Homeಮುಖಪುಟದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಗೆ ಪಿಎಂ ಮೋದಿ ಸಂತಾಪ ಸೂಚಿಸಲಿಲ್ಲವೇಕೆ?

ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಗೆ ಪಿಎಂ ಮೋದಿ ಸಂತಾಪ ಸೂಚಿಸಲಿಲ್ಲವೇಕೆ?

ದಾನಿಸ್ ಸಿದ್ದೀಕಿ ಬಡವರ, ತುಳಿತಕ್ಕೊಳಗಾದವರ ಪರವಿದ್ದ ಪತ್ರಕರ್ತ. ಸಹಜವಾಗಿಯೇ ಎಲ್ಲಾ ದೇಶದ ಪ್ರಭುತ್ವಗಳ ಕ್ರೌರ್ಯವನ್ನು ತನ್ನ ಕ್ಯಾಮರದಲ್ಲಿ ಸೆರೆಹಿಡಿದಿದ್ದ...

- Advertisement -
- Advertisement -

ಜುಲೈ ತಿಂಗಳ ಆರಂಭದಲ್ಲಿ ‘ಸುಧರ್ಮ’ ಎಂಬ ಸಂಸ್ಕೃತ ದಿನಪತ್ರಿಕೆಯ ಸಂಪಾದಕರಾದ ಕೆ.ವಿ ಸಂಪತ್ ಕುಮಾರ್‌ರವರು ನಿಧನರಾದರು. ಆಗ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ವ್ಯಕ್ತಪಡಿಸಿದ್ದಲ್ಲದೆ, ಸಂಪತ್‌ ಕುಮಾರ್‌ರವರ ಪತ್ನಿ ಕೆ.ಎಸ್ ಜಯಲಕ್ಷ್ಮಿಯವರಿಗೆ ಸಂಸ್ಕೃತದಲ್ಲಿ ಪತ್ರ ಬರೆದು ಸಂತಾಪ ಸೂಚಿಸಿದ್ದರು. ಆ ಪತ್ರವನ್ನು ಕರ್ನಾಟಕದ ಸಿಎಂ ಬಿ.ಎಸ್ ಯಡಿಯೂರಪ್ಪನವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಅಷ್ಟು ಮಾತ್ರವಲ್ಲ ಭಾರತದ ಕ್ರಿಕೆಟ್ ಆಟಗಾರ ಶಿಖರ್ ಧವನ್ ಕೈಬೆರಳಿಗೆ ಗಾಯ ಮಾಡಿಕೊಂಡಾಗಿನಿಂದ ಹಿಡಿದು ಮಾಜಿ ಸಿಎಂ ಕುಮಾರಸ್ವಾಮಿಯವರ ಹುಟ್ಟುಹಬ್ಬದವರೆಗೂ, ಅನುಷ್ಕಾ ಶರ್ಮಾ ಗರ್ಭಿಣಿಯಾದಾಗಿನಿಂದ ಹಿಡಿದು ಇನ್ಯಾರೋ ಲಾಕ್‌ಡೌನ್ ಸಮಯದಲ್ಲಿ ಹೋಮ್ ಗಾರ್ಡನಿಂಗ್‌ ಮಾಡಿದುದ್ದಕ್ಕೂ ನಮ್ಮ ನರೇಂದ್ರ ಮೋದಿಯವರು ಶುಭಕೋರಿದ್ದರು. ಟೋಕಿಯೋ ಒಲಂಪಿಕ್ಸ್‌ಗೆ ಹೊರಟ ಅಥ್ಲೀಟ್‌ಗಳಿಗೆ ಈಗ ನೀವು ಐಸ್‌ಕ್ರೀಂ ತಿನ್ನಬಹುದಾ ಎಂದು ಮೋದಿ ನೆನೆಪಿಸಿದ್ದರು!

ಖ್ಯಾತನಾಮರ ಹುಟ್ಟು ಮತ್ತು ಸಾವುಗಳಿಗೆ ಟ್ವಿಟರ್‌ನಲ್ಲಿ ಶುಭಾಶಯ ಕೋರುವ, ಸಂತಾಪ ವ್ಯಕ್ತಪಡಿಸುವ ನಮ್ಮ ಪಿಎಂ ಅವರಿಗೆ ನಿನ್ನೆ ಅಫ್ಘನ್‌ನಲ್ಲಿ ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಮೃತಪಟ್ಟಿರುವುದು ತಿಳಿದಿಲ್ಲವೇ? ತಿಳಿದರೂ ಒಂದು ಸಣ್ಣ ಸಂತಾಪ ಏಕೆ ವ್ಯಕ್ತಪಡಿಸಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.

ರಾಯ್ಟರ್ಸ್‌ನ ಮುಖ್ಯ ಫೋಟೋಗ್ರಾಫರ್‌ ಆಗಿದ್ದ ಭಾರತದ ದಾನಿಶ್ ಸಿದ್ದೀಕಿ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಕ್ರೂರ ತಾಲಿಬಾನಿಗಳಿಂದ ನಡೆದ ಘರ್ಷಣೆಯಲ್ಲಿ ನಿನ್ನೆ ಹತರಾಗಿದ್ದಾರೆ. ವಿಶ್ವ ಪ್ರಸಿದ್ದ ಫೋಟೊ ಜರ್ನಲಿಸ್ಟ್‌ ಆಗಿದ್ದ ಅವರು 2018 ರಲ್ಲಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿದ್ದ ಫೀಚರ್‌ ಫೋಟೊಗ್ರಾಫ್‌ಗಾಗಿ ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿ ಪಡೆದಿದ್ದರು. ದಾನಿಶ್ ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆಗಳು, ನೇಪಾಳ ಭೂಕಂಪಗಳು, ಭಾರತದ ಕೊರೊನಾ ಸಾಂಕ್ರಾಮಿಕ, ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಗತಿ, ದೆಹಲಿ ಗಲಭೆ, ರೈತ ಹೋರಾಟ, ಉತ್ತರ ಕೊರಿಯಾದಲ್ಲಿ ನಡೆದ ಕ್ರೀಡಾಕೂಟಗಳ ವರದಿಗಳ ಸಹಿತ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ವರದಿಗಳನ್ನು ಮಾಡಿದ್ದರು.

