HomeUncategorizedಯಾವ ಪುಂಡನೂ ಅ.5ರಂದು ಮಹಿಷ ದಸರಾ ನಿಲ್ಲಿಸಲಾರನು: ಪ್ರೊ.ಗುರು

ಯಾವ ಪುಂಡನೂ ಅ.5ರಂದು ಮಹಿಷ ದಸರಾ ನಿಲ್ಲಿಸಲಾರನು: ಪ್ರೊ.ಗುರು

‘ಮಹಿಷ ಸತ್ಯ, ಚಾಮುಂಡೇಶ್ವರಿ ಮಿಥ್ಯ’. ಪ್ರತಾಪ ಸಿಂಹನಂತಹ ನೂರು ಪುಂಡಾರು ಬಂದರೂ ಮಹಿಷ ದಸರಾ ಆಚರಣೆ ತಡೆಯಲು ಸಾಧ್ಯವಿಲ್ಲ ಎಂದು ಪ್ರೊ.ಮಹೇಶ್‌ಚಂದ್ರ ಗುರು ಹೇಳಿದ್ದಾರೆ.

- Advertisement -
- Advertisement -

ಮಹಿಷ ದಸರಾ ಯಾರ ವಿರುದ್ಧವೂ ಅಲ್ಲ; ಯಾರಿಂದಲೂ ಮಹಿಷ ದಸರಾ ನಿಲ್ಲಿಸಲು ಸಾಧ್ಯವಿಲ್ಲ ಎಂದು ಪ್ರೊ.ಮಹೇಶ್‌ಚಂದ್ರ ಗುರು ಹೇಳಿದ್ದಾರೆ.

ಮೈಸೂರು ನಗರದ ಮಹಿಷ ದಸರಾ ಅನುಷ್ಠಾನ ಸಮಿತಿ ವತಿಯಿಂದ ಅಕ್ಟೋಬರ್‌ 5ರಂದು ಅಶೋಕಪುರಂ ಉದ್ಯಾನದಲ್ಲಿ ಮಹಿಷ ದಸರಾ ಉತ್ಸವ ಮೂರ್ತಿ ಅನಾವರಣ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಿರುವ ಸಂಬಂಧ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವೈದಿಕರ ಇತಿಹಾಸವೆಂದರೆ ಇಸವಿ ದಿನಾಂಕಗಳಿಲ್ಲದ ಇತಿಹಾಸ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ನಮಗೆ ಪುರಾಣ ಗ್ರಂಥಗಳಲ್ಲಿ ನಂಬಿಕೆ ಇಲ್ಲ. ಸಂವಿಧಾನ ಮೇಲೆ ನಂಬಿಕೆ. ಸಮಾನತೆಯ ಮೇಲೆ ನಂಬಿಕೆ. ಸರ್ಕಾರದ ದಸರಾ ಆಚರಣೆ ವಿರುದ್ಧವಾಗಿ ನಾವು ಮಹಿಷಾ ದಸರಾ ಆಚರಣೆ ಮಾಡುತ್ತಿಲ್ಲ. ಅಂತಹ ದುಷ್ಟರು, ದುರಂಹಕಾರಿಗಳು ನಾವಲ್ಲ. ನಮ್ಮ ಮೈಸೂರು ಮಹಿಷ ಕರ್ಮಭೂಮಿ. ಮೂಲನಿವಾಸಿಗಳ ಆದಿ ಪುರುಷಾ. ಇದು ನಮ್ಮ ಧಾರ್ಮಿಕ ಆಚರಣೆ ಎಂದು ಸ್ಪಷ್ಟಪಡಿಸಿದರು.

‘ಮಹಿಷ ಸತ್ಯ, ಚಾಮುಂಡೇಶ್ವರಿ ಮಿಥ್ಯ’. ಪ್ರತಾಪ ಸಿಂಹನಂತಹ ನೂರು ಪುಂಡಾರು ಬಂದರೂ ಮಹಿಷ ದಸರಾ ಆಚರಣೆ ತಡೆಯಲು ಸಾಧ್ಯವಿಲ್ಲ. 2011ರಿಂದಲೂ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ನಮ್ಮ ಧಾರ್ಮಿಕ ಆಚರಣೆ ಅನುಮತಿ ನೀಡಿತ್ತು. ಆದರೆ, 2019ರಲ್ಲಿ ಪ್ರತಾಪ ಸಿಂಹ ಎಂಬ ಪುಂಡ ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿ ಪಡಿಸಿದ್ದಾನೆ. ಇವರಿಗೆ ನಮ್ಮ ಆಚರಣೆ ನಿಲ್ಲಿಸುವ ಧಮ್ ಇಲ್ಲ ಎಂದು ತಿಳಿಸಿದರು.

