Homeಕರ್ನಾಟಕಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

- Advertisement -
- Advertisement -

ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಿಮ್ಸ್‌ನಲ್ಲಿ ಅಕ್ರಮ ನೇಮಕಾತಿ, ಅವ್ಯವಹಾರ ಎಡೆಬಿಡದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಡಾ. ಗಜಾನನ ನಾಯಕ್ ಡೀನ್ ಕಮ್ ಡೈರೆಕ್ಟರ್ ಆಗಿಬಂದ ನಂತರ ಕಿಮ್ಸ್‌ನಲ್ಲಿ ಆರ್ಥಿಕ ಅನುದಾನ ದುರ್ಬಳಕೆ ಮಿತಿ ಮೀರಿದೆಯೆಂದು ಅದೇ ಸಂಸ್ಥೆಯಲ್ಲಿ ಅಧೀಕ್ಷಕಿಯಾಗಿದ್ದ ವೀಣಾ ಪಾಟೀಲ್ ಜಿಲ್ಲಾಧಿಕಾರಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಬರೋಬ್ಬರಿ ಏಳು ಪುಟಗಳ ದೂರು ಕೊಟ್ಟಿದ್ದೂ ಆಗಿದೆ.

ಅಕ್ರಮ ನೇಮಕಾತಿ ಮನಸೋ ಇಚ್ಚೆ ಡೈರೆಕ್ಟರ್ ಸಾಹೇಬರು ಮಾಡಿಮುಗಿಸಿದ್ದಾರೆಂದು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಸುಮಾರು 100 ತಾಂತ್ರಿಕ ಸಿಬ್ಬಂದಿ ಕಿಮ್ಸ್‌ಗೆ ಅತೀ ಜರೂರ್ ಇರುವಾಗ ಲಾಭದಾಯಕವಾದ ತಾತ್ಕಾಲಿಕ ಸ್ವಚ್ಚತಾಗಾರ, ಕಾವಲುಗಾರ ನೇಮಕಾತಿ ಮಾಡಿಕೊಳ್ಳಲಾಗಿದೆ. 80 ಸ್ವಚ್ಛತಾ ಕರ್ಮಚಾರಿಗಳು ಮತ್ತು 30 ಕಾವಲುಗಾರರು ಇದ್ದರೂ ಸಹ ಸುಮಾರು 90 ಅನಾವಶ್ಯಕ ನೇಮಕಾತಿ ನಡೆದಿದೆ. 2021ರ ಜನವರಿಯಲ್ಲಿ ನೇಮಕವಾಗಿರುವ ಈ ಅನರ್ಹರಿಗೆ 2019ರ ಅಕ್ಟೋಬರ್‌ನಿಂದ ಪೂರ್ವಾನ್ವಯವಾಗುವಂತೆ ಸಂಬಳ ನೀಡಲಾಗಿದೆ. ಈ ಮೂರು ತಿಂಗಳ ವೇತವೇ ಹತ್ತಿರತ್ತಿರ 75 ಲಕ್ಷ. ಇದು ಸರ್ಕಾರಿ ಬೊಕ್ಕಸಕ್ಕೆ ಹೊರೆಯೆಂದು ದೂರಲಾಗಿದೆ.

ಡೀನ್ ಡಾ. ಗಜಾನನ ನಾಯಕ್ ಮಾಡಿರುವ ಹಲವು ನೇಮಕಾತಿಗಳಿಗೆ ಹಣಕಾಸು ಇಲಾಖೆಯಿಂದಾಗಲಿ, ಇನ್ನಿತರ ಸಕ್ಷಮ ಪ್ರಾಧಿಕಾರದ್ದಾಗಲಿ ಅನುಮತಿ ಇಲ್ಲ. ತಾತ್ಕಾಲಿಕ ಮತ್ತು ಖಾಯಂ ಬೊಧಕ ಸಿಬ್ಬಂದಿ ನೇಮಕಾತಿ ಎಲ್ಲ ನೀತಿ-ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಸರ್ಕಾರದಿಂದ ಮಂಜೂರಾತಿಯಿಲ್ಲದ ಹುದ್ದೆಗಳನ್ನು ಹುಟ್ಟು ಹಾಕುವುದರಲ್ಲಿ ಈ ಡೈರೆಕ್ಟರ್ ನಿಸ್ಸೀಮನೆನ್ನುವ ಅಧೀಕ್ಷಕಿ ವೀಣಾ ಪಾಟೀಲ್ ತಾನು ಡೀನ್ ಹೇಳಿದಂತೆ ಕೇಳುವುದಿಲ್ಲವೆಂಬ ಕಾರಣಕ್ಕೆ ತನ್ನ ಕೈಲಿದ್ದ ಆರ್ಥಿಕ ವ್ಯವಹಾರ ಮತ್ತು ನಗದು ವಿಭಾಗ ಬೇರೆಯವರಿಗೆ ವಹಿಸಿದ್ದಾರೆ; ಅಷ್ಟೇ ಅಲ್ಲ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿಲ್ಲದ ’ಹಿರಿಯ ಕಚೇರಿ ಅಧೀಕ್ಷಕಿ’ ಎಂಬ ಬಿರುದು ದಯಪಾಲಿಸಿದ್ದಾರೆಂದು ಆರೋಪಿಸಿದ್ದಾರೆ.

