ತಾಲಿಬಾನ್ ಬಂಡುಕೋರ ಐಸ್‌ಕ್ರೀಮ್ ಸವಿಯುತ್ತಿರುವ ಪೊಟೋ ನೋಡಿ ಎಂದು ಅಮಾಯಕ ವ್ಯಕ್ತಿಯನ್ನು ಉಗ್ರನೆಂದು ಬಿಂಬಿಸಿ, ವಿಕೃತವಾಗಿ ಟ್ರೋಲ್ ಮಾಡುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬಂದಿದೆ.
“ಬಹಳ ಸಂತೋಷದಿಂದ ತಾಲಿಬಾನ್ ಉಗ್ರ ಐಸ್‌ಕ್ರೀಮ್ ಸವಿಯುತ್ತಿರುವುದನ್ನು ನೋಡಿ” ಎಂಬ ಒಕ್ಕಣೆಯೊಂದಿಗೆ ವ್ಯಕ್ತಿಯೊಬ್ಬನ ಪೋಟೊವನ್ನು ಹರಿಬಿಡಲಾಗಿದೆ. ಈ ಪೊಟೋದ ಸತ್ಯಾಸತ್ಯತೆಯನ್ನು ಫ್ಯಾಕ್ಟಿ ಡಾಟ್ ಇನ್ ಜಾಲತಾಣ ಪರಿಶೀಲಿಸಿದೆ.
ಸ್ಟೀವ್ ಮೆಕ್ರರಿ ಎಂಬ ಅಮೆರಿಕನ್ ಪೋಟೋಗ್ರಾಫರ್ 2002ರಲ್ಲಿ ಕ್ಲಿಕ್ಕಿಸಿದ ಪೊಟೋ ಇದಾಗಿದೆ. ತನ್ನ ಮಕ್ಕಳಿಗೆ ಅಫಘಾನಿನ ವ್ಯಕ್ತಿಯೊಬ್ಬ ಅಫಘಾನಿಸ್ತಾನದ ಪೋಲ್‌ಇಕೊಮ್‌ರಿ ಎಂಬ ಸ್ಥಳದಲ್ಲಿ ಐಸ್‌ಕ್ರೀಮ್ ಖರೀದಿಸುತ್ತಿರುವ ಪೊಟೋವನ್ನು ಸ್ಟೀವ್ ಕ್ಲಿಕ್ಕಿಸಿದ್ದರು. ಈ ಪೋಟೋಕ್ಕೂ ತಾಲಿಬಾನಿಗೂ ಯಾವುದೇ ಸಂಬಂಧವಿಲ್ಲ.
ಇದೇ ಪೋಟೋವನ್ನು ಇಮ್ಗುರ್ ವೆಬ್‌ಸೈಟ್ ನಲ್ಲಿ 2016ರಲ್ಲಿ ಪ್ರಕಟಿಸಲಾಗಿತ್ತು. ಇತರ ವೆಬ್‌ಸೈಟ್‌ಗಳು ಕೂಡ ಈ ಪೋಟೋವನ್ನು ಪ್ರಕಟಿಸಿ, ಸ್ಟೀವ್ ಅವರಿಗೆ ಪೋಟೋ ಕ್ರೆಡಿಟ್ ನೀಡಿವೆ. ಬಹುತೇಕರು ಪೋಟೋವನ್ನು ತಿರುಚಿದ ಒಕ್ಕಣೆಯೊಂದಿಗೆ ಹಂಚಿಕೊಂಡ ಬಳಿಕ ಫ್ಯಾಕ್ಟಿ ಡಾಟ್ ಇನ್ ಜಾಲತಾಣ ಸರ್ಚ್ ಮಾಡಿದ್ದು, ಸ್ಟೀವ್ ಅವರ ಅಧಿಕೃತ ಇನ್‌ಸ್ಟಾ ಖಾತೆಯಲ್ಲಿಯೂ ಪೋಟೋ ಇರುವುದನ್ನು ಪತ್ತೆ ಹಚ್ಚಿದೆ. ಜೊತೆಗೆ ಸ್ಟೀವ್ ಪೋಟೋ ಯಾವಾಗ ತೆಗೆದಿದ್ದು, ಎಲ್ಲಿ ತೆಗೆದದ್ದು ಎಂಬ ಕುರಿತು ವಿವರಣೆಯನ್ನೂ ನೀಡಿದ್ದಾರೆ.
ಅಪಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಸಂರ್ಪೂರ್ಣ ವಶಕ್ಕೆ ಪಡೆದ ಬಳಿಕ ತಾಲಿಬಾನಿಗಳು ಐಸ್‌ಕ್ರೀಮ್ ಸವಿಯುವಂತಹ ಹಲವು ವಿಶ್ರಾಂತಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಐಸ್‌ಕ್ರೀಮ್‌ನೊಂದಿಗಿನ ಫೋಟೋಗಳು ಹರಿದಾಡಿದ್ದವು. ಫೋಟೋಗಳು ಹಾಗೂ ವಿಡಿಯೋಗಳನ್ನು ಆಧರಿಸಿ ಹಲವು ಸುದ್ದಿ ಜಾಲತಾಣಗಳಲ್ಲಿ ವರದಿಗಳೂ ಪ್ರಕಟವಾಗಿದ್ದವು. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಇಲ್ಲಿ ಶೇರ್ ಆಗಿರುವ ಪೋಸ್ಟ್‌ನಲ್ಲಿನ ಪೋಟೋ ಹಳೆಯದಾಗಿದೆ. ಅಫಘಾನಿಸ್ತಾನದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳಿಗೂ ಈ ಫೋಟೋಕ್ಕೋ ಯಾವುದೇ ಸಂಬಂಧವಿಲ್ಲ.


