಟ್ಟದಲ್ಲಿ ಕಂದಾಯ ನ್ಯಾಯಾಲಯ ಸ್ಥಾಪಿಸಬೇಕು. ಇದರಿಂದ ಜನ ತಮ್ಮ ಕಂದಾಯ ಪ್ರಕರಣಗಳ ಸಲುವಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ.

ಉ) ವಿಭಾಗಾಧಿಕಾರಿಗಳಿಗೆ ಸಾರ್ವಜನಿಕ ಕುಂದುಕೊರತೆಗಳನ್ನು ಸ್ವೀಕರಿಸುವ ಹಾಗೂ ಅವುಗಳನ್ನು ಪರಿಹರಿಸುವ ಅಧಿಕಾರ ಹಾಗೂ ಜವಾಬುದಾರಿ ಕೊಡಬೇಕು. ಜನಸಾಮಾನ್ಯರು ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳ ವಿರುದ್ಧ ದೂರು ಕೊಟ್ಟರೆ ಅವುಗಳ ವಿಚಾರಣೆ ವಿಭಾಗ ಮಟ್ಟದಲ್ಲಿ ನಡೆಯಬೇಕು.

ಊ) ವಿಭಾಗಾಧಿಕಾರಿಗಳನ್ನು ಸಕಾಲ ಯೋಜನೆಯ ನಿಯಂತ್ರಣ ಪ್ರಾಧಿಕಾರಿಯನ್ನಾಗಿ ಮಾಡಬೇಕು. ಸಕಾಲ ಯೋಜನೆಯಲ್ಲಿನ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಹೋದರೆ, ಆ ಕಾಲಹರಣದ ಬಗ್ಗೆ ತನಿಖೆ ನಡೆಸುವ ಅಧಿಕಾರ ಕೊಡಬೇಕು.

ಎ) ಈ ಎಲ್ಲಾ ಜವಾಬುದಾರಿಗಳನ್ನು ಸರಿಯಾಗಿ ನಿರ್ವಹಿಸಲು ವಿಭಾಗಾಧಿಕಾರಿಗಳಿಗೆ ಸೂಕ್ತ ಸಿಬ್ಬಂದಿಗಳನ್ನು ನೀಡಬೇಕು. ಅವರ ಕಚೇರಿಗೆ ಪ್ರಮುಖ ಇಲಾಖೆಗಳ ಜಂಟಿ ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಜಿಲ್ಲೆ ಹಾಗೂ ಪ್ರದೇಶ ಮಟ್ಟದ ಯಾವುದೇ ಕೆಲಸಗಳು ಆಯಾ ಜಿಲ್ಲೆ ಹಾಗೂ ಪ್ರದೇಶ ಮಟ್ಟದಲ್ಲಿ ಆಗಬೇಕು. ಇಂತಹ ಎಲ್ಲಾ ಕೆಲಸಗಳಿಗೆ ಜನರು ಬೆಂಗಳೂರಿಗೆ ಅಲೆದಾಡುವ ಅನಿವಾರ್ಯತೆಯನ್ನು ತಪ್ಪಿಸಬೇಕು.

ನಮ್ಮ ಸಲಹೆಗಳನ್ನು ಪರಿಗಣಿಸಬೇಕು, ನೀವು ಮುಂದಿನ ಬಾರಿ ಬರುವಾಗ ಇದನ್ನು ಮರೆಯಬಾರದು ಎಂದು ನಮ್ಮ ಎಲ್ಲಾ ಬಡಪಾಯಿಗಳ ಕೋರಿಕೆ.


ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...