Homeಮುಖಪುಟರೈತ ಹೋರಾಟದ ಕುರಿತು ಮೋದಿಯೊಂದಿಗೆ ಮಾತನಾಡಿ: ಬೈಡನ್‌ಗೆ ರಾಕೇಶ್ ಟಿಕಾಯತ್ ಒತ್ತಾಯ

ರೈತ ಹೋರಾಟದ ಕುರಿತು ಮೋದಿಯೊಂದಿಗೆ ಮಾತನಾಡಿ: ಬೈಡನ್‌ಗೆ ರಾಕೇಶ್ ಟಿಕಾಯತ್ ಒತ್ತಾಯ

ಪ್ರಧಾನಿ ಮೋದಿಯವರ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ...

- Advertisement -
- Advertisement -

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರವರು ಮೋದಿಯೊಂದಿಗೆ ರೈತ ಹೋರಾಟದ ಕುರಿತು ಮಾತನಾಡುವಂತೆ ರೈತ ಮುಖಂಡ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಪ್ರೀತಿಯ ಬೈಡನ್‌ರವರೆ, ಮೋದಿ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ನಾವು ಭಾರತೀಯ ರೈತರು ಕಳೆದ 11 ತಿಂಗಳಿನಿಂದ ಹೋರಾಟ ನಡೆಸುತ್ತಿದ್ದೇವೆ. ಹೋರಾಟದ ವೇಳೆ ಕನಿಷ್ಠ 700 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ರೈತರನ್ನು ಉಳಿಸಬೇಕಾಗಿದೆ. ದಯವಿಟ್ಟು ನಮ್ಮ ಈ ಕಾಳಜಿಯ ಬಗ್ಗೆ ಮೋದಿಯೊಂದಿಗಿನ ಸಭೆಯ ವೇಳೆ ಮಾತನಾಡಿ” ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿಯವರ ಮೂರು ದಿನಗಳ ಅಮೆರಿಕ ಪ್ರವಾಸ ಆರಂಭವಾಗಿದ್ದು ಅವರು ವಾಷಿಂಗ್ಟನ್ ಭೇಟಿ, ಕ್ವಾಡ್ ಸಭೆ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಸಹ ಸಂವಾದ ನಡೆಸಿದ್ದಾರೆ.

ಇನ್ನೊಂದೆಡೆ ಭಾರತದಲ್ಲಿ ರೈತ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತ ಹೋರಾಟ 11 ತಿಂಗಳಿಗೆ ಕಾಲಿಡುತ್ತಿರುವ ಸಂದರ್ಭದಲ್ಲಿ ರೈತರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಲುವಾಗಿ ಸೆಪ್ಟಂಬರ್ 27 ರಂದು ಭಾರತ್ ಬಂದ್‌ಗೆ ಕರೆಕೊಟ್ಟಿದ್ದಾರೆ.


ಇದನ್ನೂ ಓದಿ: ಕೆಲವು ಫೋಟೊಗಳನ್ನು ಕಾಪಿ ಮಾಡೋದು ಕಷ್ಟ: ಮೋದಿ ಫೋಟೊಗೆ ಕಾಂಗ್ರೆಸ್ ವ್ಯಂಗ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸ್ನೇಹಿತರ’ ಮೇಲಿನ ದಾಳಿಯು ಮೋದಿಯ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

0
ತೆಲಂಗಾಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಗಾಂಧಿಯೇಕೆ ಅದಾನಿ–ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ. ಏನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ...