ಪ್ರತಿ ಸೆಪ್ಟೆಂಬರ್ 16ರಂದು ಓನೋನ್ ದಿನ ಆಚರಿಸಲಾಗುತ್ತಿದೆ. ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ವಿಭಾಗ ನಿರಂತರವಾಗಿ ಶ್ರಮಿಸುತ್ತಿದೆ. ವಿಶ್ವಸಂಸ್ಥೆಯ ಪರಸರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಇಂಗರ್ ಆಂಡ್ರೂಸನ್ ವಿವಿಧ ರಾಷ್ಟ್ರಗಳಲ್ಲಿನ ಓಜೋನ್ ಅಧಿಕಾರಿಗಳಿಗೆ ಸಂದೇಶವನ್ನು ನೀಡಿದ್ದಾರೆ. ಅದರ ಸಾರಾಂಶ ಇಲ್ಲಿದೆ…
ಕೋವಿಡ್ -19 ಸಾಂಕ್ರಾಮಿಕದ ಈ ಸವಾಲಿನ ಅವಧಿಯಲ್ಲಿ ನೀವು, ನಿಮ್ಮ ಕುಟುಂಬ ಮತ್ತು ಸಹೋದ್ಯೋಗಿಗಳು ಎಲ್ಲರೂ ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇನೆ.
ನಮ್ಮಲ್ಲರಿಗೂ ತಿಳಿದಿರುವಂತೆ, ಕಳೆದ ವರ್ಷ ಇಡೀ ಪ್ರಪಂಚ ಸಂಕಷ್ಟ ಎದುರಿಸಿತು. ಜೀವಹಾನಿ, ಆರ್ಥಿಕ ದುಷ್ಪರಿಣಾಮಗಳು, ಸಾಮಾಜಿಕ ಸ್ಥಿತ್ಯಂತರಗಳು ಹಲವು ದೇಶಗಳಲ್ಲಿ ಉಂಟಾದವು. ಈ ಕಷ್ಟಕರ ಮತ್ತು ಸಂಕೀರ್ಣ ಪರಿಸ್ಥಿತಿಯನ್ನು ನಿಭಾಯಿಸಲು ವೃತ್ತಿಪರರಷ್ಟೇ ಅಲ್ಲದೇ ವೈಯಕ್ತಿಕವಾಗಿಯು ಜನರು ಹೋರಾಡಿದ್ದಾರೆ.
ಆದಾಗ್ಯೂ, ಈ ಸವಾಲುಗಳ ಹೊರತಾಗಿಯೂ ಓಜೋನ್ ಪದರ ರಕ್ಷಣೆಗಾಗಿ ದುಡಿಯುತ್ತಿರುವ ಸಮುದಾಯವು ತನ್ನ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದೆ. ದೇಶಗಳು ತಮ್ಮ ಬದ್ಧತೆಯನ್ನು ತೋರಿವೆ. ನಿಮ್ಮ ಕೆಲಸಗಳಿಂದಾಗಿ ಓಜೋನ್ ಪದರ ರಕ್ಷಣೆಯಾಗುತ್ತಿದೆ.
ದೇಶದ ಅಗತ್ಯತೆಗಳನ್ನು ಪೂರೈಸುವುದು, ದತ್ತಾಂಶವನ್ನು ವರದಿ ಮಾಡುವುದು ಮತ್ತು ಯೋಜನಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಿರುವುದನ್ನು ಪ್ರಶಂಸುತ್ತೇನೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಜಾಗತಿಕ ಪರಿಸರ ರಕ್ಷಣೆಗೆ ಬದ್ಧತೆಯನ್ನು ತೋರಬಹುದು ಎಂಬುದು ಸಾಬೀತಾಗಿದೆ.
ಈ ವರ್ಷದ ಓಜೋನ್ ದಿನದ ಘೋಷವಾಕ್ಯ: ‘ನಮ್ಮನ್ನು, ನಮ್ಮ ಆಹಾರ ಮತ್ತು ಲಸಿಕೆಗಳನ್ನು ತಂಪಾಗಿರಿಸುವುದು!’
ತಂಪಾದ ಪ್ರಪಂಚವನ್ನು ಕಟ್ಟಲು ಪ್ರತಿ ದೇಶಗಳು ಸರಪಳಿಯಾಗಿ ಕೆಲಸ ಮಾಡಬೇಕಿದೆ. ಇದಾಗಬೇಕೆಂದರೆ ಆಹಾರದ ನಷ್ಟ, ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಬೇಕಾಗಿದೆ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಮತ್ತು ಆರ್ಥಿಕತೆಯನ್ನು ಬೆಂಬಲಿಸುವ ಕೆಲಸ ಆಗಬೇಕಿದೆ. ಕಡೆಗಣಿಸಲ್ಪಟ್ಟಿರುವ ವಲಯಗಳ ಮೇಲೆ ಗಮನ ಸೆಳೆಯಲು ಇದು ಉತ್ತಮ ದಿನವಾಗಿದೆ.
ಇದನ್ನೂ ಓದಿ: ಇಂದು ವಿಶ್ವ ಓಝೋನ್ ದಿನ: ನಮ್ಮ ರಕ್ಷಕ ಓಝೋನ್‌ಗೂ ಬೇಕಿದೆ ರಕ್ಷಣೆ!


