Homeಅಂತರಾಷ್ಟ್ರೀಯಪ್ಯಾಲೆಸ್ತೀನಿಗಳನ್ನು ಅಕ್ರಮ ಸ್ಥಳಾಂತರ ಮಾಡುವ ಇಸ್ರೇಲ್‌‌ನ ನಡೆ ಹಿಂಸಾಚಾರ ಹೆಚ್ಚಿಸುತ್ತದೆ: ಯುರೋಪಿಯನ್‌ ಯುನಿಯನ್‌

ಪ್ಯಾಲೆಸ್ತೀನಿಗಳನ್ನು ಅಕ್ರಮ ಸ್ಥಳಾಂತರ ಮಾಡುವ ಇಸ್ರೇಲ್‌‌ನ ನಡೆ ಹಿಂಸಾಚಾರ ಹೆಚ್ಚಿಸುತ್ತದೆ: ಯುರೋಪಿಯನ್‌ ಯುನಿಯನ್‌

- Advertisement -
- Advertisement -

ಪೂರ್ವ ಜೆರುಸಲೆಮ್‌ನಲ್ಲಿ ಪ್ಯಾಲೆಸ್ತೀನಿಯರನ್ನು ಸ್ಥಳಾಂತರಿಸುವ ಮತ್ತು ಅವರ ಮನೆಗಳನ್ನು ನೆಲಸಮಗೊಳಿಸುವ ಇಸ್ರೇಲ್‌ನ ಕ್ರಮಗಳು ಕಾನೂನುಬಾಹಿರವೆಂದು ಯುರೋಪಿಯನ್ ಯೂನಿಯನ್ (ಇಯು) ಸೋಮವಾರ ಹೇಳಿದೆ. ಇದು ಇನ್ನೂ ಹೆಚ್ಚಿನ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದು ಅದು ತಿಳಿಸಿದೆ.

ಇಸ್ರೇಲಿ ಅಧಿಕಾರಿಗಳು ಪೂರ್ವ ಜೆರುಸಲೆಮ್‌ನ ಅಲ್-ಬುಸ್ತಾನ್‌ನ ಪಕ್ಕದಲ್ಲಿರುವ ಪ್ಯಾಲೇಸ್ತೀನಿಯನ್‌‌‌ ಅಂಗಡಿಯೊಂದನ್ನು ಕಳೆದ ವಾರ ನೆಲಸಮ ಮಾಡಿದ್ದಾರೆ ಎಂದು ಇಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಪ್ಯಾಲೆಸ್ತೀನ್ ಸಂಘರ್ಷ ಕೊನೆಗೊಳಿಸಲು ’ದ್ವಿರಾಷ್ಟ್ರ’ ಪರಿಹಾರವನ್ನು ಬೆಂಬಲಿಸಿದ ಭಾರತ!

ಇಸ್ರೇಲ್ ಅಧಿಕಾರಿಗಳು ಇನ್ನೂ ಹಲವಾರು ಕಟ್ಟಡಗಳ ಮಾಲೀಕರಿಗೆ ಮತ್ತು 20 ಮನೆಗಳಿಗೆ ನೆಲಸಮಗೊಳಿಸುವಿಕೆಯ ನೋಟಿಸ್ ನೀಡಿದ್ದಾರೆ. ಪೂರ್ವ ಜೆರುಸಲೆಮ್‌ನ ಸಿಲ್ವಾನ್‌ ಅಕ್ಕಪಕ್ಕದಲ್ಲಿ ವಾಸಿಸುವ 1,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್‌‌ ಜನರು ಕೂಡಾ ಇದೇ ರೀತಿಯ ಆತಂಕವನ್ನು ಎದುರಿಸುತ್ತಿದ್ದಾರೆ ಎಂದು ಇಯು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಲವಂತದ ಸ್ಥಳಾಂತರ, ಹೊರದೂಡುವಿಕೆ, ನೆಲಸಮ ಮಾಡುವುದು ಮತ್ತು ಮನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಏಕಪಕ್ಷೀಯ ಕ್ರಮಗಳನ್ನು ಉಲ್ಲೇಖಿಸಿರುವ ಇಯು, ಇಸ್ರೇಲ್‌ನ ವಸಾಹತು ನೀತಿಯು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾನೂನುಬಾಹಿರವಾಗಿದೆ ಎಂದು ಹೇಳಿದೆ.

ಇಸ್ರೇಲ್‌‌ನ ಈ ಎಲ್ಲಾ ಕ್ರಮಗಳು ಹೆಚ್ಚು ಹಿಂಸಾಚಾರ ಮತ್ತು ಮಾನವೀಯ ಸಂಕಟಗಳಿಗೆ ಕಾರಣವಾಗುತ್ತವೆ ಎಂದು ಅದು ತಿಳಿಸಿದೆ.

ಈ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಿ ಮತ್ತು ಪ್ಯಾಲೇಸ್ತೀನಿಯನ್ ಸಮುದಾಯಗಳ ಕಾನೂನು ನಿರ್ಮಾಣ ಮತ್ತು ಅಭಿವೃದ್ಧಿಗೆ ಸೂಕ್ತ ಅನುಮತಿಗಳನ್ನು ನೀಡುವಂತೆ ಇಯು ಇಸ್ರೇಲಿ ಅಧಿಕಾರಿಗಳಿಗೆ ಕರೆ ನೀಡಿದೆ.

ಯುರೋಪಿಯನ್ ಯುನಿಯನ್‌(ಇಯು) ಯುರೋಪಿನ 27 ದೇಶಗಳ ಗುಂಪಾಗಿದೆ. ಶಾಂತಿ, ಉತ್ತಮ ಮೌಲ್ಯಗಳು ಮತ್ತು ನಾಗರಿಕರ ಯೋಗಕ್ಷೇಮವನ್ನು ಉತ್ತೇಜಿಸಲು ಬೇಕಾಗಿ ಹಾಗೂ ಆಂತರಿಕ ಗಡಿಗಳಿಲ್ಲದೆ ಸ್ವಾತಂತ್ರ್ಯ, ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಈ ಒಕ್ಕೂಟವನ್ನು ಕಟ್ಟಿಕೊಂಡಿದೆ.

ಇದನ್ನೂ ಓದಿ: ಪ್ಯಾಲೆಸ್ತೀನ್‌‌: ಗಾಝಾ ಮೇಲೆ ಮತ್ತೆ ವಾಯುದಾಳಿ ನಡೆಸಿದ ಇಸ್ರೇಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...