ಮಾಜಿ ಶಿಕ್ಷಣ ಸಚಿವ, ಬಿಎಸ್‌ಪಿಯ ಉಚ್ಛಾಟಿತ ಕೊಳ್ಳೇಗಾಲ ಶಾಸಕ, ಎನ್.ಮಹೇಶ್ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ತಾನು ಬಿಜೆಪಿಗೆ ಹೋಗುವ ಬಗ್ಗೆ ತಮ್ಮ ಬೆಂಬಲಿಗರು ಮತ್ತು ಮುಖಂಡರ ಅಭಿಪ್ರಾಯ ಏನೆಂದು ತಿಳಿಯಲು ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೊಳ್ಳೇಗಾಲ ತಾಲೂಕಿನ ಕುರುಬನಕಟ್ಟೆಯಲ್ಲಿ ಮಹೇಶ್ ಅವರು ಶನಿವಾರ ಸುಮಾರು 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ತಮ್ಮ ಕ್ಷೇತ್ರ ಅಭಿವೃದ್ಧಿಯಾಗಬೇಕೆಂದರೆ ಆಡಳಿತ ಪಕ್ಷದಲ್ಲಿರುವುದು ಸೂಕ್ತ. ಅದಕ್ಕಾಗಿ ತಾವು ಬಿಜೆಪಿ ಸೇರಲು ಚಿಂತಿಸಿರುವುದಾಗಿ ಎಂದು ಅವರು ತಮ್ಮ ಬೆಂಬಲಿಗರಿಗೆ ಮನವೊಲಿಸಲು ಮುಂದಾದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.
ಇದನ್ನೂ ಓದಿ: ರೈತ ಆಂದೋಲನದ ಹೆಸರಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯ: ಮಾಯಾವತಿ
ಶಾಸಕ ಮಹೇಶ್ ಅವರು ಬಿಜೆಪಿ ಸೇರಲು ಯಾವುದೇ ಅಭ್ಯಂತರವಿಲ್ಲ ಎಂದು ಹಲವು ಮುಖಂಡರು ಮತ್ತು ಬೆಂಬಲಿಗರು ಈಗಾಗಲೆ ಹೇಳಿದ್ದಾರೆ ಎಂದು ತಿಳಿದು ಬಂದಿದ್ದು, ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಗೂ ಮುನ್ನ ಶಾಸಕ ಮಹೇಶ್ ಬಿಜೆಪಿ ಸೇರ್ಪಡೆಯಾಗುವುದು ಖಚಿತ ಎನ್ನಲಾಗದೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಶಾಸಕ ಮಹೇಶ್ ಅವರ ಆಪ್ತರೊಬ್ಬರು, “ಎನ್. ಮಹೇಶ್ ಬಿಜೆಪಿ ಸೇರುತ್ತಿರುವುದು 100% ನಿಜ. ಕ್ಷೇತ್ರದ ಶ್ರೇಯೋಭಿವೃದ್ದಿ ಆಗಬೇಕಾದರೆ ಅವರು ಆಡಳಿತ ಪಕ್ಷದೊಂದಿಗೆ ಕೈಜೋಡಿಸುತ್ತಿರುವುದು ಸರಿಯಾಗಿದೆ” ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್ ಕೆಲ ಸಮಯದಲ್ಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆಪರೇಷನ್ ಕಮಲ ಸಮಯದಲ್ಲಿ ಸದನಕ್ಕೆ ಗೈರಾಗಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.
ಇದನ್ನೂ ಓದಿ: ದ್ಯಾನಿಶ್ ಸಿದ್ದೀಕಿ ಮೃತದೇಹ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಅಂತ್ಯಕ್ರಿಯೆ



ಸಾಮಾನ್ಯ ದಲಿತರು ಬಿಜೆಪಿ ಯ ಬೆಂಬಲಿಗರ ದಾಳಿಗೆ ಗುರಿಯಾಗುತ್ತಾರೆ. ದಲಿತರ ನಾಯಕರು ಯಾವುದೋ ನೆಪ ಹೇಳಿಕೊಂಡು ಬಿಜೆಪಿ ಯ ಸದಸ್ಯರಾ ಗುತ್ತಾರೆ. ಇದು ಅಧಿಕಾರ ಕೇಂದ್ರಿತ ಚುನಾವಣಾ ರಾಜಕಾರಣ.