- Advertisement -
- Advertisement -
ಇಲ್ಲಿ ಗದ್ದಲ ಬೇಡ
ನಮ್ಮ ಜಾಣ ಮೌನವಿದೆ..!
ಎಚ್ಚರಿಕೆ..!!
ಉರಿದ ಬೆಂಕಿ, ಆರಿದ ಬೂದಿ
ಸುಟ್ಟ ಗುರುತಿನ ಪಟ್ಟೆಗಳ ಮೇಲೆ
ಓಟಿನ ಬೀಜಗಳನ್ನು ಬಿತ್ತಲು
ಕಾವಲು ನಿಂತಾಗಿದೆ..!
ಲಾಭದ ಲೆಕ್ಕಾಚಾರದ ನಡುವೆ
ತುಪ್ಪ ಸುರಿಯಲು,
ಕಂತೆಗಳ ಬಾಡು ಸವಿಯಲು ಸಜ್ಜಾಗಿ…
ಕಣ್ಣೀರು, ಅಬ್ಬರದ ದ್ವನಿಯಲ್ಲಿ ದೇಶಪ್ರೇಮದ ಹೆಸರನ್ನು ಸಾಮಾಜಿಕ ಕಳಕಳಿಯ
ಪೊಟ್ಟಣಕ್ಕೆ ಲೇಪಿಸಿ ಸರಕನ್ನು
ಮಾರಲಾಗುತ್ತಿದೆ..!!
ಇಲ್ಲಿ ಗದ್ದಲ ಬೇಡ
ಜಾಣ ಮೌನವಿದೆ
ಆಗಿಂದಾಗ ಡೈನಾಮೆಟ್ ಸ್ಪೋಟಿಸಲು
ಹಚ್ಚಿಸುವ ಕಿಡಿಗಳ ಮೇಲೆ..!
ಕಾನೂನಿನ, ರಾಜಕೀಯ, ಮತದಾರ,
ಸಾಹಿತ್ಯ ಹಾಗೂ ಮಾಧ್ಯಮದ ಜಾಣ ಕುರುಡು
ಕಣ್ಣುಗಳಿವೆ… ಎಚ್ಚರಿಕೆ..!!
-ಗೋಪಾಲಕೃಷ್ಣ ಹುಲಿಮನೆ

(ಗೋಪಾಲಕೃಷ್ಣ ಹುಲಿಮನೆಯವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿಮನೆ ಗ್ರಾಮದ ಯುವ ಕವಿ)
ಇದನ್ನೂ ಓದಿ: ನಮ್ಮೊಳಗೂ ಮನದ ಮಾತುಗಳಿವೆ -ಗೋಪಾಲಕೃಷ್ಣ ಹುಲಿಮನೆಯವರ ಕವನ


