PC:Express

’ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಲಾಗಿದೆ’ ಎಂದು ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬುಧವಾರ  ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ತ್ರಾಲ್‌ಗೆ ಭೇಟಿ ನೀಡಲು ಯೋಜಿಸಿದ್ದರಿಂದ ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.

“ಸೈನ್ಯದಿಂದ ದಾಳಿಗೊಳಗಾಗಿದೆ ಎಂದು ಆರೋಪಿಸಲಾಗಿರುವ ಪುಲ್ವಾಮಾದ ಟ್ರಾಲ್‌ನ ಹಳ್ಳಿಗೆ ಭೇಟಿ ನೀಡಲು ಪ್ರಯತ್ನಿಸಿದ್ದಕ್ಕಾಗಿ ಇಂದು ಮತ್ತೆ ನನ್ನ ಮನೆಗೆ ಬೀಗ ಹಾಕಲಾಗಿದೆ. ಇದು ಕಾಶ್ಮೀರದ ನೈಜ ಚಿತ್ರವಾಗಿದ್ದು, ಇಲ್ಲಿಗೆ ಭೇಟಿ ನೀಡುವ ಗಣ್ಯರನ್ನು ಕೇಂದ್ರ ಸರ್ಕಾರರು ಸ್ಯಾನಿಟೈಜ್ ಮಾಡಿ ಶುಚಿಯಾಗಿಟ್ಟಿರುವ ಪ್ರವಾಸಿ ತಾಣಗಳ ಬದಲಿಗೆ ಇದನ್ನು ತೋರಿಸಬೇಕು” ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್‌ ಈಗ ಇದ್ದಿದ್ದರೆ ಬಿಜೆಪಿಗರು ಅವರನ್ನು ಪಾಕ್ ಪರ ಎನ್ನುತ್ತಿದ್ದರು: ಮೆಹಬೂಬಾ ಮುಫ್ತಿ

 

ಪಿಡಿಪಿ ಮುಖ್ಯಸ್ಥೆ ಗುಪ್ಕರ್ ರಸ್ತೆಯಲ್ಲಿರುವ ತಮ್ಮ ನಿವಾಸದ ಮುಖ್ಯ ದ್ವಾರವನ್ನು ಭದ್ರತಾ ಪಡೆಗಳು ತಮ್ಮ ವಾಹನದಿಂದ ತಡೆದಿರುವ ಚಿತ್ರವನ್ನು ಟ್ವೀಟ್ ಜೊತೆಗೆ ಪೋಸ್ಟ್ ಮಾಡಿದ್ದಾರೆ.

ನಿನ್ನೆ ಈ ಬಗ್ಗೆ ಮಾಹಿತಿ ನೀಡಿದ್ದ ಪಿಡಿಪಿ ಮುಖ್ಯಸ್ಥೆ, ಪುಲ್ವಾಮಾದ ಟ್ರಾಲ್ ಪಟ್ಟಣದಲ್ಲಿ ಸೇನಾ ಸಿಬ್ಬಂದಿ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಕುಟುಂಬದ ಮಹಿಳಾ ಸದಸ್ಯೆಯನ್ನು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿದ್ದರ. ಜೊತೆಗೆ ತಾನು ಬುಧವಾರ ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಹೇಳಿದ್ದರು.


ಇದನ್ನೂ ಓದಿ: ಕಾಶ್ಮೀರದಲ್ಲಿ ಯಾರೊಬ್ಬರು ಉಸಿರಾಡಲೂ ಆಗುತ್ತಿಲ್ಲ: ಮೆಹಬೂಬಾ ಮುಫ್ತಿ

LEAVE A REPLY

Please enter your comment!
Please enter your name here