ಮೋದಿ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ಕಳೆದ 10 ತಿಂಗಳುಗಳಿಂದ ರೈತ ಹೋರಾಟ ನಡೆಯುತ್ತಿರುವುದು ನಿಮಗೆ ಗೊತ್ತೆ ಇದೆ. ಈ ಹೋರಾಟ ಬೆಂಬಲಿಸಿ ಸ್ಥಾಪಿಸಲಾಗಿರುವ ಟ್ರಾಕ್ಟರ್ ಟು ಟ್ವಿಟರ್ ಖಾತೆ ಮೇಲೆ ‘ಆಜ್ ತಕ್‘ ಚಾನೆಲ್ 2 ಕೋಟಿ ರೂ ಮಾನಹಾನಿ ಪ್ರಕರಣ ದಾಖಲಿಸಿದೆ.
“ಆಜ್ ತಕ್ ಮೋದಿಯ ದಲ್ಲಾಳಿ” ಎಂದು ಮೇ 30, 2021ರಂದು ಟ್ವಿಟರ್‌ನಲ್ಲಿ ಟ್ರಾಕ್ಟರ್ ಟು ಟ್ವಿಟರ್ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿ ಆಜ್ ತಕ್‌ನ ಪೋಷಕರ ಕಂಪನಿ ಟಿವಿ ಟುಡೆ ನೆಟ್‌ವರ್ಕ್ ಮಾನನಷ್ಟ ಮೊಕದ್ದಮೆ ಹೂಡಿದೆ.
The media house @aajtak filed a 2Cr defamation suit against @tractor2twitr thru its parent company TV Today Network claiming that #Tractor2Twitter defamed Aaj Tak by running #AajTak_दलाल_मोदी_का on May 30, 2021.
This suit was pushed for an urgent hearing on Jun 7 in front of the— Kisan Ekta Morcha (@Kisanektamorcha) September 16, 2021
ಜೂನ್ 7 ರಂದು ತುರ್ತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ರಜಾಪೀಠವು “ಟ್ವೀಟ್ ಅನ್ನು ಅಳಿಸಬೇಕು ಮತ್ತು ಅದರ ಅಡ್ಮಿನ್‌ಗಳನ್ನು ಬಂಧಿಸುವಂತೆ ಆದೇಶಿಸಿತ್ತು.
ಜುಲೈ 27 ರಂದು ರೈತ ಬೆಂಬಲಿಗ ಟ್ರಾಕ್ಟರ್ ಟು ಟ್ವಿಟರ್ ಖಾತೆಯ ಅಡ್ಮಿನ್‌ಗಳು ಮಾನ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ನಾವು ಏಕೆ ಆಜ್ ತಕ್ ಅನ್ನು ಮೋದಿಯ ದಳ್ಳಾಳ್ಳಿ ಎಂದು ಕರೆದೆವು ಎಂದು ವಿಸ್ತೃತ ವರದಿ ಸಲ್ಲಿಸಿದೆ ಎಂದು ಕಿಸಾನ್ ಏಕ್ತಾ ಮೋರ್ಚಾ ತಿಳಿಸಿದೆ.
ಆದರೆ ಸೆಪ್ಟಂಬರ್ 09ರಂದು ನ್ಯಾಯಾಲಯದಲ್ಲಿ ವಿಚಾರಣೆ ಬಂದಾಗಿ ಆಜ್‌ತಕ್ ಬಳಿ ಹೇಳಲು ಏನೂ ಉಳಿದಿರಲಿಲ್ಲ. ಅಂದರೆ ರೈತರು ಹೇಳಿದ್ದು ನಿಜ ಎಂದು ಆಜ್‌ತಕ್ ಒಪ್ಪಿಕೊಂಡಿದೆಯಲ್ಲವೇ? ಈ ವಿಷಯದಲ್ಲಿ ಚರ್ಚೆ ನಡೆದರೆ ಎಲ್ಲಿ ಬೆತ್ತಲಾಗುತ್ತೇವೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಕಿಸಾನ್ ಏಕ್ತಾ ಮೋರ್ಚಾ ವ್ಯಂಗ್ಯವಾಡಿದೆ.
ಆಜ್‌ತಕ್‌ನ ಗೌರವದ ಬಗ್ಗೆ ಅವರಿಗೆ ನಿಜವಾಗಿಯೂ ಕಾಳಜಿಯಿಲ್ಲ. ಬದಲಿಗೆ ಕೋಟ್ಯಾಂತರ ರೂ ಮಾನನಷ್ಟ ಮೊಕದ್ದಮೆ ಹಾಕಿ ರೈತರಿಗೆ ಕಿರುಕುಳ ನೀಡಲು ಮತ್ತು ಸಾಮಾಜಿಕ ಜಾಲತಾಣದಲ್ಲಿ ಅದರ ದನಿ ಹತ್ತಿಕ್ಕಲಷ್ಟೇ ಅದು ಪ್ರಯತ್ನಿಸುತ್ತಿದೆ ಎಂದು ಕಿಸಾನ್ ಏಕ್ತಾ ಮೋರ್ಚಾ ಕಿಡಿಕಾರಿದೆ.
ಇದನ್ನೂ ಓದಿ : ರೈತ ಹೋರಾಟ: 4 ರಾಜ್ಯಗಳಿಂದ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ


