ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್ ಸೇರಿದಂತೆ ಪಶ್ಚಿಮ ಏಷ್ಯಾದ ವಿಷಯದಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪ್ಯಾಲೆಸ್ತೀನ್ ಸಮಸ್ಯೆಗೆ ಶಾಂತಿಯುತ ಪರಿಹಾರಕ್ಕಾಗಿ ಮಾತುಕತೆ ಮುಂದುವರಿಯಬೇಕು ಎಂಬುದು ಭಾರತದ ನಿಲುವು ಎಂದು ಖಾಯಂ ಪ್ರತಿನಿಧಿ ಟಿ.ಎಸ್.ತಿರೂಮೂರ್ತಿ ಹೇಳಿದ್ದು, ಮಧ್ಯಪ್ರಾಚ್ಯದ ಪರಿಸ್ಥಿತಿ ಕುರಿತು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನ್ನ ನಿಲುವನ್ನು ಪುನರುಚ್ಚರಿಸಿತು.
ಸಂಘರ್ಷವನ್ನು ಕೊನೆಗೊಳಿಸಲು ನ್ಯಾಯಯುತ ಮತ್ತು ಸ್ವೀಕಾರಾರ್ಹ ಒಪ್ಪಂದವಾಗಿ ದ್ವಿರಾಷ್ಟ್ರ ಪರಿಹಾರವನ್ನು ಭಾರತ ಬೆಂಬಲಿಸಿದ್ದು, ಎರಡು ಕಡೆ ನೇರ ಮಾತುಕತೆಯ ಮೂಲಕ ಪರಸ್ಪರ ಒಪ್ಪಿದ ಗಡಿಗಳನ್ನು ಸಾಕಾರಗೊಳಿಸಬೇಕು ಎಂದು ಭಾರತ ಗಮನಸೆಳೆದಿದೆ.
ಇದನ್ನೂ ಓದಿ: ಸಿಂಧೂ ನದಿ ನಾಗರಿಕತೆ ನಿರ್ಮಾಣದಲ್ಲಿ ಸ್ಟೆಪ್ ಮೂಲದ ಆರ್ಯ ವೈದಿಕರ ಪಾತ್ರವಿಲ್ಲ: ಅದನ್ನು ಕಟ್ಟಿದವರು ದಕ್ಷಿಣ ಏಷಿಯನ್ನರು
ಯಾವುದೇ ಬಿಕ್ಕಟ್ಟುಗಳು ಭಯೋತ್ಪಾದಕರ ಕೈಗಳನ್ನು ಬಲಪಡಿಸುತ್ತದೆ ಮತ್ತು ಸಹಕಾರದ ಬಾಗಿಲನ್ನು ಮುಚ್ಚುತ್ತದೆ ಎಂದಿರುವ ಭಾರತ, ಇದು ಪ್ರದೇಶದ ಜನರ ಸುರಕ್ಷತೆ, ಸ್ಥಿರತೆ ಮತ್ತು ಸಮೃದ್ಧಿಗೆ ಧಕ್ಕೆ ತರುತ್ತದೆ ಎಂದು ಹೇಳಿದೆ.
ಸಂಸತ್ತು ಮತ್ತು ಅಧ್ಯಕ್ಷೀಯ ಚುನಾವಣೆ ಸೇರಿದಂತೆ ಪ್ಯಾಲೇಸ್ತೀನಿಯನ್ ರಾಷ್ಟ್ರೀಯ ಮಂಡಳಿಗೆ ಚುನಾವಣೆಗಳನ್ನು ನಡೆಸುವ ಎರಡು ಪ್ಯಾಲೇಸ್ತೀನಿಯನ್ ರಾಜಕೀಯ ಪಕ್ಷಗಳಾದ ಫತಾಹ್ ಮತ್ತು ಹಮಾಸ್ ನಡುವಿನ ಒಪ್ಪಂದವನ್ನು ಭಾರತ ಸ್ವಾಗತಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದವು ಗಾಜಾದ ಪರಿಸ್ಥಿತಿಯನ್ನು ಸಡಿಲಗೊಳಿಸಿದೆ, ಮಧ್ಯಂತರ ಒಪ್ಪಂದವೂ ಶಾಶ್ವತ ಕದನ ವಿರಾಮವಾಗಿ ಪರಿವರ್ತಿಸಲಾಗುವುದನ್ನು ಭಾರತ ನೀರೀಕ್ಷಿಸಿದ್ದು, ಇದು ಎರಡೂ ಕಡೆಗಳಲ್ಲಿ ಅಮೂಲ್ಯವಾದ ಮಾನವ ಜೀವಗಳನ್ನು ಉಳಿಸಬಹುದು ಮತ್ತು ಮಾತುಕತೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಭಾರತ ಸೂಚಿಸಿದೆ.
ಇದನ್ನೂ ಓದಿ: ಸರ್ವಾಧಿಕಾರಿ ಘಟಸರ್ಪಗಳು: ಅಳಿಸಲೂ, ಉಳಿಸಲೂ ನೂರೆಂಟು ನೆಪ
