Homeಮುಖಪುಟದ್ಯಾನಿಶ್ ಸಿದ್ದೀಕಿ ಮೃತದೇಹ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಅಂತ್ಯಕ್ರಿಯೆ

ದ್ಯಾನಿಶ್ ಸಿದ್ದೀಕಿ ಮೃತದೇಹ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಅಂತ್ಯಕ್ರಿಯೆ

- Advertisement -
- Advertisement -

ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್ ದ್ಯಾನಿಶ್ ಸಿದ್ದೀಕಿ ಅವರ ಮೃತಶರೀರವನ್ನು ಜಾಮಿಯಾ ಸ್ಮಶಾನದಲ್ಲಿ ಸಮಾಧಿ ಮಾಡಲಾಗುವುದು ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಭಾನುವಾರ ತಿಳಿಸಿದೆ. ಸ್ಮಶಾನವನ್ನು ಸಾಮಾನ್ಯವಾಗಿ ಜಾಮಿಯಾ ನೌಕರರು, ಅವರ ಸಂಗಾತಿಗಳು ಮತ್ತು ಅಪ್ರಾಪ್ತ ಮಕ್ಕಳ ಮೃತದೇಹಗಳಿಗಾಗಿ ಕಾಯ್ದಿರಿಸಲಾಗಿದೆಯಾದರೂ, ಸಿದ್ದೀಕಿಗಾಗಿ ವಿನಾಯಿತಿ ನೀಡಲಾಗುವುದು ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಹೇಳಿದ್ದಾರೆ.

ವಿಶ್ವದ ಖ್ಯಾತ ಫೋಟೋ ಜರ್ನಲಿಸ್ಟ್‌‌ ಆಗಿರುವ 39 ವರ್ಷದ ದ್ಯಾನಿಶ್‌ ಸಿದ್ದೀಕಿ ಜಾಮಿಯಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. “ಅವರ ದೇಹವನ್ನು ಜಾಮಿಯಾ ಸ್ಮಶಾನದಲ್ಲಿ ಹೂಳಬೇಕೆಂದು ಸಿದ್ದೀಕಿ ಅವರ ಕುಟುಂಬವು ಮಾಡಿದ ಮನವಿಯನ್ನು ಉಪಕುಲಪತಿ ಅಂಗೀಕರಿಸಿದ್ದಾರೆ” ಎಂದು ಪಿಆರ್‌‌ಒ ಅಹ್ಮದ್ ಅಜೀಮ್ ಹೇಳಿದ್ದಾರೆ.

ಇದನ್ನೂ ಓದಿ: ಅಫ್ಘಾನ್‌‌ನಲ್ಲಿ ಹತರಾದ ಖ್ಯಾತ ಫೋಟೊ ಜರ್ನಲಿಸ್ಟ್‌‌ ದಾನಿಶ್ ಕ್ಲಿಕ್ಕಿಸಿದ ಕೆಲವು ಫೋಟೊಗಳು!

ಸಿದ್ದೀಕಿ ಅವರ ಕುಟುಂಬವು ಜಾಮಿಯಾದೊಂದಿಗೆ ದೀರ್ಘ ಸಂಪರ್ಕವನ್ನು ಹೊಂದಿದ್ದು, ಅವರ ತಂದೆ ಮೊಹಮ್ಮದ್ ಅಖ್ತರ್ ಸಿದ್ದಿಕಿ ಅವರು ಜಾಮಿಯಾ ಶಿಕ್ಷಣ ವಿಭಾಗದಲ್ಲಿ ಮಾಜಿ ಪ್ರಾಧ್ಯಾಪಕರಾಗಿದ್ದರು ಮತ್ತು ಜಾಮಿಯಾ ನಗರದಲ್ಲಿ ತಂಗಿದ್ದಾರೆ.

ಸ್ವತಃ ಸಿದ್ದೀಕಿ ಜಾಮಿಯಾದಿಂದ ಶಿಕ್ಷಣವನ್ನು ಪಡೆದಿದ್ದು, ಅರ್ಥಶಾಸ್ತ್ರದಲ್ಲಿ ಪದವಿ ಪಡೆದ್ದರು, ಜೊತೆಗೆ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ್ದಾರೆ.

ಜಾಮಿಯಾದ ಉಪಕುಲಪತಿ ನಜ್ಮಾ ಅಖ್ತರ್ ಅವರು ಶನಿವಾರದಂದು ಸಿದ್ದೀಕಿ ಕುಟುಂಬವನ್ನು ಭೇಟಿ ಮಾಡಿ ಸಂತಾಪ ಸೂಚಿಸಿದ್ದರು. ಮಂಗಳವಾರದಂದು ವಿಶ್ವವಿದ್ಯಾನಿಲಯವು ಕ್ಯಾಂಪಸ್‌ನಲ್ಲಿ ಸಂತಾಪ ಸಭೆಯನ್ನು ಆಯೋಜಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಕ್ಯಾಂಪಸ್‌ನಲ್ಲಿ “ಸಂದರ್ಭಕ್ಕೆ ತಕ್ಕಂತೆ” ಸಿದ್ದಿಕಿ ಅವರ ಕೃತಿಯ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯ ಸಮೀಪವಿರುವ ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಶುಕ್ರವಾರ ಅಫ್ಘಾನ್‌ ಭದ್ರತಾ ಪಡೆ ಮತ್ತು ತಾಲಿಬಾನ್ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಸಿದ್ದಿಕಿ ಕೊಲ್ಲಲ್ಪಟ್ಟಿದ್ದರು.

ಈ ವಾರದ ಆರಂಭದಲ್ಲಿ ಅವರು ಕಂದಹಾರ್ ಮೂಲದ ಅಫ್ಘಾನ್‌ ವಿಶೇಷ ಪಡೆಗಳೊಂದಿಗೆ ಪತ್ರಕರ್ತರಾಗಿ, ಅಫ್ಘಾನ್‌ ಕಮಾಂಡೋಗಳು ಮತ್ತು ತಾಲಿಬಾನ್ ಬಂಡುಕೋರರ ನಡುವಿನ ಹೋರಾಟದ ಬಗ್ಗೆ ವರದಿ ಮಾಡುತ್ತಿದ್ದರು.

ಇದನ್ನೂ ಓದಿ: ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಗೆ ಪಿಎಂ ಮೋದಿ ಸಂತಾಪ ಸೂಚಿಸಲಿಲ್ಲವೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...