ಮಧ್ಯಾಹ್ನದ ಬಿಸಿಯೂಟಕ್ಕಾಗಿ ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತಟ್ಟೆಗಳನ್ನು ಇರಿಸಿದ್ದರಿಂದ ಶಾಲೆಯ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಾಲೆಯ ಬಿಸಿಯೂಟ ನೌಕರರು ದಲಿತ ವಿದ್ಯಾರ್ಥಿಗಳ ತಟ್ಟೆಗಳನ್ನೂ ಮುಟ್ಟುವುದಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮೈನ್‌ಪುರಿ ಜಿಲ್ಲೆಯ ದೌಡಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ 80 ಮಕ್ಕಳಲ್ಲಿ 60 ಮಕ್ಕಳು ಪರಿಶಿಷ್ಟ ಜಾತಿಯವರು. ಆದಾಗ್ಯೂ, ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಪಾತ್ರೆಗಳನ್ನು ಮಾತ್ರ ಅಡುಗೆಮನೆಯಲ್ಲಿ ಇರಿಸಲಾಗಿತ್ತು. ಈ ಕುರಿತ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿತ್ತು.
Caste discrimination in schools.
In a primary school in UP's Mainpuri, utensils of SC children were kept separately. They can't keep utensils in the kitchen. But why? Does this hurt the caste pride of the principal? Yes!! #CrushTheCaste pic.twitter.com/r14m8c37el
— Mission Ambedkar (@MissionAmbedkar) September 25, 2021
ಈ ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ ಮಕ್ಕಳನ್ನು ಮಾತನಾಡಿಸಿದಾಗ, “ಅಡುಗೆ ಮನೆಯಲ್ಲಿರುವ ತಟ್ಟೆಗಳು ನಮ್ಮವಲ್ಲ” ಎಂದು ಹೇಳಿರುವುದನ್ನು ಕಾಣಬಹುದು.
ಹೆಚ್ಚಿನ ವಿದ್ಯಾರ್ಥಿಗಳು ಬಳಸುವ ಪಾತ್ರೆಗಳನ್ನು ನಾವು ಮುಟ್ಟುವುದಿಲ್ಲ ಎಂದು ಹೇಳಿದ್ದ ಇಬ್ಬರು ಅಡುಗೆಯವರನ್ನೂ ಸೇವೆಯಿಂದ ವಜಾಗೊಳಿಸಲಾಯಿತು.
ಹೊಸದಾಗಿ ಸರ್ಪಂಚ್ ಆಗಿ ಆಯ್ಕೆಯಾಗಿರುವ ಮಂಜುದೇವಿಯವರ ಪತಿ ಸಾಹಬ್ ಸಿಂಗ್ ಸಂಪರ್ಕದಲ್ಲಿರುವ ಕೆಲವು ಪೋಷಕರು ದೂರನ್ನು ನೀಡಿದ್ದರು. ಅದನ್ನು ಅಧಿಕಾರಿಗಳಿಗೂ ತಿಳಿಸಲಾಗಿತ್ತು. ಸಾಹಬ್ ಸಿಂಗ್ ಶಾಲೆಗೆ ಭೇಟಿ ನೀಡಿದಾಗ, ಅವರು ಕೇಳಿದ್ದ ದೂರು ಸತ್ಯವಾಗಿತ್ತು.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿರುವ ಮೈನ್‌ಪುರಿ ಪ್ರಾಥಮಿಕ ಶಿಕ್ಷಣ ಅಧಿಕಾರಿ ಕಮಲ್ ಸಿಂಗ್, “ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಶಾಲೆಗೆ ಭೇಟಿ ನೀಡಿದಾಗ, ಅಡುಗೆಯವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ತಟ್ಟೆಗಳನ್ನು ಮುಟ್ಟಲು ನಿರಾಕರಿಸುತ್ತಿರುವುದು ಹಾಗೂ ಜಾತಿ ನಿಂದನೆ ಮಾಡುತ್ತಿರುವುದು ಕಂಡುಬಂದಿದೆ” ಎಂದು ತಿಳಿಸಿದ್ದಾರೆ.
ಗ್ರಾಮದ ಜನಸಂಖ್ಯೆಯಲ್ಲಿ ಶೇ. 35ರಷ್ಟು ದಲಿತರು, ಅಷ್ಟೇ ಪ್ರಮಾಣದಲ್ಲಿ ಠಾಕೂರರು ಇದ್ದು, ಉಳಿದವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಸಾಹಬ್ ಸಿಂಗ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿರಿ: ಬಡತನದಿಂದ ನೊಂದು ದಲಿತ ಸಹೋದರರು ಸಾವಿಗೆ ಶರಣು


