Homeಮುಖಪುಟಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ರಾಜ್ಯ ಸರ್ಕಾರಗಳು ಮತ್ತು ಅವುಗಳನ್ನು ಆರಿಸಿದ ಪ್ರಜಾಪ್ರಭುಗಳು ಪಂಕದಲ್ಲಿ ಬಿದ್ದ ಪಶುವಿನಂತೆ ಒದ್ದಾಡುತ್ತಿರುವುದು ಈಗಾಗಲೇ ಗೋಚರಿಸುತ್ತಿದೆ. ಭವಿಷ್ಯದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ

- Advertisement -
- Advertisement -

ಒಕ್ಕೂಟ ಸರ್ಕಾರ ‘ಸಹಕಾರ ಖಾತೆ’ ಹೆಸರಿನಲ್ಲಿ ಹೊಸ ಇಲಾಖೆಯನ್ನು ಆರಂಭಿಸಿದೆ. ಸಂವಿಧಾನದ ಪ್ರಕಾರ ಸಹಕಾರಿ ಕ್ಷೇತ್ರ ರಾಜ್ಯ ಪಟ್ಟಿಯಲ್ಲಿದೆ. ಇದರ ಪ್ರಕಾರ, ಒಕ್ಕೂಟ ಸರ್ಕಾರಕ್ಕೆ ರಾಜ್ಯದ ಹಕ್ಕಿನ ಮೇಲೆ ಸವಾರಿ ಮಾಡುವ ಅಧಿಕಾರವಿಲ್ಲ. ಸಂವಿಧಾನದ 7ನೇ ಪರಿಚ್ಛೇದದಲ್ಲಿ ಸಹಕಾರಿ ಕ್ಷೇತ್ರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ರಾಜ್ಯದ ಹಕ್ಕಿನಲ್ಲಿ ಮಧ್ಯಪ್ರವೇಶಿಸುವುದು ಅಸಾಂವಿಧಾನಿಕ ನಡೆ ಎಂದು ಗೊತ್ತಿದ್ದೂ ಒಕ್ಕೂಟ ಸರ್ಕಾರ ಸಹಕಾರ ಇಲಾಖೆಯನ್ನು ಆರಂಭಿಸಿದೆ. ಇದರ ಹಿಂದೆ ರಾಜ್ಯಗಳ ಒಡೆತನದಲ್ಲಿರುವ ಸಹಕಾರಿ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯುವ ದೀರ್ಘಕಾಲೀನ ಹುನ್ನಾರವಿದೆ.

ವಿವಾದಾತ್ಮಕ ಕೃಷಿ ಮಸೂದೆಗಳಿಂದ ರಾಜ್ಯದ ಹಕ್ಕು ಮೊಟಕು

ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ರೂಪಿಸಿ ರಾಜ್ಯದ ಪಾಲಿನಲ್ಲಿದ್ದ ಕೃಷಿ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಪಡೆಯಲು ಒಕ್ಕೂಟ ಸರ್ಕಾರ ಮುಂದಾಗಿತ್ತು. ಇದನ್ನು ವಿರೋಧಿಸಿ ದೇಶದ ಅನ್ನದಾತರು 7 ತಿಂಗಳಿಂದ ದೆಹಲಿ ಗಡಿಗಳಲ್ಲಿ ಮಳೆ, ಬಿಸಿಲು, ಚಳಿಗಳನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ, ಸಂಪುಟ ವಿಸ್ತರಣೆಯಲ್ಲಿ ಬಿಜಿಯಾಗುವ ಒಕ್ಕೂಟ ಸರ್ಕಾರ ಮತ್ತು ಪ್ರಧಾನಿ, ಸಚಿವರಿಗೆ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಅನ್ನದಾತರ ಅಳಲನ್ನು ಕೇಳುವ ವ್ಯವಧಾನವಿಲ್ಲ. ಸುಮಾರು 250ಕ್ಕೂ ಹೆಚ್ಚು ರೈತರು ಇಲ್ಲೇ ಬಲಿಯಾದರೂ ಅವರೆಡೆಗೆ ಎಳ್ಳಷ್ಟು ಕನಿಕರವೂ ದೇಶವನ್ನು ಆಳುತ್ತಿರುವ 56 ಎದೆಯಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿಗೆ ಇಲ್ಲ.

ಹೊಸ ಶಿಕ್ಷಣ ನೀತಿಯಿಂದ ರಾಜ್ಯಗಳ ಹಿಡಿತ ಕಳೆದುಕೊಳ್ಳದೆ ಶಿಕ್ಷಣ

ಇನ್ನು ರಾಜ್ಯಪಟ್ಟಿಯಲ್ಲೇ ಇರುವ ಶಿಕ್ಷಣವನ್ನು ಕೂಡ ಈಗಾಗಲೇ ಒಕ್ಕೂಟ ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ಭಾಗವಾಗಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಜಾರಿಗೆ ತರಲಾಗಿದೆ. ಇದರ ಹಿಂದಿರುವ ಹುನ್ನಾರವೆಂದರೆ ಭವಿಷ್ಯದಲ್ಲಿ ತಳಸಮುದಾಯದವರು, ದೀನದಲಿತರು, ಹಿಂದುಳಿದವರು, ಬಡವರು, ಅಸಂಘಟಿತ ವಲಯದವರು, ಮಹಿಳೆಯರು ಶಿಕ್ಷಣದಿಂದ ವಂಚಿತರನ್ನಾಗಿಸುವುದು.

ಇದನ್ನೂ ಓದಿ: ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾದ ಸಹಕಾರಿ ಬ್ಯಾಂಕುಗಳನ್ನು ರಕ್ಷಿಸಿ: ಶರದ್ ಪವಾರ್

ರಾಜ್ಯಪಟ್ಟಿಯಲ್ಲಿರುವ ಶಿಕ್ಷಣ ವ್ಯವಸ್ಥೆಯಿಂದಾಗಿ ಸೈಕಲ್, ಬಿಸಿಯೂಟ, ಬಟ್ಟೆ, ಕ್ಷೀರಭಾಗ್ಯ, ಉಚಿತಪಠ್ಯಪುಸ್ತಕ ವಿತರಣೆ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನೂ ಒಳಗೊಂಡು ಶೇ. 97ರಷ್ಟು ಪ್ರಮಾಣದಲ್ಲಿರುವ ಹಿಂದುಳಿದ ವರ್ಗ ಮತ್ತು ಇತರ ಜಾತಿಯವರಿಗೆ ಶಿಕ್ಷಣ ಸಿಗುತ್ತಿದೆ. ಇದರಿಂದಾಗಿ ಶಿಕ್ಷಣ, ದುಡಿಮೆ, ವೈಜ್ಞಾನಿಕ ಮನೋಭಾವ, ಆರೋಗ್ಯ, ವಸತಿ ಇತ್ಯಾದಿಗಳು ಈ ವರ್ಗಗಳಲ್ಲಿ ಸುಧಾರಿಸುತ್ತಿವೆ. ಆದರೆ, ಇದನ್ನು ಹತ್ತಿಕ್ಕಲು ಹೊಸ ಶಿಕ್ಷಣ ನೀತಿಯನ್ನು ಒಕ್ಕೂಟ ಸರ್ಕಾರ ಕುತಂತ್ರದಿಂದ ಜಾರಿಗೆ ತಂದಿದೆ.

ಇದರಲ್ಲಿರುವ ನಿಯಮಗಳು ಇನ್ನು 10-15 ವರ್ಷಗಳಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಉಳ್ಳವರಿಗೆ ಮಾತ್ರ ಮತ್ತು ಮೇಲ್ವರ್ಗದವರಿಗೆ ಸೀಮಿತಗೊಳಿಸುವ ದುಷ್ಟ ಚಿಂತನೆಯನ್ನು ಜಾರಿಗೆ ತರಲಿವೆ. ಇದರಿಂದ ಕೇವಲ ದೇಶದ ಶೈಕ್ಷಣಿಕ ವ್ಯವಸ್ಥೆ ಮಾತ್ರ ಹಾಳಾಗುವುದಿಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಅಧೋಗತಿಗೆ ಇಳಿಯುತ್ತದೆ. ವೈಜ್ಞಾನಿಕ ಮನೋಭಾವ ನಷ್ಟವಾಗುತ್ತದೆ. ಇದು ಸಂವಿಧಾನದ ಪ್ರಕಾರ ಕೂಡ ದ್ರೋಹವೆಂದೇ ಹೇಳಬೇಕು. ಸಂವಿಧಾನದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಒತ್ತು ನೀಡಲಾಗಿದೆ. ಆದರೆ, ಶಿಕ್ಷಣವನ್ನೇ ಕೊಡದೆ ಹೋದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಧಕ್ಕೆಯಾಗುವುದು ನಿಶ್ಚಿತ.

