ಟೋಕಿಯೋ ಒಲಂಪಿಕ್ಸ್‌ನಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು ಅರ್ಜೈಂಟೀನಾ ಎದುರು 2-1 ಅಂತರದಲ್ಲಿ ಸೋಲುನ್ನು ಅನುಭವಿಸಿತು. ಇದರೊಂದಿಗೆ ಚಿನ್ನ, ಬೆಳ್ಳಿಯ ಆಸೆ ಕಮರಿದ್ದು, ಕಂಚಿನ ಪದಕಕ್ಕಾಗಿ ಮತ್ತೊಂದು ಪಂದ್ಯ ಎದುರಿಸಬೇಕಿದೆ.
ಪಂದ್ಯದ ಆರಂಭದ 4ನೇ ನಿಮಿಷದಲ್ಲಿಯೇ ಭಾರತದ ಪರವಾಗಿ ಪೆನಾಲ್ಟಿ ಕಾರ್ನರ್‌ನಲ್ಲಿ ಗುರ್ಜಿತ್ ಕೌರ್ ಮೊದಲ ಗೋಲು ಗಳಿಸಿದರು. ತದನಂತರ ಆಕ್ರಮಣಕಾರಿ ಆಟವಾಡಿದ ಅರ್ಜೈಂಟೀನಾ ತಂಡದ ನೋಯೆಲ್ ಬ್ಯಾರಿಯೊನ್ಯೂವೊ ಪೆನಾಲ್ಟಿ ಶೂಟೌಟ್‌ನಲ್ಲಿ ಎರಡು ಗೋಲು ಗಳಿಸುವ ಮೂಲಕ ಅರ್ಜೇಂಟಿನಾಕ್ಕೆ ಮುನ್ನಡೆ ಗಳಿಸಿಕೊಟ್ಟರು. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡ ಅರ್ಜೇಂಟಿನಾ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಎದುರು ಭರ್ಜರಿ ಜಯಗಳಿಸಿದ ಭಾರತದ ಕುಸ್ತಿಪಟು ರವಿ ದಹಿಯಾ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿದೆ.
ಮತ್ತೊಬ್ಬ ಭಾರತದ ಕುಸ್ತಿಪಟು ದೀಪಕ್ ಪುನಿಯಾ ಪುರುಷರ ಫ್ರೀಸ್ಟೈಲ್ 86 ಕೆಜಿ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಅಮೆರಿಕದ ಡೇವಿಡ್ ಟೈಲರ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ: ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ: ಮಹಿಳಾ ಹಾಕಿ ತಂಡದ ದಿಟ್ಟ ಆಟಗಾರ್ತಿ ಲಾಲ್‌ರೆಮ್ಸಿಯಾಮಿ..


