HomeUncategorizedದೆಹಲಿ ಚುನಾಚಣಾ ನೋಟ: ಇಳಿಕೆಯಾದ ಮತಚಲಾವಣೆ ಏನನ್ನು ಸೂಚಿಸುತ್ತಿದೆ?

ದೆಹಲಿ ಚುನಾಚಣಾ ನೋಟ: ಇಳಿಕೆಯಾದ ಮತಚಲಾವಣೆ ಏನನ್ನು ಸೂಚಿಸುತ್ತಿದೆ?

ಮತದಾನದ ಪ್ರಮಾಣದಲ್ಲಿ ಕಂಡುಬಂದ ಕಡಿತದ ಬಗ್ಗೆ ಎಲ್ಲರೂ ಪದೇ ಪದೇ ಹೇಳುತ್ತಿರುವುದೇನೆಂದರೆ, ಇದು ಆಡಳಿತಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತೆ ಎನ್ನುವುದು. ಆದರೆ ಪ್ರಶ್ನೆ ಇರುವುದು, ಯಾವ ಆಡಳಿತ ಪಕ್ಷಕ್ಕೆ ಲಾಭ ಆಗುತ್ತಿದೆ?

- Advertisement -
- Advertisement -

ಅನೀಶ್ ನಾಯರ್, ದೆಹಲಿ 
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಈ ಲೇಖನವನ್ನು ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾನುವಾರ ಸಂಜೆಯ ಹೊತ್ತಿಗೆ ದೆಹಲಿಯ ಮತದಾನದ ಪ್ರಮಾಣ 60% ಆಗಿತ್ತು, ಇದು 2014ರ ಲೋಕಸಭೆಯ ಚುನಾವಣೆಯ ಪ್ರಮಾಣಕ್ಕಿಂತ 5% ಕಡಿಮೆ ಹಾಗೂ 2015 ರ ವಿಧಾನಸಭೆ ಚುನಾವಣೆಗಿಂತ 7% ಕಡಿಮೆ. ಮತದಾನ ಭಾನುವಾರದಂದು ಇದ್ದರೂ ಮತದಾನದ ಪ್ರಮಾಣ ಕಡಿಮೆಯಾಗಿದ್ದು ಚಕಿತಗೊಳಿಸುವಂಥದ್ದು.

ಮತದಾನದ ಪ್ರಮಾಣದಲ್ಲಿ ಕಂಡುಬಂದ ಕಡಿತದ ಬಗ್ಗೆ ಎಲ್ಲರೂ ಪದೇ ಪದೇ ಹೇಳುತ್ತಿರುವುದೇನೆಂದರೆ, ಇದು ಆಡಳಿತಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತೆ ಎನ್ನುವುದು. ಆದರೆ ಪ್ರಶ್ನೆ ಇರುವುದು, ಯಾವ ಆಡಳಿತ ಪಕ್ಷಕ್ಕೆ ಲಾಭ ಆಗುತ್ತಿದೆ?

ಇದು ಜಟಿಲ ಪ್ರಶ್ನೆ. ದೆಹಲಿಗೆ ಸಂಬಂಧಪಟ್ಟ ವಿಷಯಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಂಬಂಧಿಸಿದ ವಿಷಯಗಳು. ರಾಷ್ಟ್ರದ ರಾಜಧಾನಿಯೂ ಆಗಿದ್ದು ದೆಹಲಿಗೆ ತನ್ನದೇ ಆದ ಸ್ಥಳೀಯ ಮತ್ತು ಆಡಳಿತಾತ್ಮಕ ಸಮಸ್ಯೆಗಳಿವೆ. ಇದು ಸಂಪೂರ್ಣ ರಾಜ್ಯವೂ ಅಲ್ಲ ಅಥವಾ ಕೇಂದ್ರಾಡಳಿತ ಪ್ರದೇಶವೂ ಅಲ್ಲ. ಅದರೊಂದಿಗೆ, ದೆಹಲಿಯ ನಿವಾಸಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡನ್ನೂ ಜವಾಬ್ದಾರರನ್ನಾಗಿ ಕಾಣುತ್ತಾರೆ.ಅಂದರೆ ಈಗಿರುವ ಹಾಲಿ ಸರಕಾರ ಯಾವುದು? ರಾಜ್ಯ ಸರಕಾರವನ್ನು ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಯೋ ಅಥವಾ ಕೇಂದ್ರದ ಭಾರತೀಯ ಜನತಾ ಪಕ್ಷವೋ? ಅರವಿಂದ್ ಕೇಜ್ರಿವಾಲೋ ಅಥವಾ ನರೇಂದ್ರ ಮೋದಿಯೋ? ಈ ಪ್ರಶ್ನೆಗೆ ಸಮರ್ಪಕ ಸಿಕ್ಕಿಲ್ಲ.

ಮೊದಲು ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ ಮೂರು ಪ್ರಮುಖ ಪಕ್ಷಗಳ ಪ್ರಚಾರವನ್ನು ನೋಡುವ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿಯನ್ನು ಇಡೀ ಭಾರತದ ಒಂದು ಚಿಕ್ಕ ಪ್ರತಿರೂಪ ಎಂದು ಪರಿಗಣಿಸಿ ಪ್ರಚಾರ ಮಾಡಿದರೆ, ಆಮ್ ಆದ್ಮಿ ಪಾರ್ಟಿಯು ಸ್ಥಳೀಯ ವಿಷಯಗಳ ಮೇಲೇ ಗಮನವನ್ನು ಕೇಂದ್ರೀಕರಿಸಿ ಪ್ರಚಾರ ಮಾಡಿದೆ.

ಬಿಜೆಪಿಯ ನಾಯಕರು ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ಮಾತನಾಡಿದರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ‘ಯಶಸ್ಸು’ಗಳ ಆಧಾರದ ಮೇಲೆ ಮತಯಾಚಿಸಿದರು. ಅದಕ್ಕೆ ಉತ್ತರವಾಗಿ ಕಾಂಗ್ರೆಸ್ ಪ್ರಧಾನ ಮಂತ್ರಿಯ ವೈಫಲ್ಯಗಳ ಬಗ್ಗೆ ಮಾತನಾಡಿ, ತನ್ನ ಯೋಜನೆ ‘ನ್ಯಾಯ’ನ ಭರವಸೆಗಳ ಆಧಾರದ ಮೇಲೆ ಮತ ನೀಡುವಂತೆ ಅಪೀಲ್ ಮಾಡಿತು. ಆದರೆ ಆಮ್ ಆದ್ಮಿ ಪಾರ್ಟಿ ಬೇರೆ ಹಾದಿಯನ್ನು ತುಳಿಯಿತು. ದೆಹಲಿಗೆ ಸಂಪೂರ್ಣ ರಾಜ್ಯದ ಮಾನ್ಯತೆಗಾಗಿ ಕೆಲಸ ಮಾಡುವುದಾಗಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆದ ಸುಧಾರಣೆಗಳ ಬಗ್ಗೆ ಒತ್ತು ನೀಡಿ ಮತ್ತು ಉನ್ನತ ಶಿಕ್ಷಣದಲ್ಲಿ ಹಾಗೂ ಸರಕಾರಿ ಉದ್ಯೋಗಗಳಲ್ಲಿ ದೆಹಲಿಯ ನಿವಾಸಿಗಳಿಗೆ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿ ತಮ್ಮ ಪ್ರಚಾರ ಮಾಡಿತು.

ದೆಹಲಿಯನ್ನು ಪರಿಗಣಿಸಿದ ಈ ರೀತಿಯು ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಹೊಸತಲ್ಲ. ಶಬರಿಮಲಾ ಪ್ರಕರಣವನ್ನಿಟ್ಟುಕೊಂಡು ಕೇರಳದಲ್ಲಿ ಎಡಪಕ್ಷದ ಸರಕಾರವನ್ನು ಉರುಳಿಸಲು ಈ ಪಕ್ಷಗಳು ಪ್ರಯತ್ನಿಸಿದರೆ, ಒರಿಸ್ಸಾದಲ್ಲಿ ಫನಿ ಸೈಕ್ಲೋನ್‍ದ ಪರಿಹಾರ ಕಾರ್ಯಾಚರಣೆಗಳ ನಿರ್ವಹಣೆಯಲ್ಲಿ ಆದ ಸಮಸ್ಯೆಗಳನ್ನು ಇಷ್ಯೂ ಮಾಡಿ ನವೀನ್ ಪಟ್ನಾಯಕ್ ಸರಕಾರದ ವಿರುದ್ಧ ಮಾತನಾಡುತ್ತವೆ. ಆದರೆ ಲೋಕಸಭೆ ಚುನಾವಣೆಗಳ ಸಮಯದಲ್ಲಿ ದೆಹಲಿಯ ಸ್ಥಳೀಯ ವಿಷಯಗಳಿಗೆ ಗಮನ ಕೊಡುವ ಗೋಜಿಗೆ ಹೋಗುವುದಿಲ್ಲ ಈ ಎರಡೂ ಪಕ್ಷಗಳು.

ದೆಹಲಿಗೆ ಸಂಪೂರ್ಣ ರಾಜ್ಯದ ಮಾನ್ಯತೆ ಸಿಗಬೇಕು ಎನ್ನುವ ಬೇಡಿಕೆ ಹಳೆಯದಾದರೂ, ದೆಹಲಿಯ ನಿವಾಸಿಗಳು ‘ಎರಡನೇ ದರ್ಜೆ’ಯ ಪ್ರಜೆಗಳು ಎನ್ನುವಂತಹ ಭಾಷೆ ಹೊಸದು. ಅದರೊಂದಿಗೆ, ದೆಹಲಿಯ ನಿವಾಸಿಗಳಿಗೆ ಮೀಸಲಾತಿ ಕಲ್ಪಿಸುವುದು, ನಗರದ ಮೂಲಸೌಕರ್ಯಗಳ ಬಗ್ಗೆ ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಹೇಳಿಕೊಳ್ಳುವುದು ಇತ್ಯಾದಿಗಳೂ ಹೊಸದಾಗಿ ಕಂಡುಬಂದಿದ್ದು. ಇದು ಒಂದು ರೀತಿಯ ಪ್ರಾದೇಶಿಕತ್ವದೆಡೆಗೆ ಇಟ್ಟ ಹಜ್ಜೆಯಾಗಿ ಕಾಣಿಸಿಕೊಳ್ಳುತ್ತಿದೆ.

2014ರಲ್ಲಿ ಮತ್ತು ಈಗಿನ ಆಮ್ ಆದ್ಮಿ ಪಾರ್ಟಿಯ ಪ್ರಚಾರದಲ್ಲಿ ಕಂಡುಬರುವ ವ್ಯತ್ಯಾಸಗಳೂ ಗಮನಾರ್ಹವಾಗಿವೆ. 2014ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ತಾನೊಂದು ರಾಷ್ಟ್ರೀಯ ಪರ್ಯಾಯ ಎಂದು ಆಪ್ ಬಿಂಬಿಸಿತ್ತು. ಆದರೆ ಇಂದು ಐದು ವರ್ಷಗಳ ನಂತರ ಅದು ಪಂಜಾಬ್, ಹರಿಯಾಣ ಮತ್ತು ದೆಹಲಿಗೆ ಮಾತ್ರ ಸೀಮಿತವಾಗಿಸಿಕೊಂಡಿದೆ. ಬೇರೆಡೆ ವಿಸ್ತರಿಸಲು ಪ್ರಯತ್ನಿಸಿದರೂ ವಾಸ್ತವದಲ್ಲಿ ಈ ಮೂರು ರಾಜ್ಯಗಳನ್ನು ಬಿಟ್ಟರೆ ಬೇರೆಲ್ಲೂ ಈ ಪಕ್ಷದ ಅಸ್ತಿತ್ವ ಇಲ್ಲ. ರಾಷ್ಟ್ರೀಯ ಪಕ್ಷಕ್ಕಿಂತಲೂ ತಾನೊಂದು ಪ್ರಾದೇಶಿಕ ಪಕ್ಷ ಎನ್ನುವುದನ್ನು ಆಮ್ ಆದ್ಮಿ ಪಕ್ಷ ಒಪ್ಪಿಕೊಂಡಂತಿದೆ.

1993ರಿಂದ ವಿಧಾನಸಭೆ ಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳೇ ಕೇಂದ್ರವಾಗಿದ್ದವು. ಈ ಸ್ಥಳೀಯ ವಿಷಯಗಳ ಆಧಾರದ ಮೇಲೆಯೇ ಶೀಲಾ ದೀಕ್ಷಿತ್ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದು. ಆಮ್ ಆದ್ಮಿ ಪಾರ್ಟಿಯ ಈ ಸ್ಥಳೀಯ, ಪ್ರಾದೇಶಿಕ ನಿಲುವಿನಿಂದ ಇತರ ಪಕ್ಷಗಳೂ ತಮ್ಮ ರಾಜಕೀಯದಲ್ಲಿ ಬದಲಾವಣೆ ಮಾಡಿಕೊಂಡಂತಿವೆ. 2013ರ ಸೋಲಿನ ನಂತರ ನಿವೃತ್ತರಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಮತ್ತೇ ಕಣಕ್ಕಿಳಿಸುವುದು ಹಾಗೂ ಬಿಜೆಪಿಯ ಜನರಿಂದ ಹರಡಲಾಗುತ್ತಿರುವ ‘ಕೇಂದ್ರದಲ್ಲಿ ಮೋದಿ, ದೆಹಲಿಯಲ್ಲಿ ಕೇಜ್ರಿವಾಲ್’ ಎನ್ನುವಂತಹ ವಾಟ್ಸ್‍ಆಪ್ ಸಂದೇಶಗಳು ಮತ್ತು ಘೋಷಣೆಗಳು ಬದಲಾಗುತ್ತಿರುವ ರಾಜಕೀಯ ವಾತಾವರಣವನ್ನು ಸೂಚಿಸುತ್ತವೆ.

ಆದರೆ ಈ ಬೆಳವಣಿಗೆಗಳು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಆತಂಕ ಹುಟ್ಟಿಸಿಲ್ಲ ಎಂದಿಲ್ಲ. ಏಕೆಂದರೆ, ಇದು ದೆಹಲಿ ಅಷ್ಟೇ ಅಲ್ಲದೇ ಇತರ ರಾಜ್ಯಗಳಲ್ಲಿ ಈ ರಾಷ್ಟ್ರೀಯ ಪಕ್ಷಗಳಿಗೆ ಹುಟ್ಟಿಕೊಳ್ಳುತ್ತಿರುವ ಪರ್ಯಾಯ ಅಥವಾ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಯನ್ನು ಸೂಚಿಸುತ್ತದೆ. ಬಹುತೇಕ ಇವುಗಳು ಕಾಂಗ್ರೆಸ್ಸಿನ ಮತಗಳನ್ನು ತಮ್ಮೆಡೆ ಸೆಳೆಯುತ್ತವೆ, ಕೆಲವೊಮ್ಮೆ ನಾಯಕರನ್ನು ಕೂಡ. ಅದರೊಂದಿಗೆ, ಭಾಷೆ ಮತ್ತು ಜಾತಿ ಜನಾಂಗಗಳನ್ನು ಮೀರಿ ಮತದಾರರನ್ನು ತನ್ನೆಡೆಗೆ ಸೆಳೆದುಕೊಂಡು ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಗಳೂ ಇರುತ್ತವೆ. ದೆಹಲಿಯಲ್ಲಂತೂ ಆಮ್ ಆದ್ಮಿ ಪಕ್ಷವು ಬಿಜೆಪಿಯ ವಿರುದ್ಧ ನಿಂತಿರುವ ಒಂದು ಪ್ರಬಲ ಶಕ್ತಿಯಾಗಿದೆ.

2013, 2014 ಮತ್ತು 2015ರ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಮತಗಳು ನಿರಂತರವಾಗಿ ಕುಸಿದಿವೆ; 2013ರಲ್ಲಿ 25%, 2014ರಲ್ಲಿ 15% ಮತ್ತು 2015ರಲ್ಲಿ 9%. ಹಾಗೂ 2014 ಮತ್ತು 15 ರಲ್ಲಿ ಯಾವ ಸೀಟಲ್ಲೂ ಕಾಂಗ್ರೆಸ್ ಗೆಲುವನ್ನು ಕಂಡಿಲ್ಲ. ಆದರೆ ಆಮ್ ಆದ್ಮಿ ಪಕ್ಷದ ಮತಗಳು 30% ರಿಂದ 33%ಕ್ಕೆ ಏರಿ 2015ರಲ್ಲಿ 54%ಕ್ಕೆ ಏರಿತ್ತು. ಅದೇ ಸಮಯದಲ್ಲಿ ಬಿಜೆಪಿಯ ಮತಗಳ ಪ್ರಮಾಣ 33%, 46% ಮತ್ತು 32% ಆಗಿತ್ತು.

‘ಮೋದಿ ಅಲೆ’ ಇದ್ದ 2014 ರ ಚುನಾವಣೆ ಹೊರತುಪಡಿಸಿ, ಬಿಜೆಪಿಯು ದೆಹಲಿಯಲ್ಲಿ ಹೆಚ್ಚುಕಡಿಮೆ ಒಂದನೇ ಮೂರರಷ್ಟು ಮತದಾರರನ್ನು ತನ್ನೊಂದಿಗೆ ಉಳಿಸಿಕೊಂಡೇ ಬಂದಿದೆ. ಈ ಸಲ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆಯಿದ್ದರೂ 40%ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇಲ್ಲ. ಆದರೆ ಬಿಜೆಪಿಯು ಪ್ರದರ್ಶನ ಹೇಗಿರುತ್ತೆ ಎನ್ನುವುದು ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯು ಇತರ ಮತಗಳನ್ನು ತನ್ನೆಡೆಗೆ ಕ್ರೋಢಿಕರಿಸಬಲ್ಲರೋ ಇಲ್ಲವೋ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಶೀಲಾ ದೀಕ್ಷಿತ್ ಅವರನ್ನು ಕರೆತಂದು ತನ್ನ ಉತ್ಸಾಹವನ್ನು ಹೆಚ್ಚಿಸಿದರೂ, ವಾಸ್ತವದಲ್ಲಿ ಸೀಟುಗಳನ್ನು ಗೆಲ್ಲುವುದು ಕಷ್ಟ ಹಾಗೂ ಆಮ್ ಆದ್ಮಿ ಪಾರ್ಟಿಯ ಗೆಲ್ಲುವ ಸಾಧ್ಯತೆಗಳನ್ನು ಕಡಿತಗೊಳಿಸಿ ಬಿಜೆಪಿ ಮತ್ತೊಮ್ಮೆ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಬಹುದು. 2014 ಮತ್ತು 2015ರಲ್ಲಿ ಕಾಂಗ್ರೆಸ್ ತೋರಿಸಿದ ಕಳಪೆ ಪ್ರದರ್ಶನ ಮರುಕಳಿಸಿದರೆ ಆಮ್ ಆದ್ಮಿ ಪಾರ್ಟಿ 3-4 ಸೀಟು ಅಥವಾ ಅದಕ್ಕಿಂತ ಹೆಚ್ಚೂ ಗೆಲ್ಲಬಹುದು.

ಇದನ್ನು ಓದಿ: ದೆಹಲಿಯ ಸರ್ಕಾರಿ ಶಾಲೆಗಳ ಮಕ್ಕಳು ಕಾನ್ವೆಂಟ್ ಗಳನ್ನ ಮೀರಿಸಿದ್ದು ಹೇಗೆ?

ಇದು 2017ರ ಮುನಿಸಿಪಲ್ ಚುನಾವಣೆಯಲ್ಲಿ ಸ್ಪಷ್ಟವಾಗಿತ್ತು. ಆಗ ಕಾಂಗ್ರೆಸ್ 21% ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆಮ್ ಆದ್ಮಿ ಪಾರ್ಟಿಗೆ 26% ಮತಗಳು ಬಂದಿದ್ದವು ಮತ್ತು ಬಿಜೆಪಿಯ ಹೆಚ್ಚಳ ಕಡಿಮೆಯಿದ್ದ 37% ಮತಗಳನ್ನು ಪಡೆದರೂ ಎಲ್ಲೆಡೆ ಜಯಭೇರಿ ಬಾರಿಸಿತು. ವೋಟುಗಳ ವಿಭಜನೆಯಿಂದ ಬಿಜೆಪಿ 2ನೇ ಮೂರರಷ್ಟು ಪಡೆಯಿತು.

ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳು ಭಿನ್ನ ಎಂದು ಒಪ್ಪಿಕೊಂಡರೂ ಇಲ್ಲಿ ಕಾಣಿಸುತ್ತಿರುವ ಚಿತ್ರಣವನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೂ ಕಾಂಗ್ರೆಸ್‍ನ ಮತಗಳ ಪ್ರಮಾಣ ಹೆಚ್ಚಾದಷ್ಟು, ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಿದಷ್ಟು ಬಿಜೆಪಿಗೇ ಅನುಕೂಲವಾಗಿ 5 ಅಥವಾ ಅದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಬಹುದು. ಇದರಿಂದ ಆಗುವ ಒಂದು ಸಾಧ್ಯತೆಯೆಂದರೆ, ಬಿಜೆಪಿ ವಿರೋಧಿ ಪಕ್ಷಗಳ ರಾಜಕೀಯ ಕಥನ ಬದಲಾಗಬಹುದು. ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ತಂತ್ರ ಮಾರ್ಪಡಿಸಿ ದೆಹಲಿ ಎನ್ನುವುದು ರಾಷ್ಟ್ರದ ಚಿಕ್ಕ ಪ್ರತಿರೂಪವೆಂದು ಪರಿಗಣಿಸದೇ ದೆಹಲಿಗೇ ಮೀಸಲಾದ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...