ಅಸ್ಸಾಂನ ದರ್‍ರಾಂಗ್ ಜಿಲ್ಲೆಯಲ್ಲಿ ಪೊಲೀಸರ ಗುಂಡಿಗೆ ಮೃತಪಟ್ಟ ವ್ಯಕ್ತಿಯ ಮೇಲೆ ಪೊಲೀಸರ ಸಮ್ಮುಖದಲ್ಲೇ ಅಮಾನವೀಯವಾಗಿ ಹಲ್ಲೆ ನಡೆಸಿದ ಫೋಟೊ ಪತ್ರಕರ್ತನನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ಗುರುವಾರ ಸಂಜೆ ತಿಳಿಸಿದ್ದಾರೆ. ಅತಿಕ್ರಮಣ ವಿರೋಧಿ ಪ್ರಕ್ರಿಯೆ ನಡೆಯುತ್ತಿದ್ದಾಗ ಘಟನೆ ನಡೆದಿದ್ದು, ಅದಕ್ಕಾಗಿ ಪೊಲೀಸರು ಸಂಪೂರ್ಣ ಗಲಭೆ ವಿರೋಧಿ ಧಿರಿಸು ಧರಿಸಿ, ರೈಫಲ್ ಮತ್ತು ಲಾಠಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ನಿನ್ನೆಯ ಘಟನೆಯಲ್ಲಿ ಪೊಲೀಸರ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ಅತಿಕ್ರಮಣ ವಿರೋಧಿ ಪ್ರಕ್ರಿಯೆ ನಡೆಯುತ್ತಿದ್ದಾಗ ಕೈಯ್ಯಲ್ಲೊಂದು ಕೋಲು ಹಿಡಿದುಕೊಂಡು, ಪೊಲೀಸರನ್ನು ಅಟ್ಟಿಸಿಕೊಂಡು ಬಂದಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡು ಬೀಳುತ್ತಿದ್ದಂತೆ ನೆಲಕ್ಕೆ ಉರುಳಿದ ಪ್ರತಿಭಟನಾಕಾರನ ಮೇಲೆ ಪೊಲೀಸರು ಗುಂಪಾಗಿ ತೆರಳಿ ತೀವ್ರವಾಗಿ ಥಳಿಸಿದ್ದರು. ಈ ವೇಳೆ ಅಲ್ಲಿಯೆ ಇದ್ದ ಫೋಟೋ ಜರ್ನಲಿಸ್ಟ್ ಕೂಡಾ ಅಮಾನವೀಯವಾಗಿ ಹಲ್ಲೆ ನಡೆಸಿದ್ದನು. ಪೊಲೀಸರು ಅವನನ್ನು ತಡೆದು ದೂರ ಕರೆದುಕೊಂಡು ಬಂದ ನಂತರ ಕೂಡಾ ದೂರದಿಂದ ಮತ್ತೆ ಹಾರಿ ಬಂದು ನಿಶ್ಚಲವಾಗಿ ನೆಲಕ್ಕೆ ಬಿದ್ದಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ್ದನು.
