ಜುಲೈ 8 ರಂದು ನಿಧನರಾದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ತಮ್ಮ ಹೆಸರಿನಲ್ಲಿ ವಿಶಿಷ್ಟ ದಾಖಲೆಯನ್ನು ಹೊಂದಿದ್ದಾರೆ. ಇವರ ರಾಜಕೀಯದ ಆರಂಭದ ದಿನಗಳಿಂದಲೂ ಅಧಿಕಾರ ಒಲಿದು ಬಂದಿದೆ. ಯುವ ರಾಜಕಾರಣಿಯಾಗಿದ್ದಲೇ ವೀರಭದ್ರ ಸಿಂಗ್ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
ಇಂದಿರಾಗಂಧಿ ಆಪ್ತರಲ್ಲಿ ಒಬ್ಬರಾಗಿದ್ದ ವೀರಭದ್ರ ಸಿಂಗ್ ಸತತ 6 ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಅತ್ಯಂತ ಆಪ್ತರಾಗಿಯೇ ಮುಂದುವರೆದಿದ್ದರು. 1976 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಮಾನಯಾನ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಮನಮೋಹನ್ ಸಿಂಗ್ ಪ್ರಧಾನಿಯಾದ ಅವಧಿಯಲ್ಲೂ ಬಹು ಮಖ್ಯ ಖಾತೆಯನ್ನು ಹೊಂದಿದ್ದರು. ಕೇಂದ್ರದಲ್ಲಿ 4 ಸಾರಿ ಮಂತ್ರಿ ರಾಜ್ಯದಲ್ಲಿ 6 ಸಾರಿ ಮುಖ್ಯಮಂತ್ರಿ, 9 ಅವಧಿಗೆ ಶಾಸಕ, 5 ಅವಧಿಗೆ ಸಂಸದ ಭಾರತ ರಾಜಕೀಯದಲ್ಲಿ ಇಂದೊಂದು ದಾಖಲೆಯಾಗಿ ಉಳಿದಿದೆ. 1971 ರಲ್ಲಿ ಹಿಮಾಚಲ ಪ್ರದೇಶ ಸ್ಥಾಪನೆಯಾದಾಗಿನಿಂದ ಇದುವರೆ ವೀರಭಧ್ರ ಸಿಂಗ್ ದೀರ್ಘಾವಧಿಗೆ ಮುಖ್ಯಮಂತ್ರಿಯಾಗಿದ್ದ ದಾಖಲೆಯನ್ನು ಹೊಂದಿದ್ದರು. ಹಿಮಾಚಲದಲ್ಲಿ ಅವರನ್ನು ರಾಜಾ ಸಾಹೇಬ್ ಎಂದೇ ಕರೆಯುತ್ತಿದ್ದುದು ವಿಶೇಷ.

ಕೊನೆಗೆ ತಾವು ಕೊನೆಯುಸಿರೆಳೆಯುವ ದಿನದಲ್ಲೂ ವೀರಭದ್ರ ಸಿಂಗ್ ಹಿಮಾಚಲ ಪ್ರದೇಶ ವಿಧಾನಸಭೆ ಸದಸ್ಯರಾಗಿದ್ರು ಎಂಬುದು ವಿಶೇಷ.1962ರ ಲೋಕಸಭೆ ಚುನಾವಣೆಯಿಂದ 2017ರ ಚುನಾವಣೆಯ ನಡುವಿನ ಅವಧಿಯಲ್ಲಿ ವೀರಭದ್ರ ಸಿಂಗ್ ಭಾರತ ರಾಜಕೀಯ ಮತ್ತು ಹಿಮಾಚಲ ಪ್ರದೇಶದ ರಾಜಕೀಯದಲ್ಲಿ ವಿಶೇಷ ಛಾಪನ್ನು ಒತ್ತಿಹೋಗಿದ್ದಾರೆ.
ವೀರಭದ್ರ ಸಿಂಗ್ ಪತ್ನಿ ಪ್ರತಿಭಾ ಸಿಂಗ್ ಹಾಗೂ ಪುತ್ರ ವಿಕ್ರಮಾದಿತ್ಯ ಸಿಂಗ್ ಕೂಡ ರಾಜಕಾರಣಿಗಳಾಗಿದ್ದಾರೆ. ಪ್ರತಿಭಾ ಅವರು ಹಿಂದೆ ಲೋಕಸಭೆ ಸದಸ್ಯರಾಗಿದ್ರು, ವಿಕ್ರಮಾದಿತ್ಯ ಸಿಂಗ್ ಶಿಮ್ಲಾ ಗ್ರಾಮೀಣ ಕ್ಷೇತದ ಶಾಸಕರಾಗಿದ್ದಾರೆ.
ಸಿಂಗ್ ಕುಟುಂಬ ಜೂನ್ 23 ರಂದು ವೀರಭದ್ರ ಸಿಂಗ್ ಅವರ 87 ನೇ ಹುಟ್ಟಿದ ದಿನವನ್ನು ಆಚರಿಸಿತ್ತು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಬೆಂಬಲಿಗರು ನೆರೆದಿದ್ದರು. 1983 ರಿಂದ 2012 ರ ಅವಧಿಯಲ್ಲಿ ವೀರಭದ್ರ ಸಿಂಗ್ 6 ಭಾರಿ ಹಿಮಾಚಲ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾದ ಕಾಲದಿಂದ ಮನಮೋಹನ್ ಸಿಂಗ್ ಅವಧಿಯಲ್ಲಿ ಒಟ್ಟು 4 ಸಾರಿ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 65 ವರ್ಷಗಳ ತಮ್ಮ ರಾಜಕೀಯದ ಸುದೀರ್ಘ ಪ್ರಯಾಣದಲ್ಲಿ ಸುಮಾರು 50 ವರ್ಷಗಳ ಕಾಲ ವೀರಭದ್ರ ಸಿಂಗ್ ಮಂತ್ರಿಯಾಗಿ ಅಥವಾ ಮುಖ್ಯ ಮಂತ್ರಿಯಾಗಿ ಅಧಿಕಾರವನ್ನು ಹೊಂದಿದ್ದರೆಂಬುದು ವಿಶೇಷ.
2015 ರ ಅವಧಿಯಲ್ಲಿ ಭೃಷ್ಟಾಚಾರ ಮತ್ತು ಆದಾಯಕ್ಕು ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ವೀರಭದ್ರ ಸಿಂಗ್ ಹೆಸರು ತಳಕು ಹಾಕಿಕೊಂಡಿತ್ತು ಮತ್ತು ಸಿಬಿಐ ಈ ಸಂಬಂಧ ತನಿಖೆಯನ್ನು ಸಹ ನಡೆಸುತ್ತಿತ್ತು.
-ರಾಜೇಶ್ ಹೆಬ್ಬಾರ್
ಇದನ್ನೂ ಓದಿ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನ, 3 ದಿನಗಳ ಶೋಕಾಚರಣೆ


