Homeಕರ್ನಾಟಕಹಿರಿಯ ನಟ ಅನಂತ್‌ ನಾಗ್‌ಗೆ ಪದ್ಮ ಪ್ರಶಸ್ತಿ ಆಗ್ರಹಿಸಿ ಆನಲೈನ್‌ ಅಭಿಯಾನ

ಹಿರಿಯ ನಟ ಅನಂತ್‌ ನಾಗ್‌ಗೆ ಪದ್ಮ ಪ್ರಶಸ್ತಿ ಆಗ್ರಹಿಸಿ ಆನಲೈನ್‌ ಅಭಿಯಾನ

ಅನಂತ್‌ ನಾಗ್‌ ಅವರ 5 ದಶಕಗಳ ಸಿನಿ ಪ್ರಯಾಣದಲ್ಲಿ ಒಂದೇ ಒಂದು ರಾಷ್ಟ್ರ ಪ್ರಶಸ್ತಿ ಸಿಗದಿರುವುದು ಆಶ್ಚರ್ಯವನ್ನು ಹುಟ್ಟಿಸುತ್ತದೆ.

- Advertisement -
- Advertisement -

ಸೆಪ್ಟೆಂಬರ್‌ 15ರ ವರೆಗೆ ಪದ್ಮ ಪ್ರಶಸ್ತಿಗೆ ಸಾಧಕರ ಹೆಸರನ್ನು ಸೂಚಿಸುವಂತೆ ಪ್ರಧಾನಿ ಮೋದಿ ಭಾನುವಾರ ದೇಶವಾಸಿಗಳಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಬೇಕೆಂಬ ಆನ್‌ಲೈನ್‌ ಅಭಿಯಾನ ಆರಂಭವಾಗಿದೆ.

ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದು ಅನಂತ್‌ ನಾಗ್‌ ಅವರಿಗೆ ಪದ್ಮ ಪುರಸ್ಕಾರವನ್ನು ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

ಖ್ಯಾತ ನಟ ರಿಷಭ್‌ ಶೆಟ್ಟಿ ಈ ಸಂಬಂಧ ಟ್ವೀಟ್‌ ಮಾಡಿ ಅನಂತ ನಾಗ್ ಕನ್ನಡ ಮತ್ತು ಭಾರತ ಚಲನಚಿತ್ರರಂಗಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ, ಆದ್ದರಿಂದ ಅವರಿಗೆ ಪದ್ಮಾ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಟ ರಕ್ಷಿತ್ ಸೆಟ್ಟಿ, ನಿರ್ದೇಶಕ ಹೇಮಂತ್ ರಾವ್ ಸಾರಿದಂತೆ ಅನೇಕ ನಟ, ನಿರ್ದೇಶಕರು ಅನಂತ್‌ ನಾಗ್‌ ಪದ್ಮ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದಾರೆ ಎಂದು ಹೇಳಿದ್ದು ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾಗುವ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದೆ. ಸಾರ್ವಜನಿಕ ಸೇವೆಗಳನ್ನು ಒಳಗೊಂಡ ಅನೇಕ ವಿಭಾಗಗಳಲ್ಲಿ ವ್ಯಕ್ತಿಗಳ ಸಾಧನೆಗಳನ್ನು ಪರಿಗಣಿಸಿ ವಾರ್ಷಿಕ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ-ಪದ್ಮವಿಭೂಷಣ್ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮಭೂಷಣ್ (ಉನ್ನತ-ಶ್ರೇಣಿಯ ವಿಶಿಷ್ಟ ಸೇವೆ) ಮತ್ತು ಪದ್ಮಶ್ರೀ (ವಿಶಿಷ್ಟ ಸೇವೆ). ಸಾಮಾನ್ಯವಾಗಿ ಪದ್ಮ ಪ್ರಶಸ್ತಿಯನ್ನು ಸಮಿತಿಯಿಂದ ನಾಮನಿರ್ದೇಶನಗೊಂಡ ಸಾಧಕರಿಗೆ ನೀಡಲಾಗುತ್ತದೆ. ಈ ವರ್ಷ ಸರ್ಕಾರ ಸಾರ್ವಜನಿಕರಿಗೂ ಪ್ರಶಸ್ತಿಗೆ ಸಾಧಕರ ಹೆಸರನ್ನು ಸೂಚಿಸುವ ಅವಕಾಶ ನೀಡಿದೆ.

ಇದನ್ನೂ ಓದಿ: ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಮಹಿಳೆಯನ್ನು ಬಂಧಿಸಿದ ಪೊಲೀಸರು

ಅನಂತ್ ನಾಗ್ ಕನ್ನಡ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಮತ್ತು ಹಿಂದಿ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಅನಂತ್ ನಾಗ್ ಕನ್ನಡ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಮತ್ತು ಹಿಂದಿ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಸ್ವತಂತ್ರ ಚಲನಚಿತ್ರಗಳು ಮತ್ತು ಮಾಲ್ಗುಡಿ ಡೇಸ್‌ನಂತಹ ದೂರದರ್ಶನ ಸರಣಿಯಲ್ಲೂ ಕಾಣಿಸಿಕೊಂಡಿದ್ದಾರೆ ಮತ್ತು ನಾಟಕಗಳಲ್ಲಿಯೂ ನಟಿಸಿದ್ದಾರೆ.

ಇದನ್ನೂ ಓದಿ: ವಂಚನೆ ಪ್ರಕರಣ: ವಿವಾದಕ್ಕೆ ತೆರೆ ಎಳೆದಿದ್ದೇವೆ ಎಂದ ನಟ ದರ್ಶನ್

ಅನಂತ್‌ ನಾಗ್‌ ಅವರ ಮನೋಜ್ಞ ಅಭಿನಯಕ್ಕೆ ಇದುವರೆಗೆ 7 ರಾಜ್ಯ ಪ್ರಶಸ್ತಿಗಳು ಒಲಿದು ಬಂದಿವೆ.  ಸಂಕಲ್ಪ (1973) ಎಂಬ ಚಲನಚಿತ್ರದೊಂದಿಗೆ ಪಾದಾರ್ಪಣೆ ಮಾಡಿದ ಹಿರಿಯ ನಟ ನಾಗ್‌ ನಂತರ ಶ್ಯಾಮ್ ಬೆನೆಗಲ್ ಅವರ ಅಂಕುರ್ ಚಿತ್ರದಲ್ಲಿ ಕಾಣಿಸಿಕೊಂಡರು. ಬೆನಗಲ್‌ ಅವರೊಂದಿಗೆ ಸ್ವತಂತ್ರ ಚಲನಚಿತ್ರಗಳ ಸಿನೆಮಾ ಜಗತ್ತಿನಲ್ಲಿ ತೊಡಗಿದರು. ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016) ಚಿತ್ರದಲ್ಲಿನ ಅನಂತ್‌ ನಾಗ್‌  ಅವರ ಅಲ್‌ಜೈಮರ್‌ ರೋಗಿಯ ಪಾತ್ರ ದೇಶ ವಿದೇಶಗಳ ಚಿತ್ರೋತ್ಸವದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು.  

ವಯಸ್ಸು ಮಾಗಿದಂತೆಲ್ಲ ಅನಂತ್‌ ನಾಗ್ ನಟನೆಯಲ್ಲಿ ಮೊನಚು, ಸೂಕ್ಷತೆ ಕಾಣಿಸಿಕೊಳ್ಲುತ್ತಿದ್ದು ಅವರನ್ನು  ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರನ್ನಾಗಿ ಪರಿಗಣಿಸಲಾಗುತ್ತದೆ. ಅಮಿತಾಬ್‌ ಬಚ್ಚನ್‌, ಇರ್ಫಾನ್‌ ಖಾನ್‌, ನಾಸಿರುದ್ದೀನ್‌ ಶಾ, ಕಮಲ್ ಹಾಸನ್, ಪ್ರಕಾಶ್‌ ರಾಜ್‌ ಮುಂತಾದ ಹಿರಿಯ ನಟರಿಗೆ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿಗಳು ಲಭಿಸಿದೆ. ಅನಂತ್‌ ನಾಗ್‌ ಅವರ 5 ದಶಕಗಳ ಸಿನಿ ಪ್ರಯಾಣದಲ್ಲಿ ರಾಷ್ಟ್ರ ಪ್ರಶಸ್ತಿ ಸಿಗದಿರುವುದು ಆಶ್ಚರ್ಯವನ್ನು ಹುಟ್ಟಿಸುತ್ತದೆ.

ಇತ್ತೀಚಿನ ತಮ್ಮ ಕೆಲವು ಹೆಳಿಕೆಗಳಿಂದ ಅನಂತ್‌ ನಾಗ್‌ ಕೆಲವು ವಿವಾದಗಳನ್ನು ಮೈಮೇಲೆ ಎಳೆದು ಕೊಂಡಿದ್ದರು. ಅದರ ಹೊರತಾಗಿ ಅನಂತ್‌ ನಾಗ್‌ ಪದ್ಮ ಪ್ರಶಸ್ತಿಗೆ ಕನ್ನಡ ಚಿತ್ರರಂಗದಿಂದ ಸೂಕ್ತ ಆಯ್ಕೆ ಎಂದು ಹಲವರು ಅಭಿಪ್ರಾಪಟ್ಟಿದ್ದಾರೆ.

ಇದನ್ನೂ ಓದಿ:  ಪದ್ಮ ಪ್ರಶಸ್ತಿಗೆ ಸಾಧಕರ ಹೆಸರು ಸೂಚಿಸುವಂತೆ ದೇಶವಾಸಿಗಳಲ್ಲಿ ಪ್ರಧಾನಿ ಮನವಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....