Homeಕರ್ನಾಟಕಕೋವಿಡ್‌ ನಿರ್ಬಂಧ ತೆರವು: ದೊಡ್ಡ ಆಲದ ಮರಕ್ಕೆ ಪ್ರವಾಸಿಗರ ದಂಡು

ಕೋವಿಡ್‌ ನಿರ್ಬಂಧ ತೆರವು: ದೊಡ್ಡ ಆಲದ ಮರಕ್ಕೆ ಪ್ರವಾಸಿಗರ ದಂಡು

ಕೊರೊನಾ ಮತ್ತು ಲಾಕ್‌ ಡೌನ್ ಮನುಷ್ಯ ಪ್ರಾಣಿಗಳ ಬೇಧವಿಲ್ಲದೇ ಎಲ್ಲರನ್ನೂ ಕಂಗೆಡಿಸಿದೆ. ಪ್ರವಾಸಿಗರು ನೀಡುವ ಹಣ್ಣು ಹಂಪಲು ತಿಂಡಿಗಳಿಗೆ ಅಭ್ಯಾಸವಾಗಿದ್ದ ಕೋತಿಗಳು ಕಳೆದ 3 ತಿಂಗಳಿನಲ್ಲಿ ಆಹಾರ ವಿಲ್ಲದೇ ಮೃತಪಟ್ಟಿವೆ.

- Advertisement -
- Advertisement -

ಕೋವಿಡ್‌ ನಿರ್ಬಂಧಗಳು ತೆರವಾಗುತ್ತಿದ್ದಂತೆ ಬೆಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೆಜೆಸ್ಟಿಕ್, ಯಶವಂತಪುರ ರೈಲ್ವೆ ನಿಲ್ಧಾಣಗಳು ಪ್ರಯಾಣಿಕರಿಂದ ತುಂಬಿ ತುಳುಕಾಡುತ್ತಿವೆ. ಹಾಗೆ ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ಕಲರವ ಕೇಳಿ ಬರಲಾರಂಭಿಸಿದ್ದು ನಗರದ ಸುತ್ತಮುತ್ತದ ಸ್ಥಳಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ. ಮಳೆಯ ತಂಪಾದ ವಾತಾವರಣ ಕೂಡ ಇದಕ್ಕೆ ಸಹಕಾರ ನೀಡಿದ್ದು ಇಂದು ನಗರದ ಅನೇಕ ಕಡೆ ಆರ್ಥಿಕ ಮತ್ತು ಪ್ರವಾಸೋದ್ಯಮದ ಚಟುವಟಿಕೆಗಳು ಚೇತರಿಸಿಕೊಂಡಿರುವುದು ಕಂಡು ಬಂದಿದೆ.

ನಗರದ ಹೊರ ವಲಯದಲ್ಲಿರುವ ಪುರಾತನ ದೊಡ್ಡ ಆಲದ ಮರವನ್ನು ನೋಡಲು ಇಂದು ಪ್ರವಾಸಿಗಳು  ಭೇಟಿ ನೀಡಿದ್ದು ಸುತ್ತಲಿನ ವ್ಯಾಪರಸ್ಥರ ಮುಖದಲ್ಲಿ ಒಂದಷ್ಟು ಗೆಲುವಿನ ಕಳೆ ಮೂಡಿದೆ.

ಇದನ್ನೂ ಓದಿ: ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಸರಿ ಸುಮಾರು ಮೂರು ತಿಂಗಳಿನಿಂದ ಬಂದ್‌ ಆಗಿದ್ದ ದೊಡ್ಡ ಆಲದ ಮರ ಈ ವಾರ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿದೆ. ತಿಂಗಳುಗಳ ಕಾಲ ಮನೆಯಲ್ಲಿಯೇ ಕುಳಿತಿದ್ದ ಜನರು ಇಂದು ತಮ್ಮ ತಮ್ಮ ವಾಹನ ಮತ್ತು ಆಟೋ ರಿಕ್ಷಾದಲ್ಲಿ ಪುರಾತನ ದೊಡ್ಡ ಆಲದ ಮರಕ್ಕೆ ತೆರಳಿ ಪುಳಕಗೊಂಡರು.

