Homeಕರ್ನಾಟಕಕರ್ನಾಟಕ ಸರ್ಕಾರದ ಈ ಕ್ರಮದಿಂದ ಧರ್ಮನಿರಪೇಕ್ಷತೆಗೆ ಕತ್ತರಿ - ಡಾ.ಬಿ.ಪಿ.ಮಹೇಶ್‌ ಚಂದ್ರ ಗುರು

ಕರ್ನಾಟಕ ಸರ್ಕಾರದ ಈ ಕ್ರಮದಿಂದ ಧರ್ಮನಿರಪೇಕ್ಷತೆಗೆ ಕತ್ತರಿ – ಡಾ.ಬಿ.ಪಿ.ಮಹೇಶ್‌ ಚಂದ್ರ ಗುರು

- Advertisement -
- Advertisement -

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಬೌದ್ಧ ಭಿಕ್ಕುಗಳು, ಸೂಫಿಸಂತರು, ದಾಸ ಶ್ರೇಷ್ಟರು, ಸಮಾಜ ಸುಧಾರಕರು, ಮುತ್ಸದ್ದಿಯಾದಿಗಳಾಗಿ ಎಲ್ಲರೂ ರಕ್ಷಿಸುವ ಕಾಯಕದಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತವು ಧರ್ಮ ನಿರಪೇಕ್ಷತೆಯನ್ನು ಪ್ರಜ್ಞಾಪೂರ್ವಕವಾಗಿ ಪ್ರಮುಖ ಸಾಂವಿಧಾನಿಕ ಮೌಲ್ಯ ಹಾಗೂ ಜೀವನ ವಿಧಾನವನ್ನಾಗಿ ಒಳಗೊಂಡಿದೆ.

ಧಾರ್ಮಿಕ ಮೂಲಭೂತವಾದ ಭಾರತದ ಮಣ್ಣಿಗೆ ಒಗ್ಗುವುದಿಲ್ಲವೆಂಬ ಚಾರಿತ್ರಿಕ ಸತ್ಯವನ್ನು ಅನೇಕ ದಾರ್ಶನಿಕರು ಪ್ರಜೆಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಧರ್ಮ ನಿರಪೇಕ್ಷತೆಯೆಂದರೆ ಯಾವುದೇ ಧರ್ಮವಿರೋಧಿಯಲ್ಲ. ಭಾರತವು ಹಿಂದುತ್ವ ರಾಷ್ಟ್ರವಾಗಿರದೇ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಸ್ವಾತಂತ್ರ್ಯಾನಂತರದಲ್ಲಿ ಅಳವಡಿಸಿಕೊಂಡಿದೆ. ದೇಶದ ಏಕತೆ, ಸಮಗ್ರತೆ ಮತ್ತು ಪ್ರಗತಿಗಳಿಗೆ ಅಡ್ಡಿಯುಂಟು ಮಾಡುವ ಧಾರ್ಮಿಕ ನಂಬಿಕೆಗಳು ಮತ್ತು ಆಚಾರಗಳನ್ನು ಭಾರತೀಯ ಸಂವಿಧಾನ ನಿಷೇಧಿಸಿದೆ.

ಮೌರ್ಯರ ಕಾಲದಲ್ಲಿ ಬೌದ್ಧ ಭಾರತವು ವಿಶ್ವದಲ್ಲಿಯೇ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಾಮಾಜಿಕ ನ್ಯಾಯ, ಆರ್ಥಿಕ ಪ್ರಜಾಸತ್ತೆ ಮೊದಲಾದವುಗಳನ್ನು ಸಾಧಿಸಿ ಜಗತ್ತಿನ ದೊಡ್ಡಣ್ಣನಾಗಿ ಮನ್ನಣೆ ಗಳಿಸಿತು. ಮಧ್ಯಯುಗದಲ್ಲಿ ಮೊಘಲರು ಸಂಪತ್ತಿನ ಆಸೆಗೆ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದರೂ ಸಹ ಹಿಂದೂ ಧಾರ್ಮಿಕ ವ್ಯವಸ್ಥೆ ಮತ್ತು ಬಹುತ್ವಗಳನ್ನು ನಾಶಮಾಡುವ ಕೆಲಸಕ್ಕೆ ಕೈಹಾಕಲಿಲ್ಲ.  ಅವರು ಮನಸ್ಸು ಮಾಡಿದ್ದರೆ ಪ್ರಭುತ್ವದ ಬಲದಿಂದ ಇಡೀ ಭಾರತವನ್ನೇ ಇಸ್ಲಾಮೀಕರಣಗೊಳಿಸಬಹುದಿತ್ತು. ತದನಂತರ ಭಾರತವನ್ನಾಳಿದ ಡಚ್ಚರು, ಪೋರ್ಚುಗೀಸರು, ಫ್ರೆಂಚರು ಮತ್ತು ಬ್ರಿಟಿಷರು ವಸಾಹತುಶಾಹಿಯನ್ನು ಬಲಪಡಿಸಿದರೇ ಹೊರತು ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ಸಾಮರಸ್ಯಗಳಿಗೆ ಭಂಗವುಂಟು ಮಾಡಲಿಲ್ಲ.

