ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಐಟಿ, ಈಡಿ, ಸಿಬಿಐಗಳ ಬೆದರಿಕೆಯೊಡ್ಡಿ ರಾಜೀನಾಮೆ ನೀಡುವಂತೆ ಬಿಜೆಪಿ ಮಾಡಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ. ಅಷ್ಟೇ ಅಲ್ಲದೆ ಯಡಿಯೂರಪ್ಪ ಅವರ ಪುತ್ರ ವಿಜೆಯೇಂದ್ರ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದೂ ಬಿಜೆಪಿ ಬೆದರಿಸಲಾಗಿದೆ ಎಂದು ಅದು ಆರೋಪಿಸಿದೆ.
ಕಾಂಗ್ರೆಸ್ ಪಕ್ಷ ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ, “ಬಿಜೆಪಿಯು ಯಡಿಯೂರಪ್ಪ ಅವರನ್ನು ಐಟಿ, ಈಡಿ, ಸಿಬಿಐಗಳ ಬೆದರಿಕೆಯೊಡ್ಡಿ ರಾಜೀನಾಮೆ ಕೊಡಿಸಿದೆ. ಅಷ್ಟೇ ಅಲ್ಲದೆ ಪುತ್ರ ವಿಜಯೇಂದ್ರ ಅವರನ್ನು ಕೂಡಾ ಜೈಲಿಗೆ ಕಳಿಸುತ್ತೇವೆ ಎಂದೂ ಬಿಜೆಪಿ ಬೆದರಿಸಿದೆ” ಎಂದು ಹೇಳಿದೆ.
ಇದನ್ನೂ ಓದಿ: ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್! ಎಂದು ವ್ಯಂಗ್ಯವಾಡಿದ ಕಾಂಗ್ರೆಸ್
“ಕಣ್ಣೀರಿಟ್ಟ ಯಡಿಯೂರಪ್ಪ ಅವರೂ ಸಹ ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುವ ಬೆದರಿಕೆಯೊಡ್ಡಿ ಹೈಕಮಾಂಡ್‌ನ್ನು ಮಣಿಸಿದ್ದಾರೆ ಎಂಬ ಸುದ್ದಿ ಇದೆ” ಎಂದು ಕಾಂಗ್ರೆಸ್ ತಿಳಿಸಿದೆ.
ಈ ಮಧ್ಯೆ ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸುವ ಬಗ್ಗೆ ಬಿಜೆಪಿಯ ಹೇಳಿಕೆ ನೀಡುತ್ತಿದೆ. ಈ ಹೇಳಿಕೆಗೆ ಧ್ವನಿಗೂಡಿಸಿರುವ ಮಾಜಿ ಕಾಂಗ್ರೆಸ್ ಶಾಸಕ, ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಸುಧಾಕರ್ ಅವರು, “ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಎಂದು ಹೆಸರಿಟ್ಟರೆ ತಪ್ಪೇನು” ಎಂದು ಪ್ರಶ್ನಿಸಿದ್ದಾರೆ.
'@BSYBJP ಅವರನ್ನು ಐಟಿ, ಈಡಿ, ಸಿಬಿಐಗಳ ಬೆದರಿಕೆಯೊಡ್ಡಿ ರಾಜೀನಾಮೆ ಕೊಡಿಸಿದೆ ಬಿಜೆಪಿ.
ಪುತ್ರ @BYVijayendraರನ್ನು ಜೈಲಿಗೆ ಕಳಿಸುತ್ತೇವೆ ಎಂದೂ ಸಹ ಬೆದರಿಸಲಾಗಿದೆ.ಕಣ್ಣೀರಿಟ್ಟ BSY ಅವರೂ ಸಹ ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುವ ಬೆದರಿಕೆಯೊಡ್ಡಿ ಹೈಕಮಾಂಡ್‌ನ್ನು ಮಣಿಸಿದ್ದಾರೆ ಎಂಬ ಸುದ್ದಿ ಇದೆ.#BlackMailJanataParty
— Karnataka Congress (@INCKarnataka) August 8, 2021
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ತಪ್ಪೇನು ಎಂದು ಕೇಳಿದ ಸುಧಾಕರ್ ಅವರೇ, ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವಾಗ ತಾವು ಕಾಂಗ್ರೆಸ್‌ನಲ್ಲಿಯೇ ಇದ್ದಿರಿ, ಆಗ ತಾವೇಕೆ ಈ ಪ್ರಶ್ನೆ ಕೇಳಲಿಲ್ಲ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಗೋಸುಂಬೆಗಳು ವೇಗವಾಗಿ ಬಣ್ಣ ಬದಲಿಸುತ್ತವೆ, ತಾವು ಅದಕ್ಕಿಂತಲೂ ಅತಿ ವೇಗವಾಗಿ ಬಣ್ಣ ಬದಲಿಸುತ್ತೀರಿ ಅಲ್ಲವೇ ಸುಧಾಕರ್” ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ಕುಟುಂಬ ರಾಜಕಾರಣ ಪೋಷಿಸುತ್ತ ಇತರರ ಕಡೆ ಕಲ್ಲು ಎಸೆಯುವ ಬಿಜೆಪಿ : ಕಾಂಗ್ರೆಸ್