ದೇಶದಲ್ಲಿ ಎರಡು ವಿಚಾರಕ್ಕೆ ಸಂಘರ್ಷ ನಡೆಯುತ್ತಲೆ ಬಂದಿದೆ. ಅವು ಯಾವುದೆಂದರೆ ಒಂದು ಪುರಾಣ ಮತ್ತೊಂದು ಇತಿಹಾಸ. ಪುರಾಣ ನಂಬಿದವರು ಕೆಟ್ಟಿದ್ದರೇ, ಇತಿಹಾಸವನ್ನು ನಂಬಿದವರು ಉದ್ದಾರವಾಗುತ್ತಿದ್ದಾರೆ. ಮಹಿಷ ಈ ನಾಡಿನ ರಾಜ. ಆದರೆ, ವೈದಿಕರು ಸತ್ಯವನ್ನು ಮರೆಮಾಚಿ ಪುರಾಣ ಸೃಷ್ಟಿ ಮಾಡಿದ್ದಾರೆ ಎಂದರು.

ವೈದಿಕರು ಸತ್ಯ, ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯದ ವಿರೋಧಿಗಳು. ಅವರು ಇತಿಹಾಸವನ್ನು ಒಪ್ಪಿಕೊಳ್ಳಲ್ಲ. ಇತಿಹಾಸವನ್ನು ಮರೆಮಾಚಿ ಪುರಾಣಗಳನ್ನು ಸೃಷ್ಟಿ ಮಾಡಿ ಜನಾಂಗೀಯ ವೈರುತ್ವವನ್ನು ಬೆಳೆಸಿ ಮೌಢ್ಯ ಬಿತ್ತುತ್ತಿದ್ದಾರೆ. ಚಾಮುಂಡಿಯ ಪುರಾಣ ಸೃಷ್ಟಿಯಲ್ಲೂ ಇದನ್ನು ಕಾಣಬಹುದು. ಇಲ್ಲಿ ಮಹಿಷನನ್ನು ರಾಕ್ಷಸನಾಗಿ ಬಿಂಬಿಸಲಾಗಿದೆ. ಮಹಿಷ ರಾಕ್ಷಸನ್ನಲ್ಲ. ಈ ನಾಡಿನ ರಕ್ಷಕ. ಜನ ಇತಿಹಾಸವನ್ನು ತಿಳಿಯಬೇಕು ‘ಮಹಿಷ ಸತ್ಯ, ಚಾಮುಂಡಿ ಮಿಥ್ಯ’ ಎಂಬುದನ್ನು ಅರಿಯಬೇಕು ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕರ್ನಾಟಕ ಸರ್ಕಾರದ ಈ ಕ್ರಮದಿಂದ ಧರ್ಮನಿರಪೇಕ್ಷತೆಗೆ ಕತ್ತರಿ – ಡಾ.ಬಿ.ಪಿ.ಮಹೇಶ್‌ ಚಂದ್ರ ಗುರು

ಮಹಿಷ ಮೈಸೂರಿನ ಮೂಲ ಪುರುಷ. ಆತ ಪ್ರಾಚೀನ ಮಹಿಷ ಮಂಡಲವನ್ನು ಅಳಿದವ. ಮೈಸೂರು ಎಂಬ ಹೆಸರು ಆತನ ಮಹಿಷ ಕುಲದಿಂದ ಬಂದಿದ್ದು, ಪಾಲಿ ಭಾಷೆಯಲ್ಲಿ ಲಭ್ಯವಿರುವಂತೆ ಐತಿಹಾಸಿಕ ವಿವರಗಳ ಪ್ರಕಾರ ಅಶೋಕ ಚಕ್ರವರ್ತಿ ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಮಾದೇವ (ಮಹಿಷಾ)ಎಂಬುವನನ್ನು ಬೌದ್ಧ ಧರ್ಮ ಪ್ರಚಾರಕ್ಕಾನಾಗಿ ಇಲ್ಲಿಗೆ ಬರುತ್ತಾನೆ. ಮಹಿಷಾ ಈ ಪ್ರಾಂತ್ಯವನ್ನು ದಕ್ಷಿಣ ಭಾರತದಿಂದ ಹಿಡಿದು ವಿಂದ್ಯಾಪರ್ವತದವರೆಗೂ ವಿಸ್ತರಿಸುತ್ತಾನೆ. ಇದು ಜಗತ್ತಿನಲ್ಲಿ ಇತಿಹಾಸದಲ್ಲಿ ದಾಖಲಾಗಿದೆ. ಈ ಚಾರಿತ್ರಿಕ ವ್ಯಕ್ತಿಯನ್ನು ಮನುವಾದಿಗಳು ರಾಕ್ಷಸಸನ್ನಾಗಿ ಬಿಂಬಿಸಿದ್ದಾರೆ ಎಂದು ವಿವರಿಸಿದರು.

