ರಾಯ್ಟರ್ಸ್‌ನ ಮುಖ್ಯ ಫೋಟೋಗ್ರಾಫರ್ ಆಗಿದ್ದ ದಾನಿಶ್ ಸಿದ್ದೀಕಿ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಹತರಾಗಿದ್ದಾರೆ ಎಂದು ಶುಕ್ರವಾರ ವರದಿಯಾಗಿದೆ. ವಿಶ್ವಪ್ರಸಿದ್ದ ದಿಟ್ಟ ಪತ್ರಕರ್ತನ ಸಾವಿಗೆ ಬಲಪಂಥೀಯರು ಸಂಭ್ರಮಿಸುತ್ತಿದ್ದು, ಇದಕ್ಕೆ ಪ್ರಕತಿಕ್ರಿಯಸಿರುವ ಆಲ್ಟ್‌ನ್ಯೂಸ್ ಸಂಸ್ಥಾಪಕ ಪ್ರತೀಕ್ ಸಿನ್ಹಾ, “ನಾವು ನಮ್ಮದೆ ತಾಲೀಬಾನ್ ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನ್‌ನ ಪ್ರಮುಖ ಗಡಿಯಾಗಿರುವ ‘ಸ್ಪಿನ್ ಬೋಲ್ಡಾಕ್’ನ ಬಾರ್ಡರ್ ಕ್ರಾಸಿಂಗ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು. ಈ ಪ್ರಮುಖ ಗಡಿಯನ್ನು ಹಿಂಪಡೆಯಲು ಕಾರ್ಯಾಚರಣೆ ಪ್ರಾರಂಭಿಸಿದ್ದ ಅಫ್ಘಾನ್ ಪಡೆಗಳು ಸ್ಪಿನ್ ಬೋಲ್ಡಾಕ್‌ನಲ್ಲಿ ತಾಲಿಬಾನ್ ಬಂಡುಕೋರರೊಂದಿಗೆ ಘರ್ಷಣೆ ನಡೆಸಿದ್ದವು, ಈ ವೇಳೆ ಪತ್ರಕರ್ತ ದಾನಿಶ್ ಸಿದ್ದೀಕಿ ಹತರಾಗಿದ್ದಾರೆ.
ಇದನ್ನೂ ಓದಿ: ಅಫ್ಘಾನ್‌ನಲ್ಲಿ ಹತರಾದ ಖ್ಯಾತ ಫೋಟೊ ಜರ್ನಲಿಸ್ಟ್ ದಾನಿಶ್ ಕ್ಲಿಕ್ಕಿಸಿದ ಕೆಲವು ಫೋಟೊಗಳು!
ವಿಶ್ವದ ಪ್ರಮುಖ ಪತ್ರಕರ್ತನ ಸಾವಿಗೆ ಬಲಪಂಥೀಯರು ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪತ್ರಕರ್ತ ಪ್ರತೀಕ್ ಸಿನ್ಹಾ, “ನೀವು ಇಂದು ಟ್ವಿಟ್ಟರ್‌ನಲ್ಲಿನ ದ್ವೇಷವನ್ನು ನೋಡಿದ್ದೀರಾ? ದಿಟ್ಟ ಪತ್ರಕರ್ತನ ಸಾವಿಗೆ ಜನರು ಸಂಭ್ರಮಿಸುತ್ತಿದ್ದಾರೆ? ಈ ದ್ವೇಷವನ್ನು ನಾವು ನಿರ್ಲಕ್ಷಿಸಲು ಬಯಸುತ್ತೀರಾ? ಈ ದ್ವೇಷವು ತೀವ್ರವಾದಿ ಆಗುತ್ತಿರುವ ಅಥವಾ ಈಗಾಗಲೇ ತೀವ್ರವಾದಿಗಳಾಗಿರುವ ಜನರಿಂದ ಬರುತ್ತಿದೆ. ನಾವು ನಮ್ಮದೇ ತಾಲಿಬಾನ್ ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಹೇಳಿದ್ದಾರೆ.
Did you see the hate on Twitter today? People cheering the death of a brave journalist? Do we want to keep ignoring this hate? This hate is coming from people who are getting radicalised or are already radicalised. We are in the process of creating our own Taliban.
— Pratik Sinha (@free_thinker) July 16, 2021
2018 ರಲ್ಲಿ ತನ್ನ ‘ಫೀಚರ್ ಫೋಟೋಗ್ರಾಫಿ’ ಸರಣಿಗಾಗಿ ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿಯನ್ನು ಅವರು ಪಡೆದಿದ್ದರು. ಆ ವರ್ಷ ರಾಯ್ಟರ್ಸ್‌ನ ಒಟ್ಟು ಏಳು ಪತ್ರಕರ್ತರಿಗೆ ಪ್ರಶಸ್ತಿ ಬಂದಿದ್ದು, ಅದರಲ್ಲಿನ ಇಬ್ಬರು ಭಾರತೀಯರಲ್ಲಿ ದಾನಿಶ್ ಸಿದ್ದೀಕಿ ಒಬ್ಬರಾಗಿದ್ದಾರೆ. ಅಂದಿನ ಅವರ ಫೋಟೊ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿತ್ತು.
ಇದನ್ನೂ ಓದಿ: ರಾಯ್ಟರ್ಸ್‌ನ ಖ್ಯಾತ ಫೋಟೋಗ್ರಾಫರ್ ದಾನಿಶ್ ಸಿದ್ದೀಕಿ ಅಫ್ಘಾನ್ ಘರ್ಷಣೆಯಲ್ಲಿ ಹತ
ದಾನಿಶ್ ಅವರು, ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆಗಳು, ನೇಪಾಳ ಭೂಕಂಪಗಳು, ಉತ್ತರ ಕೊರಿಯಾದಲ್ಲಿ ನಡೆದ ಕ್ರೀಡಾಕೂಟಗಳ ವರದಿಗಳ ಸಹಿತ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ವರದಿಗಳನ್ನು ಮಾಡಿದ್ದರು.
ಕಳೆದ ವರ್ಷ ದೇಶದಲ್ಲಿ ಕೊರೊನಾ ಪತ್ತೆಯಾದಾಗ, ಯಾವುದೆ ಪೂರ್ವ ತಯಾರಿ ಇಲ್ಲದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಅವೈಜ್ಞಾನಿಕ ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರು ಪಟ್ಟ ಬವಣೆಗೆಗಳು, ಕೊರೊನಾ ಎರಡನೆ ಅಲೆಯ ಸಮಯದಲ್ಲಿ ದೇಶದ ಸ್ಮಶಾನದಲ್ಲಿನ ಚಿತ್ರಣಗಳನ್ನು ಮತ್ತು ಜನರ ಸಂಕಷ್ಟಗಳನ್ನು ಅವರು ಸಮರ್ಪಕವಾಗಿ ಸೆರೆ ಹಿಡಿದು ಜನರ ಮುಂದೆ ಇಟ್ಟಿದ್ದರು. ಅಷ್ಟೇ ಅಲ್ಲದೆ CAA-NRC-NPR ವಿರೋಧಿ ಹೋರಾಟದ ಸಮಯದಲ್ಲಿ ನಡೆದ ಘಟನೆಗಳು ಹಾಗೂ ದೆಹಲಿ ಗಲಭೆಯ ಕ್ರೂರ ಚಿತ್ರಗಳನ್ನು ಅವರು ಸೆರೆ ಹಿಡಿದಿದ್ದರು.
ಇದನ್ನೂ ಓದಿ: ರಾಯ್ಟರ್ಸ್ ವರ್ಷದ ಫೋಟೋವಾಗಿ ದೆಹಲಿ ಹಿಂಚಾಚಾರದ ಚಿತ್ರ ಆಯ್ಕೆ!



ಹೌದು..ನಾವು ನಮ್ಮದೇ ತಾಲಿಬಾನ್ ರಚಿಸುವ ಅದರೊಟ್ಟಿಗೆ ಅಲ್ ಖೈದಾ,ಹಿಜ್ಬುಲ್ ಮುಜಾಹಿದ್ದೀನ್,isis ರಚನೆಯಲ್ಲಿ ನಿರತರಾದಂತೆ ಇದೆ.
ಇದು ಈಗ ಅನುವಾರ್ಯವಿದೆಯೇ?
ಏಕೆಂದರೆ ಭಾರತದಲ್ಲಿ ಇಂತಹ ಸಂಘಟನೆಗಳು ಇಲ್ಲದೆ ಇರುವುದರಿಂದ…ಇಲ್ಲಿರುವುದು ಕೇವಲ ….ಅಲ್ಲವೇ..?