ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯಲ್ಲಿ ಗ್ರಾಮೀಣ ಅಭಿವೃದ್ದಿ ಖಾತೆಯಿಂದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವರಾಗಿ ಬದಲಾಗಿದ್ದ ಕೇಂದ್ರ ಸಚಿವ ಬಬುಲ್ ಸುಪ್ರಿಯೋ ತಾವು ರಾಜಕೀಯ ಕ್ಷೇತ್ರ ತ್ಯಜಿಸುವುದಾಗಿ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದ ಅಸಾನ್ಸೋಲ್ ಕ್ಷೇತ್ರದ ಸಂಸದರಾದ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ತದನಂತರ ಅವರ ಖಾತೆ ಬದಲಾವಣೆ ಮಾಡಲಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಫೇಸ್‌ಬುಕ್‌ನಲ್ಲಿ “ನಾನು ನಿರ್ಗಮಿಸುತ್ತೇನೆ.. ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ತಂದೆ-ತಾಯಿ-ಹೆಂಡತಿ-ಮಗಳು ಮತ್ತು ಇಬ್ಬರು ಆತ್ಮೀಯ ಸ್ನೇಹಿತರೂ ಸೇರಿದಂತೆ ಎಲ್ಲರ ಮಾತುಗಳನ್ನು ಕೇಳಿದ್ದೇನೆ. ಆದರೆ ನಾನು ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಸೇರಿದಂತೆ ಯಾವುದೇ ಪಕ್ಷ ಸೇರುವುದಿಲ್ಲ. ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ನೀವು ಸಾಮಾಜ ಸೇವೆ ಮಾಡುವುದಾದರೆ ರಾಜಕೀಯಕ್ಕೆ ಸೇರದೆ ಮಾಡಬಹುದು. ನಾನು ಮೊದಲು ನನ್ನನ್ನು ಸಂಘಟಿಸಿಕೊಳ್ಳುತ್ತೇನೆ ಮತ್ತೆ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನಾನು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಅಮಿತ್ ಶಾ ಮತ್ತು ಜೆ.ಪಿ ನಡ್ಡಾರವರಿಗೆ ಧನ್ಯವಾದ ತಿಳಿಸುತ್ತೇನೆ. “ನಾನು ಯಾವುದೇ ಬ್ಲಾಕ್‌ಮೇಲ್ ಮಾಡಲು ಅತವಾ ಉನ್ನತ ಅಧಿಕಾರ ಪಡೆಯಲು ಈ ನಿರ್ಣಯ ತೆಗೆದುಕೊಂಡಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಾಲಿವುಡ್ ಗಾಯಕರಾದ ಅವರು 2014 ರಲ್ಲಿ ಬಿಜೆಪಿ ಸೇರಿದ್ದರು. ನರೇಂದ್ರ ಮೋದಿ ಸಂಪುಟದಲ್ಲಿ ಗ್ರಾಮೀಣ ಅಭಿವೃದ್ದಿ ರಾಜ್ಯ ಸಚಿವರಾಗಿದ್ದ ಅವರನ್ನು ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವರಾಗಿ ಬದಲಾವಣೆ ಮಾಡಲಾಗಿತ್ತು. ಇದೇ ಅವರ ರಾಜೀನಾಮೆಗೆ ಕಾರಣವಿರಬಹುದು ಎಂಬ ಚರ್ಚೆಗಳು ಆರಂಭವಾಗಿವೆ.
ಇದನ್ನೂ ಓದಿ; ಬೇಡಿಕೆ ಈಡೇರುವವರೆಗೂ ಜಿಎಸ್‌ಟಿ ಪಾವತಿಸಬೇಡಿ: ವರ್ತಕರಿಗೆ ಪ್ರಧಾನಿ ಸಹೋದರನ ಸಲಹೆ


