ಪಕ್ಷದ ರ್ಯಾಲಿಯ ಸಂದರ್ಭದಲ್ಲಿ ಉನ್ಮಾದಗೊಂಡ ಬಿಜೆಪಿ ಕಾರ್ಯಕರ್ತರು ತ್ರಿಪುರದ ಹಲವು ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೇ ಸಿಪಿಎಂ ಕಚೇರಿಯ ಮೇಲೆ ಬೆಂಕಿಯಾಕಿದ್ದರಿಂದ ಸಿಪಿಎಂ ಪಕ್ಷ ಆಕ್ರೋ ವ್ಯಕ್ತಪಡಿಸಿದೆ.
ತ್ರಿಪುರದ ಪ್ರತಿಭಾಡಿ ಕಲಾಂ ಮತ್ತು ದೇಶರ್ ಕಥಾ ಎಂಬ ಪತ್ರಿಕಾ ಕಚೇರಿಗಳನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ದಾಳಿಯಲ್ಲಿ ನಾಲ್ವರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
Agartala
Today at about 4.30 pm a mob of 200-300 BJP workers led by party's state leaders to stormed into the Newspaper office of 'Pratibadi Kalam' and vandalised. The goons unleashed terror for about 30 minutes and beaten up its reporter Prasrnjt Roy. @PMOIndia @HMOIndia pic.twitter.com/zHbB21D6OA— NUJ(India) (@NUJIndia) September 8, 2021
ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಆಡಳಿತದ ವೈಫಲ್ಯವನ್ನು ತಿಳಿಸಲು ಇಡೀ ರಾಜ್ಯಾಧ್ಯಂತ ಸಿಪಿಐಎಂ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದನ್ನು ಸಹಿಸದೆ ಬಿಜೆಪಿ ಈ ರೀತಿ ದಾಳಿ ನಡೆಸುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತಿಳಿಸಿದ್ದಾರೆ.
ನಮ್ಮ ಕಾರ್ಯಕರ್ತರ ಮೇಲೂ ಬಿಜೆಪಿ ಗೂಂಡಾಗಳು ದಾಳಿ ನಡೆಸುತ್ತಾ ಬಂದಿದ್ದಾರೆ. ಅದಕ್ಕಾಗಿ ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಕಚೇರಿಗೆ, ವಾಹನಗಳಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಪೊಲೀಸ ಸ್ಥಳದಲ್ಲಿಯೇ ಹಾಜರಿದ್ದರು. ಆದರೆ ದುರ್ಘಟನೆ ನಡೆಯುವುದನ್ನು ಅವರು ತಪ್ಪಿಸಲಿಲ್ಲ. ಪೊಲೀಸರ ಸಹಕಾರದೊಂದಿಗೆ ಈ ಗಲಾಟೆ ನಡೆದಿದೆ ಎಂದು ಸಿಪಿಐಎಂ ಆರೋಪಿಸಿದೆ. ಈ ಘಟನೆಯನ್ನು ತ್ರಿಪುರ ಪತ್ರಕರ್ತರ ಒಕ್ಕೂಟ ಖಂಡಿಸಿದೆ.
ಇದನ್ನೂ ಓದಿ: ಹರಿಯಾಣ :ಕರ್ನಾಲ್ ಶಾಶ್ವತ ಪ್ರತಿಭಟನಾ ಸ್ಥಳವಾಗಿ ಉಳಿಯಬಹುದು- ರೈತರ ಎಚ್ಚರಿಕೆ