ಮಾಜಿ ಮಹಾಪೌರ ಪುರುಷೋತ್ತಮ್ ಮಾತನಾಡಿ, ಆದಿ ಪುರುಷ ಮಹಿಷ ದಸರಾ ಆಚರಣೆ ನಮ್ಮ ಧಾರ್ಮಿಕ ಹಕ್ಕು. ಆದರೆ, ಪ್ರಜ್ಞಾವಂತ ಜಾತ್ಯತೀತ ಜನತೆ ಮಹಿಷಾ ದಸರಾ ಆಚರಣೆ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಜಾತಿ ಬಣ್ಣ ಕಟ್ಟಿ ಮೂಲನಿವಾಸಿಗಳ ವಿರುದ್ಧ ಸರ್ವಣೀಯರನ್ನು ಎತ್ತಿಕಟ್ಟುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜಾತಿಗಳೇ ಇಲ್ಲದ ಮಹಿಷನ ಕಾಲದಲ್ಲಿ ಜಾತಿ ಹೇಗೆ ಬಂತೆಂದು ಈ ದುರಳ ರಾಜಕಾರಣಿಗಳು ಹೇಳಬೇಕು. ನಮ್ಮ ಧಾರ್ಮಿಕ ಆಚರಣೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಮಹಿಷ ದಸರಾವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅನುಮತಿ ನೀಡದಿದ್ದರೂ ಮಹಿಷನಿಗೆ ಪುಷ್ಪಾರ್ಚನೆ ಮಾಡುವುದಂತೂ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ವೈದಿಕರ ಕುತಂತ್ರ ಜನತೆ ಅರಿಯಲಿ

ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ರಾಮಾಯಣದಲ್ಲಿಯೂ ಬೌದ್ಧಬಿಕ್ಕುಗಳನ್ನು ಕೊಲ್ಲಿಸಿ, ರಾಕ್ಷಸರಂತೆ ಬಿಂಬಿಸಲಾಗಿದೆ. ಜೊತೆಗೆ ರಾಮನ ಕೈಯಲ್ಲಿ ಬುದ್ಧನನ್ನು ಬೈಯಿಸಿದ್ದಾರೆ. ಬುದ್ಧ ಕಳ್ಳ, ನಾಸ್ತಿಕ ಎಂದು ಬೈಯಿಸಿದ್ದಾರೆ. ಬುದ್ಧನನ್ನೆ ಕಳ್ಳನೆಂದ ವೈದಿಕರ ಕುತಂತ್ರಗಳನ್ನು ಜನರು ಅರಿಯಬೇಕು. ವೈದಿಕರು ಬಿಂಬಿಸಿರುವಾಗೇ ಮಹಿಷ ರಾಕ್ಷಸನಾಗಿದ್ದರೆ ಮೈಸೂರಿಗೆ ಆತನ ಹೆಸರು ಯಾಕೇ ನಾಮಕಾರಣ ಮಾಡುತ್ತಿದ್ದರು. ಮಹಿಷ ಜನಾರೋದ್ಧಾರಕ, ಜನ ರಕ್ಷಕ. ಯುವ ಸಮೂಹ ಇತಿಹಾಸ ಅರಿಬೇಕು. ಪುರಾಣಗಳನ್ನು ತಿರಸ್ಕರಿಸಬೇಕು ಎಂದು ಕಿವಿಮಾತು ಹೇಳಿದರು.

ದೇವಾಲಯ ತೆರವು ಅಕ್ಷಮ್ಯ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ದೇವಾಲಯಗಳನ್ನು ತೆರವುಗೊಳಿಸುತ್ತಿರುವುದು ಅಕ್ಷಮ್ಯ. ಇದನ್ನು ಸಹಿಸಲು ಆಗದು. ಹಿಂದೂ ಧರ್ಮದ ರಕ್ಷಕರಂತೆ ಬಿಂಬಿಸಿಕೊಂಡು ಅಧಿಕಾರಕ್ಕೇರಿದ ಬಿಜೆಪಿ ಅವರು ದೇವಾಲಯಗಳನ್ನು ಹೊಡೆಯುತ್ತಿದ್ದರು ಯಾಕೇ ಸುಮ್ಮನಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪಿನ ಮರುಪರಿಶೀಲನೆ ಅರ್ಜಿ ಯಾಕೇ ಸಲ್ಲಿಸಲಿಲ್ಲ. ಇದನ್ನು ಪ್ರಶ್ನಿಸಿ ಸಂಸದ ಪ್ರತಾಪ ಸಿಂಹ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಬೇಕು. ದೇಶದಾದ್ಯಂತ ತೀರ್ಪು ಬಂದಿದ್ದರೂ ಮೈಸೂರಿನಲ್ಲಿಯೇ ಯಾಕೇ ದೇವಾಸ್ಥಾನಗಳನ್ನು ಹೊಡೆಯುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರಣ ಎಂದು ದೂರಿದರು.


ಇದನ್ನೂ ಓದಿ: ದೀನ ದಲಿತೋದ್ಧಾರಕ ಮಹಾತ್ಮ ಕುದ್ಮುಲ್ ರಂಗರಾವ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...