ಇದನ್ನೂ ಓದಿ: ಮನೆ ತೆರವು ವಿರೋಧಿಸಿ ಪ್ರತಿಭಟಿಸಿದ ವ್ಯಕ್ತಿಯನ್ನು ಹೊಡೆದುರುಳಿಸಿದ ಅಸ್ಸಾಂ ಪೊಲೀಸ್
What protocol orders firing to the chest of a lone man coming running with a stick @DGPAssamPolice @assampolice ? Who is the man in civil clothes with a camera who repeatedly jumps with bloodthirsty hate on the body of the fallen (probably dead) man? pic.twitter.com/gqt9pMbXDq
— Kavita Krishnan (@kavita_krishnan) September 23, 2021
ಅಸ್ಸಾಂ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ ಪತ್ರಕರ್ತ ಬಿಜೋಯ್ ಬೋನಿಯಾ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡ ಅಸ್ಸಾಂನ ವಿಶೇಷ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್, ಫೋಟೋ ಪತ್ರಕರ್ತನ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
“ಎಲ್ಲೆಲ್ಲಿ SOP ಗಳು [ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳು] ಮತ್ತು ಪ್ರೋಟೋಕಾಲ್‌ಗಳ ಉಲ್ಲಂಘನೆಯಾಗುತ್ತದೆಯೋ ಅಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ವಿಡಿಯೊ ನೋಡಿದ ನಂತರ ನಾನು ಹೇಳಬಹುದಾದ ಏಕೈಕ ವಿಷಯವೆಂದರೆ, ಪತ್ರಕರ್ತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ನೇಹಿತೆಯ ಭೇಟಿ – ಮುಸ್ಲಿಂ ಯುವಕನನ್ನು ಥಳಿಸಿದ ಬಜರಂಗದಳ ಕಾರ್ಯಕರ್ತರು
ಪತ್ರಕರ್ತನ ಬಂಧನವಾಗಿದೆ ಎಂದು ಅಸ್ಸಾಂ ಡಿಜಿಪಿ ಟ್ವೀಟ್ ಮಾಡಿದ್ದಾರೆ. “ಪ್ರಸ್ತುತ ಸಿಪಜ್ಹಾರ್‌ನಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ವೈರಲ್ ವಿಡಿಯೋದಲ್ಲಿ ಗಾಯಗೊಂಡ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿದ್ದ ಕ್ಯಾಮರಾಮ್ಯಾನ್ ಅನ್ನು ಬಂಧಿಸಲಾಗಿದೆ. ಸಿಎಂ ಹಿಮಂತ ಬಿಸ್ವಾ ಅವರ ಆದೇಶದಂತೆ ಈ ಬಗ್ಗೆ ತನಿಖೆ ನಡೆಸುವಂತೆ ಸಿಐಡಿಗೆ ಕೇಳಿದ್ದೇನೆ. ಕ್ಯಾಮರಾಮನ್ ಬಿಜೋಯ್ ಬೋನಿಯಾ ಅಸ್ಸಾಂ ಸಿಐಡಿಯ ವಶದಲ್ಲಿದ್ದಾನೆ” ಎಂದು ಹೇಳಿದ್ದಾರೆ.
Currently in Sipajhar, taking stock of the ground situation.
The cameraman who was seen attacking an injured man in a viral video has been arrested.As per wish of Hon. CM @himantabiswa I have asked CID to investigate the matter.
Cameraman Bijoy Bonia is in @AssamCid 's custody.— DGP Assam (@DGPAssamPolice) September 23, 2021
ಹಲ್ಲೆ ನಡೆಸಿರುವ ವ್ಯಕ್ತಿ ಸರ್ಕಾರಿ ಛಾಯಾಗ್ರಾಹಕ ಎಂದು ಎನ್‌ಡಿಟಿವಿ ದೃಢಪಡಿಸಿದೆ. ಆತ ಸ್ಥಳದಲ್ಲಿದ್ದು, ಘರ್ಷನೆಯನ್ನು ಚಿತ್ರೀಕರಿಸುತ್ತಿದ್ದ ಎಂದು ಅದು ಹೇಳಿದೆ. ಆತನನ್ನು ಗುರುತಿಸಿರುವ ಇತರ ಕೆಲವು ಮಾಧ್ಯಮಗಳು, ಆತ ದರ್ರಾಂಗ್ ಜಿಲ್ಲಾಡಳಿತದ ಛಾಯಾಗ್ರಾಹಕ ಎಂದು ಹೇಳಿವೆ.
ಗುವಾಹಟಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ಹತ್ಯೆ ಮತ್ತು ಘಟನೆಗೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸುವಂತೆ ಅಸ್ಸಾಂ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: ರಾಜಸ್ಥಾನ: ಪಾಕಿಸ್ತಾನಕ್ಕೆ ಹೋಗು ಎಂದು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ, ಐವರ ಬಂಧನ



Shame on these police and Media persons who are killing the poor innocent civilians. This is nothing but hitlerism and goonda Raj. This must stop and justice should be given to the poor citizens of Assam.