ಜಾರ್ಖಾಂಡ್ ರಾಜ್ಯದ ದಮ್ಕಾ ಜಿಲ್ಲೆಯ ಹಳ್ಳಿಯೊಂದರಲ್ಲಿ ವಿವಾಹೇತರ ಸಂಬಂಧ ಹೊಂದಿದ ಮಹಿಳೆ ಹಾಗೂ ಪುರುಷನನ್ನು ಬೆತ್ತಲುಗೊಳಿಸಿ ಸುಮಾರು ಒಂದು ಕಿ.ಮೀ. ನಡೆಸಿರುವ ಘಟನೆ ನಡೆದಿದೆ. ಈ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದ ಸುಮಾರು 50ರಿಂದ 60 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಮ್ಕಾ ಜಿಲ್ಲೆಯ ಬೆಡ್ತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬೆತ್ತಲುಗೊಳಿಸಿ ಗ್ರಾಮಸ್ಥರು ಒಂದು ಕಿ.ಮೀ. ನಡೆಸಿದ್ದಾರೆ.
ಇದನ್ನೂ ಓದಿ: ಹಾಸನ: ದಿಂಡಗನೂರಿನಲ್ಲಿ ಮೊದಲ ಬಾರಿಗೆ ದೇವಾಲಯ ಪ್ರವೇಶಿಸಿದ ದಲಿತರು: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ
“ಇಬ್ಬರೂ (ಮಹಿಳೆ ಹಾಗೂ ಪುರುಷ) ದಿನಗೂಲಿ ಮಾಡುವವರು ಮತ್ತು ಒಂದೇ ಗ್ರಾಮದವರಾಗಿದ್ದಾರೆ. ಮಂಗಳವಾರ ಮಹಿಳೆಯನ್ನು ಭೇಟಿ ಮಾಡಲು ಪ್ರಿಯಕರ ಬಂದಿದ್ದಾಗ ಗ್ರಾಮಸ್ಥರು ಆತನನ್ನು ಹಿಡಿದು ಬೆತ್ತಲುಗೊಳಿಸಿ, ಈ ಹೀನಕೃತ್ಯವನ್ನು ನಡೆಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಕ್ರಮ ಜರುಗಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಗಂಡನು ಪ್ರಕರಣವೊಂದರಲ್ಲಿ ಸಿಲುಕು ಒಂದು ವರ್ಷದಿಂದ ಕಾರಾಗೃಹದಲ್ಲಿದ್ದಾನೆ. ನಗರದಲ್ಲಿ ಕಾರ್ಮಿಕಳಾಗಿ ಜೀವನ ಸಾಗಿಸುತ್ತಿರುವ ಮಹಿಳೆಯು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿರಿ: ದಲಿತ ಕುಟುಂಬದ ಮೇಲೆ ಹಲ್ಲೆ, ಜಾತಿನಿಂದನೆ – ಪ್ರಕರಣ ದಾಖಲಾದರೂ ನಿಲ್ಲದ ದೌರ್ಜನ್ಯ
ಇದನ್ನೂ ಓದಿರಿ:ಉತ್ತರ ಪ್ರದೇಶ: ದಲಿತ ಮಕ್ಕಳಿಗೆ ಪ್ರತ್ಯೇಕ ತಟ್ಟೆ; ಮುಖ್ಯಶಿಕ್ಷಕಿ ಅಮಾನತು


