ಮನದ ಮಾತುಗಳು ನಮ್ಮೊಳಗೂ ಇವೆ
ನಿನ್ನ ಕಿವುಡು ಕಿವಿಗೆ ಧಿಕ್ಕಾರವಿರಲಿ…
ಇಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ..
ಹೆಣದ ವಾಸನೆಯ ಗೊಂಬೆ..!
ಗೋಡೆಯ ಆಚೆಯ ದಿಕ್ಕು..!
ಛಿದ್ರವಾದ ಪುಲ್ವಾಮ ಹುತಾತ್ಮರ
ಕೆಂಪು ನಿದ್ರೆಯ ರಕ್ತವ ಮರೆತರೆ
ಇಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ.
ಹೊಟ್ಟೆ ಹಸಿವಾಗುತ್ತಿದೆ
ಎಂದು ಕೂಗುವ ದೇಶದ್ರೋಹಿಗಳ ನಡುವೆ,
ಕೊರಾನ ತಡೆಗೆ ಮೈಲುಗಟ್ಟಲೆ ನಡೆದು
ವಿಮಾನದಲ್ಲಿ ತೇಲಿ ಬಂದವರ ನೆನೆದರೆ,
ಆಸ್ಪತ್ರೆಯ ಆಕ್ಸಿಜನ್ ಕೊರತೆಯಾಗಿಲ್ಲ
ಎಂಬ ತಲೆಬರಹ ಓದಿ ಹೌದು ಎಂದು ಕೊಂಡರೆ
ಇಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ..!
ಟೀಕಾ ಉತ್ಸವದಲ್ಲಿ ತುಳಿತಕ್ಕೆ ಸಿಕ್ಕು ಸತ್ತವರು…!
ಗಂಗೆಯ ಗಬ್ಬಿನಲ್ಲಿ ಕೊಳೆತು ತೇಲುವವರು,
ಮುಚ್ಚಿ ಹೋದ ಅನ್ನದ ಪಾಡು,
ಇವೆಲ್ಲವುಗಳ ಹೊರತು ಪಡಿಸಿ
ವಿಕಾಸವನ್ನು ಮಾತ್ರ ನೋಡುವ ಕನ್ನಡಕ ತೊಟ್ಟರೆ
ಇಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ…
ಕೀನ್ಯಾ ನೆರವಿನ ಪ್ರೀತಿಗೆ ಹೋಲಿಸಿದರೆ
ಕಸಿದುಕೊಂಡ ಕ್ರೌರ್ಯ
ಮಂದಿರದ ಕನಸಿನಂತೆ ಸೊಗಸಾಗಿಯೇ ಇದೆ…
ಮತ್ತೆ
ತಾವು ಕೊಟ್ಟ ಕೆಟ್ಟು ನಿಂತ
ವೆಂಟಿಲೇಟರ್-ಗಳಿಗಿಂತಲೂ
ನಿಮ್ಮ ಸಾಧನೆಯ ಪ್ರಗತಿ
ಇಂದಿನ ಪೆಟ್ರೋಲ್ ರೇಟಿನ ಅಂಕಿಯಂತಿದೆ…
ನ್ಯಾಯಕ್ಕಾಗಿ ಹಗಲು ರಾತ್ರಿ ಬೀದಿಯಲ್ಲಿ ಬಿದ್ದು
ತಮ್ಮ ಸಾಧನೆಗೆ ಅಡ್ಡಗಾಲಿಟ್ಟವರ ನೆನೆದರೆ
ದೇಶಪ್ರೇಮ ನನ್ನಲ್ಲೂ ಉಕ್ಕುತ್ತದೆ…!
ಮನದ ಮಾತುಗಳು ನಮ್ಮೊಳಗೂ ಇವೆ
ನಿನ್ನ ಕಿವುಡು ಕಿವಿಗೆ ಧಿಕ್ಕಾರವಿರಲಿ.
- ಗೋಪಾಲಕೃಷ್ಣ ಹುಲಿಮನೆ

(ಗೋಪಾಲಕೃಷ್ಣ ಹುಲಿಮನೆಯವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿಮನೆ ಗ್ರಾಮದ ಯುವ ಕವಿ)
ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…



???
ಅತ್ಯಂತ ಅರ್ಥಪೂರ್ಣವಾದ ಕಠೋರ ವಾಸ್ತವ ಸ್ಥಿತಿ ತೀಕ್ಷ್ಣವಾಗಿ ಕಾವ್ಯ ರೂಪದಲ್ಲಿ ಬಿಚ್ಚಿಡುವ ಅತ್ಯಂತ ಪಕ್ವ ಕವಿತೆ
?