Homeಅಂಕಣಗಳುಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು...

ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

- Advertisement -
- Advertisement -

ಆಗಸ್ಟ್ 20 ದಿವಂಗತ ಪ್ರಧಾನಿ ರಾಜೀವ್ ಗಾಂಧೀ ಅವರು ಹುಟ್ಟಿದ ದಿನ. ಅಲ್ಲಿಂದಾಚೆ ಇಪ್ಪತ್ತು ದಿನಗಳ ಅಂತರದಲ್ಲಿ ಎದುರಾಗುವುದು ಸೆಪ್ಟಂಬರ್ 12. ರಾಜೀವ್ ಅವರ ತಂದೆ ಮತ್ತು ಕಾಂಗ್ರೆಸ್ ಪಕ್ಷದ ಗಣ್ಯ ನಾಯಕರಲ್ಲಿ ಒಬ್ಬರಾಗಿದ್ದ ಫಿರೋಜ್ ಗಾಂಧೀ ಜನಿಸಿದ ದಿನ ಅದು. ಅವರು ಗತಿಸಿದ ದಿನ ಕೂಡ ಸೆಪ್ಟಂಬರ್ ಎಂಟು. ಈ ಎರಡೂ ದಿನಗಳು ವರ್ಷವರ್ಷವೂ ಹೇಳ ಹೆಸರಿಲ್ಲದೆ ಸರಿದುಹೋಗುತ್ತವೆ. ನೆಹರೂ ಅಳಿಯನ ಸರಳ ಸಾರ್ವಜನಿಕ ಸ್ಮರಣೆಯೂ ಕಾಂಗ್ರೆಸ್ಸಿಗೆ ಬೇಕಿಲ್ಲ.

ನೆಹರೂ ಮನೆತನಕ್ಕೆ ಗಾಂಧೀ ಎಂಬ ಕುಲನಾಮ ಅಥವಾ ಕುಟುಂಬನಾಮವು ಬಲು ದೊಡ್ಡ ಆಸ್ತಿ. ಈ ಆಸ್ತಿಯ ಕಾರಣಪುರುಷ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಎಂಬ ಗಟ್ಟಿಗಿತ್ತಿ ಇಂದಿರಾಗಾಂಧೀ ಎನಿಸಿಕೊಂಡದ್ದು, ಆಕೆಯ ಮಕ್ಕಳು, ಮೊಮ್ಮಕ್ಕಳಾದ ರಾಜೀವ್, ಸಂಜಯ್, ರಾಹುಲ್, ಪ್ರಿಯಾಂಕಾ, ವರುಣ್, ಸೊಸೆಯಂದಿರಾದ ಸೋನಿಯಾ ಮತ್ತು ಮೇನಕಾ ಅವರು ಹೆಸರುಗಳಿಗೆ ಗಾಂಧೀ ಎಂಬ ಕುಟುಂಬನಾಮ ಸೇರಿಕೊಂಡಿರುವ ಕಾರಣ ಫಿರೋಜ್ ಗಾಂಧಿಯೇ.