ಜೂದಾಸ್ ಏಸು ಕ್ರಿಸ್ತನಿಗೆ ಮಾಡಿದಂತೆ ಕೇರಳ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ: ಮೋದಿ| NaanuGauri

ವಿದ್ಯೆ ಕಲಿತವರಿಗೆ ಸೇವಾವಲಯ, ಸರ್ಕಾರಿ ಹುದ್ದೆಗಳು, ವಿದೇಶದಲ್ಲಿ ವಿವಿಧ ಹುದ್ದೆಗಳು ಸಿಗುತ್ತಿವೆ. ನಿರ್ದಿಷ್ಟ ವಿದ್ಯಾರ್ಹತೆಯ ಅಭ್ಯರ್ಥಿಗಳು ನೂತನ ಶಿಕ್ಷಣ ನೀತಿಯ ದುಷ್ಪರಿಣಾಮದಿಂದ ದೇಶದಲ್ಲೇ ಸಿಗದೆ ಇರುವ ಸಾಧ್ಯತೆಗಳು ಇವೆ. ಜೊತೆಗೆ, ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಿಸುವ ಹುನ್ನಾರದ ಭಾಗವಾಗಿ ಶಿಕ್ಷಣ ನೀತಿಯಲ್ಲಿ ಅನೇಕ ವಿಷಯಗಳನ್ನು ಸೇರಿಸಲಾಗಿದೆ. ಸ್ಥಳೀಯ ಭಾಷೆ ಮತ್ತು ವಿಷಯ ಹಾಗೂ ಕೌಶಲಗಳನ್ನು ಕಡೆಗಣಿಸಲಾಗಿದೆ. ಇವೆಲ್ಲವುಗಳಿಂದಾಗಿ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತದೆ.

ಜಿ.ಎಸ್.ಟಿ. ಜಾರಿಯೆಂಬ ಮಧ್ಯರಾತ್ರಿ ನಾಟಕದಿಂದ ರಾಜ್ಯಗಳಿಗೆ ನಷ್ಟ

ಮಧ್ಯರಾತ್ರಿ ವಿಶೇಷ ಅಧಿವೇಶನ ನಡೆಸಿ ಅವೈಜ್ಞಾನಿಕ ಜಿ.ಎಸ್.ಟಿ.ಯನ್ನು ಒಕ್ಕೂಟ ಸರ್ಕಾರ ಜಾರಿಗೆ ತಂದಿತ್ತು. ದುರಂತವೆಂದರೆ, ಸರಳ, ಕನಿಷ್ಠ ಎಂದು ಹೇಳಿದ ತನ್ನ ಮಾತನ್ನು ಸರ್ಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಜಗತ್ತಿನಲ್ಲೇ ಅತಿಹೆಚ್ಚು ತೆರಿಗೆ ವಸೂಲಿ ಮಾಡಿದ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಶೇ. 28ರಷ್ಟು ತೆರಿಗೆಯನ್ನು ಜನರಿಂದ ಸುಲಿದು, ರಾಜ್ಯಗಳಿಗೆ ಇದ್ದ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಕಬಳಿಸಿತು. ಮತ್ತೆ ರಾಜ್ಯಗಳ ಪಾಲು ಕೊಡುತ್ತೇನೆ ಎಂದು, 5 ವರ್ಷಗಳ ಕಾಲ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸುವುದಾಗಿ ಕೊಟ್ಟ ಮಾತನ್ನು ಸರ್ಕಾರ ಮರೆತುಬಿಟ್ಟಿತು. ಕೊರೊನ ನಂತರ ಕರ್ನಾಟಕದ ಜಿ.ಎಸ್.ಟಿ. ಪಾಲನ್ನು ಕೇಳಿದರೆ, ಸಾಲ ಮಾಡಿ ಎಂದು ಹೇಳಿತು. ಈ ಮಾತನ್ನು ಶಿರಸಾವಹಿಸಿ ಪಾಲಿಸಿದ ರಾಜ್ಯ ಸರ್ಕಾರ ಬರೋಬ್ಬರಿ 35,000 ಕೋಟಿ ಸಾಲ ಮಾಡಿತು. ಹೀಗೆ ರಾಜ್ಯಗಳ ಸ್ವಾಯತ್ತತೆಯ ಮೇಲೆ ಒಕ್ಕೂಟ ಸರ್ಕಾರ ನಿರಂತರವಾಗಿ ದಾಳಿ ಮಾಡಿ ಅಶಕ್ತರನ್ನಾಗಿಸುತ್ತಲೇ ಇದೆ.