ಡೀನ್ ಡಾ. ಗಜಾನನ ನಾಯಕ್

ಡೀನ್ ಡಾ. ನಾಯಕ್ ತಮ್ಮ ಪರಮಾಪ್ತ ಶಿಷ್ಯೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರನ್ನು ಮೀಸಲಾತಿ ಹಾಗು ನೇಮಕಾತಿ ನಿಯಮಗಳನ್ನೆಲ್ಲ ಧಿಕ್ಕರಿಸಿ ವಿಧಿ ವಿಜ್ಞಾನ ಶಾಸ್ತ್ರ [ಫಾರೆನ್ಸಿಕ್ ಸೈನ್ಸ್] ವಿಭಾಗದ ಸಹಾಯಕ ಅಧ್ಯಾಪಕಿಯಾಗಿ ನೇಮಿಸಿರುವುದು ದೊಡ್ಡ ವಿವಾದ ಹುಟ್ಟು ಹಾಕಿದೆ. ಫೊರೆನ್ಸಿಕ್ ವಿಭಾಗದಲ್ಲಿ ಹುದ್ದೆ ಖಾಲಿಯಿಲ್ಲದಿದ್ದರೂ, ಅವಶ್ಯಕತೆಯಿಲ್ಲದಿದ್ದರೂ ಈ ನೇಮಕಾತಿ ಮಾಡಿಕೊಳ್ಳಲಾಗಿದೆಯೆಂದು ಹೆಸರು ಹೇಳಿಕೊಳ್ಳದ ನೌಕರರು ಹೇಳುತ್ತಾರೆ. ಕೆಲವು ತಿಂಗಳ ಹಿಂದೆ ಆ ಅಧ್ಯಾಪಕಿಗೆ ಯಾವುದೇ ನಿಯಮ ಬದ್ದ ಪ್ರಕಿಯೆಯಿಲ್ಲದೆ ಖಾಯಂ ಮಾಡಿ ಲಕ್ಷಗಟ್ಟಲೆ ಸಂಬಳ ಬರುವಂತೆ ನೋಡಿಕೊಳ್ಳಲಾಗಿದೆ!

ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಖಾಯಂ ಅಧ್ಯಾಪಕರ ನೇಮಿಸುವಾಗ ವೈದ್ಯಕೀಯ ಶಿಕ್ಷಣ ಇಲಾಖೆಯ ಅನುಮತಿ, ಅನುಮೋದನೆ ಮತ್ತು ಆದೇಶವಿರಲೇಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರ ನೇಮಕಾತಿಯಲ್ಲಿ ಈ ನಿಯಮಗಳ್ಯಾವುದನ್ನು ಪ್ರಜ್ಞಾಪೂರ್ವಕವಾಗೆ ಪಾಲಿಸಿಲ್ಲ ಎನ್ನಲಾಗಿದೆ. ತರಾತುರಿಯಲ್ಲಿ ಈ ನೇಮಕಾತಿ ನಡೆಸಲಾಗಿದ್ದು, ಡಾ.ನಾಯಕ್ ಕಿಮ್ಸ್ ನಿರ್ದೇಶಕರಾಗಿ ಬಂದ ಒಂದೇ ತಿಂಗಳಲ್ಲಿ ಅಂದರೆ 07-02-2020ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಫೊರೆನ್ಸಿಕ್ ಸೈನ್ಸ್ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಬ್ಯಾಕ್‌ಲಾಗ್‌ನಲ್ಲಿ ಒಂದು ಸಹಾಯಕ ಪ್ರಾಧ್ಯಾಪಕಿ ಹುದ್ದಗೆ ಅರ್ಜಿ ಕರೆಯಲಾಗಿದೆ. ವಾಸ್ತವಿಕವಾಗಿ ಕಿಮ್ಸ್‌ನಲ್ಲಿ ಇಂತದೊಂದು ಹುದ್ದೆ ಖಾಲಿಯಿರುವುದಿಲ್ಲ.