’ಸ್ವರಾಜ್ಯ ನನ್ನ ಆಜನ್ಮ ಸಿದ್ಧಹಕ್ಕು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಿಂಹಘರ್ಜನೆಯಿಂದ ದೇಶಾದ್ಯಂತ ಜನಮನ್ನಣೆ ಗಳಿಸಿದ್ದ ತಿಲಕರು ಉಗ್ರ ಹಿಂದುತ್ವವಾದಿಯಾಗಿದ್ದರು. ಅವರಿಗೆ ಭಾರತವು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳಬೇಕೆಂಬ ಮಹೋನ್ನತ ಆಶಯವಿದ್ದರೂ ಸಹ ಧರ್ಮನಿರಪೇಕ್ಷತೆಯನ್ನು ಸುಸ್ಥಿರಗೊಳಿಸುವಲ್ಲಿ ಕನಿಷ್ಟಬದ್ಧತೆಯೂ ಇರಲಿಲ್ಲ. ಹಿಂದುತ್ವವಾದದ ಪ್ರಧಾನ ಪ್ರವರ್ತಕರಾದ ಹೆಗಡೆವಾರ್, ಸಾವರ್ಕರ್, ಗೋಲ್ವಾಲ್ಕರ್ ಮೊದಲಾದ ಯೆಹೂದಿ ಮೂಲದ ಚಿತ್ಪಾವನ ಬ್ರಾಹ್ಮಣ ಮೂಲದ ನಾಯಕರು ಬಹುತ್ವದ ಮತ್ತು ಧರ್ಮನಿರಪೇಕ್ಷತೆ ಆಶಯಗಳನ್ನು ಅನುಷ್ಟಾನಗೊಳಿಸಲು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ: ‘ಮಂತ್ರಾಲಯದ ಸ್ವಾಮೀಜಿ ಕರೆ ಮಾಡಿದ್ದರು’ – ಪಠ್ಯ ಕಡಿತಕ್ಕೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು

ರಾಷ್ಟ್ರಪಿತನೆಂದು ಸಾರ್ವಕಾಲಿಕ ಮನ್ನಣೆ ಗಳಿಸಿರುವ ಅಹಿಂಸೆಯ ಪ್ರತಿರೂಪ ಮಹಾತ್ಮ ಗಾಂಧಿ ಮುನ್ನಡೆಸಿದ ಸ್ವಾತಂತ್ರ್ಯ ಸಂಗ್ರಾಮ ಸ್ವತಂತ್ರ ಭಾರತದ ಅಸ್ತಿತ್ವಕ್ಕೆ ಮಹತ್ವದ ಕೊಡುಗೆ ನೀಡಿದೆ. ವರ್ಣಾಶ್ರಮ ಪದ್ದತಿಯನ್ನು ನೇರವಾಗಿ ಸಮರ್ಥಿಸಿದ ಗಾಂಧಿ ಮೃದು ಹಿಂದುತ್ವವಾದಿಯಾಗಿದ್ದರೇ ಹೊರತು ಧರ್ಮ ನಿರಪೇಕ್ಷತೆಗೆ ಮಹತ್ವದ ಕೊಡುಗೆ ನೀಡಲಿಲ್ಲ. ಆದರೂ ಸಹ ಗೋಡ್ಸೆ ಗಾಂಧಿಯನ್ನು ಅಮಾನುಷವಾಗಿ ಕೊಂದದ್ದು ಭಾರತದ ಚರಿತ್ರೆಯಲ್ಲಿ ಕರಾಳ ಅಧ್ಯಾಯವಾಗಿದೆ.

ಗಾಂಧಿಯ ಸಮಕಾಲೀನರು ಹಾಗೂ ಕಟ್ಟಕಡೆಯ ಮನುಷ್ಯನನ್ನು ಅಪ್ಪಿಕೊಂಡು ಜಾಗತಿಕವಾಗಿ ಮಹಾಜ್ಞಾನಿ – ಮಹಾನಾಯಕನೆಂದು ವಿಶ್ವಸಂಸ್ಥೆಯಿಂದಲೇ ಮನ್ನಣೆ ಪಡೆದ ಅಂಬೇಡ್ಕರ್ ಬುದ್ಧರ ಮಹಾ ಅನುಯಾಯಿಯಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪೂರಕವಾದ ಸಂವಿಧಾನವನ್ನು ರಚಿಸಿದರು. ಸಂವಿಧಾನದ ಪೀಠಿಕೆ, ರಾಜ್ಯನಿರ್ದೇಶಕ ತತ್ವಗಳು, ಮೂಲಭೂತ ಹಕ್ಕುಗಳು ಮೊದಲಾದವುಗಳು ಸರ್ವರಿಗೂ ಸಮಬಾಳು – ಸರ್ವರಿಗೂ ಸಮಪಾಲು ನೀಡಿ ಬಹುತ್ವ, ಧರ್ಮನಿರಪೇಕ್ಷತೆ, ಬಹುಜನರ ಕಲ್ಯಾಣ ಮೊದಲಾದವುಗಳಿಗೆ ಪೂರಕವಾಗಿವೆ.

ಸಾಂವಿಧಾನಿಕ ಧರ್ಮನಿರಪೇಕ್ಷತೆ ಹಿಂದುತ್ವ ಕೇಂದ್ರಿತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಜಾಸತ್ತೆಗಳನ್ನು ಅನುಮೋದಿಸುವುದಿಲ್ಲ. ಎಲ್ಲ ಧರ್ಮಗಳೂ ಸಂವಿಧಾನದ ದೃಷ್ಟಿಯಲ್ಲಿ ಸಮಾನ. ಬಹುತ್ವ ಕೇಂದ್ರಿತ ಸಮಾಜೋ-ರಾಜಕೀಯ ವ್ಯವಸ್ಥೆ ಬಲಗೊಳ್ಳುವುದರಿಂದ ವರ್ಗ ಪ್ರಭುತ್ವ ಮತ್ತು ಜಾತಿಪ್ರಭುತ್ವಗಳಿಂದ ಭಾರತದ ಬಹುಜನರನ್ನು ಅಸಮಾನತೆಯಿಂದ ಸಮಾನತೆಯೆಡೆಗೆ ಮುನ್ನಡೆಸಬಹುದೆಂಬ ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ನಾರಾಯಣ ಗುರು ಮೊದಲಾದವರು ಪ್ರತಿಪಾದಿಸಿದರು. ಭಾರತವು ಬಹುಧರ್ಮಗಳು, ಸಂಪ್ರದಾಯಗಳು, ಭಾಷೆಗಳು ಮತ್ತಿತರ ವೈವಿಧ್ಯತೆಗಳ ನಡುವೆಯೂ ಏಕತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪ್ರಧಾನಿ ನೆಹರು ಭಾರತದ ಬಹುಸಂಸ್ಕೃತಿ ದೇಶದ ಅಪೂರ್ವ ಶಕ್ತಿಯೆಂದೇ ಬಣ್ಣಿಸಿದ್ದರು.