ಸಹಕಾರ ಖಾತೆಯಿಂದ ರಾಜ್ಯಗಳ ಸ್ಥಿತಿ ದಿವಾಳಿ

ಇನ್ನು ಸಹಕಾರ ಕ್ಷೇತ್ರಕ್ಕೆ ಒಕ್ಕೂಟ ಸರ್ಕಾರ ಬಾಯಿ ಹಾಕುತ್ತಿರುವುದೇಕೆ? ನೋಡೋಣ. ರಾಜ್ಯದ ಪಾಲಿನಲ್ಲಿದ್ದ ಕೃಷಿ, ಶಿಕ್ಷಣವನ್ನು ತನ್ನ ಕಪಿಮುಷ್ಠಿಯ ಬಿಗಿಹಿಡಿತಕ್ಕೆ ತೆಗೆದುಕೊಂಡಿರುವ ಒಕ್ಕೂಟ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿರುವುದೇನು ಒಮ್ಮೆ ಆಲೋಚಿಸಿ. ಸಾಲ ಮತ್ತು ಬಡ್ಡಿ ಸೇರಿ 9000 ಕೋಟಿ ರೂಪಾಯಿಗಳನ್ನು ಕೊಡಬೇಕಿರುವ ವಿಜಯ್ ಮಲ್ಯ, 13,500 ಕೋಟಿ ರೂ. ಪಾವತಿಸಬೇಕಿರುವ ಮೇಹುಲ್ ಚೋಕ್ಸಿ ಮೊದಲಾದವರು ದೇಶಭಕ್ತರು ಎಂದು ಬಿಂಬಿಸುವ ಬಿಜೆಪಿಗರು ಅಧಿಕಾರ ನಡೆಸುತ್ತಿರುವ ಸಮಯದಲ್ಲಿ ದೇಶಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಒಕ್ಕೂಟ ಸರ್ಕಾರದ ಹೊಸ ‘ಸಹಕಾರ ಸಚಿವಾಲಯ’ ಅಮಿತ್‌ ಶಾ ತೆಕ್ಕೆಗೆ!

ಇನ್ನು ದೇಶದ ಪ್ರಧಾನಿಗೆ ಪ್ರಿಯವಾದ ಅನಿಲ್ ಅಂಬಾನಿಯವರು ಡಿಸೆಂಬರ್ 31, 2019ರವರೆಗೆ ದೇಶದ ಬ್ಯಾಂಕುಗಳಿಗೆ ಒಟ್ಟು ಪಾವತಿಸಬೇಕಾದ ಮೊತ್ತ 43,800 ಕೋಟಿ ರೂಪಾಯಿಗಳು ಮಾತ್ರ! ಇವರನ್ನು ಬ್ಯಾಂಕುಗಳು ಈಗಾಗಲೇ ಡಿಫಾಲ್ಟರ್ ಪಟ್ಟಿಗೆ ಸೇರಿಸಿಯಾಗಿದೆ. ಎಚ್.ಡಿ.ಎಫ್.ಸಿ ಸೇರಿದಂತೆ ಇನ್ನಿತರ ಬ್ಯಾಂಕುಗಳಿಗೆ ಬರೋಬ್ಬರಿ 23,000 ಕೋಟಿ ರೂ.ಗಳನ್ನು ಅನಿಲ್ ಅಂಬಾನಿ ಪಾವತಿಸಬೇಕಿದೆ. ಎಸ್.ಬಿ.ಐ ನಲ್ಲಿ ರಾಜ್ಯ ಬ್ಯಾಂಕುಗಳ ವಿಲೀನ, ಸಿಂಡಿಕೇಟ್, ವಿಜಯ ಬ್ಯಾಂಕ್ ಗಳ ವಿಲೀನ ಇತ್ಯಾದಿ ಪ್ರಕ್ರಿಯೆಗಳ ಹಿಂದೆ ಕೇಂದ್ರ ಸರ್ಕಾರ 2.41 ಲಕ್ಷ ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ವಸೂಲಾಗದ ಸಾಲದ ಮೊತ್ತಕ್ಕೆ ಸೇರಿಸಿದ್ದೇ ಕಾರಣ.

ಬ್ಯಾಂಕುಗಳ ನಷ್ಟದ ಮೊತ್ತವನ್ನು ಕೇಳಿ ಗಣಿತ ಬರುವ ದೇಶದ ನಾಗರಿಕರು ಎದೆ ಹೊಡೆದು ಸತ್ತಾರು ಎಂದು ದೇಶವನ್ನು ಆಳುತ್ತಿರುವ ಮೋದಿ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸುತ್ತಿದೆ. ಇಷ್ಟೆಲ್ಲ ಅವಘಡಗಳ ನಡುವೆ ಒಕ್ಕೂಟ ಸರ್ಕಾರ ಆರ್.ಬಿ.ಐ ಅನ್ನೂ ಬಿಡದೆ ಲಕ್ಷ ಕೋಟಿಗಟ್ಟಲೇ ಹಣವನ್ನು ಪಡೆದಿದೆ. ಕಳ್ಳ ಹೊಕ್ಕ ಮನೆಯಲ್ಲಿ ಏನಾದರೂ ಉಳಿದಿರಬಹುದು, ಕೊಳ್ಳಿ ಹೊಕ್ಕ ಮನೆಯಲ್ಲಿ ಉಳಿಯಲು ಸಾಧ್ಯವೇ? ಎಂಬ ಮಾತಿನಂತೆ ಒಕ್ಕೂಟ ಸರ್ಕಾರ ಆರ್.ಬಿ.ಐ ಅನ್ನೂ ಬಿಟ್ಟಿಲ್ಲ. ಇನ್ನು ಸಹಕಾರಿ ಬ್ಯಾಂಕುಗಳು ಯಾವ ಲೆಕ್ಕ? ಆಲೋಚಿಸಿ.

ಹಣ ವಂಚನೆ ಆರೋಪಿ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ - ಇಂಗ್ಲೇಂಡ್ ಕೋರ್ಟ್‌ ತೀರ್ಪು
ನೀರವ್‌ ಮೋದಿ

ಒಕ್ಕೂಟ ಸರ್ಕಾರ ರಾತ್ರೋರಾತ್ರಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ, ಜಿ.ಎಸ್.ಟಿಯನ್ನು ಅವೈಜ್ಞಾನಿಕವಾಗಿ ಜಾರಿಗೆ ತಂದ ಪರಿಣಾಮದಿಂದಾಗಿ ಬ್ಯಾಂಕುಗಳು, ದೇಶದ ಆರ್ಥಿಕತೆ, ಭಾರತೀಯ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಇವುಗಳನ್ನು ನಂಬಿಕೊಂಡಿದ್ದ 20 ಕೋಟಿ ನೌಕರರು ಬೀದಿಗೆ ಬಿದ್ದಿದ್ದಾರೆ. ಇದೀಗ ಒಕ್ಕೂಟ ಸರ್ಕಾರದ ಕಣ್ಣು ರಾಜ್ಯದ ಒಡೆತನದಲ್ಲಿರುವ ಸಹಕಾರಿ ಬ್ಯಾಂಕುಗಳ ಮೇಲೆ ಬಿದ್ದಿದೆ.

ಒಕ್ಕೂಟ ಸರ್ಕಾರ ಸಹಕಾರಿ ಖಾತೆಯನ್ನು ತೆರೆಯುವ ಹಿಂದೆ ರಾಜ್ಯ ಸರ್ಕಾರಗಳ ಕೈಯಲ್ಲಿರುವ ಅಧಿಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಏಕೆಂದರೆ, ಈಗ ಚೂರುಪಾರು ಜೀವ ಹಿಡಿದುಕೊಂಡು ತೆವಳುತ್ತಿರುವ ಸಹಕಾರಿ ಬ್ಯಾಂಕುಗಳು ದೇಶ ಆಳುತ್ತಿರುವ ಮೋದಿಯ ಕಣ್ಣಿಗೆ ಬಿದ್ದಿವೆ. ಏಕೆಂದರೆ, ಸಹಕಾರಿ ಬ್ಯಾಂಕುಗಳ ವಹಿವಾಟಿನಿಂದ ಮತ್ತದೆ ಮಹಿಳೆಯರು, ಶೂದ್ರರು, ದಲಿತರು, ಅಲ್ಪಸಂಖ್ಯಾತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೀಗೆ ಜನ ನೆಮ್ಮದಿಯಿಂದ ಇದ್ದರೆ ಒಕ್ಕೂಟ ಸರ್ಕಾರಕ್ಕೆ ಅಸ್ತಿತ್ವವೆಲ್ಲಿಯದು? ಏಕೆಂದರೆ, ದೇಶ “ಜನ ಪಕೋಡ ಮಾರಿ ಇನ್ನೂರು ರೂ. ಗಳಿಸುತ್ತಿದ್ದಾರೆ. ಆಮೂಲಕ ಉದ್ಯೋಗ ಸೃಷ್ಟಿಯಾಗಿದೆ” ಎಂದವರ ಕೈಯಲ್ಲಿದೆಯಲ್ಲವೇ? ಅವರ ಪ್ರಕಾರ, ದೇಶದ ಶೇ. 97ರಷ್ಟು ಜನ ನೆಮ್ಮದಿಯಾಗಿರಬಾರದು.

