ಕೊರೊನಾ ಎರಡನೇ ಅಲೆ ಕಳೆದು ಜಗತ್ತು 3 ಮೂರನೇ ಅಲೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿಯೊಂದನನ್ನು ನೀಡಿದೆ. ಜಗತ್ತಿನಲ್ಲಿ ಅತಿ ವೇಗವಾಗಿ ಹರುಡತ್ತಿರುವ ಡೆಲ್ಟಾ ರೂಪಾಂತರಿ ವೈರಸ್ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹರಡಿದೆ ಎಂದು ಹೆಳಿದೆ. ಇದುವರೆಗೆ ಅಪಾಯಕಾರಿ ಡೆಲ್ಟಾ ವೈರಸ್ ಜಗತ್ತಿನ 104 ದೇಶಗಳಲ್ಲಿ ಕಂಡು ಬಂದಿದೆ ಕೋವಿಡ್ ಆತಂಕ ಇನ್ನೂ ಕಳೆದಿಲ್ಲ ಎಂದು ಎಚ್ಚರಿಸಿದೆ.
ನಾಲ್ಕು ವಾರಗಳಿಂದ ಕೊರೋನಾ ವೈರಸ್ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಜೂನ್ ವೇಳೆಗೆ ಇಳಿಕೆಯಾಗಿದ್ದ ಸೋಂಕಿತರ ಸಂಖ್ಯೆ ಜುಲೈ 2ನೇ ವಾರದಲ್ಲಿ ಮತ್ತೆ ಏರಿಕೆ ಕಂಡಿದೆ. ಶಾವಿನ ಪ್ರಮಾಣದಲ್ಲೂ ವ್ಯಾಪಕ ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಗೆಬ್ರೇಷಿಯಸ್ ಎಚ್ಚರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ 6 ವಲಯಗಳಲ್ಲಿ ಒಂದು ವಲಯದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದೆ ಎಂದು ಅವರು ತಿಳಿಸಿದ್ದು, ವ್ಯಾಕ್ಸಿನೇಶನ್ ಕಡಿಮೆ ಇರುವ ದೇಶದಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಕೋವಿಡ್ 2ನೆ ಅಲೆ ಜಾಗತಿಕ ತೀವ್ರತೆಗೂ ಕಾರಣವಾಗಿದೆ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ
ಭಾರತದ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕಳೆದ 1 ವಾರದಿಂದ ಸೊಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣದಲ್ಲಿ ತೀವ್ರ ಏರಿಕಾಯಾಗುತ್ತಿದೆ. ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಡೆಲ್ಟಾ ರೂಪಾಮತರಿ ಪ್ರಕರಣಗಳು ದಾಖಲಾಗತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಡೆಲ್ಟಾ ಪ್ಲಸ್, ಕಪ್ಪಾ, ಲಾಂಬಾ ರೂಪಾಂತರಿ ವೈರಸ್‌ಗಳು ಕೂಡ ದೇಶದಲ್ಲಿ ಪತ್ತೆಯಾಗಿವೆ.
ಕೋವಿಡ್ ಎರಡನೇ ಅಲೆಯ ನಂತರ ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆಗಳು ಜಾರಿಯಲ್ಲಿದ್ದು ದೇಶದ ಬಹುತೇಕ ರಾಜ್ಯಗಳು ಎಲ್ಲಾ ನಿರ್ಬಂಧಗಳನ್ನು ಸಡಿಲಿಸಿವೆ. ನಿರ್ಬಂಧ ತೆರವಾಗುತ್ತಿದ್ದಂತೆ ಜನರು ಪ್ರವಾಸಿ ತಾಣಗಳಿಗೆ ಮುಗಿ ಬೀಳುತ್ತಿರುವುದು ಹೊಸ ಆರೋಗ್ಯ ಸಮಸ್ಯೆಗೆ ಮುನ್ನುಡಿ ಎಂದು ಹಲವು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೇರಳ: ದೇಶದ ಮೊದಲ ಕೊರೊನಾ ಸೋಂಕಿತೆಯಾಗಿದ್ದ ವಿದ್ಯಾರ್ಥಿನಿಗೆ ಮತ್ತೆ ಸೋಂಕು


