ತೆಲಂಗಾಣ - ಮತ್ತೆ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ | Naanu gauri

ತೆಲಂಗಾಣದ ಸೈದಾಬಾದ್‌ನಲ್ಲಿ ಆರು ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಘಟನೆ ಮಾಸುವ ಮುನ್ನವೆ ಮತ್ತೆ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ತೆಲಂಗಾಣದಲ್ಲಿ ಗುರುವಾರ ವರದಿಯಾಗಿದೆ.

ಜಗ್ತಿಯಾಲ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಹದಿಹರೆಯದ ಬಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಮತ್ತೊಂದು ಘಟನೆಯಲ್ಲಿ ರಾಜ್ಯದ ಮಂಗಳ್‌ಹಾಟ್‌ನಿಂದ ವರದಿಯಾಗಿದ್ದು, ಈ ಘಟನೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ದೂರದ ಸಂಬಂಧಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮೊದಲ ಘಟನೆಯಲ್ಲಿ, ಬುಧವಾರ ತಡರಾತ್ರಿ ಸಂತ್ರಸ್ತೆ ಬಾಲಕಿ ತನ್ನ ಮನೆಯಲ್ಲಿ ಒಬ್ಬರೇ ಇದ್ದಾಗ ಆರೋಪಿ ಮನೆಗೆ ನುಗ್ಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ, ಬಾಲಕಿಯು ತನ್ನ ಗುಪ್ತಾಂಗಳಲ್ಲಿ ನೋವಿರುವ ಬಗ್ಗೆ ಹೆತ್ತವರಲ್ಲಿ ತಿಳಿಸಿದ್ದಾರೆ. ಜೊತೆಗೆ ತನ್ನ ತಾಯಿಯ ಜೊತೆಗೆ ತನ್ನ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹೈದರಾಬಾದ್ – ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆ

ಈ ಬಗ್ಗೆ ವಿಚಾರಣೆ ನಡೆಸಿದಾಗ ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ, ಜಗ್ತಿಯಾಲ್‌ನಲ್ಲಿರುವ ಧರ್ಮಪುರಿಯ ತನ್ನ ಅಜ್ಜಿ ಮನೆಗೆ ಬಂದಿದ್ದು ತಿಳಿದು ಬಂದಿದೆ. ಸಂತ್ರಸ್ತ ಬಾಲಕಿಯ ಮನೆ ಆತನ ಅಜ್ಜಿ ಮನೆಯ ಪಕ್ಕದಲ್ಲೇ ಇರುವುದರಿಂದ, ಬಾಲಕಿಯು ಮನೆಯಲ್ಲಿ ಒಬ್ಬರೇ ಇರುವ ಸಮಯದಲ್ಲಿ ನುಗ್ಗಿ ಕೃತ್ಯ ಎಸಗಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಮಂಗಳ್‌ಹಾಟ್‌ ಘಟನೆ

ಈ ಘಟನೆಯಲ್ಲಿ, ಸಂತ್ರಸ್ತೆ ಬಾಲಕಿಯ ತಾಯಿ ತನ್ನ ಗಂಡನ ವಿರುದ್ಧ ಕುಡಿದ ಅಮಲಿನಲ್ಲಿ ಮನೆಗೆ ಬಂದು ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ದಂಪತಿಗಳಿಬ್ಬರನ್ನು ಸಮಾಲೋಚನೆ ನಡೆಸಲು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಅವರ ನಾಲ್ಕು ಮಕ್ಕಳು ಮನೆಯಲ್ಲೇ ಇದ್ದರು ಮತ್ತು ನಿದ್ದ ಮಾಡಿದ್ದರು.

ಸ್ವಲ್ಪ ಹೊತ್ತಿನ ನಂತರ ಸಂತ್ರಸ್ತೆ ಬಾಲಕಿಗೆ ಎಚ್ಚರವಾಗಿದ್ದು, ತನ್ನ ತಾಯಿ ಕಾಣದೆ ಇದ್ದಾಗ ಹುಡುಕುತ್ತಾ ಹೊರಗಡೆ ಬಂದಿದ್ದಾರೆ. ಈ ವೇಳೆ ರಸ್ತೆಯಲ್ಲಿದ್ದ ಆರೋಪಿ ಬಾಲಕಿಯನ್ನು ಗಮನಿಸಿ, ತಾಯಿಯ ಬಳಿ ಕರೆದುಕೊಂಡು ಹೋಗುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಹೈದರಾಬಾದ್ – 6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ; ಆರೋಪಿ ಪರಾರಿ

ಈ ಮಧ್ಯೆ, ಬಾಲಕಿಯ ಪೋಷಕರು ಮನೆಗೆ ಮರಳಿದಾಗ ಮಗಳು ಕಾಣೆಯಾಗಿರುವುದು ಕಂಡುಕೊಂಡಿದ್ದಾರೆ. ಬಾಲಕಿಯನ್ನು ಕಂಡುಹಿಡಿಯಲು ಪೊಲೀಸರು ಕೂಡಾ ಅವರ ಹೆತ್ತವರೊಂದಿಗೆ ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಯು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸುತ್ತಿದ್ದಾಗ, ಬಾಲಕಿ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಬಾಲಕಿಯ ಕೂಗು ಕೇಳಿ ಸ್ಥಳೀಯರು ರಕ್ಷಿಣೆಗೆ ಧಾವಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಗಳ್‌ಹಾಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆಯನ್ನು ಭರೋಸಾ ಕೇಂದ್ರಕ್ಕೆ ಕೌನ್ಸಲಿಂಗ್‌‌ಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಸೈದಾಬಾದ್ ಅತ್ಯಾಚಾರ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಪಲ್ಲಕೊಂಡ ರಾಜು, ವಾರಂಗಲ್ ಜಿಲ್ಲೆಯಯಲ್ಲಿ ರೈಲಿನ ಹಳಿಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಆತನ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು ಹತ್ತು ಲಕ್ಷ ಬಹುಮಾನವನ್ನೂ ಘೋಷಿಸಿದ್ದರು.

ಇದನ್ನೂ ಓದಿ: ‘ಆದಿತ್ಯನಾಥ್‌’ ಬಗ್ಗೆ ವಿಶೇಷ ವರದಿ ಕೇಳಿದ ಗಂಟೆಗಳೊಳಗೆ ಪ್ರಧಾನ ಸಂಪಾದಕರನ್ನು ವಜಾಗೊಳಿಸಿದ ‘ಔಟ್‌ಲುಕ್’

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here