ಬೆಂಗಳೂರಿನಲ್ಲಿ ಅನೇಕರಿಗೆ ದೊಡ್ಡ ಆಲದ ಮರದ ಪರಿಚಯ ಇದೆ. ಇನ್ನು ಕೆಲವರಿಗೆ ನಮ್ಮ ಸುತ್ತಲಿನ ಪ್ರದೇಶದ ಮಾಹಿತಿ ಇಲ್ಲ. ದೊಡ್ಡ ಆಲದ ಮರದ ವಿಶೇಷತೆ ಏನು? ಯಾಕಿದು ಪ್ರವಾಸಿ ತಾಣ ಎಂಬುದು ಹೆಚ್ಚು ಮುನ್ನೆಲೆಗೆ ಬಂದಿಲ್ಲ.

ಇದನ್ನೂ ಓದಿ: ಮುತ್ತು ಸುತ್ತು; ಸಾವನದುರ್ಗ: ಪ್ರಪಂಚದ ಅತಿದೊಡ್ಡ ಏಕಶಿಲಾ ಬೆಟ್ಟವಿದು, ಶಕ್ತಿಯಿದ್ದಷ್ಟು ಹತ್ತಿ ನೋಡ!

ದೊಡ್ಡ ಆಲದ ಮರ ಅಥವಾ ಬಿಗ್ ಬ್ಯಾನಿಯನ್ ಟ್ರೀ 

4-

ಇದೇನಪ್ಪಾ ಆಲದ ಮರವನ್ನು ಯಾವತ್ತೂ ನೋಡೇ ಇಲ್ವಾ ಅಂತಾ ನೀವು ಯೋಚಿಸಿರುವಿರಿ. ಆದರೆ ಇವತ್ತು ನಾವು ನಿಮಗೆ ಹೊರಟಿರುವ ಆಲದ ಮರ ಅಂತಿಂಥ ಆಲದ ಮರವಲ್ಲ. ಇದು ಸುಮಾರು 95  ಫೀಟ್‌ ಎತ್ತರ ಹಾಗೂ 400 ವರ್ಷಗಳ ಇತಿಹಾಸವನ್ನು ಹೊಂದಿರುವ ವಿಶೇಷ ಆಲದ ಮರ. ಬೆಂಗಳೂರು ದಕ್ಷಿಣದ ಕೇತೋಹಳ್ಳಿಯಲ್ಲಿರುವ ಈ ಆಲದ ಮರವನ್ನು ದೊಡ್ಡ ಆಲದ ಮರ ಅಥವಾ ಬಿಗ್ ಬ್ಯಾನಿಯನ್ ಟ್ರೀ ಎಂದೂ ಕರೆಯುತ್ತಾರೆ. ಇದು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ಆಕರ್ಷಣೆಯಾಗಿ ಬೆಳೆದಿದ್ದು ರಾಜ್ಯದ ಇಕೋ ಟೂರಿಸಂನ ಒಂದು ಭಾಗವಾಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೂ ಬಂತು ವಿಸ್ಟಾಡೋಮ್ ರೈಲು: ಮಂಗಳೂರು-ಬೆಂಗಳೂರು ನಡುವೆ ಮೊದಲ ಓಡಾಟ

400-

ಈ ಆಲದ ಮರವು ಭಾರತದ ಪುರಾತನ ಆಲದ ಮರಗಳಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ. ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ. ಇಲ್ಲಿ ಒಂದು ಪುರಾತನ ಮುನೀಶ್ವರ ದೇವರ ದೇವಾಲಯ ಕೂಡಾ ಇದೆ.

ಇದನ್ನೂ ಓದಿ: ಕೋವಿಡ್‌ ನಿರ್ಬಂಧ ತೆರವು : ಪ್ರವಾಸಿ ತಾಣಗಳತ್ತ ಜನ-ಹಂಪಿಯಲ್ಲಿ ಜನ ಜಂಗುಳಿ

ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಈ ದೊಡ್ಡ ಆಲದ ಮರದ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಆಲದ ಮರದ ಸುತ್ತಮುತ್ತಲಿನ ಪ್ರದೇಶಕ್ಕೆ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಿದೆ. ಈ ಮರದ ಸುತ್ತಲೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ.

