ಯೂಟ್ಯೂಬ್‌ನಲ್ಲಿನ ಕಮೆಂಟ್‌ಗಳನ್ನು ನೂರು ಭಾಷೆಗಳಲ್ಲಿ ಓದಲು ಅವಕಾಶ ನೀಡುವ ನಿಟ್ಟಿನಲ್ಲಿ ಯೂಟ್ಯೂಬ್ ಸಂಸ್ಥೆ ಹೊಸ ಫೀಚರ್ ಅಭಿವೃದ್ಧಿಪಡಿಸಿದೆ.
ಬಳಕೆದಾರರ ಕಮೆಂಟ್‌ಗಳನ್ನು ನೂರು ಭಾಷೆಗಳಿಗೆ ಅನುವಾದಿಸಿ ನೋಡುವ ಅವಕಾಶವನ್ನು ಯೂಟ್ಯೂಬ್ ನೀಡಿದೆ.
ಯೂಟ್ಯೂಬ್ ಮೊಬೈಲ್ ಆಪ್‌ನಲ್ಲಿ ಪ್ರತಿ ಕಮೆಂಟ್ ಕೆಳಗೆ ಇನ್ನೊಂದು ಭಾಷೆಗೆ ಅನುವಾದಿಸಿ ನೋಡಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್‌ಗಳಲ್ಲಿ ಈ ಸೌಲಭ್ಯ ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.
ಪ್ರತಿ ಕಮೆಂಟ್‌ನ ಲೈಕ್, ಡಿಸ್‌ಲೈಕ್, ರಿಪ್ಲೆ ಆಪ್ಶನ್ ಕೆಳಗೆ ಭಾಷಾಂತರ ಬಟನ್ ಇರಲಿದ್ದು, ಅನುವಾದಿಸಿ ಓದಿಕೊಳ್ಳಬಹುದು. ಸಮುದಾಯಗಳ ನುಡುವೆ ಸೇತುವೆಯಾಗಲು ಹಾಗೂ ಜಗತ್ತಿನೊಂದಿಗೆ ಸುಲಭ ಸಂವಹನ ನಡೆಸಲು ಈ ಹೊಸ ಆಪ್ಶನ್ ಅವಕಾಶ ನೀಡಿದೆ. ಸ್ಪಾನಿಷ್, ಪೊರ್ಚುಗೀಸ್, ಡಚ್, ಫ್ರೆಂಚ್ ಸೇರಿದಂತೆ ನೂರು ಭಾಷೆಗಳನ್ನು ಅನುವಾದಿಸಿ ಓದಬಹುದು.
ಹೆಚ್ಚಿದ ಬಳಕೆದಾರರು
ಯೂಟ್ಯೂಬ್ ಮ್ಯೂಸಿಕ್ ಮತ್ತು ಯೂಟ್ಯೂಬ್ ಪ್ರೀಮಿಯಂ ಈಗ ಐದು ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಕಂಪನಿಯು ಡಿಸೆಂಬರ್ 2020ರಲ್ಲಿ ವರದಿ ಮಾಡಿದಾಗ ಮೂರು ಕೋಟಿ ಚಂದಾದಾರರಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ 2 ಕೋಟಿ ಚಂದಾದಾರರು ಏರಿಕೆಯಾಗಿರುವುದು ಅತಿದೊಡ್ಡ ಬೆಳವಣಿಗೆ ಎನ್ನಲಾಗಿದೆ.


