Photo Courtesy: Indian Express

ದೇಶದ ಅತ್ಯುನ್ನತ ನಾಗರಿಕ ಪ್ರಶ್ತಿಗಳಲ್ಲಿ ಪದ್ಮ ಪ್ರಶಸ್ತಿಗಳಿಗೆ ಅಗ್ರ ಸ್ಥಾನ. ಭಾರತ ರತ್ನದ ನಂತರ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿಗಳನ್ನು ಭಾರತ ಸರ್ಕಾರ ಪ್ರಧಾನ ಮಾಡುತ್ತದೆ. ದೇಶದಲ್ಲಿ ಅತ್ಯುನ್ನತ ಸಾಧನೆ ಮಾಡಿದನ ಕೆಲವೇ ಕೆಲವು ಸಾಧಕರಿಗೆ ಪದ್ಮ ಪ್ರಶಸ್ತಿ ಒಲಿದು ಬರುತ್ತದೆ.

ಪ್ರತಿ ವರ್ಷ ರಾಜ್ಯ ಸರ್ಕಾರಗಳು ಒಂದಷ್ಟು ಸಾಧಕರ ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕಳುಹಿಸುತ್ತಿತ್ತು. ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿ ರಾಜ್ಯ ಕಳುಹಿಸಿದವರಲ್ಲಿ  ಶ್ರೇಷ್ಠ ಸಾಧಕರನ್ನು ಆಯ್ಕೆ ಮಾಡುತ್ತಿತ್ತು. ಈಗ ಪ್ರಧಾನಿಗಳು ನೇರವಾಗಿ ಪ್ರಜೆಗಳಿಗೆ ಪದ್ಮ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಸಾಹಿತ್ಯ, ಕ್ರೀಡೆ, ವಿಜ್ಞಾನ, ಸಾಮಾಜಿಕ ಸೇವೆ, ವೈದ್ಯಕೀಯ ಸೇವೆ ಹೀಗೆ ಹತ್ತು ಹಲವಾರು ಕ್ಷೇತ್ರದ ಸಾಧಕರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ಪದ್ಮವಿಭೂಷಣಕ್ಕೆ ಶಿಫಾರಸು ಮಾಡಿದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಮೇರಿ ಕೋಮ್..

ಪ್ರಧಾನಿ ಮೋದಿಯವರು ದೇಶದ ತಳ ಮಟ್ಟದಲ್ಲಿ ಶ್ರೇಷ್ಠ ಕೆಲಸ ಮಾಡುತ್ತಿರುವ ಅನೇಕರು ಸರ್ಕಾರದ ಸಮಾಜದ ಕಣ್ಣಿಗೆ ಬಿದ್ದಿರುವುದಿಲ್ಲ. ತೆರೆಮರೆಯ ಕಾಯಿಯಂತೆ ಹಲವಾರು ದಶಕಗಳಿಮದ ಸಮಾಜದ ಒಳಿತಿಗೆ ದುಡಿಯುತ್ತಾರೆ. ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ಪದ್ಮ ಪ್ರಶಸ್ತಿಗೆ ಸೂಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಜುಲೈ ೧೧ ರಂದು ಟ್ವೀಟ್‌ ಮಾಡಿದ್ದಾರೆ.

ಸೆಪ್ಟೆಂಬರ್‌ 15 ರ ವರೆಗೆ ನಾಮಿನೇಟ್‌ ಮಾಡುವ ಅವಕಾಶವಿದ್ದು #PeoplesPadma ಹ್ಯಾಷ್‌ ಟ್ಯಾಗ್‌ ಬಳಸಿ ಸಾಧಕರ ಹೆಸರನ್ನು ನೀಡಬಹುದು ಅಥವಾ https://padmaawards.gov.in ಸರ್ಕರದ ವೆಬ್‌ ಸೈಟ್‌ನಲ್ಲಿ ಈ ಕುರಿತು ಮಾಹಿತಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿ ವೆಬ್‌ ಸೈಟ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆಯುತ್ತಿದೆ: ಪದ್ಮವಿಭೂಷಣ ವಾಪಸ್ ಮಾಡಿದ ಪಂಜಾಬ್ ಮಾಜಿ ಸಿಎಂ

4 COMMENTS

 1. ನಮ್ಮ ರಾಜ್ಯದಲ್ಲಿ ರಾಶಿ ಅಂಧ ಭಕ್ತರಿದ್ದಾರೆ ಅವುಗಳಿಗೆ ಒಂದು 4 ಲೋಡ್ ಪ್ರಶಸ್ತಿ ಕಳ್ಸಿ ಅವುಗಳು ಏನೇ ಹೇಳಿದ್ರು ಜೈ ಮೋದಿ ಅಂತವೇ?

 2. ‘ಪದ್ಮ ಪ್ರಶಸ್ತಿಗೆ ಸಾಧಕರ ಹೆಸರು ಸೂಚಿಸಿ!’
  ವಾವ್!
  ‘ಜವರಾಯ ಬಂದರೆ, ಬರಿಗೈಲಿ ಬರಲಿಲ್ಲ;
  ಕುಡುಗೋಲು-ಕೊಡಲೊಂದ ಹೆಗಲೇರಿ!’

  ಕ್ಷಮಿಸಿ, ನನ್ನ ಪಾಸಿಟಿವ್ ತಿಂಕಿಂಗ್ ಸತ್ತುಹೋಗಿದೆ!
  ಇದ್ಯಾವ ಹೊಸ ಹುನ್ನಾರ
  ಎಂಬ ಯೋಚನೆ ತಲೆ ತಿನ್ನತೊಡಗಿದೆ!

LEAVE A REPLY

Please enter your comment!
Please enter your name here