1980ರ ದಶಕದಿಂದಲೂ ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಭಜರಂಗದಳ, ಶ್ರೀರಾಮಸೇನೆ ಮೊದಲಾದ ಹಿಂದುತ್ವವಾದಿ ಸಂಘಟನೆಗಳು ಹಿಂದೂ ಸಾಮ್ರಾಜ್ಯಶಾಹಿಯನ್ನು ದೇಶದಲ್ಲಿ ಬೆಳೆಸುವ ಸಲುವಾಗಿ ಧರ್ಮನಿರಪೇಕ್ಷತೆಯನ್ನು ದುರ್ಬಲಗೊಳಿಸುವ ಕಾಯಕದಲ್ಲಿ ನಿರತವಾಗಿವೆ. 1990ರ ದಶಕದಲ್ಲಿ ವೈದಿಕಶಾಹಿ ಮತ್ತು ಬಂಡವಾಳಶಾಹಿಗಳ ಅನೈತಿಕ ಮೈತ್ರಿಯಿಂದಾಗಿ ಭಾರತದಲ್ಲಿ ಕೋಮು ಧೃವೀಕರಣ ಉಂಟಾಯಿತು. ಇಂತಹ ಪ್ರವೃತ್ತಿಯಿಂದಾಗಿ ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು ಭಾರತದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವಾಗಿಲ್ಲ.

ಇದನ್ನೂ ಓದಿ: ವಿದೇಶ ಸುತ್ತುವ ಮೋದಿಗೆ ರೈತರನ್ನು ಭೇಟಿ ಮಾಡಲು ಸಮಯವಿಲ್ಲ – ಪ್ರಿಯಾಂಕ ಆಕ್ರೋಶ

ಕಳೆದ 25 ವರ್ಷಗಳ ಹಿಂದೆ ಅಡ್ವಾಣಿ ನೇತೃತ್ವದಲ್ಲಿ ಜರುಗಿದ ರಥಯಾತ್ರೆ ಇಂದಿನ ಹಿಂದುತ್ವವಾದಿಗಳ ವಿಜಯದಶಮಿಗೆ ಮುನ್ನುಡಿ ಬರೆದಿತ್ತು. ತದನಂತರದ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳು ಹಿಂದುತ್ವವಾದಿಗಳು ಬಿಜೆಪಿ ಮತ್ತು ಸಂಘ ಪರಿವಾರಿಗಳ ನೇತೃತ್ವದಲ್ಲಿ 2014ರಲ್ಲಿ ದೇಶದ ಅಧಿಕಾರ ಗದ್ದುಗೆ ಹಿಡಿಯಲು ಸಹಕರಿಸಿದವು. ಹಿಂದುತ್ವವೆಂದರೆ ಪ್ರಾಯೋಗಿಕವಾಗಿ ಬ್ರಾಹ್ಮಣತ್ವದ ರಕ್ಷಣೆಯೇ ಆಗಿದೆ. ಭಾರತದಲ್ಲಿ 2014ರಿಂದಲೂ ಪ್ರಸ್ತುತ ಹಿಂದುತ್ವ ಕೇಂದ್ರಿತ ಪ್ರಭುತ್ವ ಪ್ರಾಯೋಜಿತ ಕೋಮು ಧೃವೀಕರಣದಿಂದಾಗಿ ಪ್ರಜಾಸತ್ತೆ, ಸಂವಿಧಾನ, ಬಹುತ್ವ ಮತ್ತು ಧರ್ಮ ನಿರಪೇಕ್ಷತೆಗಳೆಂಬ ಜೀವಪರ ಮೌಲ್ಯಗಳು ಕುಸಿಯತೊಡಗಿವೆ. ಇಂದು ಭಾರತದ ಬಹುಜನರು ಸಂವಿಧಾನ ಉಳಿಸಿ ಮತ್ತು ಪ್ರಜಾಪ್ರಭುತ್ವ ರಕ್ಷಿಸಿಯೆಂದು ದೇಶಾದ್ಯಂತ ಆಗ್ರಹಿಸುತ್ತಿದ್ದಾರೆ.

ಭಾರತದ ಇಂದಿನ ದುರವಸ್ಥೆಗೆ ಹಿಂದುತ್ವವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು ಎಷ್ಟು ಕಾರಣರೋ ಜಾತ್ಯಾತೀತರು ಮತ್ತು ಸಮಾಜವಾದಿಗಳ ಸೋಗಿನಲ್ಲಿರುವ ಅವಕಾಶವಾದಿಗಳೂ ಅಷ್ಟೇ ಕಾರಣರಾಗಿದ್ದಾರೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನೇತೃತ್ವದಲ್ಲಿ ಜರುಗಿದ ಭೂಮಿ ಪೂಜೆ ಭಾರತದ ಧರ್ಮನಿರಪೇಕ್ಷತೆಯನ್ನು ಮಣ್ಣುಪಾಲು ಮಾಡಿದೆ.