ಕೇರಳ ಸಿಎಂ ಪಿಣರಾಯಿ ವಿಜಯನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ನೂರಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ದಾನಿಶ್ ಸಿದ್ದೀಕಿ ಅವರ ಹತ್ಯೆಯನ್ನು ಖಂಡಿಸಿ ಅಫ್ಘಾನಿಸ್ತಾನದ ಭಾರತದ ರಾಯಭಾರಿ ಟ್ವೀಟ್ ಮಾಡಿದ್ದಾರೆ. ಆದರೆ ಮೋದಿ ಮಾತ್ರ ಒಂದು ಸಣ್ಣ ಮಾತನಾಡಿಲ್ಲ. ಬದಲಿಗೆ ಮೋದಿ ಅಭಿಮಾನಿಗಳೆನಿಸಿಕೊಂಡವರು, ಸಂಘಪರಿವಾರದ ಕಾರ್ಯಕರ್ತರು ಪತ್ರಕರ್ತನ ಸಾವನ್ನು ಸಂಭ್ರಮಿಸುತ್ತಿದ್ದಾರೆ! ಈ ಕುರಿತು ಕಳವಳ ವ್ಯಕ್ತಪಡಿಸಿರುವ ಆಲ್ಟ್‌ನ್ಯೂಸ್ ಸಂಸ್ಥಾಪಕ ಪ್ರತೀಕ್ ಸಿನ್ಹಾ, “ನೀವು ಇಂದು ಟ್ವಿಟರ್‌‌ನಲ್ಲಿನ ದ್ವೇಷವನ್ನು ನೋಡಿದ್ದೀರಾ? ದಿಟ್ಟ ಪತ್ರಕರ್ತನ ಸಾವಿಗೆ ಜನರು ಸಂಭ್ರಮಿಸುತ್ತಿದ್ದಾರೆ… ಈ ದ್ವೇಷವನ್ನು ನಾವು ನಿರ್ಲಕ್ಷಿಸಲು ಸಾಧ್ಯವೇ? ಈ ದ್ವೇಷವು ತೀವ್ರವಾದಿ ಆಗುತ್ತಿರುವ ಅಥವಾ ಈಗಾಗಲೇ ತೀವ್ರವಾದಿಗಳಾಗಿರುವ ಜನರಿಂದ ಬರುತ್ತಿದೆ. ನಾವು ನಮ್ಮದೇ ತಾಲಿಬಾನ್ ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ನಿನ್ನೆ ಅಫ್ಘನ್ ಸರಕಾರಿ ಪಡೆ ಮತ್ತು ತಾಲಿಬಾನ್ ನಡುವಣ ಸಂಘರ್ಷದಲ್ಲಿ ಕಂದಹಾರದಲ್ಲಿ ಹತರಾದ ಭಾರತೀಯ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ಧಿಖಿ (ಮೊದಲ ಚಿತ್ರ) ದಿಲ್ಲಿ ಗಲಭೆಯ ದಾರುಣ ದೃಶ್ಯಗಳನ್ನು ಜಗತ್ತಿಗೆ ತೋರಿಸಿದವರು. ಅಂತಹ ಒಂದು ದೃಶ್ಯ ಇಲ್ಲಿದೆ. ಹಾಗೆಯೇ ಇನ್ನೊಂದು ಚಿತ್ರ ಸರಕಾರಿ ಸುಳ್ಳುಗಳ ನಡುವೆ ದಿಲ್ಲಿಯ ಸ್ಮಶಾನ ಹೇಳಿದ ಸತ್ಯದ ಡ್ರೋನ್ ಚಿತ್ರ. (ಆತನ ಸಾವನ್ನು ಜಗತ್ತೇ ಖಂಡಿಸಿದ್ದರೂ ನಮ್ಮ ಪ್ರಧಾನಿಗಳು ಈಗಲೂ ಯಾಕೆ ಅದರ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ ಎಂಬುದು ನಿಮಗೆ ಈಗ ಅರ್ಥವಾಗಿರಬಹುದು)” ಎಂದು ಚಿಂತಕರಾದ ಶ್ರೀನಿವಾಸ ಕಾರ್ಕಳರವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿಯವರು ದಾನಿಶ್ ಸಿದ್ದಿಕಿ ಭಾರತದಲ್ಲಿ ಏನೆಲ್ಲಾ ವರದಿ ಮಾಡಿದರೂ ಸುರಕ್ಷಿತವಾಗಿದ್ದರು. ಆದರೆ ಶಾಂತಿಯುತ ಅಫ್ಘಾನಿಸ್ಥಾನದಲ್ಲಿ ಎರಡೇ ದಿನ ಇದ್ದರೂ ಸಹ ಶಾಂತಿ ಕಾಪಾಡುವ ತಾಲಿಬಾನಿಗಳಿಂದ ಹತ್ಯೆಯಾದರೂ ಎಂದು ವ್ಯಂಗ್ಯವಾಡಿದ್ದಾರೆ. ಅವರ ಮರೆತ ವಿಷಯವೇಂದರೆ ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಪ್ರತಿನಿತ್ಯ ಪತ್ರಕರ್ತರನ್ನು ಬಂಧಿಸಲಾಗುತ್ತಿದೆ ಎಂಬುದು. ಹತ್ರಾಸ್‌ನಲ್ಲಿ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಘಟನೆ ವರದಿ ಮಾಡಲು ತೆರಳಿದ್ದ ಸಿದ್ದೀಕ್ ಕಪ್ಪನ್ ಎಂಬ ಪತ್ರಕರ್ತ ಇಂದಿಗೂ ಜೈಲಿನಲ್ಲಿದ್ದಾರೆ ಎಂಬುದಾಗಿದೆ.

ದಾನಿಸ್ ಸಿದ್ದಿಕಿ ಬಡವರ, ತುಳಿತಕ್ಕೊಳಗಾದವರ ಪರ ಇರುವ ಪತ್ರಕರ್ತ. ಹಾಗಾಗಿ ಸಹಜವಾಗಿಯೇ ಎಲ್ಲಾ ದೇಶಗಳ ಪ್ರಭುತ್ವಗಳ ತಪ್ಪುಗಳನ್ನು ತಮ್ಮ ಫೋಟೊಗಳಿಂದ ಬಹಿರಂಗಪಡಿಸುತ್ತಿದ್ದ. ಹಾಗೆಯೇ ಭಾರತದಲ್ಲಿಯೂ ಸಹ ಇಲ್ಲಿನ ಮೋದಿ ಸರ್ಕಾರದ ವೈಫಲ್ಯಗಳಿಗೆ ಆತನ ಫೋಟೊಗಳು ಕನ್ನಡಿಯಾಗಿದ್ದವು. ಪ್ರಪಂಚದ ಬಹಳಷ್ಟು ಮಂದಿ ಆತನ ಫೋಟೊಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿಎಎ ವಿರೋಧಿ ಹೋರಾಟಗಾರರ ಮೇಲೆ ಗುಂಡು ಹಾರಿಸುವಾತನ ಎದುರಿಗೆ ನಿಂತು ಫೋಟೊ ಕ್ಲಿಕ್ಕಿಸಿದ ಎದೆಗಾರಿಕೆ ದಾನಿಶ್‌ದು. ಅಷ್ಟು ಮಾತ್ರಕ್ಕೆ ಅವರ ಸಾವಿಗೆ ಸಂತಾಪ ಸೂಚಿಸದಷ್ಟು ನಮ್ಮ ಪ್ರಧಾನಿಗಳು ದ್ವೇಷ ಸಾಧಿಸುತ್ತಾರೆಯೇ?

ದಾನಿಶ್ ಸಿದ್ದಿಕಿಯವರು ತಮ್ಮ ಪ್ರಖರ ಫೋಟೊಗಳ ಮೂಲಕ ಮೋದಿಯವರ ಕೊರೊನಾ ಎರಡನೇ ಅಲೆಯ ಅಸಮರ್ಪಕ ನಿರ್ವಹಣೆಯನ್ನು ಎತ್ತಿ ತೋರಿಸಿದ್ದರು. ಮೋದಿಯವರ ವೈಫಲ್ಯಗಳನ್ನು ಬಹಿರಂಗಗೊಳಿಸಿದ್ದಕ್ಕೆ ಪಿಎಂ ಮೋದಿ ಅವರ ಸಾವಿಗೆ ಸಂತಾಪ ಸೂಚಿಸಿಲ್ಲ ಎಂದು ಅಂಕಣಕಾರ್ತಿ ಸ್ವಾತಿ ಚತುರ್ವೇದಿಯವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅವರ ಹತ್ಯೆಗೆ ಭಾರತದ ಕೋಮುವಾದಿಗಳು ಸಂಭ್ರಮಿಸುತ್ತಿದ್ದಾರೆ ಎಂದರೆ ಏನರ್ಥ? ತಾಲಿಬಾನಿಗಳಿಂದ ಹತನಾದುದ್ದಕ್ಕೆ ಸಂಭ್ರಮಿಸುವುದು ತಾಲಿಬಾನಿಗಳನ್ನು ಸಮರ್ಥಿಸಿದಂತೆ ಅಲ್ಲವೇ? ತದನಂತರ ಕ್ರೂರ ತಾಲಿಬಾನ್ ಕೂಡ ದಾನಿಶ್ ಸಾವಿಗೆ ಸಂತಾಪ ಸೂಚಿಸಿ ಕ್ಷಮೆ ಕೇಳಿದೆ. ಅವರು ಅಲ್ಲಿರುವುದು ನಮಗೆ ಗೊತ್ತಿರಲಿಲ್ಲ, ವಾರ್ ಜೋನ್‌ಗೆ ಪ್ರವೇಶಿಸಿದ ಪತ್ರಕರ್ತರ ಮಾಹಿತಿ ನಮಗೆ ನೀಡಿದರೆ ಅವರ ಬಗ್ಗೆ ಕಾಳಜಿ ವಹಿಸಲಾಗುವುದು ಎಂದಿದೆ. ಆದರೆ ಭಾರತದ ಕೋಮುವಾದಿಗಳು ಮಾತ್ರ ಸಂಭ್ರಮದಲ್ಲಿದ್ದಾರೆ.

 


ಇದನ್ನೂ ಓದಿ: ಅಫ್ಘಾನ್‌‌ನಲ್ಲಿ ಹತರಾದ ಖ್ಯಾತ ಫೋಟೊ ಜರ್ನಲಿಸ್ಟ್‌‌ ದಾನಿಶ್ ಕ್ಲಿಕ್ಕಿಸಿದ ಕೆಲವು ಫೋಟೊಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...