ಹಿಂದಿನ ನೇಮಕಾತಿ ಪ್ರಕಟಣೆಯಲ್ಲಿ ಸೂಚಿಸಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹುದ್ದೆಗಳು ಭರ್ತಿಯಾಗದಿದ್ದರಷ್ಟೇ ಅದನ್ನು ಮುಂದಿನ ಅಧಿಸೂಚನೆಯಲ್ಲಿ ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುತ್ತದೆ. ಆದರೆ 8-8-2019 ಮತ್ತು 12-12-2019ರ ನೇಮಕಾತಿ ಪ್ರಕಟಣೆಯಲ್ಲಿ ಸದ್ರಿ ಹುದ್ದೆಯ ಪ್ರಸ್ತಾಪವೇ ಇಲ್ಲ. ಆದರೂ ಫೊರೆನ್ಸಿಕ್ ಸೈನ್ಸ್ -ಅಸಿಸ್ಟೆಂಟ್ ಪ್ರೊಫೆಸರ್ ಎಸ್‌ಟಿ ಲೇಡಿ ಬ್ಯಾಕ್ ಲಾಗ್ ಎಂದು ಸುಳ್ಳು ನಮೂದಿಸಲಾಗಿದೆ! ಕಿಮ್ಸ್‌ನಲ್ಲಿ ಒಟ್ಟೂ 49 ಸಹಾಯಕ ಅಧ್ಯಾಪಕ ಹುದ್ದೆಗಳಿವೆ. ಮೀಸಲಾತಿ ಅನುಪಾತದಂತೆ ಇದರಲ್ಲಿ ಎಸ್‌ಟಿ ವರ್ಗಕ್ಕೆ ಎರಡು ಹುದ್ದೆ ಮೀಸಲಿರಬೇಕು. ಡಾ.ಆಂಜನೇಯ ಎಸ್‌ಟಿ ಪುರುಷ ಮತ್ತು ಭಾಗ್ಯ ಶ್ರೀ ಬೋಯರ್ ಎಸ್‌ಟಿ ಮಹಿಳೆ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಧ್ಯ ಎಸ್‌ಟಿ ಪ್ರವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅವಕಾಶವಿಲ್ಲ. ವಿಧಿವಿಜ್ಞಾನ ವಿಭಾಗಕ್ಕೆ ಮಂಜೂರಾಗಿರುವುದು ಒಂದೇ ಒಂದು ಸಹಾಯಕ ಪ್ರಾಧ್ಯಾಪಕ ಸ್ಥಾನ. ಇದೂ ಕೂಡ ಭರ್ತಿಯಾಗಿದೆ. ಆದ್ದರಿಂದ ಮತ್ತೊಂದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ನಡೆಸುವಂತಿಲ್ಲ.

