Homeಕರ್ನಾಟಕದಲಿತ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಸೆಪ್ಟೆಂಬರ್‌ 13 ರಂದು ‘ಚಲೋ ಶ್ರೀನಿವಾಸಪುರ’ ಆಂದೋಲನ

ದಲಿತ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಸೆಪ್ಟೆಂಬರ್‌ 13 ರಂದು ‘ಚಲೋ ಶ್ರೀನಿವಾಸಪುರ’ ಆಂದೋಲನ

- Advertisement -
- Advertisement -

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್‌‌‌ನಲ್ಲಿ ದಲಿತ ವಿದ್ಯಾರ್ಥಿನಿಯರ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿ ಸೋಮವಾರದಂದು ‘ಚಲೋ ಶ್ರೀನಿವಾಸಪುರ’ ಆಂದೋಲನ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಆಂದೋಲನ ಪ್ರಾರಂಭವಾಗಲಿದ್ದು, ಭಾರತ ವಿದ್ಯಾರ್ಥಿ ಫೆಡರೇಶನ್ (SFI), ಜನವಾದಿ ಮಹಿಳಾ ಸಂಘಟನೆ (AIDWA), ದಲಿತ ಹಕ್ಕುಗಳ ಸಮಿತಿ (DHS) ಹಾಗೂ ಕೋಲಾರ ಜಿಲ್ಲೆಯ ಇತರ ಜನಪರ ಸಂಘಟನೆಗಳು ಭಾಗವಹಿಸಲಿದೆ.

ಸೆಪ್ಟೆಂಬರ್‌ 4 ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಮತ್ತು ನಾಗಿರೆಡ್ಡಿಗಾರಿ ಪಾಳ್ಯದ ಗ್ರಾಮದ ದಲಿತ ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಇದರ ವಿಡಿಯೊ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತ್ತು. ಬಸ್ಸಿನಲ್ಲಿ ಶಾಲಾ-ಕಾಲೇಜಿಗೆ ಹೋಗುವಾಗ ಕೆಲ ಪುಂಡರು ನಿತ್ಯವೂ ಕಿರುಕುಳ ನೀಡುತ್ತಿದ್ದದ್ದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರ ಮೇಲೆ ಈ ಹಲ್ಲೆ ನಡೆಸಲಾಗಿತ್ತು.

ಇದನ್ನೂ ಓದಿ: ಕೋಲಾರದಲ್ಲಿ ದಲಿತ ಹೆಣ್ಣುಮಕ್ಕಳಿಗೆ ನಿತ್ಯ ಕಿರುಕುಳ: ಪ್ರಶ್ನಿಸಿದ್ದಕ್ಕೆ ತೀವ್ರ ಹಲ್ಲೆ – ದಸಸಂ ಖಂಡನೆ

ದಲಿತ ವಿದ್ಯಾರ್ಥಿನಿಯರು ಚಿಂತಾಮಣಿ ಕಾಲೇಜಿಗೆ ಬಸ್ಸಿನಲ್ಲಿ ಹೋಗುವಾಗ ನಾಯಕ ಸಮುದಾಯದಕ್ಕೆ ಸೇರಿದ ಗೌನಿಪಲ್ಲಿಯ ಪವನ್ ಮತ್ತು ಕೊಂಡಾಮುರಿಯ ಬಾಬೂ ನಾಯಕ್ ಎಂಬುವರು ಪ್ರತಿದಿನ ಚುಡಾಯಿಸುವುದು, ಮಾನಸಿಕ ಕಿರುಕುಳ ನೀಡಿವುದು ಮಾಡುತ್ತಿದ್ದರು. ಈ ಕುರಿತು ಆ ಯುವಕರಿಗೆ ಹೆಣ್ಣುಮಕ್ಕಳ ಪೋಷಕರು ಬುದ್ದಿವಾದ ಹೇಳಿದ್ದರು. ಈ ಕುರಿತು ಮಾತಿಗೆ ಮಾತು ಬೆಳೆದಿತ್ತು. ಇದರಿಂದ ಕುಪಿತಗೊಂಡ ಯುವಕರು ಮತ್ತು ಅವರ ಪೋಷಕರು ಸೇರಿ ಸೆಪ್ಟಂಬರ್ 4 ರಂದು ಅಮಾನುಷ ಹಲ್ಲೆ ನಡೆಸಿದ್ದರು.

ದೌರ್ಜನ್ಯವನ್ನು ಪ್ರಶ್ನಿಸಿದ್ದ ಅಭಿಷೇಕ್, ನವೀನ್ ಮತ್ತು ಶ್ರೀನಾಥ್ ಎಂಬುವವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದ್ದು, ಎರಡೂ ಕಡೆಯವರ ಮೇಲೂ FIR ದಾಖಲಾಗಿದೆ.

ಇದನ್ನೂ ಓದಿ: ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರಿಂದ ವಯೋವೃದ್ಧ ದಲಿತನ ಪಿಂಚಣಿಗೆ ಸಂಚಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...