ನಟ ವಿಜಯ್‌ಗೆ 1 ಲಕ್ಷ ರೂ. ದಂಡ ಕಟ್ಟುವಂತೆ ಮದ್ರಾಸ್‌‌‌ ಹೈಕೋರ್ಟ್‌ ಆದೇಶ! | Naanu gauri

ತಮಿಳು ಸೂಪರ್‌ ಸ್ಟಾರ್‌ ವಿಜಯ್ ಅವರು ತನ್ನ 7.95 ಕೋಟಿ ರೂ. ಮೌಲ್ಯದ ‘ರೋಲ್ಸ್ ರಾಯ್ಸ್ ಘೋಸ್ಟ್’ ಕಾರಿನ ಮೇಲೆ ತೆರಿಗೆ ವಿನಾಯಿತಿ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ ನ್ಯಾಯಮೂರ್ತಿ‌ ಎಸ್.ಎಂ.ಸುಬ್ರಮಣ್ಯಂ ಅವರು ವಜಾಗೊಳಿಸಿದ್ದು, ತಮಿಳುನಾಡು ಮುಖ್ಯಮಂತ್ರಿಯ ಕೊರೊನಾ ಪರಿಹಾರ ನಿಧಿಗೆ 1 ಲಕ್ಷ ರೂಗಳನ್ನು ಜಮಾ ಮಾಡುವಂತೆ ಆದೇಶ ನೀಡಿದ್ದಾರೆ.

ಇಂಗ್ಲೇಂಡ್‌ನಿಂದ ಆಮದು ಮಾಡಿಕೊಂಡಿದ್ದ ಕಾರಿನ ಮೇಲೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೋರಿ ಅವರು 2012 ರಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು, ತಮಿಳುನಾಡು ಮುಖ್ಯಮಂತ್ರಿಯ ಕೋವಿಡ್ -19 ಸಾರ್ವಜನಿಕ ಪರಿಹಾರ ನಿಧಿಗೆ, ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ಎರಡು ವಾರಗಳಲ್ಲಿ ಒಂದು ಲಕ್ಷವನ್ನು ಜಮಾ ಮಾಡುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಎರಡು ವಾರಗಳ ಅವಧಿಯಲ್ಲಿ ಪಾವತಿಸಬೇಕಾದ ತೆರಿಗೆಯನ್ನು ಕಟ್ಟುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್‌ಗೆ 47ರ ಸಂಭ್ರಮ: ಅಭಿಮಾನಿಗಳು ಮತ್ತು ಚಿತ್ರತಾರೆಯರಿಂದ ಶುಭಾಶಯಗಳ ಸುರಿಮಳೆ

“ಚಲನಚಿತ್ರಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ನ್ಯಾಯದ ಚಾಂಪಿಯನ್ ಆಗುವ ನಟ, ನಿಜ ಜೀವನದಲ್ಲಿ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ. ತಮಿಳು ಚಿತ್ರರಂಗವು ನಟರನ್ನು ನಿಜವಾದ ನಾಯಕರು ಎಂದು ನಂಬುವಂತೆ ಪ್ರೇರೇಪಿಸುತ್ತದೆ. ಅಲ್ಲದೆ ಈ ನಾಯಕರು ಆಡಳಿತಗಾರರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.

‘‘ತೆರಿಗೆ ಪಾವತಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ, ಇದು ದೇಣಿಗೆಯಲ್ಲ, ಕಡ್ಡಾಯವಾಗಿ ನೀಡಲೆಬೇಕಾಗಿದ್ದು” ಎಂದು ಹೇಳಿದ್ದಾರೆ.

ಚಿತ್ರರಂಗದ ಇತರ ಎಲ್ಲಾ ನಟರಂತೆ, ವಿಜಯ್ ಕೂಡಾ ಬಿಎಂಡಬ್ಲ್ಯು ಮಿನಿ ಕೂಪರ್, ಆಡಿ ಎ 8 ಮತ್ತು ರೋಲ್ಸ್ ರಾಯ್ಸ್ ಘೋಸ್ಟ್ ಅನ್ನು ಒಳಗೊಂಡಿರುವ ವಿಂಟೇಜ್ ಕಾರುಗಳ ಆಕರ್ಷಕ ಸಂಗ್ರಹವನ್ನು ಹೊಂದಿದ್ದಾರೆ.

ತಮಿಳು ಚಿತ್ರರಂಗದ ಪ್ರಸಿದ್ಧ ನಟರಾಗಿರುವ ವಿಜಯ್ ಇತ್ತೀಚೆಗಷ್ಟೇ ತಮ್ಮ 47 ನೇ ಹುಟ್ಟಿದ ದಿನವನ್ನು ಆಚರಿಸಿಕೊಂಡಿದ್ದರು. ವಿಜಯ್ ಹುಟ್ಟಿದ ದಿನದಂದು ಅವರ ಮುಂದಿನ ಚಲನಚಿತ್ರ ಬೀಸ್ಟ್‌ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಸಂಚಾರಿ ವಿಜಯ್‌ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!

1 COMMENT

LEAVE A REPLY

Please enter your comment!
Please enter your name here