ಪಾಕಿಸ್ತಾನದ ಪ್ರಮುಖ ರಾಜಕೀಯ ಕುಟುಂಬದ ಅಳಿಯ ಆಸೀಫ್ ಅಲಿ ಜರ್ದಾರಿ. ಹತ್ಯೆಗೀಡಾಗುವ ಮುನ್ನ ಆ ದೇಶದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರ ಪತಿ. ಬೆನಜೀರ್ ಹತ್ಯೆಯ ನಂತರ ಪಾಕಿಸ್ತಾನದ ಪ್ರಧಾನಿಯಾಗಿ ಮೆರೆದರು. ಚಾಣಾಕ್ಷ ಚಂದ್ರಬಾಬು ನಾಯ್ಡು ಮಗಳ ಕೊಟ್ಟ ಮಾವ ಎನ್.ಟಿ.ಆರ್. ಅವರನ್ನೇ ನುಂಗಿ ನೀರು ಕುಡಿದು ಅಧಿಕಾರದ ಗದ್ದುಗೆಯನ್ನು ಕೈವಶ ಮಾಡಿಕೊಂಡವರು. ಶಿವಸೇನೆಯ ಮನೋಹರ ಜೋಷಿ ಅವರ ರಾಜಕೀಯ ಭವಿಷ್ಯಕ್ಕೆ ಬೆಂಕಿ ಇಕ್ಕಿದ್ದವರು ಅವರ ರಿಯಲ್ ಎಸ್ಟೇಟ್ ಉದ್ಯಮಿ ಆಳಿಯನ ಹೆಸರು ಗಿರೀಶ್ ವ್ಯಾಸ್. ಬಿಜೆಪಿಯ ಅಂತಃಪುರದಲ್ಲಿ ಗುಸುಗುಸುವಿಗೆ ಕಾರಣರಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಅಳಿಯ ರಂಜನ್ ಭಟ್ಟಾಚಾರ್ಯ ಅವರು. ದೇವರಾಜ ಅರಸು ಅವರ ಅಳಿಯ ಎಂ.ಡಿ.ನಟರಾಜ್ ಮತ್ತು ರಾಮಕೃಷ್ಣ ಹೆಗಡೆ ಅಳಿಯ ಮನು ನಿಚ್ಚಾನಿ ಒಂದು ಕಾಲದಲ್ಲಿ ಸುದ್ದಿ ಮಾಡಿದ್ದ ರಾಜಕೀಯ ಕುಟುಂಬಗಳ ಅಳಿಯಂದಿರು. ಸೋನಿಯಾ ಗಾಂಧೀ ಅವರ ಅಳಿಯ ರಾಬರ್ಟ್ ವಾಡ್ರಾ ಅವರೂ ವಿವಾದದ ರಾಡಿ ಎಬ್ಬಿಸಿದ್ದವರೇ.

ಅಳಿಯಂದಿರು ರಾಜಕಾರಣದ ಕನಸು ಕಾಣುವುದನ್ನು ತಪ್ಪೆಂದು ಹೇಳಲಾಗದು. ನೆಲದ ಕಾನೂನೂ ಅದಕ್ಕೆ ಅಡ್ಡಬಾರದು. ಆದರೆ ರಾಜಕೀಯ ಅಧಿಕಾರವು ಉಳ್ಳವರಲ್ಲೇ ಹೆಪ್ಪುಗಟ್ಟಿರುವ ಪರಂಪರೆಯೊಂದು ಈ ದೇಶದಲ್ಲಿದೆ. ದೊಡ್ಡವೂ ಸಣ್ಣವೂ ಸೇರಿ 100-200 ಕುಟುಂಬಗಳೇ ಈ ದೇಶವನ್ನು ಆಳುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ಹೊರಬಿದ್ದಿರುವ ಸಂಗತಿ. ಜನತಂತ್ರದ ಹೆಸರಿನಲ್ಲಿ ನಡೆಯುತ್ತಿರುವ ಕುಚೋದ್ಯ. ಬಿಜೆಪಿ ಸೇರಿದಂತೆ ಯಾವ ಪಕ್ಷವೂ ಈ ಮಾತಿಗೆ ಹೊರತಲ್ಲ. ಒಂದು ಪಕ್ಷ ಹೆಚ್ಚು ಅಪರಾಧಿ ಇದ್ದೀತು, ಮತ್ತೊಂದು ಕಡಿಮೆ ಇದ್ದೀತು. ಆದರೆ ಎಲ್ಲ ಪಕ್ಷಗಳೂ ಅಪರಾಧಿಗಳೇ. ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆ (ಹಮಾಮ್ ಮೇಂ ಸಬ್ ನಂಗಾ) ಎಂಬ ಗಾದೆ ಮಾತಿನಂತೆ.

ವಂಶಪಾರಂಪರ್ಯ ರಾಜಕಾರಣದ ಈ ಅನಿಷ್ಟ ದಿಲ್ಲಿಯಿಂದ ಹಳ್ಳಿಯತನಕ ಬೇರು ಬಿಟ್ಟಿದೆ. ಹೇರಳ ಹಣಗಳಿಸಲು ರಾಜಕಾರಣವೇ ರಾಜಮಾರ್ಗ ಎಂಬುದು ಜನಜನಿತ ಸಂಗತಿ. ಈ ಕಾರಣದಿಂದಾಗಿಯೇ ರಾಜಕಾರಣವು ಕೌಟುಂಬಿಕ ವ್ಯಾಪಾರ-ವ್ಯವಹಾರದ ರೂಪ ತಳೆದಿದೆ.