ಇದನ್ನೂ ಓದಿ: ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಬಗೆಗಿನ ಗಮನ ಸೆಳೆದ ವ್ಯಂಗ್ಯಚಿತ್ರಗಳು

ಕೊರೊನಾ ಅವಧಿಯಲ್ಲಿ ಸರ್ಕಾರ ಕೊಡುವ ಅಕ್ಕಿ, ಗೋಧಿಗೆ ಭಿಕ್ಷೆಗೆ ನಿಲ್ಲುವಂತೆ ಮಾಡಲಿಲ್ಲವೇ? ಹಾಗೆ ಜನರನ್ನು ಖಾಯಂ ಆಗಿ ಭಿಕ್ಷುಕರನ್ನಾಗಿಸಬೇಕು. ಆ ಮಹೋದ್ದೇಶ ಸಾಧನೆಗಾಗಿ ಇದೀಗ ಸಹಕಾರಿ ಬ್ಯಾಂಕುಗಳ ಒಕ್ಕೂಟ ಸರ್ಕಾರಕ್ಕೆ ಸಹಕರಿಸಬೇಕು.

ಇದೀಗ ಸಂವಿಧಾನದತ್ತ ರಾಜ್ಯದ ಎಲ್ಲ ಅವಕಾಶ, ಅಧಿಕಾರಗಳನ್ನು ಕಟ್ಟಿಹಾಕಿ, ಭವಿಷ್ಯದಲ್ಲಿ ಎಲ್ಲವನ್ನೂ ಒಕ್ಕೂಟದ ಕಬಂಧಬಾಹುವಿನ ತೆಕ್ಕೆಗೆ ಎಳೆದುಕೊಳ್ಳಲು ಒಕ್ಕೂಟ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವುದು, ರಾಜ್ಯದ ಆರ್ಥಿಕತೆಯನ್ನು ಹದಗೆಡಿಸುವುದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಕ್ಕೂಟ ಸರ್ಕಾರದ ಬಳಿ ಭಿಕ್ಷೆಗೆ ಸರಿಯಲ್ಲಿ ನಿಲ್ಲುವ ವ್ಯವಸ್ಥೆ ಜಾರಿಯಾಗುತ್ತದೆ.

1,169 ಕೋಟಿಗೆ ಒಡಿಶಾ ಹೆದ್ದಾರಿ ಟೆಂಡರ್‌ ಯೋಜನೆ ಗೆದ್ದುಕೊಂಡ ಅದಾನಿ! | Naanu gauri
ಅದಾನಿ

ಈಗಾಗಲೇ ನೋಡಿರುವ ಪ್ರಕಾರ, ಚುನಾವಣೆಗಳಿರುವ ರಾಜ್ಯಕ್ಕೆ ಒಕ್ಕೂಟ ಸರ್ಕಾರ ಉದಾರವಾಗಿ ಹಣ ಹಂಚಿಕೆ ಮಾಡುವುದು, ತನ್ನ ಪಕ್ಷವೇ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡುವುದು, ಕೇಂದ್ರದ ಮಾತು ಕೇಳದಿರುವ ನಾಯಕರಿರುವ ರಾಜ್ಯದ ಕಣ್ಣಿಗೆ ಸುಣ್ಣ ಬಳಿಯುವುದನ್ನೆಲ್ಲ ನೋಡಿಯಾಗಿದೆ. ಇವುಗಳ ನಡುವೆ ಕೂಡ ರಾಜ್ಯಗಳು ಹೇಗೋ ಉಸಿರಾಡುತ್ತಿವೆ. ರಾಜ್ಯಗಳ ಆರ್ಥಿಕತೆಯ ಉಸಿರು ನಿಲ್ಲಿಸಲು ಸಹಕಾರ ಖಾತೆ ಸಹಕರಿಸಲಿದೆ ಎಂಬ ದಟ್ಟ ಅನುಮಾನ ಇದೀಗೆ ಎದ್ದಿದೆ. ಈ ಮೂಲಕ ಸಹಕಾರ ಕ್ಷೇತ್ರದ ಮೇಲೆ ಕೂಡ ಒಕ್ಕೂಟ ಸರ್ಕಾರ ಹಿಡಿತ ಮತ್ತು ಕೇಂದ್ರೀಕೃತ ವ್ಯವಸ್ಥೆಗೆ ಅಳವಡಿಸುವ ಹುನ್ನಾರವನ್ನು ಜಾರಿಗೆ ತರಲಾಗುತ್ತದೆ.

ಇದಕ್ಕಿಂತ ಭೀಕರ ಪರಿಸ್ಥಿತಿಯೊಂದು ಉದ್ಭವಿಸುವ ಸಾಧ್ಯತೆ ಕೂಡ ಇದೆ. ಮೇಲೆ ಉದಾಹರಿಸಿರುವ ವಿಜಯ್ ಮಲ್ಯ, ಮೇಹುಲ್ ಚೋಕ್ಸಿ, ಅನಿಲ್ ಅಂಬಾನಿಯಂತವರಿಂದ ರಾಷ್ಟ್ರೀಕೃತ ಬ್ಯಾಂಕುಗಳು ಅಧೋಗತಿಗೆ ಇಳಿದಿವೆ. ಪ್ರಾಯಶಃ ಇನ್ನಷ್ಟು ಅವುಗಳನ್ನು ಪಾತಾಳಕ್ಕೆ ತುಳಿಯಲು ಅಸಾಧ್ಯವೆಂಬ ಸತ್ಯವನ್ನು ಅರಿತ ಒಕ್ಕೂಟ ಸರ್ಕಾರ ಇದೀಗ ಸಹಕಾರಿ ಬ್ಯಾಂಕುಗಳಿಗೆ ಬಾಯಿ ಹಾಕಲು ಸನ್ನದ್ಧವಾಗಿದೆ. ಜಿ.ಎಸ್.ಟಿ, ವಿವಾದಾತ್ಮಕ ಕೃಷಿ ಮಸೂದೆಗಳು, ಹೊಸ ಶಿಕ್ಷಣ ನೀತಿ, ಇದೀಗ ಸಹಕಾರ ಖಾತೆ ಸೃಷ್ಟಿಯ ಹಿಂದಿರುವುದು ರಾಜ್ಯಗಳ ಸಂವಿಧಾನದತ್ತ ಹಕ್ಕನ್ನು ಕೇಂದ್ರೀಕರಿಸುವುದು, ಮೊಟಕುಗೊಳಿಸುವುದು. ಇದನ್ನು ಅರಿಯದೆ ಒಕ್ಕೂಟ ಸರ್ಕಾರಕ್ಕೆ ಮತ ನೀಡಿದ ಮತದಾರರು, ರಾಜ್ಯ ಸರ್ಕಾರಗಳು ಮತ್ತು ಅವುಗಳನ್ನು ಆರಿಸಿದ ಪ್ರಜಾಪ್ರಭುಗಳು ಪಂಕದಲ್ಲಿ ಬಿದ್ದ ಪಶುವಿನಂತೆ ಒದ್ದಾಡುತ್ತಿರುವುದು ಈಗಾಗಲೇ ಗೋಚರಿಸುತ್ತಿದೆ. ಭವಿಷ್ಯದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ.

– ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

ಇದನ್ನೂ ಓದಿ: ಮೋದಿ ಸರ್ಕಾರದ ’ಸರ್ವಾಧಿಕಾರಿ ಧೋರಣೆ’ ಖಂಡಿಸಿ ಬ್ರಿಟಿಷ್ ಸಂಸದರು, ತಜ್ಞರ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿತ್ರದುರ್ಗ | ಹೊತ್ತಿ ಉರಿದ ಖಾಸಗಿ ಬಸ್​​​​ : 10ಕ್ಕೂ ಹೆಚ್ಚು ಜನರು ಸಜೀವ ದಹನ, ಹಲವರಿಗೆ ಗಾಯ

ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದ ಪರಿಣಾಮ 10ಕ್ಕೂ ಹೆಚ್ಚು ಜನರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಗುರುವಾರ (ಡಿ.25) ನಡೆದಿದೆ. ರಾಷ್ಟ್ರೀಯ ಹೆದ್ದಾರಿ...

ಜಾಮಿಯಾ ಮಿಲ್ಲಿಯಾ |’ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ’ದ ಬಗ್ಗೆ ಪ್ರಶ್ನೆ ಕೇಳಿದ ಪ್ರಾಧ್ಯಾಪಕ ಅಮಾನತು

ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ "ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ವಿವರಿಸಿ" ಎಂಬ ಪ್ರಶ್ನೆಯ ಬಗ್ಗೆ ದೂರುಗಳು ಬಂದ ನಂತರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಸಮಾಜ ಕಾರ್ಯ...

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಳವಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಗರ್ಭಿಣಿ ಯುವತಿಯ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಂಡ್ಯದ ಮಳವಳ್ಳಿ ಪಟ್ಟಣದ ಅನಂತ್ ರಾವ್ ವೃತ್ತದಲ್ಲಿ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ (ಡಿ.24) ಪ್ರತಿಭಟನೆ ನಡೆಯಿತು....

