Homeಮುಖಪುಟ5 ಕೆಜಿ ಗೋಧಿ ಕದ್ದ ಆರೋಪ: ಉತ್ತರಪ್ರದೇಶದ 9 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿತ

5 ಕೆಜಿ ಗೋಧಿ ಕದ್ದ ಆರೋಪ: ಉತ್ತರಪ್ರದೇಶದ 9 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿತ

- Advertisement -
- Advertisement -

ಉತ್ತರ ಪ್ರದೇಶದ ಮಹರಾಜಗಂಜ್‌ನಲ್ಲಿ ಮಾರುಕಟ್ಟೆಗೆ ಒಯ್ಯುವಾಗ ರಸ್ತೆಯಲ್ಲಿ ಬಿದ್ದ 5 ಕೆಜಿ ಗೋಧಿ ಧಾನ್ಯ ಕಳ್ಳತನದ ಆರೋಪದ ಮೇಲೆ 9 ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಕೃತ್ಯ ವರದಿಯಾಗಿದೆ.

ಗೋಧಿ ತುಂಬಿದ ವಾಹನವೊಂದು ಮಾರುಕಟ್ಟೆಗೆ ಒಯ್ಯುವಾಗ ಸಣ್ಣ ಗೋಧಿ ಚೀಲ ರಸ್ತೆಗೆ ಬಿದ್ದಿದೆ. ಅದನ್ನು ತೆಗೆದುಕೊಂಡ ಬಾಲಕನ ಮೇಲೆ ಕಳ್ಳತನದ ಆರೋಪವೊರಿಸಿ ನೌತನ್ವಾ ಮಂಡಿ ನೌಕರರು ಮರಕ್ಕೆ ಕಟ್ಟಿ ಕೋಲುಗಳಿಂದ ಪೊಲೀಸರ ಎದುರೆ ಥಳಿಸಲಾಗಿದೆ. ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಆ ಬಾಲಕನ ಕುಟುಂಬಸ್ಥರನ್ನು ಕರೆಸಿ ಕ್ಷಮೆ ಕೇಳಿದ್ದಲ್ಲದೆ, ಕ್ಷಮಾಪಣೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ಹಲವು ಪತ್ರಕರ್ತರು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ಆ ವಿಡಿಯೋ ವೈರಲ್ ಆದ ಕೂಡಲೇ ಮಹರಾಜಗಂಜ್‌ನ ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಪ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ. “ಪ್ರಕರಣದ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ ಮೂವರು ಮಂಡಿ ನೌಕರರನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.ತನಿಖೆ ಚಾಲ್ತಿಯಲ್ಲಿದೆ” ಎಂದು ತಿಳಿಸಿದ್ದಾರೆ.

ಆ ಬಾಲಕ ಯಾವ ತಪ್ಪು ಮಾಡಿಲ್ಲ. ರಸ್ತೆಯಲ್ಲಿ ಬಿದ್ದ ಗೋದಿ ತೆಗೆದುಕೊಂಡರೆ ಏನು ತಪ್ಪು? ಅಲ್ಲದೇ ಹಸಿದವರು ಧಾನ್ಯ ತೆಗೆದುಕೊಂಡರೆ ಅದು ಕಳ್ಳತನವಲ್ಲ. ಹಲ್ಲ ಮಾಡಿದವರು ಅಮಾನವೀಯತೆಯುಳ್ಳವರು ಎಂದು ಟ್ವಿಟರ್‌ನಲ್ಲಿ ಘಟನೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನೌತನ್ವಾ ಪೊಲೀಸರ ಎದುರೇ ಹಲ್ಲೆ ನಡೆದಿದ್ದರೂ ಪೊಲೀಸರು ಹಲ್ಲೆಕೋರರಿಗೆ ಸಹಾಯ ಮಾಡಿದ್ದಾರೆಯೇ ಹೊರತು ಬಾಲಕನಿಗಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಉತ್ತರ ಪ್ರದೇಶ ಪೊಲೀಸರು ಬಡಜನ ವಿರೋಧಿಗಳು ಎಂದು ಟ್ವಿಟರ್‌ನಲ್ಲಿ ಕಿಡಿಕಾರಲಾಗಿದೆ.


ಇದನ್ನೂ ಓದಿ: ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಗೆ ಪಿಎಂ ಮೋದಿ ಸಂತಾಪ ಸೂಚಿಸಲಿಲ್ಲವೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಮಾನವೀಯವಾಗಿ ವರ್ತಿಸಿರುವ ಎಲ್ಲರಿಗೂ ಕಟಿಣ ಶಿಕ್ಷೆ ಆಗಬೇಕು.

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...