ಅಳಿಯಂದಿರ ಮಾತಿಗೆ ಮರಳೋಣ. ಮೇಲೆ ಹೇಳಿದ ಅಳಿಯಂದಿರ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವವರು ಜವಾಹರಲಾಲ್ ನೆಹರೂ ಅವರ ಅಳಿಯ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಅವರ ಪತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. 1930ರಲ್ಲಿ ಫೈಜಾಬಾದ್ ಜೈಲಿನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರೊಂದಿಗೆ 19 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು (ಯೋಗಿ ಆದಿತ್ಯನಾಥ್ ಸರ್ಕಾರ ಫೈಜಾಬಾದನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದೆ). ಇಂದಿರಾ ಪ್ರಿಯದರ್ಶಿನಿ ಅವರೊಡನೆ ವಿವಾಹದ ನಂತರ ಸ್ವತಂತ್ರ ಭಾರತದ ಲೋಕಸಭೆಯ ಸದಸ್ಯರಾಗಿ ಆರಿಸಿ ಬಂದಿದ್ದರು. ನೆಹರೂ ನೇತೃತ್ವದ ಸರ್ಕಾರದ ಹಣಕಾಸು ಮಂತ್ರಿ ಟಿ.ಟಿ.ಕೃಷ್ಣಮಾಚಾರಿ ಅವರ ಮೇಲೆ ಆರ್ಥಿಕ ಅವ್ಯವಹಾರದ ಆಪಾದನೆಗಳನ್ನು ಮಾಡಿ ಅಲ್ಲೋಲಕಲ್ಲೋಲ ಉಂಟು ಮಾಡಿದ್ದರು. ಲೋಕಸಭೆ ಬೆಕ್ಕಸ ಬೆರಗಾಗಿತ್ತು. ಕೃಷ್ಣಮಾಚಾರಿ ಅವರು ರಾಜೀನಾಮೆ ನೀಡಬೇಕಾಗಿ ಬರುತ್ತದೆ.

ಉತ್ತರಪ್ರದೇಶದ ರಾಯಬರೇಲಿಯಿಂದ ಕಾಂಗ್ರೆಸ್ ಸಂಸದನಾಗಿ 1952ರಲ್ಲಿ ಆರಿಸಿ ಬರುವ ಫಿರೋಜ್ ಗಾಂಧೀ ಮೊದಲ ಕೆಲವು ವರ್ಷಗಳ ಕಾಲ ಹಿಂದಿನ ಬೆಂಚಿನ ಸದಸ್ಯರಾಗಿ ಕಾಲ ಕಳೆಯುತ್ತಾರೆ. 1956 ಮತ್ತು 1957ರಲ್ಲಿ ಭ್ರಷ್ಟಾಚಾರ ವಿರೋಧೀ ಆಂದೋಲನದ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಆಗ ತಾನೇ ಕಣ್ಣು ಬಿಟ್ಟಿದ್ದ ಸರ್ಕಾರಿ ಸಂಸ್ಥೆ ಭಾರತೀಯ ಜೀವವಿಮಾ ನಿಗಮ ತನ್ನ ಐವತ್ತೈದು ಲಕ್ಷ ಪಾಲಿಸಿದಾರರ ಹಣದ ದುರುಪಯೋಗದ ಹಗರಣದ ಕೇಂದ್ರಬಿಂದು ಆಗುತ್ತದೆ. ಷೇರು ಮಾರುಕಟ್ಟೆ ಜೂಜು ಷೋಕಿಗೆ ಕುಖ್ಯಾತನಾಗಿದ್ದ ಹರಿದಾಸ್ ಮುಂಧ್ರಾ ಎಂಬಾತನ ಕಂಪನಿಗಳ ಷೇರುಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ದರ ತೆತ್ತು ಖರೀದಿಸಲು ಎಲ್‌ಐಸಿ ಪಾಲಿಸಿದಾರರ ಕಂತುಗಳ ಹಣವಾದ 144 ಲಕ್ಷ ರುಪಾಯಿಯನ್ನು ಬಳಸಲಾಗುತ್ತದೆ.

ಆಡಳಿತ ಪಕ್ಷದ ಸದಸ್ಯನಾಗಿ ಫಿರೋಜ್ ಲೋಕಸಭೆಯಲ್ಲಿ ನಿಂತು ತಮ್ಮ ಮಾವನ ಸರ್ಕಾರದ ಹುಳುಕನ್ನು ಬಯಲಿಗೆಳೆಯುತ್ತಾರೆ. ಈ ಹಗರಣ ಸಾರ್ವಜನಿಕ ಗದ್ದಲ ಆಗುವುದು ನೆಹರೂಗೆ ಬೇಕಿರಲಿಲ್ಲ. ಸರ್ಕಾರದ ವರ್ಚಸ್ಸಿಗೆ ಹೊಡೆತ ಬೀಳುತ್ತದೆಂಬ ಆಶಂಕೆ ಅವರದು. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಸಿ.ಛಾಗ್ಲಾ ಬಹಿರಂಗ ಬೈಠಕ್ಕುಗಳಲ್ಲಿ ನಡೆಸುವ ನ್ಯಾಯಾಂಗ ತನಿಖೆಯನ್ನು ನೋಡಲು ಜನ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಾರೆ. 1958ರಲ್ಲಿ ಹಗರಣದ ಆಪಾದನೆಗಳು ಸಾಬೀತಾಗುತ್ತವೆ. ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ರಾಜೀನಾಮೆ ಕೊಡಬೇಕಾಗುತ್ತದೆ. ಹರಿದಾಸ್ ಮುಂಧ್ರಾನನ್ನು ದಿಲ್ಲಿಯ ಪ್ರತಿಷ್ಠಿತ ಹೊಟೆಲ್ ಕ್ಲ್ಯಾರಿಡ್ಜಸ್‌ನ ವಿಲಾಸೀ ಕೋಣೆಯಿಂದ ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗುತ್ತದೆ.

ಇಂದಿರಾ-ಫಿರೋಜ್ ಬದುಕಿನಲ್ಲಿ ಆ ವೇಳೆಗಾಗಲೇ ಬಿರುಕುಗಳು ಹಿರಿದಾಗಿರುತ್ತವೆ. ಪರಸ್ಪರರ ನಿಷ್ಠೆಯ ಕುರಿತು ಒಡಕು ಮಾತುಗಳು ದಿಲ್ಲಿ ರಾಜಕಾರಣದ ಮೊಗಸಾಲೆಯಲ್ಲಿ ಆ ಹೊತ್ತಿಗಾಗಲೆ ಗಡಚಿಕ್ಕತೊಡಗಿರುತ್ತವೆ. ಫಿರೋಜ್ ಅವರನ್ನು ನೆಹರೂ ಮತ್ತು ಇಂದಿರಾ ದೂರವೇ ಇಟ್ಟಿದ್ದು ಜನಜನಿತ.

ಫಿರೋಜ್ ಗಾಂಧೀ ಹುಟ್ಟಿದ್ದು ಮುಂಬಯಿಯಲ್ಲಿ. 1912ರ ಸೆಪ್ಟಂಬರ್ 12ರಂದು. ಗುಜರಾತೀ ಅಡ್ಡಹೆಸರಿದ್ದ ಜಹಾಂಗೀರ್ ಫೆರಾದೂನ್ ಗಾಂಧೀ ಮತ್ತು ರತ್ತೀಮಾಯಿ ಗಾಂಧೀ ಫಿರೋಜ್ ತಂದೆ ತಾಯಿ. ನಾಲ್ಕು ಮಕ್ಕಳ ತಂದೆ ಫೆರಾದೂನ್ ನೌಕಾವಿಷಯದ ಎಂಜಿನಿಯರ್. ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಅನಾಥ ಕುಟುಂಬ ಅಲಹಾಬಾದಿನಲ್ಲಿದ್ದ ಫೆರಾದೂನ್ ಗಾಂಧೀಯ ಚಿಕ್ಕಮ್ಮನ ಆಶ್ರಯಕ್ಕೆ ಸರಿಯುತ್ತದೆ. ಅಲ್ಲಿ ಬೆಳೆಯುವ ಫಿರೋಜ್ ಮತ್ತು ಇಂದಿರಾ ಪ್ರೀತಿಸಿ ಮದುವೆ ಆಗುತ್ತಾರೆ. ಅದು 1942ರ ಮಾರ್ಚ್ 26. ರಾಮನವಮಿಯ ದಿನ. (ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಲಹಾಬಾದಿನ ಹೆಸರನ್ನು ಪ್ರಯಾಗರಾಜ ಎಂದು ಬದಲಾಯಿಸಿದೆ).

ಮಹಾತ್ಮಾಗಾಂಧೀ ಮುಂದೆ ನಿಂತು ಈ ಮದುವೆ ಮಾಡಿಸುತ್ತಾರೆ. ಗಾಂಧೀಜಿ ಪ್ರಭಾವಕ್ಕೊಳಗಾಗುವ ಫಿರೋಜ್ ಗಾಂಧೀ ತಮ್ಮ ಕುಲನಾಮದ ಕಾಗುಣಿತವನ್ನು Gandhyಗೆ ಬದಲಾಗಿ Gandhi ಎಂದು ಬದಲಾಯಿಸಿಕೊಳ್ಳುತ್ತಾರೆ.

ಫಿರೋಜ್ ಹೃದಯಾಘಾತದಿಂದ 1960ರ ಸೆಪ್ಟಂಬರ್ ಎಂಟರಂದು ಕಡೆಯುಸಿರೆಳೆಯುತ್ತಾರೆ. ಆಗ ಅವರಿಗೆ ವಯಸ್ಸು 48 ಕೂಡ ಆಗಿರುವುದಿಲ್ಲ. ಮೂರು ದಿನ ಬಾಕಿ ಇರುತ್ತವೆ. ಅವರ ಅಂತ್ಯಸಂಸ್ಕಾರ ಪಾರ್ಸಿ ಮತ್ತು ಹಿಂದೂ ಪದ್ಧತಿಗಳ ಪ್ರಕಾರ ನಡೆಯುತ್ತದೆ. ದಿಲ್ಲಿಯ ನಿಗಮಬೋಧ್ ಘಾಟ್‌ನಲ್ಲಿ ತಂದೆಯ ಚಿತೆಗೆ ಕೊಳ್ಳಿ ತಗುಲಿಸುತ್ತಾರೆ ಎಳೆಯ ರಾಜೀವಗಾಂಧೀ. ಚಿತಾಭಸ್ಮದ ಅರ್ಧದಷ್ಟನ್ನು ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರೆ ಇನ್ನರ್ಧವನ್ನು ಅದೇ ನಗರದ ಪಾರ್ಸೀ ರುದ್ರಭೂಮಿಯಲ್ಲಿ ಹುಗಿದು ಕಟ್ಟಿದ ಸಮಾಧಿಯನ್ನು ಈಗಲೂ ಕಾಣಬಹುದು.

ನೆಹರೂ- ಗಾಂಧೀ ವಂಶದ ಮೂಲ ನೆಲೆ ಅಲಹಾಬಾದಿನ ’ಆನಂದಭವನ’. ಫಿರೋಜ್ ಗಾಂಧೀ ಸಮಾಧಿಗೆ ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರ. ಈ ಸಂಗತಿ ಆನಂದಭವನಕ್ಕೆ ಹರಿಯುವ ಬಹುತೇಕ ಪ್ರವಾಸಿಗಳಿಗೆ ತಿಳಿಯದು. ತಿಳಿಯುವಂತೆ ಮಾಡುವ ಪ್ರಯತ್ನವನ್ನು ನೆಹರೂ-ಗಾಂಧೀ ಮನೆತನ ಮಾಡಿಲ್ಲ.


ಇದನ್ನೂ ಓದಿ: ಸರ್ಕಾರಿ ದರೋಡೆಗೆ ತೆರಿಗೆ ಎಂದು ಹೆಸರು: ಬೆಲೆ ಏರಿಕೆಗೆ ಕಾಂಗ್ರೆಸ್‌ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...