Homeಕರ್ನಾಟಕಕೋವಿಡ್‌ ನಿರ್ಬಂಧ ತೆರವು : ಪ್ರವಾಸಿ ತಾಣಗಳತ್ತ ಜನ-ಹಂಪಿಯಲ್ಲಿ ಜನ ಜಂಗುಳಿ

ಕೋವಿಡ್‌ ನಿರ್ಬಂಧ ತೆರವು : ಪ್ರವಾಸಿ ತಾಣಗಳತ್ತ ಜನ-ಹಂಪಿಯಲ್ಲಿ ಜನ ಜಂಗುಳಿ

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ಎರಡನೆಯ ಅಲೆ ಕಡಿಮೆಯಾಗುತ್ತಿದ್ದಂತೆ ಅನ್ ಲಾಕ್ ಪ್ರಕ್ರಿಯೆ ತೀವ್ರಗೊಂಡಿದೆ. ಪ್ರವಾಸಿ ತಾಣಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಸರ್ಕಾರ ಸಡಿಲಗೊಳಿಸಿದೆ. ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಪಾಲಿಸಿ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶವನ್ನು ಮಾಡಿಕೊಡಲಾಗಿದೆ. ಪ್ರವಾಸಿ ತಾಣಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗುತ್ತಿದ್ದಂತೆ ಎಲ್ಲೆಡೆ ಜನರು ಒಮ್ಮೆಲೇ ಮುಗಿ ಬೀಳುತ್ತಿದ್ದಾರೆ.

ಸುಮಾರು 3 ತಿಂಗಳು ಮನೆಯಲ್ಲಿಯೇ ಕುಳಿತಿದ್ದ ಜನರು ರೆಕ್ಕ ಬಲಿತ ಹಕ್ಕಿಗಳಂತೆ ನಾಡಿನ ಪ್ರವಾಸಿ ತಾಣಗಳಿಗೆ ಟೆಂಪೊ, ವ್ಯಾನು, ಬಸ್ಸು ಕಾರುಗಳಲ್ಲಿ ತೆರಳಿದ್ದಾರೆ. ನಿರ್ಬಂಧಗಳನ್ನು ಸಡಿಲಿಸಿ ವಾರ ಕಳೆಯುವ ಮುನ್ನವೇ ಮೈಸೂರು, ಹಂಪಿ, ಚಿಕ್ಕಮಗಳೂರು, ಸಕಲೇಶಪುರ, ಜೋಗ ಜಲಪಾತದಲ್ಲಿ ಜನ ಸಂದಣಿ ಸೇರಿದೆ. ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕು, ಸಾಮಾಜಿಕ ಅಂತರವನ್ನು ಮರೆತಿರುವ ಚಿತ್ರಗಳು ಸರ್ವೇ ಸಾಮಾನ್ಯವಾಗಿದೆ.

ವಿಶ್ವವಿಖ್ಯಾತ ಹಂಪಿಗೆ ವೀಕೆಂಡ್ ಹಿನ್ನಲೆಯಲ್ಲಿ ಇಂದು ಸಾಕಷ್ಟು ಜನ ಪ್ರವಾಸಿಗರು ಆಗಮಿಸಿದ್ದಾರೆ, ಕಳೆದ ಎರಡು ವಾರ ವೀಕೆಂಡ್ ಲಾಕ್ ಡೌನ್ ಇದ್ದು, ಈ ಕಾರಣಕ್ಕಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಈ ವಾರದಿಂದ ವೀಕೆಂಡ್ ಕರ್ಫ್ಯೂ ಇಲ್ಲದ ಕಾರಣಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ.

ವಿರುಪಾಕ್ಷ ದೇವಾಲಯ, ವಿಜಯ ವಿಠ್ಠಲ ಮಂದಿರ ಸೇರಿದಂತೆ ಇಲ್ಲಿ ಪ್ರಾವಾಸಿ ತಾಣಗಳಲ್ಲಿ ಆಗಮಿಸಿದ್ದಾರೆ, ಬಂದಿರುವ ಪ್ರವಾಸಿಗರಲ್ಲಿ ಬಹುತೇಕತರು ಮಾಸ್ಕ್ , ಸಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ಪ್ರವಾಸಿ ತಾಣಗಳಲ್ಲಿ ಬರುವವರು ಸಮಾಜಿಕ ಅಂತರ ಮರೆತಿದ್ದಾರೆ.

ಹಂಪಿಯಲ್ಲಿ ಇಕೋ ಟೂರಿಸಂ ಇರುವುದರಿಂದ ಎಲೆಕ್ಟ್ರಿಕ್‌ ವಾಹನಗಳಲ್ಲಿ ಸಂಚರಿಸಬೇಕು, ಎಲೆಕ್ಟ್ರಿಕ್ ವಾಹನಗಳಲ್ಲಿ ಫುಲ್ ಆಗಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಪ್ರವಾಸಿಗರ ನಿರ್ಲಕ್ಷ್ಯ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೊರೊನಾ ಮೂರನೆಯ ಅಲೆಗೆ ಹಂಪಿಯ ಪ್ರವಾಸಿ ತಾಣಗಳು ಆಹ್ವಾನ ನೀಡುವಂತೆ ಆಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೂ ಬಂತು ವಿಸ್ಟಾಡೋಮ್ ರೈಲು: ನಾಳೆ ಮಂಗಳೂರು-ಬೆಂಗಳೂರು ನಡುವೆ ಮೊದಲ ಓಡಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...