ಅಯೋಧ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಗೆದಷ್ಟು ಬಗೆದಷ್ಟು ಬೌದ್ಧ ಸ್ಮಾರಕಗಳೇ ಲಭಿಸುತ್ತಿರುವ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಎಷ್ಟು ಸರಿಯೆಂಬ ಪ್ರಶ್ನೆ ಪ್ರಜ್ಞಾವಂತ ಭಾರತೀಯರನ್ನು ಕಾಡುತ್ತಿದೆ. ಸರ್ವೋಚ್ಛ ನ್ಯಾಯಾಲಯಕ್ಕೆ ರಾಮಮಂದಿರ ನಿರ್ಮಾಣ ವಿಷಯದಲ್ಲಿ ತೀರ್ಪು ನೀಡುವ ಪರಮಾಧಿಕಾರವನ್ನು ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಮತ್ತು ವಿಷಯ ಪರಿಣತರು ವ್ಯಾಪಕವಾಗಿ ಪ್ರಶ್ನಿಸಿದ್ದಾರೆ. ಧರ್ಮನಿರಪೇಕ್ಷತೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇತ್ತೀಚೆಗೆ ಅಂತರರಾಷ್ಟ್ರೀಯ ಆಯಾಮ ಪಡೆದುಕೊಂಡಿದೆ. ರಾಜಕೀಯ ಅಧಿಕಾರವನ್ನು ಬಳಸಿಕೊಂಡು ರಾಮಮಂದಿರ ನಿರ್ಮಾಣಕ್ಕೆ ಕಾನೂನಿನ ಚೌಕಟ್ಟನ್ನು ಮೀರಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುತ್ತಿರುವ ಬಗೆ ಇಂದು ಪ್ರಶ್ನಾರ್ಹವಾಗಿದೆ.

ಇದನ್ನೂ ಓದಿ: ಪ.ಬಂಗಾಳಕ್ಕೆ ಸ್ವಂತ ಮಗಳು ಬೇಕು: ಟಿಎಂಸಿಯ ಚುನಾವಣಾ ಘೋಷವಾಕ್ಯ

ಇಡೀ ವಿಶ್ವ ಫೆಬ್ರವರಿ 20ರಂದು ’ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ ಸಾರ್ವಜನಿಕ ಶಿಕ್ಷಣ ಇಲಾಖೆ ’ಹೊಸ ಧರ್ಮಗಳ ಉದಯ’ ಎಂಬ ಅಧ್ಯಾಯದಲ್ಲಿ 2500 ವರ್ಷಗಳ ಹಿಂದೆ ವೈದಿಕ ಚಿಂತನೆಗೆ ಭಿನ್ನವಾದ ಬೌದ್ಧ ಧರ್ಮ ಮತ್ತು ಜೈನಧರ್ಮಗಳ ಐತಿಹಾಸಿಕ ಮಹತ್ವವನ್ನು ಸಮಾಜ ವಿಜ್ಞಾನ ವಿದ್ಯಾರ್ಥಿಗಳು ಕಲಿಯದಂತೆ ಪಠ್ಯಕ್ಕೆ ಹಾಕಿರುವ ಕತ್ತರಿ ’ಬಹುತ್ವಕ್ಕೆ ಹಾಕಿರುವ ಕತ್ತರಿ’ ಆಗಿದೆ. ಸಾರ್ವತ್ರಿಕ ಶಿಕ್ಷಣ ಇಲಾಖೆಯನ್ನು ಮುನ್ನಡೆಸುತ್ತಿರುವ ಹುಟ್ಟು ಮನುವಾದಿ ಶ್ರೀ ಸುರೇಶ್‌ಕುಮಾರ್ ಕೈಗೊಂಡಿರುವ ಈ ಕ್ರಮ ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಇವರಿಗೆ ಭಾರತ ದೇಶಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಿಗೆ ಅಪಚಾರ ಬಗೆದು ಹಿಂದುತ್ವವನ್ನು ವೈಭವೀಕರಿಸುವ ಮತ್ತು ಬಹುಸಂಖ್ಯಾತ ಶೂದ್ರರನ್ನು ನಿರಂತರ ಗುಲಾಮಗಿರಿಗೆ ದಬ್ಬುವ ಗುಪ್ತ ಕಾರ್ಯಸೂಚಿ ಇರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿ ಗೋಚರವಾಗಿದೆ.

ಗೌತಮ ಬುದ್ಧ ಮತ್ತು ಮಹಾವೀರ ಇಬ್ಬರು ಹೊಸ ಚಿಂತನಾಕ್ರಮದ ಹರಿಕಾರರು ಮತ್ತು ಭರತ ಖಂಡದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗೆ ಮುನ್ನುಡಿ ಬರೆದ ಮಹಾಪುರುಷರೆಂಬ ಕನಿಷ್ಠ ಪ್ರಜ್ಞೆ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಾಥಮಿಕ ಶಿಕ್ಷಣ ಮಂತ್ರಿ ಶ್ರಿ ಸುರೇಶ್‌ಕುಮಾರ್‌ಗೆ ಇಲ್ಲದಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಇತಿಹಾಸ ಪುನಾರಚನೆಗೆ ಚಾರಿತ್ರಿಕ ದಾಖಲೆ ಮತ್ತು ಸಮರ್ಥನೆಗಳು ಅತ್ಯವಶ್ಯಕವೆಂಬ ಕನಿಷ್ಟ ಪ್ರಜ್ಞೆಯು ಕರ್ನಾಟಕ ಸರ್ಕಾರಕ್ಕೆ ಇಲ್ಲವಾಗಿದೆ. ಅಹಿಂಸೆಯೇ ಪರಮ ಧರ್ಮವೆಂದು ಬೋಧಿಸಿದ ಮಹಾವೀರ ಮತ್ತು ಸಮಾನತೆಯೇ ಶ್ರೇಷ್ಠ ಜೀವನ ಮಾರ್ಗವೆಂದು ಪ್ರತಿಪಾದಿಸಿದ ಬುದ್ಧರು ವಿನಾಶದೆಡೆಗೆ ಸಾಗುತ್ತಿರುವ ವಿಶ್ವವನ್ನು ಪಾರು ಮಾಡುವ ಮತ್ತು ಉದ್ಧರಿಸುವ ಮಹಾಶಕ್ತಿಗಳೆಂಬ ಅರಿವು ನಮ್ಮನ್ನು ಆಳುವವರಿಗೆ ಬೇಕು. ವಿನಾಶಕಾಲದಲ್ಲಿ ವಿಪರೀತ ಬುದ್ಧಿ ಎಂಬಂತೆ ಇಂದು ನಮ್ಮನ್ನು ಆಳುತ್ತಿರುವವರು ರಾಜಕೀಯ ಬಲ, ಹಣಬಲ ಮತ್ತು ತೋಳ್ಬಲಗಳಿಂದ ಅವಿವೇಕದಿಂದ ವರ್ತಿಸುತ್ತಿದ್ದಾರೆ. ಇನ್ನಾದರೂ ಭಾರತೀಯ ಸಂವಿಧಾನದ ಬಹುದೊಡ್ಡ ಸಿದ್ಧಾಂತವಾದ ’ಒಳಗೊಳ್ಳುವ ಸಂಸ್ಕೃತಿ ಮತ್ತು ಅಭಿವೃದ್ಧಿ’ಯೆಡೆಗೆ ದೇಶವನ್ನು ಮುನ್ನಡೆಸುವ ದೃಷ್ಟಿಯಿಂದ ಈ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು.

ಡಾ.ಬಿ.ಪಿ.ಮಹೇಶ್‌ ಚಂದ್ರ ಗುರು
ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈವಿವಿ.

(ಇಲ್ಲಿನ ಸಂಪೂರ್ಣ ಅಭಿಪ್ರಾಯಗಳು ಲೇಖಕರದ್ದು)


ಇದನ್ನೂ ಓದಿ: ಒಬ್ಬನೇ ಒಬ್ಬ ಪ್ರೇಕ್ಷಕನಿಗೆ ಐವರು ಭಾಷಣಕಾರರು!: ಬಿಜೆಪಿ ಕಾಲೆಳೆದ ಸಂಸದ ಶಶಿ ತರೂರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ನಾಡಿನ ಪ್ರಜ್ಞಾವಂತರು ಪಠ್ಯಪುಸ್ತಕಗಳ ಕೇಸರೀಕರಣದ ವಿರುದ್ಧ ಈ ಕೂಡಲೇ ದನಿ ಎತ್ತಬೇಕು.

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....