2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಯುಪಿ - NCRB | Naanu gauri

ಬುಧವಾರ ಬಿಡುಗಡೆಯಾದ 2020 ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ದತ್ತಾಂಶಗಳ ಪ್ರಕಾರ, ಕಳೆದ ವರ್ಷ ವರದಿಯಾದ ಕೊಲೆ, ಅಪಹರಣಗಳ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ದೇಶದ ಎಲ್ಲಾ ರಾಜ್ಯಗಳಿಗಿಂತ ಅಗ್ರಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ. 2020 ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ 3,779 ಕೊಲೆ ಪ್ರಕರಣಗಳು, 12,913 ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು NCRB ದಾಖಲೆ ಹೇಳಿದೆ.

ಬಿಹಾರದಲ್ಲಿ 3,150 ಕೊಲೆ ಪ್ರಕರಣಗಳನ್ನು ವರದಿಯಾಗಿದ್ದು ಅದು ಎರಡನೆ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 2,163 ಕೊಲೆ ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಮಧ್ಯಪ್ರದೇಶದಲ್ಲಿ 2,101 ಮತ್ತು ಪಶ್ಚಿಮ ಬಂಗಾಳ 1,948 ಕ್ರಮವಾಗಿ ನಾಲ್ಕನೇ ಮತ್ತು ಐದನೆ ಸ್ಥಾನದಲ್ಲಿದೆ.

ಇದನ್ನೂ ಓದಿ: IISC ಶೂಟೌಟ್ ಪ್ರಕರಣ: 4 ವರ್ಷದ ನಂತರ UAPA ಆರೋಪಿಯನ್ನು ಖುಲಾಸೆಗೊಳಿಸಿದ NIA ನ್ಯಾಯಾಲಯ

ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ 9,309 ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ ಎಂದು NCRB ಅಂಕಿಅಂಶಗಳು ಹೇಳಿವೆ. ಮಹಾರಾಷ್ಟ್ರದಲ್ಲಿ 8,103, ಬಿಹಾರದಲ್ಲಿ 7,889 ಮತ್ತು ಮಧ್ಯಪ್ರದೇಶದಲ್ಲಿ 7,320 ಪ್ರಕರಣಗಳೊಂದಿಗೆ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದೆ.

ದೇಶದಲ್ಲಿ 2020 ರಲ್ಲಿ ದೈನಂದಿನವಾಗಿ ಸರಾಸರಿ 80 ಕೊಲೆಗಳನ್ನು ವರದಿಯಾಗಿದ್ದು, ಒಂದು ವರ್ಷದಲ್ಲಿ ಒಟ್ಟು 29,193 ಕೊಲೆಗಳು ಸಂಭವಿಸಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 1% ಹೆಚ್ಚಾಗಿದೆ. 2019 ರಲ್ಲಿ ಒಟ್ಟು 28,915 ಕೊಲೆಗಳು ದೇಶದಲ್ಲಿ ವರದಿಯಾಗದ್ದವು.

ಇದನ್ನೂ ಓದಿ: ಹತ್ರಾಸ್ ಪ್ರಕರಣ ತನಿಖೆ: CBI ತಂಡದಲ್ಲಿ SC/ST/OBC ಸಮುದಾಯದವರಿಲ್ಲ- ಚಂದ್ರಶೇಖರ್ ಆಜಾದ್

SC/ST ಗಳ ವಿರುದ್ಧದ ಅಪರಾಧಗಳು 9% ಹೆಚ್ಚಳ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪರಿಶಿಷ್ಟ ಜಾತಿಗಳ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧದ ಅಪರಾಧಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ ಕ್ರಮವಾಗಿ 9.4% ಮತ್ತು 9.3% ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಆದರೆ ವರದಿಯು ಮಹಿಳೆಯರ ವಿರುದ್ಧದ ಅಪರಾಧಗಳು 8.3% ರಷ್ಟು ಇಳಿಮುಖವಾಗಿದೆ ತಿಳಿಸಿದೆ.

ಕಳೆದ ವರ್ಷ ಒಟ್ಟು 50,291 ಅಪರಾಧಗಳು ಎಸ್ಸಿಗಳ ವಿರುದ್ಧ ನಡೆದಿದೆ ಎಂದು ದಾಖಲಾಗಿದೆ. 2019 ರಲ್ಲಿ ಈ ಸಂಖ್ಯೆ 45,961 ಆಗಿತ್ತು. ಈ ಮಧ್ಯೆ, 2020 ರಲ್ಲಿ ST ಗಳ ವಿರುದ್ಧ 8,272 ಅಪರಾಧಗಳು ನಡೆದಿದ್ದು, 2019 ರಲ್ಲಿ ಈ ಸಂಖ್ಯೆ 7,570 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

LEAVE A REPLY

Please enter your comment!
Please enter your name here