Homeಮುಖಪುಟದಳಪತಿ ವಿಜಯ್‌ಗೆ 47ರ ಸಂಭ್ರಮ: ಅಭಿಮಾನಿಗಳು ಮತ್ತು ಚಿತ್ರತಾರೆಯರಿಂದ ಶುಭಾಶಯಗಳ ಸುರಿಮಳೆ

ದಳಪತಿ ವಿಜಯ್‌ಗೆ 47ರ ಸಂಭ್ರಮ: ಅಭಿಮಾನಿಗಳು ಮತ್ತು ಚಿತ್ರತಾರೆಯರಿಂದ ಶುಭಾಶಯಗಳ ಸುರಿಮಳೆ

- Advertisement -
- Advertisement -

ತಮಿಳು ಚಿತ್ರರಂಗದ ಪ್ರಸಿದ್ಧ ನಟ ದಳಪತಿ ವಿಜಯ್ ಇಂದು ತಮ್ಮ 47 ನೇ ಹುಟ್ಟಿದ ದಿನವನ್ನು ಆಚರಿಸಿಕೊಂಡಿದ್ದಾರೆ. ವಿಜಯ್ ಹುಟ್ಟಿದ ದಿನದಂದು ಅವರ ಮುಂದಿನ ಚಲನಚಿತ್ರ ಬೀಸ್ಟ್‌ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ವಿಜಯ್ ಹುಟ್ಟಿದ ದಿನದಂದು ಅವರ ಅಭಿಮಾನಿಗಳು ಮತ್ತು ಭಾರತ ಚಿತ್ರರಂಗದ ಗಣ್ಯರು ವಿಜಯ್‌ ಅವರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಧನುಷ್, ಕಾಜೊಲ್ ಅಗರವಾಲ್ ಸೇರಿದಂತೆ ತಮಿಳು ಚಿತ್ರರಂಗದ ಗಣ್ಯರು ವಿಜಯ್‌ ಅವರಿಗೆ ಉತ್ತಮ ಆರೋಗ್ಯ ಮತ್ತು ಯಶಸ್ಸು ಹೀಗೆ ಮುಂದುವರೆಯಲಿ ಎಂದು ಆಶಿಸಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟ ಮೋಹನ್‌ ಲಾಲ್ ಕೂಡ ದಳಪತಿ ವಿಜಯ್ ಅವರಿಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

ವಿಜಯ್ ಹಿಂದೆ ಮರ್ಸೆಲ್ ಚಿತ್ರದಲ್ಲಿ ಕೇಂದ್ರ ಸರ್ಕಾರದ ನೋಟು ರದ್ಧತಿ, ಜಿಎಸ್‌ಟಿ ಸೇರಿ ಹಲವು ಯೋಜನೆಗಳ ಕುರಿತು ಟೀಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಹಾಗೆಯೇ ತಮಿಳು ನಾಡು ಚುನಾವಣೆ ಸಮಯದಲ್ಲಿ ಸೈಕಲ್‌ ಮೂಲಕ ಮತ ಚಲಾಯಿಸಲು ತೆರಳಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಪರಿಸರ ರಕ್ಷಣೆಯ ಕುರಿತು ಜಾಗೃತಿಯನ್ನು ಮೂಡಿಸಿದ್ದರು. ನಟೆನೆಯ ಜೊತೆಗೆ ವಿವಿಧ ಸಾಮಾಜಿಕ ಕಳಕಳಿಯ ಚಟುವಟಿಕೆಯಲ್ಲಿಯೂ ದಳಪತಿ ವಿಜಯ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿಜಯ್ ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ಸರ್ಕಾರದ ವಿರುದ್ಧ ತಮ್ಮ ಧ್ವನಿಯನ್ನು ಎತ್ತುತ್ತಲೇ ಬಂದಿದ್ದಾರೆ.

ಸದ್ಯ ವಿಜಯ ಸೇತುಪತಿ ಅವರೊಂದಿಗಿನ ತಮ್ಮ ಹಿಂದಿನ ಚಿತ್ರ ಮಾಸ್ಟರ್ ಚಿತ್ರದ ಯಶಸ್ಸಿನಲ್ಲಿರುವ ವಿಜಯ ದಳಪತಿ ಮುಂದಿನ ಚಿತ್ರ ಬೀಸ್ಟ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬೀಸ್ಟ್‌ ಚಿತ್ರದಲ್ಲಿ ದಳಪತಿ ವಿಜಯ್‌ ಜೊತೆಗೆ ಪೂಜಾ ಹೆಗ್ಡೆ ಕೂಡ ನಟಿಸುತ್ತದ್ದಾರೆ.

 

ನಿನ್ನೆ ಮಧ್ಯರಾತ್ರಿ 2 ಗಂಟೆಗೆ ಬಿಡುಗಡೆಯಾದ ದಳಪತಿ ವಿಜಯ್ ಅವರ ಬೀಸ್ಟ್‌ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದ್ದು ಅಭಿಮಾನಿಗಳು ವಿಜಯ್ ಅವರ ಹೊಸ ಲುಕ್‌ಗೆ ಫಿದಾ ಆಗಿದ್ದಾರೆ.


ಇದನ್ನೂ ಓದಿ : ಜನಾಗ್ರಹ ಆಂದೋಲನ: ನಾಳೆ ವಸತಿ ಸಚಿವರ ಮನೆ ಮುಂದೆ ಖಾಲಿ ಚೀಲ ಸುಟ್ಟು ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -