Homeಮುಖಪುಟಸಾಮಾನ್ಯ ಲಸಿಕೆ ಪಡೆಯದ 30 ಲಕ್ಷ ಮಕ್ಕಳು ಭಾರತದಲ್ಲಿದ್ದಾರೆಂದ ವಿಶ್ವಸಂಸ್ಥೆ; ನಿರಾಕರಿಸಿದ ಸರ್ಕಾರ

ಸಾಮಾನ್ಯ ಲಸಿಕೆ ಪಡೆಯದ 30 ಲಕ್ಷ ಮಕ್ಕಳು ಭಾರತದಲ್ಲಿದ್ದಾರೆಂದ ವಿಶ್ವಸಂಸ್ಥೆ; ನಿರಾಕರಿಸಿದ ಸರ್ಕಾರ

- Advertisement -
- Advertisement -

ಸಾಮಾನ್ಯವಾಗಿ ಪಡೆಯುವ ರುಟೀನ್‌‌ ಲಸಿಕೆಯನ್ನು ಪಡೆಯದ 30 ಲಕ್ಷಕ್ಕೂ ಹೆಚ್ಚು ಮಕ್ಕಳು ಭಾರತಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯುನಿಸೆಫ್ ವರದಿ ನೀಡಿದೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಎಂದು ವರದಿಯು ಉಲ್ಲೇಖಿಸಿದೆ. ಯುನಿಸೆಫ್‌ನ ವರದಿಯನ್ನು ನಿರಾಕರಿಸಿರುವ ಒಕ್ಕೂಟ ಸರ್ಕಾರ, ಯುನಿವರ್ಸಲ್ ಇಮ್ಯುನೈಸೇಶನ್ ಕಾರ್ಯಕ್ರಮದಡಿ ಮಕ್ಕಳಿಗೆ ಲಸಿಕೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಕೊರೊನಾ ಪರಿಣಾಮಗಳನ್ನು ತಗ್ಗಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಅಭಿವೃದ್ಧಿ ಪಾಲುದಾರರೊಂದಿಗೆ ಒಕ್ಕೂಟ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ.

“ಕೊರೊನಾದಿಂದ ಉಂಟಾಗುವ ಅಡೆತಡೆಗಳಿಂದಾಗಿ ಲಕ್ಷಾಂತರ ಭಾರತೀಯ ಮಕ್ಕಳು ಸಾಮಾನ್ಯವಾಗಿ ಪಡೆಯುವ ಲಸಿಕೆಗಳನ್ನು ತಪ್ಪಿಸಿಕೊಂಡಿರಬಹುದು, ಇದು ಭವಿಷ್ಯದಲ್ಲಿ ಸಾಂಕ್ರಮಿಕಕ್ಕೆ ಎಡೆಮಾಡುವ ಮತ್ತು ಸಾವಿಗೀಡಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಪಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ” ಎಂದು ಯಾರನ್ನೂ ಹೆಸರಿಸದೆ ಒಕ್ಕೂಟ ಸರ್ಕಾರದ ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಮನೆಯಲ್ಲೇ ಲಸಿಕೆ ಪಡೆದ ಸಂಸದೆ ಪ್ರಜ್ಞಾ ಠಾಕೂರ್: ಖಂಡನೆ

“ಈ ವರದಿಗಳು ಸತ್ಯಗಳನ್ನು ಆಧರಿಸಿಲ್ಲ ಮತ್ತು ಇದು ನಿಜವಾದ ಚಿತ್ರಣವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಸಚಿವಾಲಯ ಹೇಳಿದೆ.

ಯುನಿಸೆಫ್ ತನ್ನ ವರದಿಯಲ್ಲಿ 2020 ರಲ್ಲಿ 30 ಲಕ್ಷಕ್ಕೂ ಹೆಚ್ಚು “ಶೂನ್ಯ ಡೋಸ್ ಪಡೆದ ಮಕ್ಕಳು” ಭಾರತದಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದೆ.

“ದಕ್ಷಿಣ ಏಷ್ಯಾದ ಸುಮಾರು 44 ಲಕ್ಷ ಮಕ್ಕಳು ಕಳೆದ ಹತ್ತು ವರ್ಷಗಳಲ್ಲಿ 2020 ವರೆಗೆ ಯಾವುದೇ ಸಾಮಾನ್ಯ ರುಟೀನ್‌ ವ್ಯಾಕ್ಸಿನೇಷನ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದರಲ್ಲಿ 30 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಭಾರತದಲ್ಲಿ ವಾಸಿಸುತ್ತಿದ್ದರು” ಎಂದು ಯುನಿಸೆಫ್ ತನ್ನ ಹೇಳಿಕೆಯನ್ನು ತಿಳಿಸಿದೆ.

ಈ ವರದಿಯ ಬೆನ್ನಿಗೆ ಒಕ್ಕೂಟ ಸರ್ಕಾರವು, ಸಾಂಕ್ರಾಮಿಕ ರೋಗ ಹರಡಿದಾಗಿನಿಂದ, ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (ಯುಐಪಿ) ಅಡಿಯಲ್ಲಿ ರೋಗನಿರೋಧಕ ಸೇರಿದಂತೆ ಅಗತ್ಯ ಸೇವೆಗಳನ್ನು ನಿರ್ವಹಿಸುವತ್ತ ಸಚಿವಾಲಯ ಗಮನಹರಿಸಿದೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ದೆಹಲಿ ಸೇರಿ 4 ರಾಜ್ಯಗಳಲ್ಲಿ ಲಸಿಕೆ ಕೊರತೆ: ವ್ಯಾಕ್ಸಿನೇಷನ್‌‌ ಕೇಂದ್ರಗಳಿಗೆ ಬಾಗಿಲು

“ಸಚಿವಾಲಯವು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಅಭಿವೃದ್ಧಿ ಪಾಲುದಾರರೊಂದಿಗೆ ಕೊರೊನಾ ಋಣಾತ್ಮಕ ಪರಿಣಾಮಗಳನ್ನು ತಗ್ಗಿಸಲು ಮತ್ತು ಯುಐಪಿ ಅಡಿಯಲ್ಲಿ ಮಕ್ಕಳ ಜೀವ ಉಳಿಸುವ ಲಸಿಕೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದೆ” ಎಂದು ಸಚಿವಾಲಯ ತಿಳಿಸಿದೆ.

ಇದಲ್ಲದೆ, ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಪಡೆಯ ಬದ್ಧತೆಯ ಪರಿಣಾಮವಾಗಿ, ದೇಶವು 2021 ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) 99% ರಷ್ಟು ‘ಡಿಟಿಪಿ3’ ನೀಡಿದೆ. ಇದು ಇಲ್ಲಿಯವರೆಗೆ ನೀಡಲಾದ ಅತ್ಯಂತ ಹೆಚ್ಚಿನ ‘ಡಿಟಿಪಿ3’ ಆಗಿದೆ ಎಂದು ಅದು ಹೇಳಿದೆ.

ವಿಶೇಷವಾಗಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಭಾರತ ತೀವ್ರವಾಗಿ ಹಾನಿಗೊಳಗಾಗಿದ್ದು, ವಿಶ್ವದಾದ್ಯಂತ ಅತಿ ಹೆಚ್ಚು 35 ಲಕ್ಷ ಅಸುರಕ್ಷಿತ ಮಕ್ಕಳನ್ನು ಹೊಂದಿದೆ ಯುನಿಸೆಫ್ ಗುರುವಾರ ಹೇಳಿತ್ತು. ಇದು 2019 ಕ್ಕೆ ಹೋಲಿಸಿದರೆ 14 ಲಕ್ಷದಷ್ಟು ಹೆಚ್ಚಾಗಿದೆ, ಈ ಹಿಂದೆ 21 ಲಕ್ಷ ಅಸುರಕ್ಷಿತ ಮಕ್ಕಳು ಭಾರತದಲ್ಲಿ ವಾಸಿಸುತ್ತಿದ್ದರು.

ಅಸುರಕ್ಷಿತ ಮಕ್ಕಳೆಂದರೆ ಲಸಿಕೆ ಪಡೆಯದ ಅಥವಾ ಅಪೂರ್ಣ ಲಸಿಕೆ ಪಡೆದ ಮಕ್ಕಳು ಎಂದರ್ಥ.

ಇದನ್ನೂ ಓದಿ: ಬ್ರೆಜಿಲ್‌: ಲಸಿಕೆ ಖರೀದಿ ಹಗರಣ – ಅಧ್ಯಕ್ಷ ಬೊಲ್ಸನಾರೊ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...