ಮುಕ್ತ ಶೈಲಿಯ ಕುಸ್ತಿ ಸ್ಪರ್ಧೆಯಲ್ಲಿ ಇಬ್ಬರು ಮಹಿಳೆಯರು ಕುಸ್ತಿಯಾಡುತ್ತಿರುವ ವಿಡಿಯೊವನ್ನು, ‘‘ಪಾಕಿಸ್ತಾನದ ಕುಸ್ತಿ ಪಟು ಭಾರತವನ್ನು ನಿಂದಿಸಿದಾಗ ಆರೆಸ್ಸೆಸ್‌ನ ಅಂಗ ಸಂಸ್ಥೆ ದುರ್ಗಾ ವಾಹಿನಿಯ ಸ್ವಯಂ ಸೇವಕಿ ಸಂಧ್ಯಾ ಪಡಕೆ ಬಂದು ಅವರನ್ನು ಹೊಡೆದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಕೆಲವು ಪೋಸ್ಟ್‌ನಲ್ಲಿ“ ಪಾಕಿಸ್ತಾನಿ ಕುಸ್ತಿ ಪಟು ತನ್ನ ವಿರುದ್ದ ಹೋರಾಡಲು ಸವಾಲು ಹಾಕಿದರು, ಅವರನ್ನು ಆರೆಸ್ಸೆಸ್ಸಿನ ಸ್ವಯಂ ಸೇವಕಿ ಸಂಧ್ಯಾ ಪಡಕೆ ಹೊಡೆದರು” ಎಂದು ಕೂಡಾ ವೈರಲ್ ಆಗಿದೆ.

ಇದನ್ನೂ ಓದಿ: Fact check: ಪೊಲೀಸ್ ವಿರುದ್ಧ ತಿರುಗಿಬಿದ್ದ ಪೂಜಾರಿ: ಹಿಗ್ಗಾಮುಗ್ಗಾ ಹೊಡೆದಿದ್ದು ನಿಜವಲ್ಲ!
ವಾಸ್ತವದಲ್ಲಿ, ಹರಿಯಾಣದ ಮಾಜಿ ಪೋಲಿಸ್ ಅಧಿಕಾರಿ ಕವಿತಾ ಮತ್ತು ಪವರ್ ಲಿಫ್ಟಿಂಗ್ ಹಾಗೂ ಎಂಎಂಎ ಚಾಂಪಿಯನ್ ಬುಲ್ ಬುಲ್ ಅವರ ನಡುವೆ ನಡೆದ ಕುಸ್ತಿಯಾಗಿದೆ ಈ ವಿಡಿಯೊ. ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್‌ಬುಲ್, ತನ್ನ ವಿರುದ್ಧ ಸೆಣಸಲು ಪ್ರೇಕ್ಷಕರಿಗೆ ಸವಾಲು ಹಾಕಿದಂತೆ ವೀಡಿಯೊದಲ್ಲಿ ತೋರಿಸಲಾಗುತ್ತದೆ.
ವೈರಲ್ ವಿಡಿಯೋ ಬಗ್ಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ, ಅದೇ ವೀಡಿಯೊವನ್ನು ಮಾಜಿ WWE ಕುಸ್ತಿಪಟು ಖಲಿ (ದಲೀಪ್ ಸಿಂಗ್) ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 2016 ರಲ್ಲಿ ಹಂಚಿಕೊಂಡಿದ್ದರು.
ಈ ಪೋಸ್ಟ್‌ನಲ್ಲಿ ಸವಾಲೆಸೆಯುವ ಮಹಿಳೆಯನ್ನು (ಕಪ್ಪು ಬಣ್ಣದ ಬಟ್ಟೆ ಧರಿಸಿರುವ) ಬುಲ್ ಬುಲ್ ಗುರುತಿಸಲಾಗಿದೆ. ಮತ್ತೊಬ್ಬ ಮಹಿಳೆ (ಕೇಸರಿ ಸಲ್ವಾರ್-ಕಮೀಜ್ ಧರಿಸಿರುವ)ಯನ್ನು ಹರಿಯಾಣದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಪವರ್-ಲಿಫ್ಟಿಂಗ್, ಎಂಎಂಎ (ಮಿಶ್ರ ಮಾರ್ಷಲ್ ಆರ್ಟ್ಸ್) ಚಾಂಪಿಯನ್ ಕವಿತಾ ಎಂದು ಗುರುತಿಸಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಅವರ ಹೆಸರು ಸಂಧ್ಯಾ ಪಡಕೆ ಅಲ್ಲ.

ಅದೇ ವೀಡಿಯೊ ಬಗ್ಗೆ ವರದಿ ಮಾಡಿದ 2016 ರ ಸುದ್ದಿ ಲೇಖನದಲ್ಲಿ ಮಹಿಳೆಯರಿಬ್ಬರನ್ನು ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್ ಬುಲ್ ಮತ್ತು ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ಕವಿತಾ ಮತ್ತು ಪವರ್-ಲಿಫ್ಟಿಂಗ್, ಎಂಎಂಎ (ಮಿಶ್ರ ಮಾರ್ಷಲ್ ಆರ್ಟ್ಸ್) ಚಾಂಪಿಯನ್ ಎಂದು ಗುರುತಿಸಿದೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೊವೀಡ್ ಲಸಿಕೆ ಪಡೆದ ಮೇಲೆ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿ ದೊರೆಯುತ್ತದೆಯೇ?
ಈ ವೀಡಿಯೊ ಬಗ್ಗೆಯೆ ವರದಿ ಮಾಡಿದ ಇನ್ನೊಂದು ಸದ್ದಿಯಲ್ಲಿ ಮಹಿಳೆಯರ ಗುರುತಿನ ಬಗ್ಗೆಯೂ ಅದೇ ಮಾತನ್ನು ಪುನರುಚ್ಚರಿಸಿದೆ. ಆದಾಗ್ಯೂ, ಈ ಯಾವುದೇ ಸುದ್ದಿ ಲೇಖನಗಳು ಈ ಯಾವುದೇ ಮಹಿಳೆಯರನ್ನು ಪಾಕಿಸ್ತಾನ ಅಥವಾ ಆರ್‌ಎಸ್‌ಎಸ್‌ಗೆ ಸಂಬಧದ ಬಗ್ಗೆ ಉಲ್ಲೇಖಿಸಿಲ್ಲ.

ಮತ್ತೊಂದು ವೀಡಿಯೊದಲ್ಲಿ, ಬುಲ್ ಬುಲ್ (ಕಪ್ಪು ಬಣ್ಣದ ಬಟ್ಟೆ ಧರಿಸಿರುವವರು) ಕವಿತಾ ದೇವಿಯ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ಕಾಣಬಹುದು. ಆದುದರಿಂದ, ಈ ಎಲ್ಲ ಸಾಕ್ಷ್ಯಗಳು ಸೂಚಿಸುತ್ತಿರುವುದು ಏನೆಂದರೆ ಈ ಇಬ್ಬರೂ ಮಹಿಳೆಯರು ಪಾಕಿಸ್ತಾನದೊಂದಿಗೆಯೋ, ಆರೆಸ್ಸೆಸ್‌ನೊಂದಿಗೆಯೋ ಸಂಬಂಧ ಹೊಂದಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತೀಯ ಮಹಿಳಾ ಕುಸ್ತಿ ಪಂದ್ಯದ ಹಳೆಯ ವಿಡಿಯೋವನ್ನು ಪಾಕಿಸ್ತಾನದ ಕುಸ್ತಿಪಟುವನ್ನು ಆರೆಸ್ಸೆಸ್ ಸದಸ್ಯೆ ಹೊಡೆದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಸೋನಿಯಾ ಗಾಂಧಿಯ ಎಡಿಟೆಡ್ ಚಿತ್ರವನ್ನು ಹಂಚುತ್ತಿರುವ ಬಿಜೆಪಿ
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರವಲ್ಲ – ಬಿಹಾರದ ಹಳೆಯ ರಸ್ತೆಯ ಚಿತ್ರ



ಹುಚ್ಚ ಸೂಳೆ ಮಕ್ಕಳ ಮೆದುಳಲ್ಲಿ ಸೆಗಣಿಯೇ ತುಂಬಿರುವಾಗ ಇಂತಹ fake news ಹಬ್ಬಿಸಿ ಮತೀಯ ದ್ವೇಷ, ಭಾರತ ಪಾಕಿಸ್ತಾನ ಮಧ್ಯೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವುದರಲ್ಲಿ ಈ ನಾಯಿಗಳು ನಿಸ್ಸೀಮರು.