ಇದೆಲ್ಲ ಮರೆಮಾಚಿ ನೇಮಕಾತಿಗೆ ರಹಸ್ಯ ಅಧಿಸೂಚನೆ ಹೊರಡಿಸಲಾಗಿದೆ. ಇದೊಂದು ರಾಜ್ಯ ಮಟ್ಟದ ಆಯ್ಕೆಯಾದ್ದರಿಂದ ರಾಜ್ಯ ಮಟ್ಟದ ಎರಡು ದಿನ ಪತ್ರಿಕೆ [ಒಂದು ಕನ್ನಡ ಮತ್ತೊಂದು ಇಂಗ್ಲಿಷ್] ಎಲ್ಲಾ ಆವೃತ್ತಿಯಲ್ಲಿ ಜಾಹೀರಾತು ನೀಡಬೇಕು. ಆದರೆ ಸ್ಥಳೀಯ ಪತ್ರಿಕೆಯಲ್ಲಷ್ಟೇ ಪ್ರಕಟಣೆ ಬರುವಂತೆ ನೋಡಿಕೊಳ್ಳಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ ನೀಡಬೇಕಾದ 371 [ಜೆ]ದಂತೆ ಶೇ.8 ಮೀಸಲಾತಿಗೂ ಆಸ್ಪದ ಕೊಡದೆ ಸರ್ಕಾರಿ ಆದೇಶ ಧಿಕ್ಕರಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ಆಕ್ಷೇಪಗಳಿಗೆ ಕನಿಷ್ಟ 15 ದಿನ ಕಾಲಾವಕಾಶ ಕೊಡಬೇಕು. ಅಂತಿಮ ಆಯ್ಕೆ ಪಟ್ಟಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆ ಪಡೆದು ನೇಮಕಾತಿ ಆದೇಶ ಕೊಡಬೇಕು. ಆದರೆ ಕಿಮ್ಸ್‌ನ ಫೊರೆನ್ಸಿಕ್ ಪ್ರಾಧ್ಯಾಪಕಿ ನೇಮಕಾತಿ ಪ್ರಹಸನದಲ್ಲಿ 17-02-2020ರಂದು ಸಂದರ್ಶನ ನಡೆಸಿದಂತೆ ದಾಖಲೆ ಸೃಷ್ಟಿಸಲಾಗಿದೆ. 20-07-2020ರಂದು ಡಾ.ಮಹಾಲಕ್ಷ್ಮಿ ಕರ್ಲವಾಡ್‌ಗೆ ನೇಮಕಾತಿ ಆದೇಶ ಸಿಕ್ಕಿಬಿಟ್ಟಿದೆ! ತಾತ್ಕಾಲಿಕ ಪಟ್ಟಿ ಪ್ರಕಟವಾದಂದೇ ನೇಮಕಾತಿಯೂ ನಡೆದುಹೋಗಿದೆ!! ಆಕ್ಷೇಪಣೆಗೆ ಯಾವ ಅವಕಾಶವು ಕೊಟ್ಟಿಲ್ಲ. ಈ ಆದೇಶಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆಯೂ ಇಲ್ಲ. ಹಾಗಾಗಿ ಈ ನೇಮಕಾತಿಗೆ ಯಾವುದೆ ಸಿಂಧುತ್ವವಿಲ್ಲ. ಇಡೀ ಖೋಟಾ ಪ್ರಕ್ರಿಯೆಯಲ್ಲಿ ಕಿಮ್ಸ್ ನಿರ್ದೇಶಕ ಡಾ.ನಾಯಕ್ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್‌ಕುಮಾರ್‌ರನ್ನು ಯಾಮಾರಿಸಿದರೋ? ಅಥವಾ ಅನಿಲ್‌ಕುಮಾರ್ ಗೊತ್ತಿದ್ದೂ ಸುಮ್ಮನಿದ್ದಾರೋ ಅರ್ಥವಾಗುವುದಿಲ್ಲವೆಂದು ಕಿಮ್ಸ್‌ನಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಿ ಡಾ.ಸುಧಾಕರ್‌ಗೆ ಕಿಮ್ಸ್‌ನ ಅಕ್ರಮ ನೇಮಕಾತಿ ಬಗ್ಗೆ ತಿಳಿದಿದೆಯೇ? ಇನ್ನಾದರು ಸಂಬಂಧಿಸಿದವರು ಎಚ್ಚೆತ್ತು ಪರಿಶಿಷ್ಟ ಪಂಗಡ ಅರ್ಹರಿಗಾದ ಅನ್ಯಾಯ ಸರಿಪಡಿಸುವರಾ? ಅನುದಾನಗಳು ಪೋಲಾಗುತ್ತಿರುವುದು, ಆಗುತ್ತಿರುವ ಆಧ್ವಾನಗಳ ತನಿಖೆ ನಡೆಸುವರಾ? ಕಾದು ನೋಡಬೇಕು.


ಇದನ್ನೂ ಓದಿ: ಕಾರವಾರ: ಕಾಂಗ್ರೆಸ್ ಕಾರ್ಯಕರ್ತನಿಗೆ PSIನಿಂದ ಥಳಿತ ಆರೋಪ – ಠಾಣೆಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...