ಈಗ ನೋಡುತ್ತಿರುವ ಆಲದ ಮರವು ಹಲವು ವರ್ಷಗಳ ಹಿಂದೆ ಇನ್ನೂ ದೊಡ್ಡದಾಗಿತ್ತು, ಆದರೆ ಯಾವುದೋ ನೈಸರ್ಗಿಕ ಕಾಯಿಲೆಗೆ ಒಳಗಾಗಿ ನಶಿಸಿತು. ಆದ್ದರಿಂದ ಮರವು ಈಗ ಅನೇಕ ವಿಭಿನ್ನ ಮರಗಳಂತೆ ಕಾಣಿಸುತ್ತದೆ.

ಒಟ್ಟಾರೆಯಾಗಿ ವೀಕೆಂಡ್‌ ಕರ್ಪ್ಯೂ ತೆರವಾದ ಮೊದಲ ವೀಕೆಂಡ್‌ನಲ್ಲಿ ಭಾನುವಾರ ಸಂಜೆ ಹೊತ್ತಿನಲ್ಲಿ  ಹತ್ತಾರು ಪ್ರವಾಸಿಗರು ಪ್ರಶಾಂತವಾಗಿ ಕಾಲಕಳೆದಿದ್ದಾರೆ.  ಕಲ್ಲು ಬೆಂಚುಗಳಲ್ಲಿ ಕುಳಿತು ಹರಟೆ ಹೊಡೆಯುತ್ತಾ  ಕೋತಿಗಳ ಚೇಷ್ಟೆಯನ್ನು ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ.

ದೊಡ್ಡ ಆಲದ ಮರದಲ್ಲಿ ಕೋತಿಗಳ ಸಂಭ್ರಮ

ಪ್ರವಾಸಿಗರು ನೀಡುವ ಹಣ್ಣು ಹಂಪಲು ತಿಂಡಿಗಳಿಗೆ ಅಭ್ಯಾಸವಾಗಿದ್ದ ಕೋತಿಗಳು ಕಳೆದ 3 ತಿಂಗಳು ಸಾಕಷ್ಟು ಕಷ್ಟಪಟ್ಟವು. ಕೆಲವು ನಗರ ಪ್ರದೇಶಕ್ಕೆ ಹೋದವು. ಒಂದಷ್ಟು ಚಿಕ್ಕ ಕೋತಿಗಳು ಹಸಿವಿನಿಂದ ಮೃತಪಟ್ಟಿವೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ಮತ್ತು ಲಾಕ್‌ ಡೌನ್ ಮನುಷ್ಯ ಪ್ರಾಣಿಗಳ ಬೇಧವಿಲ್ಲದೇ ಎಲ್ಲರನ್ನೂ ಕಂಗೆಡಿಸಿದೆ.  3ನೇ ಅಲೆಯ ಭೀತಿಯ ನಡುವೆ ನಿಟ್ಟುಸಿರಿಗೊಂದಷ್ಟು ಅವಕಾಶ ಸಿಕ್ಕಿದೆ. ಎಚ್ಚರಿಕೆಯ ನಡುವೆ ಅಚ್ಚರಿಯ ಹುಡುಕಾಟಕ್ಕೆ ದೊಡ್ಡ ಆಲದ ಮರ ಒಂದು ಪ್ರಶಸ್ತ ತಾಣ. ವಿಶ್ರಾಂತಿ, ವಿಜ್ಞಾನ ಎರಡನ್ನೂ ಒಟ್ಟಿಗೆ ನೀಡುವ ಬಿಗ್‌ ಬ್ಯಾನಿಯನ್‌  ಟ್ರೀ ನಮ್ಮ ಮುಂದಿನ ಪ್ರವಾಸಕ್ಕೆ ಪ್ರಶಸ್ತ ನಿಲ್ಧಾಣ.

-ರಾಜೇಶ್‌ ಹೆಬ್ಬಾರ್‌

ಇದನ್ನೂ ಓದಿ: ಕೈ ಬೀಸಿ ಕರೆಯಲಿರುವ ಕೇರಳ…ಪ್ರವಾಸಿ ತಾಣಗಳು ಪುನರಾರಂಭ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...