ಕೇಂದ್ರದ ಜಿ ರಾಮ್‌ ಜಿ ಕಾಯ್ದೆ ವಿರುದ್ದ ತಮಿಳುನಾಡಿನಾದ್ಯಂತ ಬೃಹತ್ ಪ್ರತಿಭಟನೆ

ಕೇಂದ್ರದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್) ಕಾಯ್ದೆ, 2025 (ವಿಬಿ-ಜಿ ರಾಮ್‌ ಜಿ) ವಿರುದ್ದ ತಮಿಳುನಾಡಿನ ಆಡಳಿತರೂಢ ಡಿಎಂಕೆ ಮೈತ್ರಿಕೂಟವು ಬುಧವಾರ (ಡಿ.24) ರಾಜ್ಯದಾದ್ಯಂತ ಬೃಹತ್...

ಮುಸ್ಲಿಮರನ್ನು ತುಚ್ಛವಾಗಿ ನಿಂದಿಸುತ್ತಿರುವ ಬಿಜೆಪಿ ನಾಯಕಿ ನಾಝಿಯಾ ಇಲಾಹಿ : ಕ್ರಮ ಕೈಗೊಳ್ಳದ ಪೊಲೀಸರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ಎನ್ನಲಾದ ನಾಝಿಯಾ ಇಲಾಹಿ (ನಾಝಿಯಾ ಇಲಾಹಿ ಖಾನ್) ಪದೇ ಪದೇ ಮುಸ್ಲಿಮರನ್ನು ತುಚ್ಛವಾಗಿ ನಿಂದಿಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಹಂಚಿಕೊಳ್ಳುತ್ತಿದ್ದು, ಪೊಲೀಸರು ಯಾವುದೇ ಕ್ರಮ...

ತೆಲಂಗಾಣ: ಸರಪಂಚ್ ಚುನಾವಣೆಯಲ್ಲಿ ಬೆಂಬಲಿಸದ ದಲಿತ ಕುಟುಂಬದ ಮನೆ ಕೆಡವಿದ ಕಾಂಗ್ರೆಸ್ ಸದಸ್ಯರು

ಕಾಂಗ್ರೆಸ್ ಬೆಂಬಲಿತ ಸರಪಂಚ್ ಆಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಪದ್ಮಾವತಿ ಮತ್ತು ಅವರ ಮಗ ಪ್ರಸಾದ್ ರೆಡ್ಡಿ ಎಂಬುವವರು ಸೋಮವಾರ ಕೊಹಿರ್ ಮಂಡಲದ ಸಜ್ಜಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ದಲಿತ ಕುಟುಂಬದ ಮನೆಯನ್ನು...

“ಆತ್ಮಹತ್ಯೆಗೆ ಮುಂದಾದೆ, ಕುಟುಂಬ ನೆನೆದು ಸುಮ್ಮನಾದೆ”: ನೋವು ತೋಡಿಕೊಂಡ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

"ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದರೆ, ನನ್ನ ಕುಟುಂಬವನ್ನು ನೆನೆದು ಸುಮ್ಮನಾದೆ" ಇದು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮಂಗಳವಾರ (2025 ಡಿಸೆಂಬರ್ 24) ಸಂಜೆ ದೆಹಲಿಯ ಇಂಡಿಯಾ ಗೇಟ್ ಎದುರಿನ ಹುಲ್ಲುಹಾಸಿನ ಮೇಲೆ...

ಜಿಬಿಎ ಅಧಿಕಾರಿಗಳಿಂದ ಮನೆಗಳ ನೆಲಸಮ : ತೀವ್ರ ಖಂಡನೆ ವ್ಯಕ್ತಪಡಿಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಗ್ರಾಮದಲ್ಲಿ ಬಡ ಜನರ ಸುಮಾರು 150 ಮನೆಗಳನ್ನು ಏಕಾಏಕಿ ನೆಲಸಮಗೊಳಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕ್ರಮವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ...

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಆಯ್ಕೆ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿದ್ದು, ರಾಯಭಾರಿಯಾಗಿ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಚಲನಚಿತ್ರೋತ್ಸವದ ಪೂರ್ವಭಾವಿಯಾಗಿ ಸಂಘಟನಾ...

ಗುಂಪು ಹತ್ಯೆ ಪ್ರಕರಣ ಹಿಂಪಡೆಯಲು ಮುಂದಾದ ಯುಪಿ ಸರ್ಕಾರ : ಹೈಕೋರ್ಟ್ ಮೆಟ್ಟಿಲೇರಿದ ಅಖ್ಲಾಕ್ ಪತ್ನಿ

ದಾದ್ರಿ ಗುಂಪು ಹತ್ಯೆ ಪ್ರಕರಣದ ಬಲಿಪಶು ಮೊಹಮ್ಮದ್ ಅಖ್ಲಾಕ್ ಅವರ ಪತ್ನಿ, ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಮತ್ತು ಗೌತಮ್ ಬುದ್ಧ ನಗರದ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್ ಸಲ್ಲಿಸಿರುವ...